ನೂರೊಂದು ನೆನಪು

“Suggi” ಚಿತ್ರದ ನಾಯಕಿಯ ತಂದೆಗೆ ಏನಾಗಿತ್ತು ??

1

ನಾನು ಚಿತ್ರರಂಗಕ್ಕೆ ಬರುವ ಮೊದಲು ಕೆಲವು ಖಾಸಗಿ ಕೇಬಲ್ ಚಾನೆಲ್ ಗಳಲ್ಲಿ Phone-in ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದೆ.. (Dial-in Live Shows). ನಮ್ಮ ರಾಜ್ಯದ ಹಾಗೂ ನಗರದ ಬೇರೆ ಬೇರೆ ಜಾಗಗಳಿಗೆ ಹೋಗಿ, ಪ್ರೇಕ್ಷಕರು ಕರೆ ಮಾಡಿದಾಗ, ಅವರ ನೆಚ್ಚಿನ ಗೀತೆಗಳನ್ನು ಪ್ರಸಾರ ಮಾಡುವುದು ಹಾಗೂ ಜನಪ್ರಿಯ ಚಿತ್ರ ಕಲಾವಿದರು ಬಂದಾಗ, ನೇರ ಪ್ರಸಾರದಲ್ಲಿ ಅವರನ್ನ ಸಂದರ್ಶನ ಮಾಡೋದು ಈ ಕಾರ್ಯಕ್ರಮದ ಪರಿಕಲ್ಪನೆಯಾಗಿತ್ತು.. ನಿರಂತರವಾದ ಪ್ರಯಾಣ, ಚಿಕ್ಕ ಚಿಕ್ಕ ಜಾಗಗಳಲ್ಲಿ (cable studio) ದೊಡ್ಡ ಪ್ರಮಾಣದ lights ಬಳಸುತ್ತಿದ್ದರಿಂದ ನನ್ನ ಕಣ್ಣುಗಳಿಗೆ ತುಂಬಾ strain ಆಗ್ತಾ ಇತ್ತು.

tara

ರಾತ್ರಿ ಮನೆಗೆ ಬಂದು ಮಲಗಿದಾಗ ಎರಡು ಕಣ್ಣುಗಳಿಗೆ ಯಾರೋ ಚಾಕುವಿನಿಂದ ನನ್ನ ಕಣ್ಣಿಗೆ ಚುಚ್ಚಿದ ರೀತಿ ಅನುಭವವಾಗುತ್ತಿತ್ತು.. ಇದನ್ನು ಸರಿಪಡಿಸಲು ಒಬ್ಬ eye specialist ಅನ್ನು ಭೇಟಿ ಮಾಡಬೇಕಾಗಿತ್ತು.. ನಾನು ಆಗಿನಿಂದ ಈಗಿನವರೆಗೂ ವಾಸವಾಗಿರುವುದು ಬೆಂಗಳೂರಿನ ಕುಮಾರ ಪಾರ್ಕ್ ಏರಿಯಾದಲ್ಲಿ.. ನಮ್ಮ ಏರಿಯಾದ ಪಕ್ಕ Palace ಗುಟ್ಟಳ್ಳಿ ಸರ್ಕಲ್ ಬಳಿ Dr. Rajshekar ಎಂಬುವ ಒಬ್ಬ eye ಸ್ಪೆಷಲಿಸ್ಟ್ ಇದ್ದರು.. ಅವರ ಬಳಿ ನನ್ನ ಕಣ್ಣನ್ನು ಹೋಗಿ ಪರೀಕ್ಷಿಸಿದಾಗ, excess of heat of the light ಇಂದ ಕಣ್ಣುಗಳಿಗೆ ಸ್ವಲ್ಪಮಟ್ಟದಲ್ಲಿ ತೊಂದರೆಯಾಗಿದೆ.. ಒಂದು ಕನ್ನಡಕ ತಯಾರಿಸಿಕೊಡುತ್ತೇನೆ.. ಇನ್ಮುಂದೆ ಕಾರ್ಯಕ್ರಮ ಮಾಡಬೇಕಾದರೆ ಆ ಕನ್ನಡಕವನ್ನು ಧರಿಸಿ ಮಾಡಿ.. ಈ glass ನಿಂದ light ನ ಪ್ರಭಾವ ನಿಮ್ಮ ಕಣ್ಣುಗಳಿಗೆ ಕಡಿಮೆ ಬೀಳುತ್ತದೆ ಎಂದು ಹೇಳಿ, ಎರಡು ದಿವಸ ಆದಮೇಲೆ ಬನ್ನಿ, ನಿಮ್ಮ ಕನ್ನಡಕ ಸಿದ್ಧ ಮಾಡಿ ಇಟ್ಟಿರುತ್ತೇನೆ ಎಂದು ಹೇಳಿ ಕಳಿಸಿದರು..

