ಬರವಣಿಗೆಯ ಮೆರವಣಿಗೆ

‘Soundarya’ ಭಾರತೀಯ ಚಿತ್ರರಂಗದ ಅಪರೂಪದ ವೈಡೂರ್ಯ

4
Soundarya, Raghuram

ಮೂಲತಹ ನಾನು ಮೈಸೂರಿನವನು.. 6ನೇ class ವರೆಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ನಡೆಸಿ, 7ನೇ ತರಗತಿಗೆ ಬೆಂಗಳೂರಿಗೆ ಬಂದೆ. ಅಂದಿನಿಂದ ಇಂದಿನವರೆಗೂ ಬೆಂಗಳೂರಿನಲ್ಲಿ ನಾವು ವಾಸವಿರುವಂಥ Area Kumara Park. ಅಲ್ಲೇ KECS ( Karnataka educational and cultural society ) ಅನ್ನುವಂತಹ ವಿದ್ಯಾಸಂಸ್ಥೆಗೆ ನನ್ನ adsmission ಆಯ್ತು. ಮೈಸೂರಿನಿಂದ ಬೆಂಗಳೂರಿಗೆ ಬಂದ ನನಗೆ, ಹೊಸ ಊರು ಹೊಸ ಜನ, ಹೊಸ ಜಾಗ. ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. 7ನೇ ತರಗತಿಯ Primary education ಮುಗಿಸಿ, ಅದೇ ಶಾಲೆಯ ಮತ್ತೊಂದು ಕಟ್ಟಡದಲ್ಲಿದ್ದ High school ಗೆ ಬಂದೆ. ಅಲ್ಲೇ ನಾನು ಮೊದಲು ನೋಡಿದ್ದು ಈ ರೂಪವಂತೆ ಗುಣವಂತೆ ಹೃದಯವಂತೆ, ಪ್ರತಿಭಾವಂತೆಯೆನ್ನ. ಅವರು ಬೇರೆ ಯಾರು ಅಲ್ಲ, ನಮ್ಮೆಲ್ಲರ ಪ್ರೀತಿಯ ಸೌಮ್ಯ, ಇಡೀ ಭಾರತೀಯ ಚಿತ್ರರಂಗದ ‘ಸೌಂದರ್ಯ’

ಸೌಂದರ್ಯ ಅವರು ನನಗಿಂತ ಎರಡು ವರ್ಷ Senior. ಅವರಣ್ಣ ಅಮರನಾಥ್, RSS ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಮ್ಮ ಮನೆಯಿಂದ 100 ರಿಂದ 200 ಹೆಜ್ಜೆ ಮುಂದೆ ಬಂದರೆ ಸೌಂದರ್ಯ ಅವರ ಮನೆಯಿತ್ತು. ಅವರ ತಂದೆ ಶ್ರೀ ಸತ್ಯನಾರಾಯಣ್ ಅವರು ಸಿನಿಮಾದವರು ಅನ್ನೋದು ನಮಗೆ ಗೊತ್ತಿತ್ತು. ಸೌಂದರ್ಯ ಅವರು ಸಿನಿಮಾ ಕುಟುಂಬದಿಂದ ಬಂದಿದ್ದರಿಂದ ಅವರ ಬಗ್ಗೆ ತಿಳಿದುಕೊಳ್ಳಲು ನನಗೆ ಹೆಚ್ಚು ಆಸಕ್ತಿ ಇತ್ತು. ಒಂದೇ Area ಹಾಗೂ ಒಂದೇ School ನವರಾಗಿದ್ದರಿಂದ  ನಮ್ಮಿಬ್ಬರಿಗೂ ಮುಖ ಪರಿಚಯ ಇತ್ತೇ ಹೊರತು ಎಂದೂ ಕೂಡ ಒಬ್ಬರನ್ನೊಬ್ಬರು ಮಾತನಾಡಿಸಿರಲಿಲ್ಲ

