ಸಿನಿಮಾ ಸರಸ್ವತಿ

Ramu – Malashri ಅವರ ಪ್ರೇಮ್ ಕಹಾನಿ..

0
Malashri And Ramu

Love is an accident..

Love is a moment

Love is a wonderful incident

ಇಷ್ಟೆಲ್ಲ ಲವ್ ಬಗ್ಗೆ ನಾನು ಯಾಕೆ ಹೇಳ್ತಿದೀನಿ ಅಂದ್ರೆ ಕನ್ನಡ ಚಿತ್ರರಂಗದ ಒಬ್ಬ ಸ್ಟಾರ್ ನಿರ್ಮಾಪಕ ಹಾಗೂ ಒಬ್ಬ ಸ್ಟಾರ್ ನಟಿಯ ಲವ್ ಸ್ಟೋರಿ ನಾನು ನಿಮಗೆ ಹೇಳ್ತಾಯಿರೋದು .

ಮೊದಲು ‘ಬೇಬಿ ದುರ್ಗಾ’, ಆಮೇಲೆ ‘ಶ್ರೀ ದುರ್ಗಾ’, ನಂತರ ‘ನಂಜುಂಡಿ ಕಲ್ಯಾಣ’ ಚಿತ್ರದ ಮೂಲಕ ಶ್ರೀಮತಿ Parvatamma Rajkumar ಅವರು ಇಟ್ಟ ಹೆಸರು ‘Malashri’..

Malashri ಕನ್ನಡ ಚಿತ್ರರಂಗದ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸ್ಟಾರ್ ನಟಿ.. ಅವರ ಕನ್ನಡದ ಮೊದಲ ಸಿನಿಮಾ ‘ನಂಜುಂಡಿ ಕಲ್ಯಾಣ’ ಆದ ಮೇಲೆ ಅವಕಾಶಗಳ ಸುರಿಮಳೆ ಬಂತು.. ‘ಪೋಲಿಸನ ಹೆಂಡತಿ’, ‘ಹಳ್ಳಿ ರಂಬೆ, ಬೆಳ್ಳಿ ಬೊಂಬೆ’, ‘ರಾಣಿ ಮಹಾರಾಣಿ’ ಈ ರೀತಿಯ very homely characterನಲ್ಲಿ ಅಭಿನಯಿಸ ಬೇಕಾದರೆ ನಿರ್ದೇಶಕ ವಿ.ಸೋಮಶೇಖರ್ ಅವರು ಬಂದು ಮಾಲಾಶ್ರೀಯವರಿಗೆ S P ಭಾರ್ಗವಿ ಅನ್ನೋ ಒಂದು ಚಿತ್ರದ offer ಕೊಟ್ಟಿರುತ್ತಾರೆ. ಆ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ಮಾಲಾಶ್ರೀ ಅವರು ಪೊಲೀಸ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಈ offer ಬಂದ ತಕ್ಷಣ ಮಾಲಾಶ್ರೀ ಅವರು ತುಂಬಾ ನಕ್ಕರಂತೆ.. “ಅಲ್ಲ ನಾನು ಗೃಹಲಕ್ಷ್ಮಿ, ಗೃಹಪ್ರವೇಶ ಅನ್ನೋ sentiment ಪಾತ್ರಗಳನ್ನ ಮಾಡ್ತಾ ಇದೀನಿ..Inspector character ಮಾಡದ್ರೆ ಜನ ನೋಡ್ತಾರಾ?? ಒಪ್ಕೋತಾರ??” ಅಂತ..

ಇದೇನು ಲವ್ ಸ್ಟೋರಿ ಹೇಳ್ತೀನಿ ಅಂದ್ಬಿಟ್ಟು ಸಿನಿಮಾ ಸ್ಟೋರಿ ಹೇಳ್ತಾಯಿದೀನಿ ಅನ್ಕೊಂಡ್ರಾ? ಇದಕ್ಕೂ ಒಂದು ಕಾರಣ ಇದೆ..

ಈಗ ಒಂದೊಂದಾಗಿ ಹೇಳುತ್ತಾ ಹೋಗ್ತೀನಿ..

