ನೂರೊಂದು ನೆನಪು

Vinod Alwa/ Vinod Kumar ಅವರ Life Story

0
Vinod Alwa

ಕನ್ನಡದ Vinod Alwa, ತೆಲುಗಿನ ವಿನೋದ್ ಕುಮಾರ್.. ಇವರ ಬಗ್ಗೆ ನನ್ನ ಬರಹದ series ಗಳನ್ನ ಪ್ರಾರಂಭ ಮಾಡ್ತಾ ಇದ್ದೀನಿ..

Vinod Alwa ಅವರ ತಂದೆ ಮೂಲತಹ ಪುತ್ತೂರಿನ ಜಮೀನ್ದಾರರು.. ಕಾಸರಗೋಡಿನಲ್ಲೂ ಕೂಡ ಅವರ ಜಮೀನುಗಳು ಇದ್ದವು.. ಅವರ ತಾಯಿ ಮಂಗಳೂರಿನವರು.. ತುಂಬಾ ದೊಡ್ಡ ಕುಟುಂಬ.. ತಂದೆಯವರದು ಜಮೀನ್ದಾರ ವಂಶ ಆದರೆ, ತಾಯಿದು ಸಮೃದ್ಧಿಯಾದ ಕುಟುಂಬ.. Vinod Alwa ಅವರ ತಂದೆ ತುಂಬಾ ಸ್ವಾಭಿಮಾನಿ.. ಅವರ ಶ್ರೀಮತಿಯವರ ಕಡೆ ಎಷ್ಟೇ ಅನುಕೂಲವಾಗಿದ್ದರೂ ಅಲ್ಲಿನ ಯಾವ ಸಹಾಯ ಸವಲತ್ತುಗಳನ್ನು ಪಡೆಯದೆ ತಾನೇ ಸ್ವಂತ ದುಡಿಮೆ ಮಾಡಿ ಸಂಸಾರವನ್ನು ಸಾಗಿಸೋ ಸಂಕಲ್ಪ ಮಾಡುತ್ತಾರೆ.. ವಿನೋದ್ ಆಳ್ವ ಅವರ ತಂದೆ ತಾಯಿಗೆ ಒಟ್ಟು 7 ಜನ ಮಕ್ಕಳು.. ಅದರಲ್ಲಿ ವಿನೋದ್ ಅವರು ಮೂರನೆಯವರು.. ಇಬ್ಬರು ಅಕ್ಕಂದಿರು, ಒಬ್ಬ ತಮ್ಮ, ಇಬ್ಬರು ತಂಗಿಯರು.. ಪುತ್ತೂರಿನಲ್ಲಿ ಹೆಚ್ಚಾಗಿ ಬೆಳೆದಿದ್ದರಿಂದ ಅಜ್ಜಿ ಮನೆ (ತಾಯಿಯವರ ತಾಯಿ) ಮನೆಯ ನಂಟು ವಿನೋದ್ ಅವರಿಗೆ ಸ್ವಲ್ಪ ಕಡಿಮೆಯೇ ಇತ್ತು.. ಪುತ್ತೂರಿನ St. Philomena’s collegeನಲ್ಲಿ, college ವಿದ್ಯಾಭ್ಯಾಸ ಮುಗಿಸುತ್ತಾರೆ.. ವಿನೋದ್ ಆಳ್ವ ಅವರ ತಂದೆ ಸಾಕಷ್ಟು ಜಾಗಗಳಲ್ಲಿಜಮೀನನ್ನು ಮಾಡಿರುತ್ತಾರೆ. ಆಗ ಪ್ರಧಾನಮಂತ್ರಿ ಯಾಗಿದ್ದ ಇಂದಿರಾ ಗಾಂಧಿಯವರು ‘ಉಳುವವನೇ ಹೊಲದ ಒಡೆಯ’ ಎಂಬ ಕಾನೂನನ್ನು ತರ್ತಾರೆ.. ಹಾಗಾಗಿ ಅವರ ತಂದೆಯ ಇನ್ನೂರು ಮುನ್ನೂರು ಎಕರೆ ಜಮೀನು ಒಂದೇ ದಿನದಲ್ಲಿ ಕಳೆದುಹೋಗಿ ಕೇವಲ 5-6 ಎಕ್ಕರೆಗೆ ಬಂದುಬಿಡ್ತು.. ಇದರಿಂದ ವಿನೋದ್ ಆಳ್ವ ಅವರ ತಂದೆ ಮಾನಸಿಕ ಆಘಾತಕ್ಕೆ ಒಳಗಾದರು.. ಕೋರ್ಟು-ಕಚೇರಿ, ಲಾಯರ್ ಹೀಗೆ ಸಾಕಷ್ಟು ಒದ್ದಾಡಿದರು.. ಇದ್ದ ಸಾಕಷ್ಟು ಜಮೀನು ಹೋದಮೇಲೆ “ಇಲ್ಲಿ ಏನು ಮಾಡಕ್ ಆಗುತ್ತೆ” ಎಂದು ಯೋಚಿಸಿ ವಿನೋದ್ ಆಳ್ವ ಅವರು Law ಅಭ್ಯಾಸ ಮಾಡಬೇಕು ಎಂದು ನಿರ್ಧರಿಸುತ್ತಾರೆ..