KECS school


ಇದಾದ ನಂತರ ಸೌಂದರ್ಯವರು ಚಿತ್ರರಂಗಕ್ಕೆ ಬಂದು ದೊಡ್ಡ ಸ್ಟಾರ್ ಆಗಿರುವ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ. ನಾನು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಶ್ರೀ S.V. Rajendra Singh Babu ಅವರ ನಿರ್ದೇಶನದ ‘ದೋಣಿಸಾಗಲಿ’ ಚಿತ್ರದಿಂದ. ಆ ಚಿತ್ರದಲ್ಲಿ ನನ್ನ ಭಾಗದ ಮೊದಲನೇ ದಿನದ ಚಿತ್ರೀಕರಣ ಬೆಂಗಳೂರಿನ ಯಲಹಂಕದಲ್ಲಿರುವ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡಿತಾ ಇತ್ತು. ನನ್ನದು ಒಬ್ಬ ವಿದ್ಯಾರ್ಥಿಯ ಪಾತ್ರ, ಸೌಂದರ್ಯ ಅವರು ನಮ್ಮ Lecturer.
ಮೇಡಮ್ ಅವರೊಂದಿಗೆ ಮೊದಲನೆಯ ದೃಶ್ಯದಲ್ಲಿ ನಾನು ಅಭಿನಯಿಸಬೇಕಾದರೆ ಭಯ, ಆತಂಕ, ಹಿಂಜರಿಕೆ, ಅಂಜಿಕೆ ಎಲ್ಲವೂ ಇತ್ತು. ಸೌಂದರ್ಯ ಅವರು ನಮ್ಮ School mate. ನನಗೆ ಅವರ ಬಗ್ಗೆ ಪರಿಚಯ, ಹೆಮ್ಮೆ, ಅಭಿಮಾನ, ಗೌರವ, ಎಲ್ಲವೂ ಇತ್ತು. ಆದರೆ ಅವರು South India ದ ದೊಡ್ಡ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದರು. ನನ್ನ ಜ್ಞಾಪಕ ಇರುತ್ತಾ? ಮುಖ ಪರಿಚಯ ಇರುತ್ತಾ? ಶಾಲೆಯ ಹೆಸರು ಇಡ್ಕೊಂಡು ಅವರ ಜೊತೆ ಮಾತಾಡಬಹುದಾ? ಅನ್ನೋ ಪ್ರಶ್ನೆಗಳು ಗೊಂದಲಗಳು ನನ್ನಲ್ಲಿ ಮನೆ ಮಾಡಿತ್ತು.

Shot ಗೆ ಹೋಗೋ ಮುನ್ನ Monitor ಮಾಡ್ಬೇಕಾದ್ರೆ camera ಎದುರು, ಸೌಂದರ್ಯಾ ಅವರ ಜೊತೆಗೆ ಸ್ವಲ್ಪ ಆತಂಕದಿಂದಲೇ ನಿಂತೆ. ನನ್ನನ್ನ ಸೂಕ್ಷ್ಮವಾಗಿ ಗಮನಿಸಿ, ಅವರು, “ಹೆದರಿಕೋಬೇಡ ಧೈರ್ಯವಾಗ್ ಮಾಡು” ಎಂದು ಸ್ಪೂರ್ತಿ ತುಂಬುವ ಮಾತುಗಳನ್ನು ಹೇಳಿದರು. ಆದರೂ Very first time ನಾನು Act ಮಾಡ್ತಿದ್ರಿಂದ ಸತತ 5-6 Monitor ಆಗಿ ‘ಪಂಚಮಂ ಕಾರ್ಯ ಸಿದ್ದಿ’ ಅನ್ನೋ ಹಾಗೆ 5ನೇ take ಗೆ Ok ಆಯಿತು. ನಂತರ Break ಸಮಯದಲ್ಲಿ, ಮೇಡಂ ಅವರ ಸಹೋದರ ಅಮರ್ ಸರ್ ” ಹೇ!ನೀ ನಮ್ಮ Kumara Park ಹುಡುಗ ಅಲ್ವಾ” ಎಂದು ಗುರುತು ಹಿಡಿದರು. ಅಲ್ಲೇ ಪಕ್ಕದಲ್ಲಿದ್ದ ಸೌಂದರ್ಯ ಅವರು, “ನಿನ್ನ ಮುಖ ತುಂಬಾ Familiar ಇದೆ. KECS School ಅಲ್ವಾ?” ಎಂದು ಕೇಳಿದಾಗ ನನಗೆ ಆಶ್ಚರ್ಯ, ಆನಂದ, ಎಲ್ಲವೂ mix ಆಗುವ ಹಾಗೆ ಆಯ್ತು. ಸ್ವಲ್ಪ ನಾಚಿಕೆ, ಜಾಸ್ತಿ ಭಯದಿಂದ “ಹೌದು ಮೇಡಂ” ಅಂದೆ.
ಆ ಸಮಯದಲ್ಲಿ, ಆ ಘಳಿಗೆಯಲ್ಲಿ, ಆ ಅಣ್ಣ ತಂಗಿ ಜೊತೆ ಶುರುವಾದ ನನ್ನ ಬಾಂಧವ್ಯ ಚಿತ್ರೀಕರಣದುದ್ದಕ್ಕೂ ಬಹಳ ಗಟ್ಟಿಯಾಗಿ ಸಾಗಿತು.