ನಂತರ ಹೋದೆ, ಆ ಕನ್ನಡಕವನ್ನು ಪಡೆದುಕೊಂಡೆ. ಆ ಡಾಕ್ಟರ್ ಸ್ವಲ್ಪ ಆತುರ, ಸಂಭ್ರಮ ಎಲ್ಲವೂ ಮಿಶ್ರಿತ ಭಾವನೆಯಲ್ಲಿ ಇದ್ದರು..  ಆ ಸಂಭ್ರಮ, ಆತುರ ಏಕೆಂದರೆ ಹಂಸಲೇಖ ಅವರು ಅವರ ಮಗನಿಗಾಗಿ ತಯಾರಿಸುತ್ತಿದ್ದ “ಸುಗ್ಗಿ” ಎಂಬ ಚಿತ್ರದ ನಾಯಕಿಯ ತಂದೆಯೇ ಈ eye specialist ಡಾಕ್ಟರ್..”ಸುಗ್ಗಿ ” ಚಿತ್ರದ shooting ಗಾಗಿ ಮೈಸೂರಿಗೆ ಹೊರಡುವ ಆತುರ, ಮಗಳು ನಾಯಕಿಯಾಗಿರುವ ಸಡಗರ ಎರಡು ಅವರಲ್ಲಿತ್ತು.. ನನಗೆ ಅವರು ಕನ್ನಡಕವನ್ನು ಕೊಟ್ಟು “15 ದಿವಸ ನಾನು ಊರಿನಲ್ಲಿ ಇರುವುದಿಲ್ಲ, ಮಗಳ ಶೂಟಿಂಗಾಗಿ ಮೈಸೂರಿಗೆ ಹೋಗುತ್ತಾ ಇದ್ದೀನಿ. ನಾನು ಬಂದ ಮೇಲೆ ಇನ್ನೊಮ್ಮೆ ನಿಮ್ಮ ಕಣ್ಣುಗಳನ್ನು ಬಂದು ಪರೀಕ್ಷೆ ಮಾಡಿಸಿಕೊಳ್ಳಿ” ಎಂದು ಹೇಳಿ ನನಗೆ ಶುಭವನ್ನು ಹಾರೈಸಿ ಕಳುಹಿಸಿಕೊಟ್ಟರು..

