ಬರವಣಿಗೆಯ ಮೆರವಣಿಗೆ

Mysore dasara exhibition and the man with a moustache !!!

0

ನಾನು ನಾಲ್ಕನೇ class ಓದುತ್ತಿದ್ದೆ. ನಮ್ಮ ಮೈಸೂರಿನವರಿಗೆ ದಸರಾ ಬಂತು ಅಂದ್ರೆ ತುಂಬಾ ವಿಶೇಷ.. ಬೆಟ್ಟದ ಮೇಲೆ ಹಾಕೋ ಆ ‘ಸುಸ್ವಾಗತ’ವನ್ನು ನೋಡಲು, ನಮ್ಮ ಮೈಸೂರಿನ ರಾಜ ಬೀದಿಗಳ ದೀಪಾಲಂಕಾರವನ್ನು ಕಣ್ತುಂಬಿ ನೋಡಿ ಸುತ್ತಾಡೋದು ಹಾಗೆ exhibition ಗೆ ಹೋಗೋದು, ಈ ಎಲ್ಲಾ ನೆನಪುಗಳು ನನ್ನ ಮನದಲ್ಲಿ ಹಚ್ಚು ಹಸಿರಾಗಿಯೇ ಇದೆ..

Mysore exhibition ( ದಸರಾ ವಸ್ತು ಪ್ರದರ್ಶನ) ನಮ್ಮ ವಾಹನವನ್ನು Parking ನಲ್ಲಿ ನಿಲ್ಲಿಸಿ ಮುಂದೆ ಇರೋ ದೊಡ್ಡ arch ಬಳಿ ಬಂದು ticket ಅನ್ನು ಖರೀದಿಸಿ ಒಳಗೆ ಹೋಗಿ ಎಡಕ್ಕೆ ತಿರುಗಿದ ತಕ್ಷಣ Cotton Candy ಮಾರೋರು.. ಆ ಗುಲಾಬಿ ಬಣ್ಣದ (Pink) Cotton Candy ಯನ್ನು ಅಪ್ಪ ಅಮ್ಮನಿಂದ ಕೇಳಿ ಪಡೆದು ಅವರು ಅಂಗಡಿಯನ್ನು ನೋಡುತ್ತಿದ್ದರೆ ನಾನು ಆ Cotton Candy ಸವಿಯೋದ್ರಲ್ಲಿ Busy ಆಗಿರುತ್ತಿದ್ದೆ..
ಮನೆಗೆ ಬೇಕಾದ Bed Sheet, ದಿಂಬಿನ Cover, ಇವೆಲ್ಲವನ್ನೂ ಅಲ್ಲಿ ತಗೊಳ್ಳೋದು ನನ್ನ ತಾಯಿಯ ವಾಡಿಕೆಯಾಗಿತ್ತು..
ಈಗ ಅದನ್ನೇ ನನ್ನ ಶ್ರೀಮತಿ ಕೂಡ ಮುಂದುವರಿಸ್ಕೊಂಡು ಬಂದಿದ್ದಾರೆ..

mysore
Mysore Dasara Exhibition

ಅಲ್ಲಿ ಆಟ ಸಾಮಾನುಗಳ ಅಂಗಡಿಯನ್ನು ನೋಡಿದಾಗ ಎಲ್ಲವನ್ನು ತಗೋಬೇಕು ಅನ್ನೋ ಆಸೆ ಆದರೆ ಕೊಡಿಸುತ್ತಾ ಇದ್ದಿದ್ದು ಸ್ವಲ್ಪವನ್ನು ಮಾತ್ರ.. ಅದರಲ್ಲಿ ನನಗೆ ತುಂಬಾ ಇಷ್ಟ ಆಗ್ತಾ ಇದ್ದಿದ್ದು, ಇವತ್ತಿಗೂ ನಾನು ನೆನಪಿಸಿಕೊಳ್ಳುವುದು ಒಂದು ಚಿಕ್ಕ plastic cover ನಲ್ಲಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಒಂದು ತಗಡಿನ Motor boat..