Malashri

S P ಭಾರ್ಗವಿ ಆದನಂತರ ‘ಸಾಹಸಿ’, ‘ವಜ್ರಾಯುಧ’ ಹೀಗೆ ಸಕ್ಕತ್ action based films ಅಲ್ಲಿ Malashri ಅವರು ಕಾಣಿಸಿಕೊಂಡರು.. ಅವರು ಒಬ್ಬ ನಾಯಕಿಯಾಗಿ ಒಬ್ಬ ನಾಯಕನಿಗೆ ಇದ್ದ ಇಮೇಜ್, business, ಎಲ್ಲವೂ ಬಂದಿತ್ತು.. ಇಂಥ action oriented ಸಿನಿಮಾ ಮಾಡಬೇಕಾದರೆ, ಒಂದು ದಿನ ನಿರ್ಮಾಪಕ ಕೋಟಿ ರಾಮು ಮಾಲಾಶ್ರೀ ಅವರನ್ನ ನಿರ್ದೇಶಕ ‘ಪೇರಾಲ’ ಅವರೊಂದಿಗೆ ಭೇಟಿ ಮಾಡಿದ್ದಾರೆ..

Contrast ಗಳು ಹೇಗಿರುತ್ತೆ ನೋಡಿ!! ಮಾಲಾಶ್ರೀ ಅವರು ಹೆಚ್ಚಾಗಿ ಆಕ್ಷನ್ ಚಿತ್ರಗಳೇ ಮಾಡುತ್ತಿದಂತ ಸಂದರ್ಭ.. ಚಿತ್ರ ನಿರ್ಮಾಣದಲ್ಲಿ Crazy Star Ravichandran ಅವರ ನಂತರ ಆ ಸಮಯದಲ್ಲಿ ಕೋಟಿಗಳ ಬಂಡವಾಳ ಹೂಡಿ, ನಿರ್ಮಾಣ ಮಾಡುತ್ತಿದ್ದ ಸ್ಟಾರ್ ನಿರ್ಮಾಪಕ ರಾಮು ಅವರು.. ಕೋಟಿ ರಾಮು ಎಂದೇ ಪ್ರಖ್ಯಾತರಾಗಿದ್ದರು.. ಇವರ ‘ಲಾಕಪ್ ಡೆತ್’, ‘ಗೋಲಿಬಾರ್’, ‘ಸಿಂಹದಮರಿ’ ಎಲ್ಲಾ sensational hit..

Action ಸಿನಿಮಾಗಳಿಗೆ ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಬೇಡಿಕೆ, ಮಾರುಕಟ್ಟೆ, ಒಂದು brand ಅನ್ನು ಸೃಷ್ಟಿಸಿದ ಸಂಸ್ಥೆ ‘Ramu Enterprises’.. ಇಂಥ ಸ್ಟಾರ್ ನಿರ್ಮಾಪಕ ಮಾಲಾಶ್ರೀ ಯಂತಾ ಸ್ಟಾರ್ ನಟಿಯನ್ನು ಭೇಟಿಯಾಗಿ ‘ಪೆರಾಲ’ ಅವರಿಂದ ಹೇಳಿಸಿದ ಕಥೆ action ಸಿನಿಮಾದಲ್ಲ.. ರಾಮು ಅವರ ಸಂಸ್ಥೆಯಲ್ಲಿ ಮೊದಲ ಸಾಂಸಾರಿಕ ಕಥೆಯುಳ್ಳ ಚಿತ್ರ ನಿರ್ಮಾಣ ಮಾಡಕ್ಕೆ ಹೋಗ್ತಾ ಇದ್ದಿದ್ದು ಇದೆ ಪ್ರಥಮ
ಆ ಚಿತ್ರದ ಹೆಸರು ‘Muttinanta Hendati’..

ಮಾಲಾಶ್ರೀಯವರಿಗೆ ಈ ಚಿತ್ರದ ಕಥೆ, ಟೈಟಲ್ ಕೇಳಿ ಆಶ್ಚರ್ಯ, ಸಂತೋಷ ಎರಡು ಆಯ್ತಂತೆ.. “ನೀವು ಆಕ್ಷನ್ ಸಿನಿಮಾ produce ಮಾಡೋ producer.. ನಿಮ್ಮದೇ ಆದಂಥ ಒಂದು style ಇದೆ.. ನೀವು ನನ್ನ ಇಟ್ಟು after a long time ನನ್ನ ಕೈಯಲ್ಲಿ family picture ಮಾಡುಸ್ತೀದ್ದೀರಲ್ಲಾ ..ಯಾಕೆ?? ಅಂತ ಕೇಳಿದಾಗ, ರಾಮು ನಗುತ್ತಲೇ “ಈ ಪಾತ್ರಕ್ಕೆ ನೀವೇ ಸೂಕ್ತ.. ನನಗೆ ಇನ್ನೊಂದು ಆಯ್ಕೆ ಸಿಗುತ್ತಿಲ್ಲ. ನನ್ನ ಸಂಸ್ಥೆಗೆ ನೀವು ಈ ಸಿನಿಮಾ ಮಾಡಿಕೊಡಿ” ಎಂದರಂತೆ.
ನಂತರ ಈ ಸಿನಿಮಾದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾಲಾಶ್ರೀ ಅವರು ಮಾತನಾಡುತ್ತಾ “ಈ ಚಿತ್ರದ ನಿರ್ಮಾಪಕ ರಾಮು ಅವರಿಗೆ ಈ title ನಂತೆಯೇ ‘ಮುತ್ತಿನಂತ ಹೆಂಡತಿ’ ಆದಷ್ಟು ಬೇಗ ಸಿಗಲಿ” ಎಂದು ಎಲ್ಲಾ ಪತ್ರಕರ್ತರ ಮುಂದೆ ಹೇಳಿದ್ದಾರೆ..