Hamsalekha

ನಂತರ ಮೈಸೂರು, ಶ್ರೀರಂಗಪಟ್ಟಣ, ಕರಿಘಟ್ಟದಲ್ಲಿ ಸತತವಾಗಿ ‘ಸುಗ್ಗಿ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು.. Schedule start ಆದ ಮೊದಲನೇ ದಿವಸದಿಂದ ಹಿಡಿದು, schedule pack up ಆಗೋ ಕಡೆಯ ದಿವಸದ ದಿನಾಂಕವನ್ನು ‘ಸುಗ್ಗಿ’ ಚಿತ್ರದ ನಾಯಕಿ ಶ್ರುತಿ ಅವರ ತಂದೆ eye specialist ಡಾಕ್ಟರ್ ರಾಜಶೇಖರ್, ಒತ್ತಿ ಒತ್ತಿ ನಿರ್ದೇಶಕ S.Mahender ಅವರ ಬಳಿ ಬಂದು ” ಸರ್ ನಮ್ date ನೀವು ಹೇಳಿರುವ ಈ schedule ನ ಕಡೆಯ ದಿನದ ವರೆಗೂ ಮಾತ್ರ ಇರೋದು.. ನೀವೇನಾದರೂ Shooting extend ಮಾಡಿದ್ರೆ ನಮ್ಮ ಕೈಯಲ್ಲಿ dates ನ ಕೊಡಕ್ಕಾಗಲ್ಲ..  ನಮಗೆ ಬೇರೆ commitment ಇದೆ.. So please ನಮ್ಮ portion ಅನ್ನು ಮುಗಿಸಿಕೊಟ್ಟು ನಮಗೆ ಹೇಳಿದ ಸಮಯಕ್ಕೆ ಕಳಿಸಿಕೊಡಿ”, ಎಂದು ಪ್ರತಿನಿತ್ಯ ಬೆಳಗ್ಗೆ,ಮಧ್ಯಾಹ್ನ, ಸಂಜೆ, ನಿರಂತರವಾಗಿ ಮಹೇಂದರ್ ರವರ ಬಳಿ ಹೇಳುತ್ತಲೇ ಬಂದರು..
ಕಡೆಗೂ ಆ Schedule ನ ಕಡೆಯ ದಿನ ಬಂದೇಬಿಡ್ತು.. ಆವತ್ತು ಬೆಳಗ್ಗೆಯೂ ಕೂಡ ಇದೇ ಮಾತನ್ನು ಹೇಳಲು ಬಂದ ನಾಯಕಿಯ ತಂದೆಗೆ ನಿರ್ದೇಶಕರು ” ಗೊತ್ತು ಸರ್ ಇವತ್ತು ನಿಮಗೆ ಕಳುಹಿಸಬೇಕು. 100% ಕಳಿಸಿ ಕೊಡುವೆ, dont worry” ಅಂತ ಹೇಳಿ ಅವರ ಕೆಲಸದ ಕಡೆ ನಡೆದರು..