ಬೆಂಗಳೂರಿನ ಯಲಹಂಕದಲ್ಲಿರುವ ‘Ramanashri California Resort’ ನಲ್ಲಿ ಮೂರು ದಿನಗಳ ಕಾಲ night effect ನಲ್ಲಿ ಚಿತ್ರೀಕರಣ. ಆಗ ಯೆಲಹಂಕ ಅಂದ್ರೆ ಬೆಂಗಳೂರಿನ Outskirts ನಲ್ಲಿ ಇದ್ದಂತ ಜಾಗ. Location ನಲ್ಲಿ ಇನ್ನೆರಡು ದಿನಗಳಾದ ಮೇಲೆ ಯಲಂಕದಲ್ಲಿ Night Shooting ಅಂತ ಗೊತ್ತಾದ ತಕ್ಷಣ, ಸೌಂದರ್ಯ ಮಾಮ್ ಹಾಗೂ ಅಮರ್ ಸರ್ ನನ್ನ ಬಳಿ ಕೇಳಿದ ಮೊದಲನೇ ಪ್ರಶ್ನೆ “Shooting ಗೆ ಹೆಂಗ್ bartiya? “. ನಿರಂತರವಾಗಿ ಚತ್ರಿಕರಣದಲ್ಲಿದಿದ್ದರಿಂದ ನನಗೆ ಅವರಿಬ್ಬರ ಬಳಿ ಒಂದು ಸಣ್ಣ ಸಲಿಗೆ ಬೆಳೆದಿತ್ತು. “Bike ನಲ್ಲಿ ಬರ್ತೀನಿ sir” ಅಂತ ಹೇಳಿದೆ. ತಕ್ಷಣ ಆ ಅಣ್ಣ ತಂಗಿ ಇಬ್ಬರು “Bike ನಲ್ಲಿ ಇಷ್ಟು ದೂರನಾ? ಬೇಡ ಬೇಡ” ( ಆಗ ಸೌಂದರ್ಯ ಅವರು ಹನುಮಂತ ನಗರದಲ್ಲಿ ಇದ್ದರು )
ನಾವು ಹನುಮಂತನಗರದಿಂದ ಹೊರಟು ಗುಟ್ಟಹಳ್ಳಿ ಮೇಲೆ ಬರ್ತೀವಿ, ನೀನು ಗುಟ್ಟಹಳ್ಳಿ Circle ಅಥವಾ ಕಾವೇರಿ theatre ಹತ್ತಿರ ಇರು, ನಾವೇ ನಿನ್ನ pick ಮಾಡಿಕೊಂಡು ಕರ್ಕೊಂಡ್ ಹೋಗ್ತಿವಿ. ಒಟ್ಟಿಗೆ Shooting ಹೋಗೋಣ.” ಎಂದು ಮೇಡಂ ಹೇಳಿದ ತಕ್ಷಣ ಅಮರ್ ಸರ್ ” ಹೌದು ಹೌದು, ಈಗ ಬೆಂಗಳೂರಿನಲ್ಲಿ ಒಂದು Gang ಬೇರೆ ಶುರುವಾಗಿದೆ.” (ಅದೇನೆಂದರೆ HIV infected ಆದ ಕೆಲವು ವ್ಯಕ್ತಿಗಳು Bike ನಲ್ಲಿ ಹೋಗುತ್ತಿರುವವರ ಬಳಿ lift ಕೇಳುವ ಹಾಗೆ ಮಾಡಿ, ತಮ್ಮ ದೇಹವನ್ನು ಚುಚ್ಚಿಕೊಂಡಿದ್ದ ಸೂಜಿಯಿಂದ ನಮ್ಮ ದೇಹ ಚುಚ್ಚುವ ಒಂದು ಚಟುವಟಿಗೆ ನಡೆಯುತ್ತಿತ್ತು. ನಂತರ Bike ಹಿಂದೆ ” Welcome to the world of AIDS ” ಅಂತ sticker ಅಂಟಿಸಿ ಹೋಗುತ್ತಿದ್ದರು.) ಈ ವಿಷಯವನ್ನು ಅತ್ಯಂತ ಕಾಳಜಿಯಿಂದ ನನಗೆ ತಿಳಿಸಿಕೊಟ್ಟರು.
ಆ ಮೂರರಿಂದ ನಾಲ್ಕು ದಿವಸ Shooting ಎಂದು ನಾನು ಅವರೊಡನೆ ಹೋದ ಸಮಯ ಎಂದು ಮರೆಯಲು ಸಾಧ್ಯವಿಲ್ಲ. ಅವರ ತಮಿಳು ತೆಲುಗು ಚಿತ್ರಗಳ ಅನುಭವಗಳು, ಅವರ ತಂದೆಯ ನೆನಪುಗಳು, ಚಿತ್ರರಂಗದ ಪ್ರಾರಂಭ ದಿನಗಳಲ್ಲಿ ಅವರು Face ಮಾಡಿದ challenges.. ಎಲ್ಲ ವಿಷಯಗಳು ಈಗಲೂ ನನ್ನ ಮನಸ್ಸಿನಲ್ಲಿ ಹಾಗೆ ಭದ್ರವಾಗಿದೆ.
ಇದಾದ ನಂತರ Ramesh Aravind ಹಾಗೂ ಸೌಂದರ್ಯ ಅವರು ಅಭಿನಯದ ‘ಆರ್ಯಭಟ್ಟ’ ಎಂಬ ಚಿತ್ರದಲ್ಲೂ ಒಂದು ಪುಟ್ಟ ಪಾತ್ರದಲ್ಲಿ ನಟಿಸಿದೆ.

