ನೂರೊಂದು ನೆನಪು

Public ಮುಂದೆ Cubbon Park ನಲ್ಲಿ Kavya ಅವರು Kashinath ಅವರೊಂದಿಗೆ romantic scene shoot ಮಾಡ್ಬೇಕಾದ್ರೆ ನಡೆದ ಘಟನೆ ಏನು?

0
Kavya, Kashinath

‘ಏಳು ಸುತ್ತಿನ ಕೋಟೆ’ಯ ನಂತರ Kavya ನಟಿಸಿದ ಮುಂದಿನ ಚಿತ್ರ ‘ಅಮಾನುಷ’. ಈ ಚಿತ್ರದ ನಿರ್ದೇಶಕರು ನಂಜುಂಡೇಗೌಡ. Ananth Nag ಅವರು ನಾಯಕನಟ, Bhavya ಅವರು ನಾಯಕಿ.. ಕಾವ್ಯ ಅವರು ಭವ್ಯ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡರು.. ಜೈಜಗದೀಶ್ ಕಾವ್ಯ ಅವರಿಗೆ opposite pair.. ಮೊಟ್ಟಮೊದಲ ಬಾರಿಗೆ ಕಾವ್ಯ ಅವರಿಗೆ ಅಭಿನಯಿಸಲು ಈ ಚಿತ್ರದಲ್ಲಿ ಒಂದು ಹಾಡಿನ ದೃಶ್ಯ ಕೂಡ ದೊರಕಿತು.. ಇವರಿಗೆ ಮೇಕಪ್ ಮಾಡ್ಬೇಕಾದ್ರೆ, ಮೇಕಪ್ ಮ್ಯಾನ್ ಬಳಿ Ananth Nag ಅವರು ಬಂದು “ಕಾವ್ಯಗೆ ಜಾಸ್ತಿ ಮೇಕಪ್ ಮಾಡ್ಬೇಡಪ್ಪ.. Already ಅವರು ತುಂಬಾ ಒಳ್ಳೆ ಕಲರ್ ಇದ್ದಾರೆ” ಎಂದು ರೇಗಸ್ತಾ ಇದ್ರಂತೆ..

‘ಅಮಾನುಷ’ ಚಿತ್ರದ ನಂತರ silver screen ಮೇಲೆ Kavya ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ Kashinath ಅವರ ಅಭಿನಯದ ‘ಸಿಂಗಾರಿ ಬಂಗಾರಿ’.. ಚಂದ್ರಹಾಸ್ ಆಳ್ವ ಈ ಸಿನಿಮಾದ ನಿರ್ದೇಶಕರು.. ನಿರ್ದೇಶಕ ಚಂದ್ರಹಾಸ ಆಳ್ವ ಅವರು ಕಥೆಯ ರೀಡಿಂಗ್ ಕೊಡಲು ಕಾವ್ಯ ಅವರ ಮನೆಗೆ ಹೋಗಿ narration ಕೊಟ್ಟಾದ ಮೇಲೆ ಕಾವ್ಯ ಅವರ ಕಣ್ಣಲ್ಲಿ ನೀರು ಬಂದಿದ್ದನ್ನ ನಿರ್ದೇಶಕರು ಗಮನಿಸಿದ್ದಾರೆ.. ಇದಾದ ನಂತರಕಾವ್ಯ ಅವರ ಬಳಿ ಚಂದ್ರಹಾಸ ಹೇಳ್ತಿದ್ರಂತೆ.