Vinod Alwa

Goaದಲ್ಲಿನ Bombay University Law College ನಲ್ಲಿ ಒಂದು ವರ್ಷಗಳ ಕಾಲ ವಿದ್ಯಾಭ್ಯಾಸವನ್ನು ಅವರ ಸೋದರಮಾವನ ಮನೆಯಲ್ಲಿದ್ದುಕೊಂಡು ವಿನೋದ್ ಅವರು ನಡೆಸುತ್ತಾರೆ.. “ಐದು ವರ್ಷಗಳ ಕಾಲ law ಓದಿ, ಕೋರ್ಟ್ಗೋಗಿ ವಾದ ಮಾಡಿಯಾವ ಕಾಲಕ್ಕೆ ನಾನು ಸಂಪಾದಿಸುವುದು??” ಎಂದು ಅಂದುಕೊಂಡು ಅದನ್ನು discontinue ಮಾಡುತ್ತಾರೆ.. ಆಗೆಲ್ಲ ಒಂದು trend ನಡಿತಾ ಇತ್ತು .. ದುಡಿಯೋ ಕೋಸ್ಕರ ಹೊರದೇಶಗಳಿಗೆ ಹೋಗೋದು.. Dubai ಹಾಗೂ ಇತರ foreign country ಗಳಿಗೆ ಹೋಗಿ ಹಣ ಸಂಪಾದಿಸುವುದು.. ‘ನಾನು ಕೂಡ ಹೀಗೆ ವಿದೇಶಕ್ಕೆ ಹೋಗಿಹೆಚ್ಚು ಹಣವನ್ನು ಸಂಪಾದನೆ ಮಾಡಿ, ಮನೆಯ ಪರಿಸ್ಥಿತಿಯನ್ನು ಸುಧಾರಿಸುವಂತೆ ನೋಡಿಕೊಳ್ಳಬೇಕು’ ಎಂಬುವ ಜವಾಬ್ದಾರಿ ವಿನೋದ್ ಅವರಿಗೆ ಕಾಡಲಾರಂಭಿಸಿತು.. ಜೊತೆಯಲ್ಲಿದ್ದವರೇ ನಮಗೆ ಮೋಸ ಮಾಡಿ ಏಳಿಗೆಯನ್ನುತಡೆಯಲು ಪ್ರಯತ್ನಿಸಿದರು.. ಈಗಲೂ ನಮ್ಮ ಕುಟುಂಬಕ್ಕೆ ಊರಿನಲ್ಲಿ ಒಳ್ಳೆ reputation ಇದೆ.. ಆದರೆ ಈಗಲೂ ಕೂಡ ನಮ್ಮನ್ನ ಕಿತ್ತುತಿನ್ನುವ ಜನ ನಮ್ಮ ಸುತ್ತಮುತ್ತಲೂ ಇನ್ನೂ ಇದ್ದಾರೆ.. ಈ ಎಲ್ಲಾ ನೋವುಗಳನ್ನುನಾನು ನನ್ನ ಹೃದಯದಲ್ಲಿ ಇಟ್ಟುಕೊಳ್ಳುತ್ತೇನೆ.. ನಾನು ಕೊರಗಿ ಬೇಸತ್ತು ಹೋಗುವ ಮನುಷ್ಯನಲ್ಲ.. ಬರುವ ಎಲ್ಲಾ ಸವಾಲುಗಳನ್ನು ಎದೆ ಕೊಟ್ಟು ಸ್ವೀಕರಿಸುತ್ತೇನೆ.. I don’t run behind any politician.. ಅಥವಾ ಬರೀ ದುಡ್ಡು ಇರೋರ ಹಿಂದೆ ಹೋಗುವ ಜಾಯಮಾನ ನನ್ನದಲ್ಲ.. ನನ್ನ ಬದುಕನ್ನ ನಮ್ಮವರ ಜೀವನವನ್ನು ಅಚ್ಚುಕಟ್ಟಾಗಿ ರೂಪಿಸಲು ದೇವರು ನನಗೆ ಬುದ್ಧಿಶಕ್ತಿ ಎಲ್ಲವನ್ನು ಕೊಟ್ಟಿದ್ದಾನೆ, ಎಂದು ವಿನೋದ್ ಭಾವುಕರಾಗುತ್ತಾರೆ..

