ನೂರೊಂದು ನೆನಪು

‘Raghuveer’ Life Story ; ರಘುವೀರ್ ಜೀವನಯಾನ (CHILDHOOD)

0
Raghuveer

ತಾರೆಗಳು ಬೆಳ್ಳಿತೆರೆಯಲ್ಲಿ, ಸಾಧಾರಣ ಮನುಷ್ಯರು ನಿಜಜೀವನದಲ್ಲಿ. ಪರದೆಯ ಮೇಲೆ ಕಾಣುವ ಬದುಕು ನಿಜವಲ್ಲ ; ತೆರೆಯ ಹಿಂದೆ ಪಡುವ ನೋವು ಸುಳ್ಳಲ್ಲ…

‘Raghuveer’, ಬೆಂಗಳೂರಿನ ಅಗರ್ಭ ಶ್ರೀಮಂತ ಮನೆತನದ ಹುಡುಗ. ತಂದೆ ಮುನಿಯಲ್ಲಪ್ಪ ಹಾಗೂ ತಾಯಿ ಚಿನ್ನಮ್ಮ ದಂಪತಿಗಳ ಪುತ್ರ. ಎಂಟು ಜನ ಮಕ್ಕಳ ಪೈಕಿ ಇವರು ಆರಾನೆಯವರು . ರಘುವೀರ್ ಮೂಲಹೆಸರು ದಿನೇಶ್ ಕುಮಾರ್. ಬಾಲ್ಯದಲ್ಲಿ ಈ ದಿನೇಶ್ ಕುಮಾರ್ (ರಘುವೀರ್ )ತುಂಬಾ ತುಂಟ. ಅಕ್ಕ-ತಂಗಿ, ಅಣ್ಣ-ತಮ್ಮಂದಿರನ್ನ ರೇಗಿಸುವುದು, ಛೇಡಿಸುವುದು, ಚುಡಾಯಿಸುವುದು ಇವರ ದಿನ ನಿತ್ಯದ ಚಟುವಟಿಕೆ. ತಾಯಿ ಚಿನ್ನಮ್ಮ ಮಗನ ಈ ತುಂಟುತನ ಗಳನ್ನು ನೋಡಿ ನಗ್ತಿದ್ರು ಆದರೆ ತಂದೆ ಮುನಿಯಲ್ಲಪ್ಪ ಮಗ ಇಷ್ಟೊಂದು ತರ್ಲೆ ಮಾಡ್ತಾನೆ ಅಂತ ಊಹಿಸಿರಲಿಲ್ಲವಂತೆ. ಏಳನೇ ತರಗತಿ ವರೆಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ನಡೆಸಿ, ನಂತರ ಮುದ್ದೇನಹಳ್ಳಿ boarding School ಅಲ್ಲಿ. SSLC ಮುಗಿಸಿದರು. PUC ಮೈಸೂರಿನಲ್ಲಿ ಮುಗಿಸಿ, ಬೆಂಗಳೂರಿನ B.M.S College ನಲ್ಲಿ ಇಂಜಿನಿಯರಿಂಗ್ ಓದಲು admission ಕೂಡ ಆಯ್ತು.