“ನಾನು ನಿನ್ನನ್ನು ಆಯ್ಕೆ ಮಾಡಲು ಮುಖ್ಯವಾದ ಕಾರಣ. ಕಥೆ ಹೇಳ್ಬೇಕಾದ್ರೆ ನೀನು connect ಆದೆ.. ನಿನ್ನ ಕಣ್ಣಂಚಿನಲ್ಲಿ ನೀರು ಬಂದಿದ್ದನ್ನ ನಾನು ಗಮನಿಸಿದೆ.. ಕಥೆಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದರಿಂದ ಅಭಿನಯಿಸಲು ನಿನಗೆ ಸುಲಭವಾಗುತ್ತದೆ ಎಂದು ಅಂದೇ ನನಗೆ ಅನಿಸಿತು.” ಇದರಲ್ಲಿ ಒಂದು ಮುಖ್ಯವಾದ ವಿಷಯವೇನೆಂದರೆ ಅಲ್ಲಿಯವರೆಗೂ ಬಂದಂತ ಯಾವ ಕನ್ನಡ ಸಿನಿಮಾಗಳಲ್ಲಿ ನಾಯಕ ನಟಿ skates ಹಾಕೊಂಡು ಅಭಿನಯಿಸಿರಲಿಲ್ಲ.. Skating ಗಾಗಿ ಆರು ತಿಂಗಳು ಅಭ್ಯಾಸ.. ಮುಂಜಾನೆ ಎದ್ದು ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಪ್ರತಿನಿತ್ಯ ಆರು ತಿಂಗಳುಗಳ ಕಾಲ Skating ನಾ practice ಮಾಡ್ತಾ ಇದ್ರು ಕಾವ್ಯ ಅವರು.. “ಹೊಸದೊಂದು ಕ್ರೀಡೆಯನ್ನು ಕಲಿಯಲು ಈ ಚಿತ್ರ ಹಾಗು ಪಾತ್ರ ನನಗೆ ಒಂದು ಅವಕಾಶ ಮಾಡಿಕೊಟ್ಟಿತ್ತು” ಎಂದು ಕಾವ್ಯ ಈಗಲೂ ನೆನೆಯುತ್ತಾರೆ..

ಈ ಹಿಂದೆ Kavya ಅವರು ಅಭಿನಯಿಸಿದ ಚಿತ್ರದಲ್ಲಿ ಅಷ್ಟಾಗಿ Romantic scenes ಇರ್ಲಿಲ್ಲ.. First time full fledge heroine ಆಗಿರೋದ್ರಿಂದ ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿತ್ತು.. Cubbon park ನಲ್ಲಿ shooting.. ಒಂದು ಕಟ್ಟೆಯ ಮೇಲೆ Kashinath ಹಾಗೂ kavya ಅವರು ಕೂತಿರುತ್ತಾರೆ. ಮಾತಾಡ್ತಾ ಕಾಶಿನಾಥ್ ಅವರ ಎದೆಗೆ ಕಾವ್ಯ ಅವರು ಒರಗುವ
ದೃಶ್ಯ.. ಇದು ಚಿತ್ರೀಕರಿಸಬೇಕಾಗಿತ್ತು .. Shooting ನೋಡಲು ಸಾಕಷ್ಟು ಜನ ಜಮಾಯಿಸಿದ್ದಾರೆ.. ತೀರ ಸಂಪ್ರದಾಯಸ್ತ ಕುಟುಂಬದಿಂದ ಬಂದ ಕಾವ್ಯ ಅವರಿಗೆ ಅಷ್ಟು ಜನಗಳ ಮುಂದೆ ಈ ದೃಶ್ಯದಲ್ಲಿ ಅಭಿನಯಿಸಲು ಏನೋ ಒಂದು ಅಂಜಿಕೆ, ಮುಜುಗರ, ಮನಸ್ಸಿನಲ್ಲಿ ಕಸಿವಿಸಿ.. ಇದನ್ನು ಗಮನಿಸಿದ ಕಾಶಿನಾಥ್ ಅವರು ಅವರನ್ನು ಕರೆದು ” ನೀನು ಹೆದರಬೇಡ.. ನಾಟಕ ಮಾಡ್ತಿದೀವಿ ಅಂತ ಅನ್ಕೊ. ಅಂದ್ರೆ ನಾಟಕದಲ್ಲಿ Stage ಮೇಲೆ ಮಾತ್ರ ಲೈಟ್ ಇರುತ್ತೆ..audience ಬಳಿ lights ಇರಲ್ಲ..

