ನೂರೊಂದು ನೆನಪು

Raghuveer – Gowri “ಋಣಾನು ಬಂಧ ರೂಪೇನ, ಪಶು-ಪತ್ನಿ ಸುತಾಲಯ..”

1
Raghuveer Family

“ಪುಣ್ಯ ಪ್ರೀತಿ ಮಾಡೋದು, ಪಾಪ, ದೂರವಾಗೋದು.”

‘ಪ್ರೀತಿ-ಪ್ರೇಮದ, ಪಾಪ-ಪುಣ್ಯದ ಬಗ್ಗೆ, ನಾನ್ಯಾಕ್ ಇವಾಗ ಪ್ರಸ್ತಾಪ ಮಾಡ್ತಿದ್ದೀನಿ ಅಂದ್ರೆ, ಬಂಧ-ಅನುಬಂದ-ಸಂಬಂಧದ ಕಥೆಗಳನ್ನು ಹೇಳೋಕೆ’.

ಒಂದು ಹೆಣ್ಣು ಮಗು ಹುಟ್ಟತ್ತೆ. ಈ ಮಗುನೇ ನನ್ನ ಸೊಸೆ ಅಂತ ನಿರ್ಧಾರ ಆಗತ್ತೆ.. ಕಾಲ ಕಳಿತ, ಆ ಹೆಣ್ಣು ಮಗು, ಮದುವೆ ವಯಸ್ಸಿಗೆ ಬರ್ತಾರೆ. ಸೊಸೆ ಮಾಡಿಕೊಳ್ಳುತ್ತೇನೆ ಅಂತ ಮಾತುಕೊಟ್ಟಿದ್ದ ಮನೆಯಲ್ಲಿ, ಆ ಹುಡುಗ ಕೂಡ ಬೆಳೆದು; ಚಿತ್ರರಂಗಕ್ಕೆ ಬಂದು; ನಾಯಕ ನಟನಾಗಿ ನಿಂತು; ಪ್ರೀತಿ-ಪ್ರೇಮದ ಗುಂಗಿನಲ್ಲಿ ನೆಂದು; ಅಪ್ಪ-ಅಮ್ಮ ಕೊಟ್ಟ ಮಾತನ್ನ ಮರೆತು; ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ; ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಎಲ್ಲರಿಂದಲೂ ದೂರವಾಗಿ, ಬೇರೆಯಾಗಿ ಜೀವನ ನಡೆಸುತ್ತಾರೆ..
“ಈ ಕಥೆ ಯಾರದೆಂದು ಯೋಚನೆ ಮಾಡುತ್ತಿದ್ದೀರಾ.??” ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ Raghuveer ಅವರದು…

‘Chaitrada Premanjali’ಯ ಯಶಸ್ಸಿನ ನಂತರ Raghuveer ಅವರು ‘Shrungara Kavya’ ಅನ್ನೋ ಚಿತ್ರ ಮಾಡ್ತಾರೆ.. ಆ ಚಿತ್ರದ ನಾಯಕಿ ‘Sindhu.‘ ಅವರೊಂದಿಗೆ ಸ್ನೇಹವಾಗಿ; ಸ್ನೇಹ ಪ್ರೀತಿಯಾಗಿ; ಪ್ರೀತಿ ಮದುವೆ ಎಂಬ ಅನುಬಂಧಕ್ಕೆ ಸಾಕ್ಷಿ ಯಾಗುತ್ತೆ.. ‘ಒಂದು ಬೆಚ್ಚನೆ ಗೂಡಿರಲು, ವೆಚ್ಚಕ್ಕಿಷ್ಟು ಹೊನ್ನಿರಲು, ಇಚ್ಛೆ ಅರಿವ ಸತಿ ಇರಲು, ಮೆಚ್ಚಿದ ಕಲೆ ಒಲಿದಿರಲು, ಸ್ವರ್ಗಲೋಕ ನಮಗೆ ಬೇಡ; ಈ ಪ್ರೇಮಲೋಕ ಮಾತ್ರ ನಮಗೆ ಸಾಕು,’ ಅಂತ ಇದ್ದ ಈ ಸಂಸಾರದಲ್ಲಿ ಒಂದು ಬಿರುಗಾಳಿ ಬಂದು ಅಪ್ಪಳಿಸುತ್ತೆ.. ಮಾಡಿದ ಸಿನಿಮಾಗಳೆಲ್ಲ ಸೋಲತ್ತೆ.. ಆರ್ಥಿಕ ಪರಿಸ್ಥಿತಿ ಕಾಡತ್ತೆ.. ಮನಸ್ಸು ಚಂಚಲವಾಗತ್ತ. ಪ್ರೇಮಲೋಕದ ಈ ಜೋಡಿಗಳಿಗೆ ಮನಸ್ತಾಪ ಮೂಡತ್ತೆ.. ತಂದೆ-ತಾಯಿ ಬಂಧು-ಬಳಗ ಎಲ್ಲವನ್ನು ಬಿಟ್ಟು ಬಂದು, ಸುಖವಾಗಿ ಸಂಸಾರ ಮಾಡ್ತೀನಿ ಅನ್ನೋ ನಂಬಿಕೆ Raghuveer ಅವರಿಗೆ ನುಚ್ಚು ನೂರಾಗತ್ತೆ. ಆಗ ಅವರ ಹೆಂಡತಿ Sindhu ಅವರ ತವರೂರು, ಮದರಾಸಿಗೆ ಎಲ್ಲರೂ ಹೋಗಿ ಸೇರ್ತಾರೆ..