 ರಘುವೀರ ಅವರ ತಂದೆಗೆ ಚಲನಚಿತ್ರದವರ ಸಂಪರ್ಕ ಇತ್ತು. ಇವರು ಮೂಲತಹ ಬಿಲ್ಡಿಂಗ್ ಕಂಟ್ರಾಕ್ಟರ್. Rebel Star Ambareesh ರವರ ಜೆ.ಪಿ ನಗರದ ಹಳೇ ನಿವಾಸವನ್ನು ಕಟ್ಟಿಸಿದವರು ಇವರೇ. ದಿನೇಶ್ ಕುಮಾರ್(ರಘುವೀರ್ )ಅವರಿಗೆ ಅರಿವೇ ಇಲ್ಲದಂತೆ ಬೆಳ್ಳಿಪರದೆಯ ಸೆಳೆತ ಶುರುವಾಯಿತು. ತಮಾಶೆಗೆ ಅವರು ಅವರ ತಾಯಿಯ ಬಳಿ ಹೋಗಿ ” ನಾನು ಸಿನಿಮಾದಲ್ಲಿ ಆಕ್ಟ್ ಮಾಡ್ತೀನಿ ” ಅಂತ ಹೇಳಿದ್ರಂತೆ. ಪಾಪ ಚಿನ್ನಮ್ಮ ಅವರು ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡು ಅವರ ತಂದೆಯ ಬಳಿ ಮಗನನ್ನು ಚಿತ್ರರಂಗಕ್ಕೆ ಸೇರಿಸಿ ಎಂದು ಹೇಳಿದರಂತೆ. ಒಂದು ನಿಮಿಷವೂ ಯೋಚನೆ ಮಾಡದೆ ಅವರ ತಂದೆ ” ನೀನು ಓದುತ್ತಿಯ? ಸಿನಿಮಾಗೆ ಸೇರ್ತಿಯ? “ಅಂತ ಕೇಳಿದ್ದಾರೆ. ನಾನು ಓದ್ಕೊಂಡು ಸಿನಿಮಾದಲ್ಲಿ ನಟಿಸುತ್ತೇನೆ ಅಂತ ದಿನೇಶ್ ಕುಮಾರ್ (ರಘುವೀರ್) ಉತ್ತರ ಕೊಟ್ಟಾಗ, “ಆಯ್ಕೆ ಎರಡರಲ್ಲಿ ಒಂದು ಮಾತ್ರ ಇರಬೇಕು” ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

Raghuveer

ಗಾಂಧಿನಗರದ ಒಬ್ಬ ವಿತರಕ ಮುನಿಯಲ್ಲಪ್ಪ ನವರಿಗೆ ಪರಿಚಯ ಇದ್ದರು. ಅವರ ಮೂಲಕ ನಿರ್ದೇಶಕ A.T.Raghu ಅವರ ಸಂಪರ್ಕವಾಗಿ ಮಗನನ್ನು ಚಿತ್ರರಂಗಕ್ಕೆ ಸೇರಿಸಬೇಕು ಎಂಬ ಕೋರಿಕೆಯನ್ನು ಇಟ್ಟಿದ್ದಾರೆ. ಆಗ A.T.Raghu ಅವರ ಸಲಹೆ ಹಾಗೂ ಮಾರ್ಗದರ್ಶನ ದಂತೆ ನಟನೆ,ಸಾಹಸ, ನೃತ್ಯ, ಇತರೆ ಕಲಾ ಕಸರತ್ತುಗಳನ್ನ ಮದ್ರಾಸಿನಲ್ಲಿ ತರಬೇತಿ ಪಡೆಯುತ್ತಾರೆ. ಇದೆಲ್ಲ ಮುಗಿಸಿ ತಯಾರಾಗಿ ನಿರ್ದೇಶಕ A.T.Raghu  ಮುಂದೆ ಬಂದು ನಿಂತಾಗ ಹುಟ್ಟಿದ ಕಲ್ಪನೆಯೇ ‘Ajay Vijay’ ಎಂಬ ಚಿತ್ರ. ಚಿತ್ರರಂಗದಲ್ಲಿ ತನ್ನ ಮೊದಲನೆಯ ಹೆಜ್ಜೆಯಾದ ಈ ಸಿನಿಮಾದ ಮೂಲಕ ‘ದಿನೇಶ್ ಕುಮಾರ್’ ಆಗಿದ್ದ ವ್ಯಕ್ತಿ ಬೆಳ್ಳಿಪರದೆಗೆ, ಕಲಾರಸಿಕರಿಗೆ ‘Raghuveer’ ಆಗಿ ಪರಿಚಯವಾದರು. ‘Ajay Vijay ‘ ಚಿತ್ರದಲ್ಲಿ ರಘುವೀರ್ ಅವರೊಂದಿಗೆ ‘Vinod Raj’ ಅವರು ಕೂಡ ಇನ್ನೊಬ್ಬ ನಾಯಕನಾಗಿ ಆಯ್ಕೆಯಾಗಿರುತ್ತಾರೆ. ಕಾರಣಾಂತರಗಳಿಂದ ಅವರ ಜಾಗಕ್ಕೆ Director Siddalingaiah ಅವರ ಮಗ Murali ಅವರು ಆಯ್ಕೆ ಆಗುತ್ತಾರೆ. ಹಣೆಬರಹ ನಮ್ಮನ ಹೇಗೆ ನಡೆಸಿಕೊಂಡು ಹೋಗುತ್ತೆ ಅಂತಾನೇ ಗೊತ್ತಾಗಲ್ಲ. ಇದನ್ನ ಯಾಕ್ ಹೇಳ್ದೆ ಅಂದ್ರೆ ‘Ajay Vijay’ ಚಿತ್ರದ ನಿರ್ದೇಶಕ ಎ.ಟಿ.ರಘು ಅವರಿಗೆ, ನಿರ್ದೇಶನದ ವಿಭಾಗದಲ್ಲಿ ಸಹಾಯಕರಾಗಿದ್ದವರು S.Narayan. ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ, ಒತ್ತಡದಲ್ಲಿ ಎ.ಟಿ.ರಘು ಅವರು ಸಹಾಯಕರಾದ ನಾರಾಯಣ್ ಅವರಿಗೆ ಗದರಿದ್ದಾರೆ. ಯಾಕೋ ಈ ಸಣ್ಣ ವಿಷಯವನ್ನು ನಾರಾಯಣ್ ಅವರು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡು “ನಾನು ಈ ಸಿನಿಮಾದಲ್ಲಿ ಕೆಲಸ ಮಾಡಲ್ಲ” ಅಂತ ರಾತ್ರೋರಾತ್ರಿ ತಮ್ಮ ರೂಮನ್ನು ಖಾಲಿ ಮಾಡಿ Bus stand ಬಳಿ ಹೋಗಿದ್ದಾರೆ.

