ನೂರೊಂದು ನೆನಪು

Vinod Alwa ಚಂದನವನದ ತವರು ಮನೆಗೆ ಬಂದಾಗ

0
Vinod Alwa

Vinod Alwa ಅವರನ್ನು ‘ತವರು ಮನೆ’ ಚಿತ್ರೀಕರಣ ಪ್ರಾರಂಭವಾದ ಮೇಲೆ Abbaiah Naidu ಅವರು
ಸ್ವಂತ ಅವರ ಮಗನಂತೆ ನೋಡಿಕೊಂಡರು. Set ನಲ್ಲೂ ಅಷ್ಟೇ ಎಲ್ಲರೂ ನನಗೆ ಅತ್ಯಂತ ಪ್ರೀತಿ ಗೌರವ ಕೊಟ್ಟು ನೋಡಿಕೊಂಡರು.. ನನಗೆ ಮೊದಲಿನಿಂದಲೂ ನನ್ನನ್ನು ನಾನು carry ಮಾಡ್ಕೊಳಕ್ಕೆ ತುಂಬಾ ಚೆನ್ನಾಗಿ ಗೊತ್ತಿತ್ತು. ಎಲ್ಲರ ಬಳಿಯಲ್ಲೂ ತುಂಬ ಸ್ನೇಹದಿಂದ ಇರುತ್ತಿದ್ದೆ. ಗುರು ಹಿರಿಯರ ಮುಂದೆ ಗೌರವದಿಂದ ಇರುತ್ತಿದ್ದೆ. ಮೊದಲ ದಿನವೇ ನಿರ್ದೇಶಕ ವಿಜಯ ರೆಡ್ಡಿ ಅವರು ನನ್ನನ್ನು ಅವರ ಆತ್ಮೀಯ ಸ್ನೇಹಿತನಂತೆ ಕಂಡರು.. Production manager Vijay Kumar ರವರು ಅಷ್ಟೇ,  “ಚಿತ್ರವನ್ನು ಮಾಡೋಕೆ ಇಷ್ಟವಿಲ್ಲವೆಂದು ಹೇಳಿ ಈಗ ಒಪ್ಪಿಕೊಂಡು ಮಾಡುತ್ತಿದ್ದಾರೆ. ಎಲ್ಲೂ ಅವರಿಗೆ hurt ಆಗಬಾರದು” ಎಂದು ಕಾಳಜಿ ತೆಗೆದುಕೊಳ್ಳುತ್ತಿದ್ದರು.

‘ತವರುಮನೆ’ ಚಿತ್ರದ first copy ನ ಬಿಡುಗಡೆಯ ಮುಂಚೆ ನಾನು ಚೆನ್ನೈನಲ್ಲಿ ನೋಡಿದ್ದೆ. ನನ್ನ ಜೊತೆ ಚಿ.ಉದಯಶಂಕರ್ ಅವರ ಮಗ ರವಿಶಂಕರ್ ಕೂಡ ಇದ್ದರು. ಅದಾದ ಮೇಲೆ ಬಿಡುಗಡೆಯ ದಿನ ಬೆಂಗಳೂರಿನ ಶಾಂತಿ ಚಿತ್ರಮಂದಿರಕ್ಕೆ ಹೋದೆ. ಇದು ನನ್ನ introduction film.. ನನಗಿಂತ ಜಾಸ್ತಿ ನಿರ್ಮಾಪಕ ಅಬ್ಬಯ್ಯ ನಾಯ್ಡು ಅವರನ್ನು ಜನ ಗುರುತು ಹಿಡಿಯುತ್ತಿದ್ದರು. ಅವರ ನಡಿಗೆ, ಮಾತನಾಡುವ ವಿಧಾನ, ಇದೆಲ್ಲದಕ್ಕೂ ಜನ ಬಹಳ ಮೆಚ್ಚುಗೆ ಕೊಡುತ್ತಿದ್ದರು. ‘ತವರುಮನೆ’ ಚಿತ್ರದ ನಂತರ ನನ್ನ ಮುಂದಿನ ಚಿತ್ರ ಅಜಂತ ರಾಜು ಅವರ ನಿರ್ಮಾಣದ ‘ತಾಯಿಯ ಕರುಳು.’ಶಂಕರ್ ನಾಗ್’ ಅವರೊಂದಿಗೆ ‘ಮಹಾಯುದ್ಧ’, ಗೀತಾ ಅವರ ಜೊತೆಯಲ್ಲಿ ಕೆ. ವಿ. ಜಯರಾಮ್ ಅವರ ನಿರ್ದೇಶನದಲ್ಲಿ ‘ಮಾಧುರಿ’ ಅನ್ನುವ ಚಿತ್ರ.