Sindhu ಅವರು ಅಲ್ಲಿ ಧಾರಾವಾಹಿಗಳಲ್ಲಿ ನಟಿಸಿ, ಜೀವನ ಮಾಡೋಕೆ ಪ್ರಾರಂಭ ಮಾಡ್ತಾರೆ.. ಮಗಳು Shreya ಅವರ ವಿದ್ಯಾಭ್ಯಾಸ ಕೂಡ ಅಲ್ಲೇ ನಡೆಯುತ್ತೆ.. ಜೀವನ ಹೀಗೆ ನಡೆಯುತ್ತಿರಬೇಕಾದರೆ ಘೋರ ವಿಧಿ Sindhu ಅವರನ್ನು ತನ್ನ ಬಳಿಗೆ ಕರೆಸಿಕೊಳ್ಳುತ್ತದೆ.. Sindhu ಅವರು ನಮ್ಮನ್ನೆಲ್ಲ ಬಿಟ್ಟು ಕಾಲವಾಗುತ್ತಾರೆ ..

ನೊಂದು-ಬೆಂದು, Raghuveer ದಿಗ್ಭ್ರಾಂತರಾಗುತ್ತಾರೆ.. ತಂದೆತಾಯಿಯಿಂದ ದೂರವಾದ ಮೇಲೆ ರಘುವೀರ್ ಅವರು ಪಡಬಾರದ ಪಾಡುಪಟ್ಟು, ಜೀವನವೆಂಬ ಯುದ್ಧದಲ್ಲಿ ಹೋರಾಡುತ್ತಿರುತ್ತಾರೆ.. ತಂದೆಗೆ ಮಗನ ಪರಿಸ್ಥಿತಿ ಗೊತ್ತಾಗಿ, ತನ್ನ ಬಳಿ ಕರೆಸಿಕೊಂಡು ಮತ್ತೆ ಪ್ರೀತಿ ವಾತ್ಸಲ್ಯ, ಬೆಂಬಲ ಎಲ್ಲವನ್ನು ನೀಡಿ “ನಿನ್ನ ತಾಯಿಯ ಆಸೆಯಂತೆ ಅವರ ತಮ್ಮನ ಮಗಳು Gowriಯನ್ನು ಮದುವೆಯಾಗು ಅಂತ ಹೇಳ್ತಾರೆ”.. ಅಷ್ಟೊತ್ತಿಗೆ ರಘುವೀರ್ ಅವರ ತಾಯಿ ಕೂಡ ಇಹಲೋಕ ತ್ಯಜಿಸಿರುತ್ತಾರೆ.. ಶಬರಿ ರಾಮನಿಗೆ ಕಾದಂತೆ, Gowri Raghuveer ಅವರಿಗೆ ಕಾಯ್ತಾ ಇರ್ತಾರೆ.. ರಘುವೀರ್ ಅವರ ಬದುಕಲ್ಲಿ ಹೊಸ ಜೀವನ, ಹೊಸ ಬೆಳಕು ಪ್ರಾರಂಭವಾಗುತ್ತದೆ.. ಮುದ್ದಾದ Moksha ಎಂಬ ಒಬ್ಬ ಹೆಣ್ಣುಮಗಳು ಹುಟ್ಟುತ್ತಾಳೆ.. ಈ ಸುಖಿ ಸಂಸಾರಕ್ಕೆ ಮದುವೆಯಾದ ಕೆಲವೇ ವರ್ಷಗಳಲ್ಲೇ ವಿಧಿ ಬರಸಿಡಿಲಿನಂತೆ ಸಿಡಿಯತ್ತೆ.