ಕಾಲ ಕಳೆದಂತೆ, ದಿನಗಳುರುಳಿದಂತೆ, ನಾನು ETV ಕನ್ನಡ ವಾಹಿನಿಯಲ್ಲಿ Program Producer ಆಗಿ ಕೆಲಸ ನಿರ್ವಹಿಸುತ್ತಿದೆ. ಆಗ ‘ತಾರೆಗಳ ತೋಟ’ ಎಂಬ ಒಂದು ಪ್ರಸಿದ್ಧವಾದ ಕಾರ್ಯಕ್ರಮವು ನನ್ನ ಅಡಿಯಲ್ಲಿಯೇ ತಯಾರಾಗುತ್ತಿತ್ತು. ಕನ್ನಡ ಚಿತ್ರರಂಗದ ಚಟುವಟಿಕೆಗಳು ; ಅದು Shooting, editing, dubbing, song recording, Audio release, ಪತ್ರಿಕಾಗೋಷ್ಠಿ, ಏನೇ ಇದ್ದರೂ ಅದು ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ನಮ್ಮ TV Camera ದಲ್ಲಿ ಚಿತ್ರೀಕರಿಸಿ, ಅಲ್ಲಿನ Artists, Technicians ನ Interview ಮಾಡುವುದು ಈ Program ನ concept.
‘ಆಪ್ತಮಿತ್ರ’ ಚಲನಚಿತ್ರದ Shooting ಬೆಂಗಳೂರಿನ ಅರಮನೆಯ ಆವರಣದಲ್ಲಿ ನಡೆಯುತ್ತಿತ್ತು. ಚಿತ್ರತಂಡದಿಂದ ನಮ್ಮ ತಾರೆಗಳ ತೋಟ ಕಾರ್ಯಕ್ರಮಕ್ಕೆ ಆಪ್ತಮಿತ್ರ ಚಿತ್ರದ ಸನ್ನಿವೇಶಗಳನ್ನು ಚಿತ್ರೀಕರಿಸಿ TV ಅಲ್ಲಿ ಪ್ರಸಾರ ಮಾಡಲು ಆಹ್ವಾನ ಬಂದಿತು. ನಾನು ನಮ್ಮ ತಂಡ Bangalore Palace ಗೆ ಹೋಗಿ ಅಲ್ಲಿ shoot ಆಗುತ್ತಿದ್ದ Scenes ಗಳನ್ನ ನಮ್ಮ ಕ್ಯಾಮೆರಾದಲ್ಲಿ capture ಮಾಡಿ, ನಿರ್ಮಾಪಕ, ದ್ವಾರ್ಕೀಶ್ ಸರ್, ಪ್ರೇಮ ಮೇಡಂ, ರಮೇಶ್ ಅರವಿಂದ್ ಸರ್, ನಿರ್ದೇಶಕ ಪಿ.ವಾಸು ಸರ್, ಶಿವರಾಮಣ್ಣ, ಇವರೆಲ್ಲರ ಸಂದರ್ಶನವನ್ನು ಮುಗಿಸಿದೆ. ವಿಷ್ಣು ಸರ್ ಸಿನಿಮಾ ಬಿಡುಗಡೆಯ ಸಂದರ್ಭದಲಿ ಮಾತ್ರ ಸಂದರ್ಶನ ಕೊಡುತ್ತಾ ಇದ್ದಿದ್ದು. ಈ ರೀತಿ Studio round up ಗೆ ಹೋದಾಗ ಅವರು interviews ಕೊಡ್ತಾ ಇರ್ಲಿಲ್ಲ.