Vinod Alwa

Shankar Nag  ಅವರೊಂದಿಗೆ ಮಹಾಯುದ್ಧದಲ್ಲಿ ಅಭಿನಯಿಸಿದ ಅನುಭವವಂತೂ ರೋಮಾಂಚಕ. Really he is a genius. ಒಂದು fight ಸನ್ನಿವೇಶದಲ್ಲಿ ನಟಿಸ ಬೇಕಾದರೆ ನನ್ನ wrong timing ಇಂದ ಶಂಕರ್ ನಾಗ್ ಅವರ ಕೈಗೆ ಏಟು ಬಿದ್ದಿತ್ತು. ನಾನು ಕೂಡಲೇ ಕ್ಷಮೆ ಕೇಳಿದಾಗ, ಆಗ ಶಂಕರ್ ನಾಗ್ ಸರ್ ನನಗೆ ಹೇಳಿದ್ದು “ಸಿನಿಮಾ ಅಂದಮೇಲೆ ಇವೆಲ್ಲ ಮಾಮೂಲಿ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ, ಆರಾಮಾಗಿರು” ಎಂದು ಮತ್ತಷ್ಟು ಧೈರ್ಯ ಹಾಗೂ ನಂಬಿಕೆ ತುಂಬಿದರು..

ದಿಗ್ಗಜರು ನಿರ್ದೇಶಕರಾದ ವಿಜಯರೆಡ್ಡಿ, ಕೆ. ವಿ. ಜಯರಾಮ್ ಹಾಗೆ ದೊಡ್ಡ ನಿರ್ಮಾಣದ ಸಂಸ್ಥೆಗಳಾದ ಅಬ್ಬಯ್ಯನಾಯ್ಡು ಅವರ ಸಂಸ್ಥೆ, ಅಜಂತ ರಾಜು ಅವರ ಸಂಸ್ಥೆ, ನನ್ನ ಮೊದಲನೆಯ ಚಿತ್ರ ‘ತವರುಮನೆ’ ಯಲ್ಲಿ ರಾಜೇಶ್, ಕಲ್ಯಾಣ್ ಕುಮಾರ್, ಭಾರತಿ, ಎನ್ .ಎಸ್. ರಾವ್, ಉಮಾಶ್ರೀ, ತಾರಾ ಇಂಥ ಎಲ್ಲಾ ಕಲಾವಿದರ ಜೊತೆ ಅಭಿನಯಿಸುವ ಪುಣ್ಯ. ಭವ್ಯ ಅವರು ನನಗೆ ಈ ಚಿತ್ರದಲ್ಲಿ ನಾಯಕಿಯಾಗಿದ್ದರು. ಆಕೆ ಅವಾಗ ಕನ್ನಡದಲ್ಲಿ ಬಹು ಬೇಡಿಕೆಯ ನಟಿ. ನನ್ನಂತ ಹೊಸಬರೊಂದಿಗೆ ನಟಿಸಿ ಪ್ರೋತ್ಸಾಹಿಸಿದರು. ಇದೆಲ್ಲವೂ ನನ್ನ ಅದೃಷ್ಟ. Really i am destined.. ಇನ್ನು Abbaiah Naidu ಅವರು Prasad colour lab ನಲ್ಲಿ preview ನೋಡಿದ ಮೇಲೆ ನಾನು ಹೋಗಿ ಅವರಿಗೆ ಥ್ಯಾಂಕ್ಸ್ ಹೇಳಿದೆ. ಆಗ ಅವರು “ಒಂದು ಪಿಚ್ಚರ್ ಗೆ ನೆ ಥ್ಯಾಂಕ್ಸ್ ಹೇಳ್ತಿದ್ಯ ಲ್ಲಾ, ನೋಡು ಈ ಸಿನಿಮಾ ಬಿಡುಗಡೆಯಾಗಲಿ. ನೂರಾರು ಸಿನಿಮಾ ನೀನು ಆಕ್ಟ್ ಮಾಡ್ತೀಯಾ” ಎಂದು ಆಶೀರ್ವದಿಸಿದರು. Abbaiah Naidu ಅವರು ಹೇಗೆ ನನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರರೋ ಅಷ್ಟೇ ಪ್ರೀತಿ ಹಾಗೂ ವಾತ್ಸಲ್ಯದಿಂದ ಅವರ ಶ್ರೀಮತಿಯವರು ಅವರ ಮಕ್ಕಳಾದ ಮಧು, ರಮೇಶ್ ಹಾಗೂ ಮಗಳನ್ನ ಹೇಗೆ ನೋಡಿಕೊಳ್ಳುತ್ತಿದ್ದರು ನನ್ನನ್ನು ಕೂಡ ಮನೆ ಮಗನ ಹಾಗೆಯೇ ನೋಡಿಕೊಳ್ಳುತ್ತಿದ್ದರು.