Raghuveer

Raghuveer ಅವರ ತಮ್ಮ Mahesh ಅವರು ಈ ಚಿತ್ರದ ನಿರ್ಮಾಪಕರು. ಈ ವಿಷಯ ಅವರಿಗೆ ಗೊತ್ತಾಗಿ, ಬಸ್ ಸ್ಟ್ಯಾಂಡ್ ಬಳಿ ಹೋಗಿ, ಅವರನ್ನು ಸಮಾಧಾನಪಡಿಸಿ ವಾಪಸ್ ಕರೆದುಕೊಂಡು ಬಂದಿದ್ದಾರೆ. ‘Ajay Vijay’ ಚಿತ್ರ ಮುಗಿದು ಬಿಡುಗಡೆಯಾಗುತ್ತದೆ ; ಚಿತ್ರ Box Office ನಲ್ಲಿ ಸೋಲುತ್ತೆ. ಈ ಚಿತ್ರ ಗೆಲ್ಲದಿದ್ದರೂ S.Narayan ಹಾಗೂ Raghuveer ಅವರ ಸ್ನೇಹ ಹಾಗೆ ಇರುತ್ತೆ. ‘ಮುಂದೇನು? ‘ ಅನ್ನೋ ಪ್ರಶ್ನೆ ಎದುರಾದಾಗ ನಾರಾಯಣ್ ಅವರಿಗೆ “ಒಂದು ಕಥೆ ಬರೆದು ಚಿತ್ರಕಥೆ ಸಿದ್ಧಮಾಡಿ” ಅಂತ ರಘುವೀರ್ ಅವರು ಹೇಳ್ತಾರೆ. ಅದನ್ನು ಸವಾಲಾಗಿ ಸ್ವೀಕರಿಸಿ, S.Narayan ಅವರು 15 ದಿನದಿಂದ ಒಂದು ತಿಂಗಳು ಸಮಯ ತೆಗೆದುಕೊಂಡು, ಒಂದು ಅದ್ಭುತವಾದ ಕಥೆ ಹಾಗೂ ಚಿತ್ರಕಥೆಯನ್ನು ಸಿದ್ಧ ಮಾಡುತ್ತಾರೆ. ತಮ್ಮ ಗಮನಕ್ಕೆ: ಇದಕ್ಕೆ ನಿರ್ದೇಶಕ ಎಸ್.ನಾರಾಯಣ್ ಅಲ್ಲ. ಅಂದಿನ ಖ್ಯಾತ ನಿರ್ದೇಶಕರುಗಳಾದ B.RamMurthy, Bheema Nagaraj, P.H.Vishwanath ಹಾಗೂ ಒಟ್ಟು 18 ನಿರ್ದೇಶಕರ ಬಳಿ ಎಸ್.ನಾರಾಯಣ್ ಸಿದ್ಧಪಡಿಸದ ಕಥೆ-ಚಿತ್ರಕಥೆಯ ನರೇಶನ್ ನಡೆಯುತ್ತೆ. ಯಾಕೊ ಏನೋ ಯಾರು ಕೂಡ ಇವರ ಹೇಳಿದ ಕಥೆಯನ್ನು ಚಿತ್ರ ನಿರ್ದೇಶನ ಮಾಡಲು ಒಪ್ಪಲಿಲ್ಲ.

