ಬರವಣಿಗೆಯ ಮೆರವಣಿಗೆ

Taj Mahal, ಅಪ್ಪ ಅಮ್ಮನೊಂದಿಗೆ ನನ್ನ First ಪ್ರವಾಸ

0

ನನಗೆ ಆಗ 6 ವರ್ಷ.. Cycle, Scooter, Car,  Auto, Bus ಅಲ್ಲಿ ಓಡಾಡಿದ ನನಗೆ ಮೊದಲ ಬಾರಿಗೆ ರೈಲು ಹಾಗೂ flight ನಲ್ಲಿ ಹೋದ ಅನುಭವ ಇನ್ನೂ ಮರೆಯೋಕಾಗಲ್ಲ. ನನ್ನ ತಾಯಿ Canara Bank ನಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ತಂದೆ Karnataka Power Corporation ನಲ್ಲಿ engineer ಆಗಿ ಸೇವೆ ಸಲ್ಲಿಸುತ್ತಿದ್ದರು. ನಾನು ಅಪ್ಪ-ಅಮ್ಮನಿಗೆ ಒಬ್ಬನೇ ಮಗ.

ನಾನು ಹುಟ್ಟಿದ್ದು, ಏಳನೇ ತರಗತಿವರೆಗೆ ಓದಿದ್ದು ಎಲ್ಲಾ ಮೈಸೂರಿನಲ್ಲಿ. ಅಪ್ಪ-ಅಮ್ಮ ಇಬ್ಬರೂ working ಆಗಿರೋದ್ರಿಂದ, ನನ್ನನ್ನ ಅಜ್ಜಿ ಮನೆಯಲ್ಲಿ ಓದಲು ಬಿಟ್ಟಿದ್ದರು. ಸಾಮಾನ್ಯವಾಗಿ Bank employees ಗಳಿಗೆ ಇದರ ಬಗ್ಗೆ ಗೊತ್ತಿರುತ್ತೆ. ಎರಡು ವರ್ಷಕ್ಕೆ ಒಮ್ಮೆ ಬ್ಯಾಂಕಿನ ಸಿಬ್ಬಂದಿಗಳಿಗೆ LFC ಅಂತ ಒಂದು holiday package ಕೊಡೋರು. ಅದರೊಂದಿಗೆ ನನ್ನ ಅಪ್ಪ-ಅಮ್ಮ ಸ್ವಲ್ಪ ಹಣವನ್ನು ಸೇರಿಸಿ ಮಗನನ್ನು flight ನಲ್ಲಿ ಕರೆದುಕೊಂಡು ಹೋಗಬೇಕು, first class train ನಿನಲ್ಲಿ ಕೂಡಿಸಿ ತೋರಿಸಬೇಕು, ಜಗತ್ತಿನ ಅದ್ಭುತ Taj Mahal ನ ಕೂಡ ನನಗೆ ಪರಿಚಯಿಸಬೇಕು ಅಂತ ತುಂಬಾ ಆಸೆ ಪಟ್ಟು, ಈ North India trip ನ plan ಮಾಡುದ್ರು.

ಮೈಸೂರಿನಿಂದ ಬೆಂಗಳೂರು ತನಕ ಬಸ್ಸಿನಲ್ಲಿ ಪ್ರಾರಂಭವಾದ ನಮ್ಮ ಪ್ರಯಾಣ; ಅಲ್ಲಿಂದ ದೆಹಲಿಗೆ ವಿಮಾನ. ಸಿನಿಮಾ ಹಾಗೂ ಆಟ ಸಾಮಾನಿನಲ್ಲಿ ವಿಮಾನ ನೋಡಿದ್ದ ನನಗೆ ಮೊದಲ ಬಾರಿ ವಿಮಾನ ಹತ್ತಬೇಕಾದರೆ ತುಂಬಾ excitement ಇತ್ತಂತೆ. “ಅಷ್ಟು ಮೇಲಿರೋ flight ನ ಹೇಗೆ ಹತ್ತೋದು? ಆಕಾಶದಲ್ಲಿ ಹೋಗುವಾಗ ನಾವು ಬಿದ್ದು ಹೋಗಲ್ವಾ? ಒಳಗಡೆ chocolate ಕೊಡ್ತಾರ? ತಿಂಡಿ ಕೊಡ್ತಾರ? ಹೀಗೆ 108 ಪ್ರಶ್ನೆಗಳನ್ನು ನನ್ನ ಅಪ್ಪ-ಅಮ್ಮನಿಗೆ ನಾನು ಕೇಳುತ್ತಿದನಂತೆ. ನನಗೆ ಅದು ಯಾವುದು ಜ್ಞಾಪಕ ಇಲ್ಲ. ನನ್ನ ಅಪ್ಪ-ಅಮ್ಮ ಯಾವಾಗಲೂ ನನ್ನ ಬಳಿ ಇದನ್ನ ಹೇಳೋರು.”