S Mahender

ಅಂದುಕೊಂಡಂತೆ ಎಲ್ಲಾ ಚಿತ್ರೀಕರಣ ಸರಾಗವಾಗಿ ನಡೆಯಿತು.. 6 ಗಂಟೆಯ ನಂತರ, ಅಂದರೆ ಸೂರ್ಯ ಮುಳುಗಿದ ಮೇಲೆ, ಬೊಂಬೆಗೆ ಬೆಂಕಿ ಇಡುವ ದೃಶ್ಯವನ್ನು ಸೆರೆ ಹಿಡಿಯಬೇಕಾಗಿತ್ತು.. ಕತ್ತಲಾಗುತ್ತಿದ್ದಂತೆ ಎಲ್ಲ lighting ಅನ್ನು ಮಾಡಿಕೊಂಡು ಇನ್ನೇನು ಆ ದೃಶ್ಯದ ಚಿತ್ರೀಕರಣ ಮಾಡಬೇಕು ಅನ್ನುವಷ್ಟರಲ್ಲಿ ನಾಯಕಿ ಧರಿಸಬೇಕಾಗಿದ್ದ continuity ornament ಒಂದು ಮಿಸ್ ಆಗಿತ್ತು.ಇದರ ಬಗ್ಗೆ ನಿರ್ದೇಶಕ ರು ಮತ್ತು ಅವರ ತಂಡ ಚರ್ಚಿಸುತ್ತಿದ್ದಿದ್ದನ್ನು   ಗಮನಿಸಿದ ರಾಜಶೇಖರ್ ಅವರು ಮತ್ತೆ Mahender ಅವರ ಬಳಿ ಓಡಿಬಂದು ” ಸರ್ ಇದೇನೋ ಮಿಸ್ಸಾಗಿದೆ ಅಂತ ದಯವಿಟ್ಟು ನಾಳೆಗೆ Shooting ನ extend ಮಾಡಬೇಡಿ.. ನಾವು ಈಗ ಹೊರಡಲೇಬೇಕು ಎಂದು ಮತ್ತಷ್ಟು ಒತ್ತಡವನ್ನು ಹೇರಿದ್ದಾರೆ.. ಶಾಂತ ಸ್ವಭಾವದ ನಿರ್ದೇಶಕರಾದ Mahender ಅವರು ” ಸರ್ Shooting start ಆದ ಮೊದಲನೆಯ ದಿವಸದಿಂದಲೂ ಇದನ್ನೇ ನೀವು ಹೇಳುತ್ತಾ ಬರುತ್ತಿದ್ದೀರ, ಇಂದು  ನೀವು ಹೊರಡ ಬೇಕು ಅಂತ. ನಿಮ್ಮ program ಗೆ ನಾನು ತೊಂದರೆ ಮಾಡಲ್ಲ. ಈ particular balance ದೃಶ್ಯವನ್ನು ನಾನು ಮುಂದಿನ schedule ನಲ್ಲಿ match ಮಾಡುತ್ತೇನೆ, ನೀವು ಹೊರಡಬಹುದು ಸರ್” ಎಂದು ಹೇಳಿದಾಗ ರಾಜಶೇಖರ್ ಅವರು ಆತುರದಿಂದಲೇ ಹೊರಟು ನಿಂತರು.. ಇದನ್ನು ಗಮನಿಸಿದ ನಿರ್ದೇಶಕರು, “ಯಾಕ್ ಸರ್ ಇಷ್ಟೊಂದು ಅರ್ಜೆಂಟು?? ಎಲ್ಲವೂ ready ಇದೆ. ತಿಂಡಿ ತಿಂದುಕೊಂಡು ಹೊರಡಿ ಅಂತ ಹೇಳಿ, ಸಂಜೆಯ snacks ಅನ್ನು ತಿನ್ನಿಸಿ, ಅವರನ್ನ ಕಳಿಸಿಕೊಟ್ಟರು..

ಇನ್ನೂ ಚಿತ್ರತಂಡದೊಂದಿಗೆ ಈ Schedule ನಲ್ಲಿ balance ಉಳಿದ ಕೆಲಸಗಳು, ಮುಂದಿನ ಹಂತದ ಚಿತ್ರೀಕರಣದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ, ಉಪಹಾರವನ್ನು ಸೇವಿಸಿ ಅವರು ಕೂಡ ಮೈಸೂರಿನ ಹಳೆ ಸಂದೇಶ್ ಹೋಟೆಲ್ ಗೆ ಬಂದರು.. ಮಹೇಂದ್ರ ಅವರು reception ಬಳಿ ಬರುತ್ತಿರುವಂತೆಯೇ “ಸರ್, ತುಂಬಾ ಅರ್ಜೆಂಟು ಬನ್ನಿ ಇಲ್ಲಿ ಅಂತ ಕರೆದಿದ್ದಾರೆ ” (ತಮ್ಮ ಗಮನದಲ್ಲಿರಲಿ ಆಗಿನ್ನೂ mobile ಗಳು ಬಂದಿರಲಿಲ್ಲ.. ಎಲ್ಲವೂ land line ಸಂಪರ್ಕ ಸೇತುವೆ ಆಗಿತ್ತು)
ಆಗ ಅಲ್ಲಿ ಅವರಿಗೆ ಬಂದ ವಿಷಯ ಸುಗ್ಗಿ ಚಿತ್ರದ ನಾಯಕಿ ಶೃತಿ ಅವರ ತಂದೆ eye ಸ್ಪೆಷಲಿಸ್ಟ್ ಡಾಕ್ಟರ್ ರಾಜಶೇಖರ್ ರಾಮನಗರದ ಬಳಿ accident ನಲ್ಲಿ ದುರ್ಮರಣ.. ರಸ್ತೆ ಅಪಘಾತದಲ್ಲಿ ರಾಜಶೇಖರ್ ಅವರು ತೀರಿಕೊಂಡಿದ್ದರು.. ಅವರ ಜೊತೆ ಪ್ರಯಾಣಿಸುತ್ತಿದ್ದ ಮಗಳು ಶ್ರುತಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು..