Vinod Alwa

ಆಗಲೇ ತಿಳಿಸಿದಂತೆ ಕುಟುಂಬದ ಪರಿಸ್ಥಿತಿ ಸುಧಾರಿಸಲು ಮುಂಬೈ ಕಡೆಗೆ ಹೋಗಿ ಅಲ್ಲಿನ Holiday Inn hotel ನಲ್ಲಿ receptionist ಆಗಿ ಕೆಲಸಕ್ಕೆ ಸೇರುತ್ತಾರೆ.. ಸಾವಿರಾರು ಜನ ಕೆಲಸವನ್ನು ಅರಿಸಿ ಹೋಗುವ ಕಾರ್ಮಿಕರಿಗೆ ಕೆಲಸಗಾರರಿಗೆ ಮುಂಬೈ ಅನ್ನುವುದು ಕನಸಿನ ದುಡಿಮೆಯ ಮಾತೃ ಭೂಮಿ.. ನಾನು ಮುಂಬಯಿಗೆ ಹೋಗುವ ಉದ್ದೇಶವೇ ಅಲ್ಲಿಂದ ಒಳ್ಳೆ ಸಂಪರ್ಕ ಸಿಕ್ಕಿ ವಿದೇಶಕ್ಕೆ ಹೋಗುವ ಆಸೆಯಲ್ಲಿ.. ಸಿನಿಮಾ ನನ್ನ ಕನಸು-ಮನಸಿನಲ್ಲೂ ಇರಲಿಲ್ಲ..

ನಾನು ಮೊದಲಿನಿಂದಲೂ ಹೆಚ್ಚಾಗಿ ಸಿನಿಮಾಗಳನ್ನು ನೋಡಿದವನಲ್ಲ.. ಕೆಲವು Amitabh Bacchan ಅವರ ಚಿತ್ರಗಳು, ಅಣ್ಣಾವ್ರ ‘ಬಂಗಾರದ ಮನುಷ್ಯ’ ವಿಷ್ಣು ದಾದಾ ಅವರ ‘ಭೂತಯ್ಯನ ಮಗ ಅಯ್ಯು’ ಹೀಗೆ ಕೆಲವು ಆಯ್ದ ಚಿತ್ರಗಳನ್ನು ಮಾತ್ರ ಸಾಕಷ್ಟು ಬಾರಿ ನೋಡಿದ್ದೆ.. ಮನೆಯಲ್ಲಿ ಕೂಡ ಸಿನಿಮಾಗೆ ಹೋಗ್ತೀನಿ ಅಂದ್ರೆ ಆಗ ತುಂಬಾ ಬಯ್ಯೋರು.. ನಮ್ಮ ಸೌತ್ ಕೆನರಾ ದಲ್ಲಿ ಎಲ್ಲಾ ಭಾಷೆಯ, ಕೊಂಕಣಿ, ತುಳು, ಕನ್ನಡ ಜನ ಇರುವುದರಿಂದ ಹೆಚ್ಚಿನ ಸ್ಟಾರ್ ಪ್ರಧಾನ್ಯತೆ ಅಲ್ಲಿ ಸಿಗುವುದಿಲ್ಲ.. ಎಂಥ ದೊಡ್ಡ ಸ್ಟಾರ್ ಆದರೂ ನಮ್ಮ ಸೌತ್ ಕೆನರಾ ಜನ ಅಷ್ಟಾಗಿ disturb ಮಾಡಕ್ಕೆ ಹೋಗಲ್ಲ.. ಅವರ space ಅನ್ನ ಅವರಿಗೆ ಕೊಡ್ತಾರೆ.. ಒಮ್ಮೊಮ್ಮೆ ನನ್ನ ತಂದೆ ತಾಯಿಗಳ ಬಳಿ ಸುಳ್ಳು ಹೇಳಿ ಸಾಕಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದು ಉಂಟು.. ಅಪ್ಪಿತಪ್ಪಿಯೂ ಕೂಡ ಎಂದು ನನ್ನ ಮನದಲ್ಲಿನಾನು ಸಿನಿಮಾಗೆ ಹೋಗಬೇಕು, famous ಆಗಬೇಕು, ನಟನಾಗಬೇಕು ಯಾವತ್ತೂ ಅಂದು ಕೊಂಡಿರಲಿಲ್ಲ ಯೋಚಿಸಿಯೂ ಇರಲಿಲ್ಲ.. ಇವತ್ತಿಗೂ Bombay ನನ್ನ favourite place.. ಅಲ್ಲಿ ಹೇಗೆ ಅಂದರೆ ನಾವಾಯಿತು, ನಮ್ಮ ದುಡಿಮೆ ಆಯಿತು, ನಮ್ಮ enjoyment ಆಯ್ತು.. ಅಕ್ಕಪಕ್ಕದವರು ಹೇಗಿದ್ದೀಯಾ ಅಂತ ಕೇಳ್ತಾರೆ ಹೊರತು ಏನ್ ಮಾಡ್ತಿದ್ಯ? ಅಂತ ಎಂದು ಕೇಳಲ್ಲ.. Bombayಯಲ್ಲಿ Rs.200000 ಎಲ್ಲೂ ಜೀವನ ಮಾಡಬಹುದು, ಎರಡು ರೂಪಾಯಿಯಲ್ಲಿಯೂ ಜೀವನ ಮಾಡಬಹುದು..