ಬೆಂಗಳೂರಿನಲ್ಲಿ ಹತ್ತಿದ ವಿಮಾನ ದೆಹಲಿಗೆ ತಲುಪಿತು. ನನಗಿರೋ ಅಸ್ಪಷ್ಟ ನೆನಪಿನಲ್ಲಿ ಕೆಲವೊಂದು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತೇನೆ.
ನಾವು ಮಧ್ಯಮ ವರ್ಗದ ಜನ. ತಿಂಗಳ ಸಂಪಾದನೆಯನ್ನು ನೆಚ್ಚಿಕೊಂಡು, ಅದರಲ್ಲಿ ಒಂದಿಷ್ಟು ಕೂಡಿಹಾಕಿ, ಸುಖ ಸಂತೋಷದಿಂದ ಸಂಸಾರ ಮಾಡುತ್ತಿದ್ದ ಕುಟುಂಬ. ಅಂದಿನ ಪರಿಸ್ಥಿತಿಯಲ್ಲಿ Hotel ಗಳಿಗೆ ಹೋಗಿ, room ಬಾಡಿಗೆ ಕೊಟ್ಟು ಇರುವ ಆರ್ಥಿಕ ಶಕ್ತಿ ಅಷ್ಟಾಗಿ ನನ್ನ ಅಪ್ಪ-ಅಮ್ಮನ ಬಳಿ ಇರಲಿಲ್ಲ. ದೆಹಲಿಯಲ್ಲಿ ನಮ್ಮ ತಂದೆಯವರ ಕಡೆ ಒಬ್ಬ ಸಂಬಂಧಿಕರ ಮನೆಯಲ್ಲಿ ನಾವು ಹೋಗಿ ಕೆಲ ದಿವಸ ಇದ್ವಿ. ಅವರ ಮನೆಯ ಪಕ್ಕದ ರೋಡಿನಲ್ಲಿ ಬಿಸಿಬಿಸಿ ಜಾಮೂನು, ಜಿಲೇಬಿ ಮಾರುತ್ತಿದರು. ನನ್ನಪ್ಪ ನನ್ನನ್ನು ಅಲ್ಲಿ ಕರ್ಕೊಂಡು ಹೋಗಿ ಜಾಮೂನ್ ಕೊಡಿಸುತ್ತಿದ್ದ ನೆನಪು ಇನ್ನೂ ಸ್ಪಷ್ಟವಾಗಿದೆ. ನನಗೆ ಜಾಮೂನ್ ಅಂದರೆ ತುಂಬಾ ಇಷ್ಟ.

ನಮ್ಮ ಮನೆಯಲ್ಲಿ ನಾವು ಹೇಗೆಂದರೆ ಹಾಗೆ ಇದ್ದು ಅಭ್ಯಾಸ. For the very first time, ನಾನು ಇನ್ನೊಬ್ಬರ ಮನೆಗೆ ಹೋಗಿ Halt ಮಾಡಿರೋದು. ನನಗೆ ಅಂದು ಆದ ಅನುಭವ ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇವತ್ತಿಗೂ ನಾನು ಯಾವ ಸಂಬಂಧಿಕರ ಮನೆಯಲ್ಲೂ halt ಮಾಡಲ್ಲ. ಇದು ಅಹಂಕಾರ ಅಲ್ಲ, childhood impact. ಅವರ ಮನೆಗೆ ನಾವು ಹೋದಾಗ ಅವರು ನೋಡಿಕೊಂಡ ರೀತಿ; ನನ್ನ ತಂದೆ ತಾಯಿಗೆ ಕೊಟ್ಟ ಮರ್ಯಾದೆ; ಇನ್ನೂ ನನ್ನ ಮನಸ್ಸಿನಲ್ಲಿ ಅಚ್ಚುಳಿದಿದೆ.