Shooting ಪ್ರಾರಂಭದಿಂದಲೂ ಅವರಿಗೆ ಏನು ಆತುರವೊ, ಹೋಗಬೇಕು ಹೋಗಬೇಕು ಅನ್ನೋ ಕಾತುರ ಯಾಕೆ ಬಂದಿತ್ತೋ ಇನ್ನು ಪ್ರಶ್ನೆಯಾಗೆ ಉಳಿದಿದೆ..
ಅವಸರಪಟ್ಟು ಹೋಗಬೇಕು ಎಂದು ಹೇಳಿ ರಾಜಶೇಖರ್ ರವರು ಹೋಗಿ ಸೇರಿದ್ದು ಆಗಸದ ಊರಿಗೆ.. ಹೆಚ್ಚು ದಿನಗಳ ಕಾಲ ಅವರು ನಮ್ಮೊಂದಿಗೆ ಇರಲಿಲ್ಲ.. ‘ಸುಗ್ಗಿ’ ಚಿತ್ರ ಚಿತ್ರಮಂದಿರಗಳಿಗೆ ಬರಲಿಲ್ಲ.. ನನ್ನ ಕಣ್ಣುಗಳ ರಕ್ಷಣೆಗಾಗಿ ಡಾಕ್ಟರ್ ರಾಜಶೇಖರ್ ಮಾಡಿಕೊಟ್ಟ ಆ ಕನ್ನಡಕ ಇಂದಿಗೂ ನಾನು ಮರೆತ್ತಿಲ್ಲ..

Raghuram

Balakrishna ಅವರ ಬಗ್ಗೆ ಒಂದು ಮುಚ್ಚಿಹೋದ ಸತ್ಯ ಕಥೆ..

Previous article

Khushboo, ಇವರು ಚಿತ್ರರಂಗಕ್ಕೆ ಒಂದು ಸೊಬಗು

Next article

You may also like

1 Comment

  1. ಸುಗ್ಗಿ ಒಂದು ಒಳ್ಳೆಯ ಕಾನ್ಸೆಪ್ಟ್ ಇದ್ದ ಚಿತ್ರ, ನಮ್ಮ ಹಬ್ಬಗಳನ್ನು ಮೂಲ ವಾಗಿ ಇಟ್ಟುಕೊಂಡು ಹಾಡುಗಳು ಮಾಡಿದ್ದರು ಹಂಸಲೇಖ, ಹಾಡುಗಳು ಬಹಳ ಚೆನ್ನಾಗಿ ಮೂಡಿ ಬಂದಿತ್ತು, ಆಗ ಕ್ಯಾಸೆಟ್ ಕಾಲ, ಹಾಡುಗಳು ಸಿನಿಮಾ ಬರುವುದಕ್ಕೆ ಮುಂಚೆನೇ ಜನಪ್ರಿಯವಾಗಿತ್ತು. ಹೀರೋಯಿನ್ ನಟಿಸೋದಿಲ್ಲ ಅಂತಾನೋ ಅಥವ ನಟಿಸಿಲಾರದ ಸ್ಥಿತಿ ಅಂತಾನೋ ಸಿನಿಮಾ ನಿಂತು ಹೋಯ್ತು ಅಂತ ಸುದ್ದಿ ಇತ್ತು, ಗೊತ್ತಿದ್ದರೆ ನಿಜವಾದ ಕಾರಣ ತಿಳಿಸಿ

Leave a reply

Your email address will not be published. Required fields are marked *

fourteen − 6 =