ನೂರೊಂದು ನೆನಪು

Vinod Alwa ಬೆಳ್ಳಿ ಪರದೆಯ ಮೇಲೆ ಕಂಡ ಕ್ಷಣ

0
Vinod Alwa

Abbaiah Naidu ಇಂದ ಬಂದ ಫೋನ್ ನನಗೆ ನಿಜಕ್ಕೂ ಆಘಾತ ನೀಡಿತು..ನನ್ನನ್ನ ಹೀರೋ ಆಗಿ ಆಯ್ಕೆ ಮಾಡಿದ್ದು, ಬೆಂಗಳೂರಿಗೆ ಕರೀತಾ ಇರೋದು, ಇವೆಲ್ಲವೂ ನನಗೆ ತುಂಬಾ ಗೊಂದಲಮಯವಾಗಿತ್ತು.. ನಾನು ಅಬ್ಬಯ್ಯ ನಾಯ್ಡು ಅವರಿಗೆ ಫೋನ್ನಲ್ಲಿ ಹೇಳಿದೆ “ಸಾರ್..!! ನನ್ನ Visa ಆಗೋಗಿದೆ. ಸೌದಿ ಅರೇಬಿಯಾಗೆ ಹೊರಡಬೇಕು. ಹೀರೋ ಎಲ್ಲ ಮಾಡಕ್ಕೆ ನನಗೆ ಆಸಕ್ತಿ ಇಲ್ಲ. ನನ್ನನ್ನು ಬಿಟ್ಟುಬಿಡಿ,” ಎಂದು ಕೇಳಿಕೊಂಡೆ. ಆಗ ಅಬ್ಬಯ್ಯ ನಾಯ್ಡು ಅವರು ಸ್ವಲ್ಪ ಏರು ಧ್ವನಿಯಲ್ಲಿ “Airticket ಕಳಿಸ್ತಾ ಇದ್ದೀನಿ. ನೀನು flight ಹತ್ತಿ ಬರ್ತಿದೀಯ ಅಷ್ಟೇ,” ಎಂದು ಹೇಳಿ ಫೋನ್ ಇಟ್ಟುಬಿಟ್ಟರು. ಅಂದು ಸಂಜೆ ನಾನು ನನ್ನ ಗೆಳೆಯ ರೋನಿಯ ಬಳಿ ಈ ವಿಷಯವನ್ನು ಚರ್ಚಿಸಿದೆ. ಆಗ ಅವನು “ಹೀರೋ ಆಗೋ ಚಾನ್ಸ್ ಯಾರಾದ್ರೂ ಬಿಡ್ತಾರಾ?? ಫಸ್ಟ್ ಹೋಗಿ ಪ್ರಯತ್ನ ಪಡು. ಅಲ್ಲಿ success ಆಗಿಲ್ಲ ಅಂದ್ರೆ ನೀನು ಬೇಕಾದರೆ ವಿದೇಶಕ್ಕೆ ಹೋಗಬಹುದು,” ಎಂದು ಹೇಳಿದ.