Raghuveer, Gowri Raghuveer

ರಘುವೀರ್ ಅವರಿಗೆ ಯಾವಾಗಲೂ ಅವರ estateಗೆ ಹೋಗೋ ಅಭ್ಯಾಸ ಇತ್ತು. ಅಂದು ಮೇ 8, 2014. ಆ ದಿನ ಮಗಳು ಮೋಕ್ಷಳೊಂದಿಗೆ ಬೆಳಗ್ಗೆನೇ ಎಸ್ಟೇಟ್ಗೆ ಹೋಗಿರುತ್ತಾರೆ … ಬೆಳಗ್ಗೆ ಸುಮಾರು 9.30 ರ ಸಮಯಕ್ಕೆ, ಅವರ ಮಡದಿ ಗೌರಿ ಅವರಿಗೆ ಕರೆ ಮಾಡಿ, “ಯಾಕೋ ನನಗೆ ಹೊಟ್ಟೆ ನೋಯ್ತಾ ಇದೆ. Doctor appointment ತಗೊಂಡಿರು, ಬರ್ತೀನಿ” ಅಂತ ಹೇಳಿದ್ದಾರೆ.. ಅವರು ಸಾಮಾನ್ಯವಾಗಿ ತೋರಿಸುತ್ತಿದ್ದ doctor ಅಂದು ಇರಲಿಲ್ಲ. ಬೇರೆ ಡಾಕ್ಟರ್ ಹತ್ತಿರ ಹೋಗಿ ತೋರಿಸಿದ್ದಾರೆ. ಸುಮಾರು 11:30 ರ ಸಮಯದಲ್ಲಿ ಡಾಕ್ಟರ್ ಬಳಿ ತೋರಿಸಿದಾಗ “ಇದು gastric ಇರಬಹುದು. ಯಾವುದಕ್ಕೂ ECG ಹಾಗೂ ಇತರೆ ಪರೀಕ್ಷೆಗಳನ್ನು Jayadeva Hospital ಅಲ್ಲಿ ಮಾಡಿಸಿ” ಅಂತ ಸೂಚಿಸಿರುತ್ತಾರೆ…

ಅಲ್ಲಿಂದ ಹೊರಬಂದ ತಕ್ಷಣವೇ ರಘುವೀರ್ ಅವರು “ನನಗೆ ಏನೂ ಆಗಿಲ್ಲ. ಬರಿ acidity ಅಷ್ಟೇ” ಅಂದುಕೊಂಡು medical shop ನಲ್ಲಿ gastric ಮಾತ್ರೆಗಳನ್ನು ತೆಗೆದುಕೊಂಡು ಮನೆಗೆ ತೆರಳಿರುತ್ತಾರೆ. ಮನೆಗೆ ಹೋದಮೇಲೆ ಆರೋಗ್ಯ ಮತ್ತಷ್ಟು ಹದಗೆಡಲು ಶುರುವಾಗಿದೆ. ಮಡದಿ ಗೌರಿ ಅವರನ್ನ ಕರೆದು “ಮತ್ತೆ gastric ಜಾಸ್ತಿ ಆಗ್ತಾ ಇದೆ, Jayadeva ಆಸ್ಪತ್ರೆ ಬದಲು, ಮನೆ ಹತ್ತಿರ ಇರೋ Gangotri Hospital ಗೆ ಹೋಗೋಣ..

ಸಾಮಾನ್ಯವಾಗಿ ರಘುವೀರ್ ಅವರನ್ನು ನೋಡುವ ಡಾಕ್ಟರ್ ಅಲ್ಲಿಗೆ ಬರ್ತಾರೆ ಅಂತ ಅವರ ತಂಗಿಯೂ ಸೂಚಿಸಿರುತ್ತಾರೆ. ಆಸ್ಪತ್ರೆಗೆ ಹೋದ ಮೇಲೆ ಪ್ರಥಮ ಚಿಕಿತ್ಸೆ ಪಡೆದಮೇಲೆ ರಘುವೀರ್ ಅವರ ಆರೋಗ್ಯ ಸುಧಾರಿಸುತ್ತದೆ. ಅವರ ಅಣ್ಣ, ತಂಗಿ, ಮನೆಯವರೆಲ್ಲ ಬಂದು ಮಾತನಾಡಿಸಿದಾಗ ಅವರು ಆರಾಮಾಗಿ ಇದ್ದರು, ನಗುನಗುತ್ತಾ ಕಾಲ ಕಳೆದರು. ಸಂಜೆ 5 ಗಂಟೆ ಸುಮಾರಿಗೆ ಬೆವರಲು ಶುರುವಾದರೂ.. ತುಂಬಾ ಶೆಖೆ ಆಗುತ್ತಿದೆ fan ಹಾಕುವಂತೆ Gowri ಅವರಿಗೆ ಹೇಳಿದ್ದಾರೆ.. ಫ್ಯಾನ್ ಹಾಕಿ ತಿರುಗುವಷ್ಟರಲ್ಲಿ ತೆರೆದಿದ್ದ ರೆಪ್ಪೆ ಮುಚ್ಚಿತ್ತು, ಪ್ರೀತಿ ಪ್ರೇಮಗಳ ಚಿತ್ರಗಳನ್ನು ಮಾಡಿ, ಅದರ ನೋವು-ನಲಿವುಗಳನ್ನು ನೋಡಿ, ತಾಳಲಾರದ ಭಾರ ಹೊತ್ತಿದ್ದ ಹೃದಯ ನಿಂತಿತ್ತು. ಅದು ‘ಮೇ 8 2014..’