ಎಲ್ಲರ ಸಂದರ್ಶನ ಮುಗೀತು, ಸೌಂದರ್ಯವರದೊಂದೇ ಬಾಕಿ ಇತ್ತು. ನಮ್ಮ ETV ಸಂಸ್ಥೆಯ ಒಂದು rule ಏನೆಂದರೆ, ಈ ರೀತಿ shooting Location ಗಳಿಗೆ ಹೋದಾಗ ನಮ್ಮ ETV ತಂಡ, ಯಾವುದೇ ಊಟ ತಿಂಡಿಗಳನ್ನು Shooting Set ನಲ್ಲಿ ಮಾಡಬಾರದು ಅಂತ. ಕಾರಣ, ETV ಸಮೂಹದ ಒಡೆಯ ಶ್ರೀ Ramoji Rao, ಅವರೂ ಕೂಡ ಒಬ್ಬ ನಿರ್ಮಾಪಕ. ನಿರ್ಮಾಪಕರ ಕಷ್ಟ, ಚಿತ್ರೀಕರಣದ ಒತ್ತಡ ಅವರಿಗೆ ಚೆನ್ನಾಗಿ ಗೊತ್ತಿತ್ತು. ಐದಾರು ಜನ ಹೋಗಿ set ನಲ್ಲಿ ಊಟ ತಿಂಡಿಗೆ ಅಂತ ಕೂತ್ಕೊಂಡ್ರೆ, ಅದು ಒಬ್ಬ ನಿರ್ಮಾಪಕನಿಗೆ extra burden ಆಗುತ್ತೆ ಅನ್ನೋ ಉದ್ದೇಶ ಶ್ರೀ ರಾಮೋಜಿ ರಾವ್ ಅವರದು.