ಮರುದಿನ ಬೆಳಗ್ಗೆ ನನಗೆ ಮಾರ್ನಿಂಗ್ ಶಿಫ್ಟ್ ಇತ್ತು. ಹೋಟೆಲ್ ಗೆ ಕೆಲಸಕ್ಕೆ ಹೋದಾಗ K C Bokadia company ಇಂದ ಹಿಂದಿ ಚಿತ್ರರಂಗದ ಒಬ್ಬ ಮ್ಯಾನೇಜರ್ ನನ್ನ ಬಳಿ ಬಂದು “ಸಂಜೆ flight ಇದೆ. ತಗೊಳ್ಳಿ airtickets” ಎಂದು ಕೊಟ್ಟು ಹೋದರು.. Indian Airlines ಸಂಸ್ಥೆಯ confirm tickets ಸಂಜೆಯ flight ದು ನನ್ನ ಕೈಲಿತ್ತು.. ಏನು ಮಾಡಲೂ ತೋಚಲಿಲ್ಲ. ನನ್ನ collegue ಮತ್ತೊಬ್ಬ lady receptionist ಬಳಿ ಹೋಗಿ “ನನಗ್ಯಾಕೋ ಹುಷಾರಿಲ್ಲ. ನಾನು rest ಮಾಡ್ತೀನಿ” ಎಂದು ಹೇಳಿ ಮನೆಕಡೆಗೆ ಹೊರಟೆ. ಕೈಯಲ್ಲಿ air ticket.. ಮುಂದಿನ ಹೆಜ್ಜೆ ಏನು ಇಡಬೇಕು ಎಂದು ಗೊತ್ತಾಗ್ತಿಲ್ಲ.. ಆಗ STD boothಗೆ ಹೋಗಿ ಅಬ್ಬಯ್ಯ ನಾಯ್ಡು ಅವರಿಗೆ ಕರೆ ಮಾಡಿದೆ.. ಸರ್ ನನಗೆ ಡ್ಯಾನ್ಸು, ಫೈಟು, ಆಕ್ಟಿಂಗ್ ಏನು ಬರಲ್ಲ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದು ಕೇಳಿಕೊಂಡೆ.” ಆಗ ಭಯ ನಾಯ್ಡು ಅವರು “ನನ್ನನ್ನ ನಂಬು. ಧೈರ್ಯವಾಗಿ ನೀನು ಇಲ್ಲಿಗೆ ಬಾ. ನನಗೆ ನಿನ್ನ ಮೇಲೆ ನಂಬಿಕೆ ಇದೆ. ಅಕಸ್ಮಾತ್ ನಿನಗೆ ಸರಿ ಹೊಂದಲ್ಲ ಅನ್ಸುದ್ರೆ, immediately ನಿನ್ನನ್ನು ವಾಪಸ್ ಕಳಿಸುವೆ ” ಎಂದು ಹೇಳಿದರು.. “ಎರಡು ದಿವಸಕ್ಕೆ ಬಾ” ಎಂದು ಕೇಳಿಕೊಂಡರು. ಆಗ ನಾನು “ಎರಡು ಆಗಲ್ಲ ಸರ್ ಒಂದು ದಿವಸಕ್ಕೆ ಬಂದು ಹೋಗ್ತೀನಿ ಅಂದೆ. ಆಯ್ತಪ್ಪ ನೀನು ಮೊದಲಿಗೆ ಬಾ” ಎಂದು ಹೇಳಿದರು..

Abbaiah Naidu

ಮುಂಬೈನಿಂದ ಬೆಂಗಳೂರಿಗೆ ಮೊಟ್ಟಮೊದಲ ಬಾರಿಗೆ ವಿಮಾನದಲ್ಲಿ ನನ್ನ ಪಯಣ. ಬೆಂಗಳೂರು ಏರ್ಪೋರ್ಟಿಗೆ ಬಂದು ಇಳಿದೆ. ಕನ್ನಡ ಚಿತ್ರರಂಗದ ಹಿರಿಯ ಮ್ಯಾನೇಜರ್ ವಿಜಯ್ ಕುಮಾರ್ ಅವರು ನನ್ನನ್ನು receive ಮಾಡಿಕೊಳ್ಳಲು ಬಂದಿದ್ದರು..