Ramu and Malashri

ಚಿತ್ರದ ಚಿತ್ರೀಕರಣ ಶುರುವಾಗಿದೆ.. ರಾಮು ಅವರ ಸರಳತೆ ವಿನಯವಂತಿಕೆ ಅವರ ಮುಗ್ಧ ಮನಸ್ಸು, ಒಳ್ಳೆ ಚಿತ್ರ ನಿರ್ಮಾಣ ಮಾಡಬೇಕು ಎಂಬ ಹಸಿವು ಮಾಲಾಶ್ರೀ ಅವರ ಮನಸ್ಸು ಗೆದ್ದಿತ್ತು.. ಎಷ್ಟೇ ದೊಡ್ಡ ಸ್ಟಾರ್ ನಟಿಯಾದರೂ ಸ್ವಲ್ಪವೂ ಅಹಂ ಇಲ್ಲದೆ ತಾನು ಹಚ್ಚುವ ಬಣ್ಣಕ್ಕೆ, ನಿರ್ಮಾಪಕರಿಗೆ ನಿರ್ದೇಶಕರಿಗೆ ಮಾಲಾಶ್ರೀ ಅವರು ಕೊಡುತ್ತಿದ್ದ ಬೆಲೆ ಗೌರವ ಕಂಡು ರಾಮು ಅವರು ಈಕೆಯೇ ನನ್ನ ಬಾಳ ಸಂಗಾತಿ ಎಂದು ಮನದಲ್ಲೇ ನಿರ್ಧರಿಸಿ ಸ್ನೇಹದಿಂದ ಪ್ರೀತಿ, ಪ್ರೀತಿಯಿಂದ ಮದುವೆ.. ಮದುವೆಯ ನಂತರ ಮುದ್ದಾದ ಎರಡು ಮಕ್ಕಳ ಜೊತೆಗೆ, ಚಿತ್ರ ಬದುಕಿನಲ್ಲಿ ಮಾಲಾಶ್ರೀ ಅವರಿಗಾಗಿ ರಾಮು ಅವರು ‘ದುರ್ಗಿ’, ‘ಲೇಡಿ ಕಮಿಷನರ್’, ‘ಕಿರಣ್ ಬೇಡಿ’, ‘ವೀರ’.. ಹೀಗೆ ಇನ್ನಷ್ಟು ಅದ್ದೂರಿ ಚಿತ್ರಗಳನ್ನು ನಿರ್ಮಾಣ ಮಾಡಿ ಮಾಲಾಶ್ರೀಯವರಿಗೆ ‘Lady Superstar’ ಅನ್ನೋ ಇಮೇಜಿಗೆ ಭದ್ರಬುನಾದಿ ಹಾಕಿಕೊಟ್ಟರು..

ರಾಮು ಅವರಿಗೆ ಮಾಲಾಶ್ರೀ ‘ಮುತ್ತಿನಂತ ಹೆಂಡತಿ’, ಮನೆಯ ಆರತಿ, ಸಂಸಾರದ ಸಾರಥಿ….

Raghuram

“Rebel Star Ambarish Kavya ಅವರಿಗೆ ಕೊಟ್ಟ ಆ 100 ರೂಪಾಯಿ.”

Previous article

Public ಮುಂದೆ Cubbon Park ನಲ್ಲಿ Kavya ಅವರು Kashinath ಅವರೊಂದಿಗೆ romantic scene shoot ಮಾಡ್ಬೇಕಾದ್ರೆ ನಡೆದ ಘಟನೆ ಏನು?

Next article

You may also like

Comments

Leave a reply

Your email address will not be published. Required fields are marked *

ten + 14 =