ಅದನ್ನ ಜೋಪಾನವಾಗಿ ಇಟ್ಟುಕೊಂಡು ಮತ್ತೆ Exhibition ಸುತ್ತಾಟ.. ಇವತ್ತಿಗೂ ಒಬ್ಬ ವ್ಯಕ್ತಿ ನನಗೆ ತುಂಬಾ ಕಾಡುತ್ತಾರೆ..

ಸಣ್ಣಗೆ, ಬೆಳ್ಳಗೆ ಎತ್ತರದ ಆಕಾರವಿದ್ದ ಆ ವ್ಯಕ್ತಿ, ಕಪ್ಪು ಗಾಜಿನ ಕನ್ನಡಕವನ್ನು ಹಾಕಿಕೊಂಡು, ಟೋಪಿಯನ್ನು ಧರಿಸಿಕೊಂಡು, ತಮ್ಮ ಮುಖದ ನಾನಾ expression ಗಳನ್ನ ತೋರಿಸುತ್ತಾ.. ಅಂಟಿಸುವ, ಸಿಗಿಸುವ ಗಡ್ಡ – ಮೀಸೆಯ ವ್ಯಾಪಾರವನ್ನು ಮಾಡುತ್ತಿದ್ದರು..

ನನಗೆ ಅದನ್ನು ಕೊಡಿಸಲು ನನ್ನ ತಾಯಿಯ ಬಳಿ ತುಂಬಾ ಗಲಾಟೆ ಮಾಡ್ತಾ ಇದ್ದೆ..
ಮೂಗಿಗೆ ಸಿಗಿಸುವ ಮೀಸೆಗೆ ರೂ.5,
ಅರ್ಧ ಗಡ್ಡ (French beard) ಗೆ ರೂ. 10
ಪೂರ್ತಿ ಗಡ್ಡಕ್ಕೆ ರೂ 20..

ಆ ಎಳೆಯ ವಯಸ್ಸಿನಲ್ಲಿ ನನ್ನ ಮುಖಕ್ಕೆ ಮೀಸೆ ಗಡ್ಡ ಬಂದರೆ ಹೇಗೆ ಕಾಣಿಸಬಹುದು ಅಂತ ತಿಳಿದುಕೊಳ್ಳೋ ಕುತೂಹಲ.. ನನ್ನ ಅಪ್ಪ ” ಅದೆಲ್ಲ ಯಾವ್ಯಾವ ಕೂದಲಲ್ಲಿ ಮಾಡಿರ್ತಾರೋ, ತೊಗೊಳೋದು ಬೇಡ” ಅಂತ ಬಯ್ಯೋರು.. ಆದರೂ ನನ್ನ ಹಠಕ್ಕೆ ಕರಗಿ ನನ್ನ ತಾಯಿ ಅದನ್ನು ಕೊಡಿಸೋರು..

ಇದೆಲ್ಲದರ ನಂತರ Exhibition ನಲ್ಲಿ ಆಟಗಳನ್ನ ಆಡುವ ಜಾಗಕ್ಕೆ ಹೋಗಿ, ಬೇರೆ ಬೇರೆ rides ನಲ್ಲಿ ಕೂತು, ದೊಡ್ಡದಾದ Delhi ಹಪ್ಪಳವನ್ನು ತೆಗೆದುಕೊಂಡು, ಅದರ ಮೇಲೆ ಹಾಕುವ ಕೆಂಪು ಬಣ್ಣದ ಖಾರದ ಪುಡಿ ಹಾಗೂ ಉಪ್ಪನ್ನು ನೆಂಚಿಕೊಂಡಿ, ಅಲ್ಲಿ ಸಿಗುವ ಪುಳಿಯೋಗರೆ ಹಾಗೂ ಮೊಸರನ್ನವನ್ನು ದೊನ್ನೆಯಲ್ಲಿ ತಿಂದು, ಎಷ್ಟು ಬೇಗ ಮನೆಗೆ ಹೋಗುತ್ತೀವೋ ಆ ಮಿಸೆಗಡ್ಡವನ್ನ ಸಿಗುಸ್ಕೋ ಬಹುದು, ನಮ್ಮ ಮನೆಯ ತೊಟ್ಟಿಯಲ್ಲಿ ನಾನು ತಗೊಂಡಿದ್ದ ತಗಡಿನ ಬೋಟನ್ನು ಬಿಡಬಹುದು ಅನ್ನೋ ಆತುರ..