666 ಕಾರ್ ನಂಬರಿನಲ್ಲಿ ನನ್ನನ್ನು ಜೆ.ಪಿ.ನಗರದ Abbaiah Naidu ಅವರ ಆಫೀಸಿಗೆ ಕರೆದುಕೊಂಡು ಹೋದರು. ಮುಂಬೈನಲ್ಲಿ ಚಿಕ್ಕ ಆಫೀಸಿನಲ್ಲಿ ಇದ್ದ ನನಗೆ ಭವ್ಯವಾದ, ವಿಸ್ತಾರವಾದ ಕಚೇರಿಯನ್ನು ನೋಡಿ ಸಂತೋಷವಾಯಿತು. ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಆಗಿತ್ತು. ರಾತ್ರಿ ಒಳ್ಳೆ ಊಟ ಕೂಡ ಬಂತು. ಅದೇ ಸಂದರ್ಭದಲ್ಲಿ ಅಬ್ಬಯ್ಯ ನಾಯ್ಡು ಅವರು ಫೋನ್ ಮಾಡಿ “ಇವತ್ತು ರೆಸ್ಟ್ ಮಾಡು, ನಾನು ನಿನಗೆ ಬೆಳಗ್ಗೆ ಸಿಕ್ತೀನಿ” ಅಂತ ಹೇಳಿದರು. ಮರುದಿನ ಬೆಳಗ್ಗೆ ಎದ್ದು ರೆಡಿಯಾಗಿ 9 ಗಂಟೆಗೆ ನಾನು ಕಾಯುತ್ತಾ ನಿಂತಿದ್ದೆ. ಆಗ ಅಬ್ಬಯ್ಯ ನಾಯ್ಡು ಅವರು ಬಂದು ನನ್ನನ್ನು ಬಿಗಿದಪ್ಪಿ, “ನೀನು ಏನು ಯೋಚನೆ ಮಾಡಬೇಡ. ಧೈರ್ಯವಾಗಿರು.. ನನ್ನನ್ನು ನಂಬು. ಹೋಗೋಣ.” ಅಂತ ಹೇಳಿದ್ರು. ನಾನು “ಎಲ್ಲಿಗೆ ??” ಅಂತ ಕೇಳಿದಾಗ “ಬಾ..ಪ್ಯಾಲೇಸ್ ಹತ್ರ ಹೋಗೋಣ” ಅಂತ ಕರ್ಕೊಂಡು ಹೋದರು.

Vinod Alwa

ಅದಾದ ಮೇಲೆ ಅವರ ಸಂಸ್ಥೆಯಲ್ಲಿ ನಾನು ಸಾಕಷ್ಟು ಚಿತ್ರಗಳನ್ನು ಮಾಡಿದೆ. ಎಂದೂ ದುಡ್ಡುಕಾಸಿನ ವಿಚಾರ ಅವರ ಬಳಿ ಮಾತಾಡಲಿಲ್ಲ. ನನಗೆ ಸ್ನೇಹ, ವಿಶ್ವಾಸ ತುಂಬಾ ದೊಡ್ಡದು. ದುಡ್ಡಲ್ಲ.. “ನೆನ್ನೆ ನೆನ್ನೆಗೆ, ನಾಳೆ ನಾಳೆಗೆ ಅನ್ನೋ ಪರಿಕಲ್ಪನೆ ನಂದು”..

ಅಲ್ಲಿಂದ ಮದರಾಸಿಗೆ ಕಳಿಸಿ fight, ಡಾನ್ಸ್, ನಟನೆ ಎಲ್ಲದರ ತರಬೇತಿ ಪ್ರಾರಂಭವಾಯಿತು. ಅದೇ ಸಂದರ್ಭದಲ್ಲಿ ಚಿ||ಉದಯಶಂಕರ್ ಅವರ ಮಕ್ಕಳಾದ ರವಿಶಂಕರ್ ಹಾಗೂ ಗುರುದತ್ ಅವರ ಪರಿಚಯವಾಯಿತು. ತುಂಬಾ close ಆಗಿ ಬೆಳೆದೆವು. ಆಗಲೇ ಡಾ|| ರಾಜಕುಮಾರ್ ಅವರ ಮನೆ, ಅವರ ಕುಟುಂಬ, ಶಿವಣ್ಣ ಅವರನ್ನು, ಎಲ್ಲರನ್ನು ಹತ್ತಿರದಿಂದ ನೋಡಿದೆ. ರವಿಚಂದ್ರನ್ ಅವರ ಪರಿಚಯವಾಯಿತು. ಹಾಗೆ ಮದರಾಸಿನ ಒಂದು ಸ್ಟುಡಿಯೋದಲ್ಲಿ ಶೂಟಿಂಗ್ ನಡೀತಾ ಇತ್ತು.. ಯಾವುದದು ನೋಡೋಣ ಅಂತ ಹೋದಾಗ, ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರ ಒಂದು ಚಿತ್ರದ ಚಿತ್ರೀಕರಣ ನಡೀತಾ ಇತ್ತು.. ಇದನ್ನೆಲ್ಲಾ ನೋಡಿ ಬೇರೆ ಪ್ರಪಂಚಕ್ಕೆ ನಾನು ಬಂದಿದ್ದೇನೆ ಅನ್ನಿಸ್ತು. ಆಗ ನಾನು ತೀರ್ಮಾನಿಸಿದೆ..