Aptamitra

ಬೆಳಗ್ಗೆ ಸುಮಾರು 10:30 – 11 ಗಂಟೆಗೆ ನಾನು ಅರಮನೆ ಆವರಣಕ್ಕೆ ಹೋಗಿದ್ದು. ಈ ಎಲ್ಲಾ Shoot ಮುಗಿಸುವಲ್ಲಿ ಸುಮಾರು 12:30 – 1:00 ಆಯಿತು. ಸೌಂದರ್ಯ ಮೇಡಂ ಅವರ ಸಂದರ್ಶನವನ್ನು ಮುಗಿಸಿ, ನನ್ನ ತಂಡದೊಡನೆ ಹೋಟೆಲ್ನಲ್ಲಿ ಊಟ ಮಾಡಿ ಮತ್ತೊಂದು ಚಿತ್ರೀಕರಣಕ್ಕೆ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು. ಸೌಂದರ್ಯ ಮೇಡಂ ಬಳಿ ನಾನು ಎಷ್ಟೇ ಹೋಗಿ ಕೇಳಿದರು, ಸಂದರ್ಶನನ ಕೊಡ್ತೀನಿ ಕೊಡ್ತೀನಿ ಅಂತ ಹೇಳಿ ಸಮಯಾನ ಮುಂದಕ್ಕೆ ತಳ್ತಾಯಿದ್ರು. ‘ದೋಣಿ ಸಾಗಲಿ’ ಚಿತ್ರದಿಂದ ಮೇಡಂ ಅವರೊಡನೆ ನನಗಿದ್ದ ಒಂದು ಸಣ್ಣ ಸಲಿಗೆಯಿಂದ ಧೈರ್ಯ ಮಾಡಿ ” ಮೇಡಂ ಹುಡುಗರೆಲ್ಲ ಊಟ ಮಾಡಬೇಕು ಅಂತ ಇದ್ದಾರೆ, ನಿಮ್ಮ ಬೈಟ್ ಆದ್ಮೇಲೆ (ಸಂದರ್ಶನ) ಊಟ ಮುಗಿಸಿ ಬೇರೆ set ಗು ಹೋಗ್ಬೇಕು ಮೇಡಂ. Please ಒಂದು 5 ನಿಮಿಷ ಬಂದು ಮಾತಾಡಿ” ಎಂದು ವಿನಂತಿಸಿ ಕೊಂಡೆ.

ಆ ಸಮಯದಲ್ಲಿ Ipod ಬಂದು ಹೊಸದು. Ipod ಎಂದರೆ, ನಮಗಿಷ್ಟವಾದ ಹಾಡುಗಳನ್ನು ಒಂದು device ನಲ್ಲಿ ಹಾಕಿ ಕೇಳುವಂತ ಉಪಕರಣ. ನಾನು ಗಮನಿಸಿದಂತೆ shot ಮುಗಿದ ತಕ್ಷಣ ಸೌಂದರ್ಯ ಮೇಡಂ ಅವರು ಹೋಗಿ ಅವರ Ipod ನಲ್ಲಿ ಏನೋ ಕೇಳ್ತಾಯಿದ್ರು. ನಾನು ಮಾತನಾಡಲು ಹೋದಾಗಲೆಲ್ಲ “ಒಂದು ನಿಮಿಷ ಒಂದು ನಿಮಿಷ” ಎಂದು ಸನ್ನೆ ಮಾಡುತ್ತಿದ್ದರು. ಆದರೆ ಈ ಬಾರಿ ನಾನು ವಿನಂತಿಸಿದಾಗ “ಬಾ ಬಾ” ಅಂತ ನನ್ನನ್ನ ಪಕ್ಕಕ್ಕೆ ಕರೆದು, ಕೂರಿಸಿಕೊಂಡು, ಅವರ Ipod ನ headphone ನನ್ನು ನನ್ನ ಕಿವಿಗೆ ಹಾಕಿಕೊಳ್ಳಲು ಹೇಳಿದರು.