ನಿರ್ದೇಶಕರಿಗಿಂತ ಮೊದಲು ಈ ಚಿತ್ರಕ್ಕೆ Hamsalekha ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಅವನ ಬಳಿ ಹೋಗಿ “ಯಾಕೋ ಯಾವ ನಿರ್ದೇಶಕರಿಗೂ ನಮಗೂ ಹೊಂದಾಣಿಕೆಯಾಗುತ್ತಿಲ್ಲ, ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿರುವಂತಹ ಎಸ್.ನಾರಾಯಣ್ ಅವರಿಗೆ ನಿರ್ದೇಶನದ ಅವಕಾಶ ಕೊಟ್ಟರೆ ಹೇಗೆ ? ” ಅಂತ ಚರ್ಚಿಸಿದರಂತೆ. ಆಗ Hamsalekha ಅವರು ” ಒಳ್ಳೆಯದೇ, ನಿಧಾನವಾಗಿ ಯೋಚಿಸಿ ಸರಿಯಾದ ತೀರ್ಮಾನ ತೆಗೆದುಕೊಳ್ಳಿ” ಎಂದು ಹೇಳಿದ್ದಾರೆ. ಆಗ ರಘುವೀರ್ ಅವರು ತಮ್ಮನೊಂದಿಗೆ ಚರ್ಚಿಸಿ ” ಮೊದಲಿನಿಂದ ಜೊತೆಗೆ ಇದ್ದವರು ಎಸ್.ನಾರಾಯಣ್; ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲವನ್ನು ಬರೆದಿರುವವರು ಅವರೇ” ಆದ್ದರಿಂದ ಅವರಿಗೆ ನಿರ್ದೇಶನದ ಅವಕಾಶ ಕೊಡಲು ತೀರ್ಮಾನಿಸಿದರು. ಆ ಕ್ಷಣ, ಆ ಸಮಯದ ನಿರ್ಧಾರವೇ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿ ದಾಖಲೆ ಬರೆದ ಪ್ರೇಮ ದೃಶ್ಯಕಾವ್ಯ “Chaitrada Premanjali”.

Raghuram

Kanasugara ಕಂಡ K.S.Ashwath ಕನಸುಗಾರ ಕಂಡ ಕೆ.ಎಸ್.ಅಶ್ವಥ್

Next article

You may also like

Comments

Leave a reply

Your email address will not be published. Required fields are marked *

9 + 14 =