‘ತವರುಮನೆ’ ಚಿತ್ರದಿಂದ ನಾಯ್ಡು ಅವರ ಕುಟುಂಬ ನನಗೆ ಮತ್ತೊಂದು ತವರುಮನೆ ಸಿಕ್ಕಿತು. ಚಿತ್ರ ಬಿಡುಗಡೆಯಾದ ಮೇಲೂ ಕೂಡ ನಾನು ಮತ್ತೆ ಮುಂಬೈನಲ್ಲೇ ಕೆಲಸ ಮಾಡುತ್ತಿದ್ದೆ. ಸ್ವಲ್ಪ ಸಮಯದ ನಂತರ ನಾಯ್ಡು ಅವರು ಮತ್ತೆ ನನ್ನನ್ನು ಕರೆಸಿಕೊಂಡು ಚರಣರಾಜ್, ಭಾರತೀ ಹಾಗೂ ನಾನು ಸೇರಿ ‘ನಮ್ಮೂರ ದೇವತೆ’ ಎಂಬ ಚಿತ್ರವನ್ನು ಮಾಡಿದೆವು.

ಇನ್ನೊಂದು ವಿಶೇಷವಾದ-ವಿಚಿತ್ರವಾದ ಕಥೆಯನ್ನು ವಿನೋದ್ ಆಳ್ವ ಅವರು ನಮ್ಮೊಂದಿಗೆ ಶೇರ್ ಮಾಡಿದ್ದಾರೆ. ಅದೇನಂದ್ರೆ ಇವರು ಸಿನಿಮಾಗೆ ಬರುವ ಮೊದಲು ಬೆಂಗಳೂರಿಗೆ ಯಾವುದೋ ಕೆಲಸದ ಮೇಲೆ ಬಂದಿದ್ದಾರೆ. ಆಗ ಮೆಜೆಸ್ಟಿಕ್ಕಿನ ಶೀತಲ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಮೆಟ್ಟಲು ಇಳಿಯಬೇಕಾದರೆ ಒಬ್ಬ ವ್ಯಕ್ತಿ ಬಂದು “ಸರ್ ನಮಸ್ಕಾರ ನಿಮ್ಮತ್ರ ಒಂಚೂರು ಮಾತಾಡಬೇಕು” ಅಂತ ಕೇಳಿದರು. ಅವರು ಯಾರು ಅಂದರೆ ಹಿರಿಯ ನಟ ಬಾಲಣ್ಣ ಅವರ ಮಗ ಶ್ರೀನಿವಾಸ್. ಅಲ್ಲೇ ರೂಮ್ ನಲ್ಲಿ ಕುಳಿತುಕೊಂಡು ಮಾತನಾಡಿದಾಗ ನಿರ್ದೇಶಕನಾಗ ಬೇಕು ಎಂದು ಕಥೆ ಮಾಡಿಕೊಂಡು ಪರಿಚಯವಾದ ವ್ಯಕ್ತಿ ಗಂಗರಾಜು.