Vinod Alwa

“ಈ ಸಂದರ್ಭದಲ್ಲಿ ಅಬ್ಬಯ್ಯ ನಾಯ್ಡು ಅವರು Shankar Nag ಅವರ ನಾಯಕತ್ವದಲ್ಲಿ ‘ತಾಳಿಯಭಾಗ್ಯ’ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು.. ಆ ಚಿತ್ರದಲ್ಲಿ ಒಂದು ಮಗುವಿನ ಪಾತ್ರಕ್ಕೆ ವಿನೋದ್ ಅಲ್ವಾ ಅವರ ಅಕ್ಕನ ಮಗಳನ್ನು ಆಯ್ಕೆ ಮಾಡಿದ್ದರು.. ಇದೇ ‘ತಾಳಿಯಭಾಗ್ಯ’ ಚಿತ್ರವನ್ನು ಹಿಂದಿಯಲ್ಲಿ Jackie Shroff ಅವರ ನಾಯಕತ್ವದಲ್ಲಿ ‘ತೇರಿ ಮೆಹರುಬಾನಿ ‘ ಅನ್ನೋ ಹೆಸರಿನಲ್ಲಿ K C Bokadia ಅವರ ನಿರ್ಮಾಣದ ಅಡಿಯಲ್ಲಿ ತಯಾರಾಗುತ್ತಿತ್ತು.. ಈ ಚಿತ್ರದ remake rights ವಿಚಾರವಾಗಿ ಮಾತನಾಡಲು Abbaiah Naidu ಅವರು ಮುಂಬೈಗೆ ಹೊರಡುತ್ತಾರೆ.. “ಅದೇ ಸಂದರ್ಭದಲ್ಲಿ ವಿನೋದ್ ಆಳ್ವ ಅವರ ಅಕ್ಕ, ನನ್ನ ತಮ್ಮ ಮುಂಬೈನಲ್ಲಿಯೇ ಇದ್ದಾನೆ. ನಿಮಗೇನಾದರೂ ಸಹಾಯದ ಅವಶ್ಯಕತೆ ಇದ್ದರೆ ಅವರನ್ನು ಸಂಪರ್ಕಿಸಿ” ಎಂದು ಹೇಳಿದರು.. Reception ನಲ್ಲಿ ಅಬ್ಬಾಯಿ ನಾಯ್ಡು ಅವರು ನನಗೆ ಒಂದು ಮೆಸೇಜನ್ನು ಬಿಟ್ಟಿದ್ದರು.. ಮರುದಿನ ಅವರನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡು ನನ್ನ ಅಕ್ಕನ ಮಗಳು ಅವರ ಚಿತ್ರದಲ್ಲಿ ಅಭಿನಯಿಸುತ್ತಿದ್ದ ರಿಂದ ಅವರ ಜೊತೆಗೂಡಿ ಮುಂಬೈಯ ತೆಲುಗು ಜಾಗಗಳಿಗೆ ನಾನು ಕರೆದುಕೊಂಡು ಹೋದೆ.. Abbaiah Naidu ಅವರಿಗೆ ಹಿಂದಿ ಅಷ್ಟಾಗಿ ಬರುತ್ತಿರಲಿಲ್ಲ.. ನಾನು ಅವರ ಜೊತೆ ಹೋಗಿದ್ದರಿಂದ ಮಾತುಕತೆಗೆ ಸ್ವಲ್ಪ ಸಹಾಯವಾಯಿತು..