Raghuram, Taj Mahal

ನಾಲ್ಕು ದಿವಸ ಅವರ ಮನೆಯಲ್ಲಿ ತಂಗ ಬೇಕಾಗಿದ್ದ ನಾವು, ಎರಡೇ ದಿವಸಕ್ಕೆ ಅಲ್ಲಿಂದ ಹೊರಟೆವು . ನಮ್ಮ ಭೇಟಿ ಸೀದಾ Agra ಗೆ. ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ Taj Mahal ದರ್ಶನಕ್ಕೆ. ಆ ವಯಸ್ಸಿನಲ್ಲಿ ನನಗೆ Taj Mahal, ಅದರ ಇತಿಹಾಸ ಏನೂ ಗೊತ್ತಿರಲಿಲ್ಲ. ನನಗೆ ಅಂದಿನ Excitement ಅಂದ್ರೆ Taj Mahal ನ ನಾವು ಮುಟ್ಟುವ ರೀತಿಯಲ್ಲಿ ತೆಗೆಯುವ photo.. ಅದನ್ನ ತೆಗೆಸಿಕೊಳ್ಳಲು ಆಸೆ. ನನ್ನ ಅಪ್ಪ-ಅಮ್ಮ ಕೂಡ ಅಷ್ಟೇ ಆಸೆಪಟ್ಟು ಆ ಫೋಟೋ ನ ಅಲ್ಲಿರುವ local photographer ಕೈಯಲ್ಲಿ ಈ tricky photo ತೆಗೆಸಿದರು. ಇಂದಿಗೂ ಅದನ್ನ ನಾನು ಜೋಪಾನವಾಗಿ ಕಾಪಾಡಿ ಕೊಂಡಿದ್ದೇನೆ.

ಯಾವ Tajmahal ನೋಡಿ Photo ತೆಗೆಸಿಕೊಂಡನೋ, ಅದೇ ‘ತಾಜ್ಮಹಲ್’ ಗೆ ನಾನು ನಿರ್ದೇಶಿಸಿದ ಪ್ರಥಮ ಚಿತ್ರದಲ್ಲಿ ಜಗತ್ತಿನ ಅದ್ಭುತಗಳಲ್ಲಿ ಒಂದಾದ
ನಮ್ಮ ಭಾರತದ ಹೆಮ್ಮೆಯ
ಈ ‘ತಾಜ್ ಮಹಲ್’ ಮುಂದೆ
ಇಪ್ಪತ್ತಾರು ವರ್ಷಗಳ ನಂತರ ಚಿತ್ರೀಕರಣ ಮಾಡೋ ಅವಕಾಶ. ಬಾಲ್ಯದಲ್ಲಿ photo ತೆಗೆಸಿ ಕೊಳ್ಳಬೇಕಾದರೆ ಇದ್ದ excitement ಈಗ ನಿರ್ದೇಶಕನಾದ ಮೇಲೆ ಅದೇ ‘ತಾಜ್ ಮಹಲ್’ ನ camera ಕಣ್ಣಿನಲ್ಲಿ ಸೆರೆ ಹಿಡಿಯು enthusiasm.

Raghu Sushma Tajmahal

ನನ್ನ ತಂದೆ-ತಾಯಿ ನನಗೆ ಹೇಗೆ ಫೋಟೋ ತೆಗೆಸಿ ಸಂಭ್ರಮಿಸಿದರೋ, ನಾನು ನನ್ನ ಹೆಂಡತಿ ಕೂಡ ನನ್ನ ದೊಡ್ಡ ಮಗಳು Nanasuವಿಗೆ ಅದೇ ಮಾದರಿಯಲ್ಲಿ ಫೋಟೋ ತೆಗೆಸಿ ಸಂಭ್ರಮಿಸಿದ ಕ್ಷಣ ಅದು. Coincidence ಅಂದ್ರೆ ನಾನು first time ಈ ಜಾಗಕ್ಕೆ ಭೇಟಿಕೊಟ್ಟಾಗ, ನನಗೆ 6 ವರ್ಷ. ನನ್ನ ಮಗಳು ಮೊದಲಬಾರಿ ‘ತಾಜ್ಮಹಲ್’ ನೋಡಿದಾಗ ಅವಳಿಗೂ 6 ವರ್ಷ. 

Nanasu, Taj Mahal

ಆ ಜಾಗವನ್ನು 26 ವರ್ಷಗಳ ನಂತರ ನೋಡಿದ ತಕ್ಷಣ, ನನ್ನ ಮನಸ್ಸಿನೊಳಗಡೆ ಇದ್ದ ಆ ಮಗು, “ನನಗೂ ಒಂದು ತಾಜ್ಮಹಲ್ ಜೊತೆ ಫೋಟೋ ಬೇಕು ಅಂತ ಹಠ ಹಿಡಿದು click ಇಸಲು ಹೇಳಿತು.”

ಅದಕ್ಕೆ ಹೇಳೋದು “ಮನಸೊಂದು ಮಗುವಂತೆ ಬಯಸಿದ್ದು ಬಿಡದಂತೆ..”

Raghuram

Raghuveer – Gowri “ಋಣಾನು ಬಂಧ ರೂಪೇನ, ಪಶು-ಪತ್ನಿ ಸುತಾಲಯ..”

Previous article

‘Gangadhar’ ಕನ್ನಡ ಚಿತ್ರರಂಗ ಕಂಡ ಒಬ್ಬ ಸುರದ್ರೂಪಿ ನಾಯಕನಟ.

Next article

You may also like

Comments

Leave a reply

Your email address will not be published. Required fields are marked *

4 × two =