ಈ ಗಂಗರಾಜು ಬೇರೆ ಯಾರು ಅಲ್ಲ ನಮ್ಮ ಕನ್ನಡದ ಹೆಮ್ಮೆಯ ಸಂಗೀತ ನಿರ್ದೇಶಕ Hamsalekha ಅವರು. ಆ ಹೋಟೆಲ್ ನಲ್ಲಿ ವಿನೋದ್ ಆಳ್ವ ಅವರನ್ನು ಗಮನಿಸಿದ ಶ್ರೀನಿವಾಸ್ ಹಾಗೂ Hamsalekha ಅವರು ನಾವು ತಯಾರು ಮಾಡುವ ಚಿತ್ರಕ್ಕೆ ಈತನೇ ನಾಯಕನಾದರೆ ಚೆನ್ನಾಗಿರುತ್ತೆ ಅಂತ ನಿರ್ಧರಿಸಿ ಆ ಚಿತ್ರದ ಕಥೆಯನ್ನು ಕೂಡ ಅಲ್ಲೇ ಹೇಳಿದರಂತೆ. ಆ ಸಿನಿಮಾದ ಕಥೆ ಏನೆಂದರೆ ಒಂದು illusion ಗೆ ಸಂಬಂಧಪಟ್ಟಿದ್ದು. ಕಾಶಿನಾಥ್ ಸರ್ ಅವರ ಅನುಭವ ರೀತಿಯಲ್ಲಿಅದೇ ಮಾದರಿಯ concept ನಲ್ಲಿ ತಯಾರುಮಾಡಿ ದಂತಕಥೆ. ಮಹಾಲಕ್ಷ್ಮಿ ಈ ಚಿತ್ರಕ್ಕೆ ನಾಯಕಿ ಎಂದಿದ್ದರು. ಹಾಗೆ ನನ್ನ ಜೇಬಿಗೆ ಆವತ್ತೆ ಐನೂರು ರೂಪಾಯಿ advance ಅನ್ನು ಕೂಡ ಕೊಟ್ಟಿದ್ದರು.. ಇದಾದ ಮೇಲೆ ನಾನು ಬಾಂಬೆಗೆ ಹೊರಟುಹೋದ ಈ ವಿಷಯವನ್ನು ಮರೆತೋದೆ. ತವರು ಮನೆಯನ್ನು ಮಾಡಿ ಯಶಸ್ವಿಯಾದ ಮೇಲೆ ಮತ್ತೆ ಶ್ರೀನಿವಾಸ್ ಅವರು ಸಿಕ್ಕಿ ನನಗೆ “ಏನ್ ವಿನೋದ್ ಅವರೇ? ನಾನು ನಿಮ್ಮನ್ನ ನಾಯಕ ನಟನಾಗಿ ಪರಿಚಯ ಮಾಡಬೇಕು ಅಂದುಕೊಂಡಿದ್ದೆ. ಅಷ್ಟರಲ್ಲಿ ನೀವಾಗಲೇ ನಾಯಕ ನಟನಾಗಿ ಬಿಟ್ಟಿದ್ದೀರಾ. ಒಳ್ಳೆಯದಾಗಲಿ” ಎಂದು ಶುಭ ಹಾರೈಸಿದರು..

ನಮ್ಮ ಕನ್ನಡದ ವಿನೋದ್ ಆಳ್ವ ತೆಲುಗು ಚಿತ್ರರಂಗಕ್ಕೆ ವಿನೋದ್ ಕುಮಾರ್ ಆಗಿ ಪರಿಚಯವಾಗಿದ್ದು ಹೇಗೆ?? ಹಾಗೂ ಯಾಕೆ?? ಅನ್ನೋ ವಿವರ ನನ್ನ ಮುಂದಿನ ಬರದಲ್ಲಿ..

Raghuram

Vinod Alwa ಬೆಳ್ಳಿ ಪರದೆಯ ಮೇಲೆ ಕಂಡ ಕ್ಷಣ

Previous article

ನಾ ಕಲಿತ ಪಾಠ !!

Next article

You may also like

Comments

Leave a reply

Your email address will not be published. Required fields are marked *

nineteen + eight =