ಇಷ್ಟೆಲ್ಲ ಸುತ್ತಾಟಗಳು ಆದಮೇಲೆ ಎಂದೂ ಅವರು “ನೀನು ಸಿನಿಮಾದಲ್ಲಿ ಮಾಡುತ್ತೀಯ.? ಅಂತ ಕೇಳಿಲ್ಲ, ನಾನು ಒಬ್ಬ ಒಳ್ಳೆಯ ಸ್ನೇಹಿತನಾಗಿ ಅವರ ಜೊತೆ ಬಾಂಬೆ ಪೂರ ತಿರುಗಾಡಿದೆ.. ಮತ್ತೆ ನಾನು ನನ್ನ ವಿದೇಶದ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದೆ. ಆಗ Saudi Arabia ದಲ್ಲಿ ನನಗೆ ಕೆಲಸ confirm ಆಯಿತು.”

“ನನ್ನ ಕನಸು ನನಸಾಗುವ ಗಳಿಗೆ.. ಹೊರದೇಶಕ್ಕೆ ಹೋಗುವ ಎಲ್ಲ ತಯಾರಿಯಲ್ಲಿದ್ದೆ. ಆಗ ನನ್ನ ಹೋಟೆಲಿನ landline ನಂಬರಿಗೆ ಒಂದು call ಬಂತು.. ನಿರ್ಮಾಪಕ ಅಬ್ಬಯ್ಯ ನಾಯ್ಡು ಅವರು ಕರೆ ಮಾಡಿ, “ನಿನ್ನ ಹತ್ರ ಮಾತಾಡಬಹುದಾ? ಫ್ರೀ ಇದ್ಯಾ” ಅಂತ ಕೇಳಿದರು “ಆಯ್ತು ಸರ್ ಹೇಳಿ” ಅಂತ ನಾನು ಹೇಳಿದೆ.. ಆಗ ಅಬ್ಬಯ್ಯ ನಾಯ್ಡು ಅವರು ಹೇಳುತ್ತಾರೆ. “ನಾನು ಒಂದು ಹೊಸ ಚಿತ್ರ ನಿರ್ಮಾಣ ಮಾಡುತ್ತಿದ್ದೀನಿ, ‘ತವರುಮನೆ’ ಅಂತ.. ಈ ಚಿತ್ರದಲ್ಲಿ ಸಿದ್ದಲಿಂಗಯ್ಯ ಅವರ ಮಗ ಮುರಳಿ ಅವರು ನಾಯಕನಾಗಿ ಅಭಿನಯಿಸ ಬೇಕಾಗಿತ್ತು. ಅವರು ತಮಿಳಿನಲ್ಲಿ ಬಿಸಿ ಇರೋದ್ರಿಂದ ನಮ್ಮ ಚಿತ್ರದಲ್ಲಿ ಅಭಿನಯಿಸೋಕೆ ಆಗುತ್ತಿಲ್ಲ. ನೀನೇ ನನ್ನ ಚಿತ್ರದ ನಾಯಕ ಎಂದು ತೀರ್ಮಾನಿಸಿದ್ದೇನೆ” ಎಂದು ಅಬ್ಬಯ್ಯ ನಾಯ್ಡು ಅವರು ಹೇಳಿದಾಗ, ವಿನೋದ್ ಆಳ್ವ ಅವರಿಗೆ ಆಶ್ಚರ್ಯ, ಸಂದೇಹವೂ ಉಂಟಾಗಿದೆ..

ನಂತರ ಏನಾಯಿತು?? ವಿನೋದ್ ಆಳ್ವ ಬೆಂಗಳೂರಿಗೆ ಬಂದ್ರ?? ನಾಯಕ ನಟನಾಗಲು ಹೇಗೆ ಒಪ್ಪಿಕೊಂಡರು? ಈ ಎಲ್ಲಾ ವಿವರಣೆ ನನ್ನ ಮುಂದಿನ ಬರಹದಲ್ಲಿ..

Raghuram

Kavya ಬಣ್ಣದ ಬದುಕಿಗೆ goodbye ಹೇಳಿದ್ದು ಯಾಕೆ ?

Previous article

Vinod Alwa ಬೆಳ್ಳಿ ಪರದೆಯ ಮೇಲೆ ಕಂಡ ಕ್ಷಣ

Next article

You may also like

Comments

Leave a reply

Your email address will not be published. Required fields are marked *

9 − five =