 

ಆಗ ನಾನು ಕೇಳಿದ ಹಾಡು, ಶಾರುಖ್ ಖಾನ್ ಅಭಿನಯದ “Kal Ho na Ho” ಚಿತ್ರದ title song. ನಾನು ಹಾಡು ಕೇಳಿ “ಮೇಡಂ ಚೆನ್ನಾಗಿದೆ”ಅಂತ ಹೇಳಿದೆ. ಆ ಹಾಡಿನಲ್ಲಿ ಬರುವ ಸಾಹಿತ್ಯದ ಬಗ್ಗೆ, ಅದರಲ್ಲಿರುವ ಅರ್ಥಗಳ ಬಗ್ಗೆ, ಬದುಕಿನ ಮೌಲ್ಯಗಳ ಬಗ್ಗೆ ಮಾತಾಡ್ತಾನೆ ಇದ್ರು. ” ರಘು ಒಂದು ನಾಲ್ಕೈದು ದಿನಗಳಿಂದ ನಾನು ಈ ಹಾಡನ್ನು ಕೇಳುತ್ತಾನೆ ಇದೀನಿ, ಯಾಕೋ ಬೇರೆ ಹಾಡು ಕೇಳಬೇಕು ಅಂತ ಅನ್ನಿಸ್ತಾನೇ ಇಲ್ಲ. ಈ ಸಾಲುಗಳು ಎಷ್ಟು ಸತ್ಯ ಅಲ್ವಾ. ನಾಳೆ ಇರುತ್ತೋ ಇಲ್ವೋ ಅನ್ನೋ ಆ ಹಾಡಿನ concept ಎಷ್ಟು ಅದ್ಭುತ ಅಲ್ವ” ಅಂತ ಬರಿ ಆ ಹಾಡಿನ ಬಗ್ಗೆನೇ ಮಾತಾಡಿದ್ರು.

ನಾನು Interview ಬಗ್ಗೆ ಒತ್ತಡ ಮಾಡಿದಾಗ, ” ಸರಿ ಬಾ, ತುಂಬಾ ಕಾಯಿಸ್ಬಿಟ್ಟೆ ತಪ್ ತಿಳ್ಕೋಬೇಡ” ಅಂತ ಹೇಳಿ ತುಂಬಾ ಖುಷಿಯಿಂದ ಸಂದರ್ಶನ ಕೊಟ್ಟರು.


ಅವರ ಮಾತುಗಳು ಮುಗೀತು, ನಮ್ಮ Camera ಗಳು Off ಆಯ್ತು, ” ಮನೆಗೆ ಬಾ, ತುಂಬಾ ದಿನ ಆಯ್ತು ನೀನು ಬಂದು. ಬಂದು ಊಟ ಮಾಡಿಕೊಂಡು ಹೋಗು” ಎಂದು ಪ್ರೀತಿಯ ಆಹ್ವಾನ ಕೊಟ್ಟರು. ” ಖಂಡಿತ ಬರ್ತೀನಿ ಮೇಡಂ” ಅಂತ ಹೇಳಿ ಅಲ್ಲಿಂದ ಹೊರಟೆ.