ಹಾಗಾಗಿ ಆಡಿಯನ್ಸ್ ನಮಗೆ ಸ್ಟೇಜ್ ಇಂದ ಕಾಣಲ್ಲ.. ಇಲ್ಲೂ ಅಷ್ಟೇ.. ಜನಗಳ್ಳಿಲ್ಲಾ ಅನ್ಕೋ.. ನೀನು ಕಾವ್ಯ ಅನ್ನೋದನ್ನ ಮರೆತು, ಈ ಚಿತ್ರದಲ್ಲಿ ನಿನ್ನ ಪಾತ್ರ ‘ನಿಕ್ಕಿ.’ ನಿಕ್ಕಿಯಾಗಿ ನೀನು ಅಭಿನಯಿಸು.. ಆಗ ನಿನಗೆ ಅಭಿನಯ ತುಂಬ ಸಲೀಸಾಗತ್ತೆ.. Camera off ಆದಾಗ ನೀನು ಕಾವ್ಯ..On ಆದಾಗ ನೀನು ‘ನಿಕ್ಕಿ’. ಒಂದು ಕಲಾವಿದೆಯ ಜೀವನವನ್ನು ಹೇಗೆ ರೂಪಿಸಿಕೊಳ್ಳುವುದು. “How to differentiate between personal life and onscreen life?” ಅನ್ನೋ ಈ ಪಾಠವನ್ನ ಅಂದಿನ ನನ್ನ seniors ಆಗಿದ್ದ ಎಲ್ಲಾ ಕಲಾವಿದರು ಹೇಳಿಕೊಟ್ಟ ಪಾಠ. ಒಬ್ಬ artist ಆಗಿ ಹೇಗೆ ನಡೆದುಕೊಳ್ಳಬೇಕು ಅನ್ನೋ ರೀತಿ; ಸ್ವಾರ್ಥವೇ ಇಲ್ಲದೆ ನನ್ನ ಅಭಿನಯ ಕಲೆಗೆ ಪ್ರೇರಣೆಯ ಉತ್ತೇಜನ ಕೊಟ್ಟ ಎಲ್ಲಾ ನನ್ನ Co-stars ಗಳಿಗೂ hatsoff..

ಲಕ್ಷ್ಮಿಶ್ರೀ ಆಗಿದ್ದ ಕಾವ್ಯ ಅವರು ಬೆಳ್ಳಿಪರದೆಯ ಮೇಲೆ ಹಾಡುಗಳಲ್ಲಿ, ದೃಶ್ಯಗಳಲ್ಲಿ ಅವರನ್ನೇ ಅವರು ನೋಡಿಕೊಂಡಾಗ ಅವರಿಗೆ ತುಂಬಾ ಸಂಕೋಚ ಆಯ್ತಂತೆ.. ಯಾಕಂದ್ರೆ? ಗುಂಡು ಮುಖ. Screen ಮೇಲೆ ತುಂಬಾ ದಪ್ಪ ಕಾಣುತ್ತಿದ್ದೇನೆ?? ಹೇಗೆ ಕಾಣಿಸ್ತೀನೋ? ಅಂತ ತುಂಬಾ ಗೊಂದಲ ಇತ್ತಂತೆ.. ಅವರ ತಾಯಿ ಈ ಗೊಂದಲವೆನ್ನೆಲ ನಿವಾರಿಸಿ ಸಾಕಷ್ಟು ಸಹಾಯ ಮಾಡಿದ್ದರಂತೆ..ಬೆಳ್ಳಿ ಪರದೆಯ ಮೇಲೆ ಮೊಟ್ಟ ಮೊದಲ ಬಾರಿಗೆ ಕಾವ್ಯ ಅನ್ನೋ ಅವರ ಹೆಸರನ್ನು ನೋಡಿದಾಗ ಏನೋ ಒಂದು ಸಂತೋಷ, excitement ಎಲ್ಲವೂ ಆಗಿತ್ತು ಅಂತ ನಗುನಗುತಾ ಹೇಳ್ತಾರೆ ಕಾವ್ಯ..

Inspector Vikram ಚಿತ್ರಕ್ಕೆ ಆಯ್ಕೆಯಾದ ಪ್ರತೀತಿ.. Dr. Rajkumar ಸೆಟ್ಟಿಗೆ ಬಂದಾಗ ಏನಾಯಿತು..?? ಮುಂದಿನ ಬರಹದಲ್ಲಿ……..

Raghuram

Ramu – Malashri ಅವರ ಪ್ರೇಮ್ ಕಹಾನಿ..

Previous article

ಅಮ್ಮ, I’m Sorry

Next article

You may also like

Comments

Leave a reply

Your email address will not be published. Required fields are marked *

18 − seven =