ರಘುವೀರ್ ಅವರು ಇಲ್ಲದ ಅವರ ಶ್ರೀಮತಿ ಗೌರಿ ಹಾಗೂ ಮಗಳು ಮೋಕ್ಷ ಅವರ ಜೀವನ ತುಂಬಾ ದುಃಖಕರ ವಾಗಿತ್ತು. ಟಿವಿಯಲ್ಲಿ ಅವರ ಚಿತ್ರದ ಹಾಡುಗಳು ಅಥವಾ ಸಿನಿಮಾಗಳು ಬಂದಾಗ ರಘುವೀರ್ ಅವರ ನೆನಪು ಕಾಡಲು ಶುರು ಆಗ್ತಾ ಇತ್ತು..ಆಡು ಮುಟ್ಟದ ಸೊಪ್ಪಿಲ್ಲ, ರಘುವೀರ್ ಅವರ ಮಡದಿ-ಮಗಳು, ಅವರನ್ನ ನೆನೆಯದ ದಿನವಿಲ್ಲ. ಬಂದ ಎಲ್ಲ ಸವಾಲುಗಳನ್ನು ಗೌರಿಯವರು ಎದುರಿಸಿ, ಅವರ ಮಗಳು ಮೊಕ್ಷ ಅವರೊಂದಿಗೆ ಈಗ ಬೆಂಗಳೂರಿನ BTM layout ನಲ್ಲಿ, ಒಂದು apartment ನಲ್ಲಿ ಜೀವನ ನಡೆಸುತ್ತಿದ್ದಾರೆ..ಪ್ರಸ್ತುತ ರಘುವೀರ್ ಅವರ ಪುತ್ರಿ ಜಯನಗರದ ‘Jain College ‘ ನಲ್ಲಿ ಪ್ರಥಮ PUC ವ್ಯಾಸಂಗ ಮಾಡುತ್ತಿದ್ದಾರೆ..

ರಘುವೀರ್ ಅವರ ಅಣ್ಣ-ತಮ್ಮಂದಿರು ಅಕ್ಕ-ತಂಗಿಯರ ಸಹಕಾರ, ಗೌರಿ ರಘುವೀರ್ ಅವರ ತವರುಮನೆಯ ಸಹಾಯದೊಂದಿಗೆ, ಈ ಅಮ್ಮ-ಮಗಳು ಜೀವನ ಸಾಗಿಸುತ್ತಿದ್ದಾರೆ.. ಇವರ ಬದುಕಿನ ಶೈಲಿ ನೋಡದ್ರೆ ಹೆಣ್ಣು ಎಷ್ಟು ಛಲಗಾತಿ, ಎಂಥ ಗಟ್ಟಿಗಿತ್ತಿ, ಎಲ್ಲವನ್ನೂ ಕಳೆದುಕೊಂಡ ಮೇಲೂ, ನಂಬಿಕೆಯಿಂದ, ಧೈರ್ಯದಿಂದ ಸಂಸಾರ ನಡೆಸುತ್ತಿರುವ ಒಂದು ಅದ್ಭುತವಾದ ಶಕ್ತಿ ಅಂತ ಗೊತ್ತಾಗುತ್ತೆ.. ರಘುವೀರ್ ಅವರ ಕುಟುಂಬಕ್ಕೆ ಒಳ್ಳೆಯದಾಗಲಿ. ಮೋಕ್ಷ ಅವರು ಬಯಸಿದ್ದೆಲ್ಲ ಅವರ ಜೀವನದಲ್ಲಿ ದೊರಕಲಿ..

Raghuveer Family
Raghuram

“Dr. Rajkumar ಅವರ ಮುಗ್ಧತೆಯ ಹೂ ಮನಸ್ಸು”

Previous article

Taj Mahal, ಅಪ್ಪ ಅಮ್ಮನೊಂದಿಗೆ ನನ್ನ First ಪ್ರವಾಸ

Next article

You may also like

1 Comment

  1. Raghuveer avara modala hendathi magalu Shreya avara bagge mahithi ilwa?

Leave a reply

Your email address will not be published. Required fields are marked *

1 + eight =