Soundarya and Brother

2004, April 17,
ನಮ್ಮ ETV ಕನ್ನಡ ಸುದ್ದಿ ವಾಹಿನಿಗೆ, ನಂಬಲು ಅಸಾಧ್ಯ ಆದರೂ ನಂಬಲೇ ಬೇಕಾದ ಒಂದು ಸತ್ಯವಾದ ಸುದ್ದಿ ಬಂತು. ” ದಕ್ಷಿಣ ಭಾರತದ ಖ್ಯಾತ ತಾರೆ, ಮುದ್ದು ಮುಖದ ನಟಿ, ನಮ್ಮ ಕನ್ನಡತಿ, ಸೌಂದರ್ಯ ಇನ್ನಿಲ್ಲ” ಎಂದು. ಆ ಒಂದು ಕ್ಷಣ, ಆ ಒಂದು ದಿನ, ನನ್ನ ಶಾಲಾ ದಿನಗಳ ಸೌಮ್ಯ ಮೇಡಂ ಅವರಿಂದ ಹಿಡಿದು, ಆಪ್ತಮಿತ್ರ set ನಲ್ಲಿ ಸಂದರ್ಶನ ಮಾಡಿದ ಸೌಂದರ್ಯ ಅವರು, ಅವರ ನೆನಪುಗಳು, ಅವರೊಂದಿಗೆ ನಾನು ಕಳೆದ ಮಧುರವಾದ ಕ್ಷಣದ ನೆನಪುಗಳು ನನ್ನನ್ನ ಕಾಡ್ತು, ಬೇಟೆ ಆಡ್ತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡ ನಂತರ ಈ ಸತ್ಯವನ್ನು ಅರಗಿಸಿಕೊಂಡ ಮೇಲೆ ಯಾಕೆ ನಮ್ಮ ಸೌಂದರ್ಯ ಮೇಡಂ ಪದೇ ಪದೇ ಆ ಸಾಲುಗಳನ್ನು ಕೇಳುತ್ತಲೇ ಅವರ ಕಡೆ ದಿನಗಳನ್ನ ಕಳೆದರು ಎಂಬುದು ನನ್ನ ಪ್ರಶ್ನೆ ಆಗಿತ್ತು.
Har ghadi badal rahi hai roop zindagi
Chaanv hai kabhi, kabhi hai dhoop zindagi
Har pal yahan
Jee bhar jiyo jo hai samaa
Kal ho naa ho

ಇವರು ನಮ್ಮ ಕನ್ನಡದ ಹೆಮ್ಮೆಯ ಸೌಂದರ್ಯ, ಭಾರತೀಯ ಚಿತ್ರರಂಗದ ಒಂದು ಅಪರೂಪದ ವೈಡೂರ್ಯ.

Soundarya
Raghuram

Niveditha Jain ಅವರಿಗೆ ಅವರ ಸಾವಿನ ಬಗ್ಗೆ ಮೊದಲೇ ತಿಳಿದಿತ್ತ??

Previous article

My Birthday Lesson !! ನನ್ನ ಹುಟ್ಟು ಹಬ್ಬದ ಪಾಠ !!

Next article

You may also like

4 Comments

  1. I still can’t forget the day she passed away😭ವಿಧಿ ಬಹಳ ಕ್ರೂರಿ🙏

  2. ಬಹಳ ಭಾವನಾತ್ಮಕ ಬರಹ ಸೌಂದರ್ಯ ಅಪ್ಪಟ ಅಪರಂಜಿ ವ್ಯಯಕ್ತಿಕ ಬದುಕನ್ನು ವೃತ್ತಿ ಬದುಕಿನಿಂದ ದೂರ ಇಟ್ಟವರು ಸರಳತೆಗೆ ಇನ್ನೊಂದು ಹೆಸರು ಪ್ರಸ್ತುತಿ ಚೆನ್ನಾಗಿದೆ keep it up!ರಘುರಾಮ್ ಸರ್!

  3. Superb I love so soundarya mam

  4. Yes, she still lives in our heart like Appu 😊 I read whole thing and it’s 100% true. I was her classmate from 5th to 10th std. She became very close to me in 10th std because we used to go to tution with DSM Sir after school in school itself. After tution we used to walk from kumara park school to Guttahalli bus stop. I used to take red board bus to Ganga Nagar and she used to cross those two roads and stand in the opposite side bus stop, I remember she telling she lives in vasathnagar but I have not gone to that house, but I had gone to her Guttahalli house during dance particle for 10th annual day and I had forgot to take Chudidar pant which was needed for the dance and she said come home I will give mine. I went with her in the lunch break to the same house which you have shown in the picture, I think she was in 1st floor and she told her mother that I am her friend Manjula and her mother laughed and said she is also Manjula. I asked her mother is it okay ig I borrow her pant for today and she said don’t worry she has many please take it. And also aunty fed me yummy puliyogare it was so tasty 😋 like this so many incidents still stuck in my memory. I am so proud to be her friend and feel very sorry for her Atthige, Nirmala mam🙏 I pray God to give her more strength and keep her always happy😊 thank you 🙏 miss you Soumya

Leave a reply

Your email address will not be published. Required fields are marked *

20 − 14 =