This is my cup of tea.. God has given me this opportunity.. So I should work hard..
ಅಬ್ಬಯ್ಯ ನಾಯ್ಡು ನನಗೆ ದೇವರು ತರ..ಯಾವಾಗಲೂ ನನ್ನನ್ನು ಅವರ ಪಾಸಿಟಿವ್ ಮಾತುಗಳಿಂದ encourage ಮಾಡ್ತಿದ್ರು..

Vinod Alwa

ಮುಂದೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನನ್ನ ಮೊದಲ ಚಿತ್ರದ ಮುಹೂರ್ತ.. ಸ್ವಲ್ಪ ಆತಂಕದಲ್ಲಿದ್ದ ನನಗೆ ಅಬ್ಬಯ್ಯ ನಾಯ್ಡು ಅವರು ಬಂದು ಧೈರ್ಯ ತುಂಬಿ, “ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿ ಬಾ” ಎಂದು ಹೇಳಿ ಕಳಿಸಿದರು..

‘Vinod Alwa ‘ತವರುಮನೆ’ ಚಿತ್ರದ ನಾಯಕ’ ಎಂದು ಪತ್ರಿಕೆಗಳಲ್ಲಿ ಬರುವ ವರೆಗೂ ನನ್ನ ಕುಟುಂಬದ ಮಂದಿಗೆ ವಿಷಯವೇ ತಿಳಿದಿರಲಿಲ್ಲ..
ನನ್ನ ಮೊದಲ ದೃಶ್ಯ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ದೇವರಿಗೆ ಪೂಜೆ ಮಾಡಿ ನನ್ನ ಹಣೆಗೆ ತಿಲಕವಿಟ್ಟು ‘ಕಾಲೇಜಿಗೆ ಹೋಗಿ ಬಾ’ ಎಂದು ಹೇಳುವ ದೃಶ್ಯ.. ಕಲ್ಯಾಣ್ ಕುಮಾರ್, ರಾಜೇಶ್, ಹೀಗೆ ದಿಗ್ಗಜರ ಸಮ್ಮುಖದಲ್ಲಿ ನನ್ನ ಪ್ರಥಮ shot ಎದುರಿಸಿ ಈ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟೆ ..

‘ತವರುಮನೆ ಚಿತ್ರದ’ ಬಿಡುಗಡೆಯ ದಿನ ಏನಾಯ್ತು?? ಮುಂದಿನ ವಿನೋದ್ ಆಳ್ವ ಅವರ ಚಿತ್ರರಂಗದ ಜೀವನದ ಬಗ್ಗೆ ಇನ್ನಷ್ಟು ಮಾಹಿತಿ ನನ್ನ ಮುಂದಿನ ಬರಹದಲ್ಲಿ..

Raghuram

Vinod Alwa/ Vinod Kumar ಅವರ Life Story

Previous article

Vinod Alwa ಚಂದನವನದ ತವರು ಮನೆಗೆ ಬಂದಾಗ

Next article

You may also like

Comments

Leave a reply

Your email address will not be published. Required fields are marked *

eighteen + twelve =