ಮನೆಗೆ ಬಂದ ತಕ್ಷಣ ಕನ್ನಡಿ ಮುಂದೆ ನಿಂತುಕೊಂಡು, ಅಪ್ಪನ ಕನ್ನಡಕವನ್ನು ಧರಿಸಿಕೊಂಡು, Exhibition ನಲ್ಲಿ ಆ ವ್ಯಕ್ತಿ ಮಾಡುತ್ತಿದ್ದ ರೀತಿಯಲ್ಲೇ ನನ್ನ ಮುಖದಲ್ಲೂ ಹಾವಭಾವಗಳನ್ನು ಮಾಡಲು ಪ್ರಯತ್ನಿಸುತ್ತಿದೆ..
ನಂತರ ಹಿತ್ತಲಲ್ಲಿದ್ದ ತೊಟ್ಟಿಯ ಕಡೆ ಓಡಿ,, ಆ Motor boat ಅನ್ನು ತೆಗೆದು, ನೀರಿನಲ್ಲಿ ಬಿಟ್ಟು ಅದನ್ನು ಓಡಿಸುವ ಆಸೆ..

ಅವತ್ತಿನ ದಿವಸಕ್ಕೆ ಅದನ್ನು ಓಡಿಸುವುದಕ್ಕೆ ಒಂದು ಅದ್ಭುತವಾದ Technique ಇತ್ತು..
Boat ಹಿಂದೆ ಎರಡು Pipe ಮಾದರಿ ಒಂದು ಜಾಗ ಇರೋದು, ಆ Pipe ಗಳಿಗೆ ಹತ್ತಿಯಲ್ಲಿ ಎಣ್ಣೆಯನ್ನು ಅದ್ದಿ ಸಿಗಸಬೇಕಿತ್ತು.. ನಂತರ ಅದಕ್ಕೆ ಬೆಂಕಿಯನ್ನು ಹಚ್ಚಿದಾಗ ನಿಜವಾದ Motor Boat ಯಾವ ರೀತಿ ಶಬ್ದ ಮಾಡುವುದು ಅದೇ ರೀತಿ ಶಬ್ದ ಮಾಡಿ ಹೊಗೆ ಬಂದು ಓಡಲು ಪ್ರಾರಂಭಿಸುವುದು.. ಅದನ್ನು ನೋಡಲು ನನಗೇನೋ ಖುಷಿ..
ಸತ್ಯವಾಗ್ಲೂ ಹೇಳ್ತೀನಿ ನಾನು ನಾನಾ ದೇಶಗಳನ್ನು ನೋಡಿದ್ದೀನಿ, ಬೇರೆ ಬೇರೆ Gadgets ಗಳನ್ನ ಇಟ್ಕೊಂಡಿದೀನಿ, ಸಿನಿಮಾದಲ್ಲಿ ನಾನಾ ಪಾತ್ರಗಳನ್ನು ಧರಿಸಿದ್ದೇನೆ.. ಆದರೆ ಇವತ್ತಿಗೂ ಬಾಲ್ಯದಲ್ಲಿ ಸಿಗಿಸಿಕೊಳ್ಳುತ್ತಿದ್ದ ಮೀಸೆ ಮತ್ತು ಗಡ್ಡ, ನಮ್ಮ ಮನೆಯ ಹಿತ್ತಿಲಿನಲ್ಲಿ ಬಿಡುತ್ತಿದ್ದ Motor Boat ತಂದು ಕೊಟ್ಟಂತ ಖುಷಿ, ಗಾಢವಾಗಿ ನನ್ನೊಳಗೆ ಅಚ್ಚುಳಿದಿರುವ ಆ ನೆನಪುಗಳು ಕೊಡುವ ಆ ಸಂತೋಷ ಇದ್ಯಾವುದೂ ಕೊಟ್ಟಿಲ್ಲ..

ಇವತ್ತಿಗೂ ನನ್ನ ಮಕ್ಕಳನ್ನ ಕರ್ಕೊಂಡು ಆ exhibition ಗೆ ಹೋಗುತ್ತೇನೆ, ಅಲ್ಲೇ ಅದೇ ಜಾಗದಲ್ಲಿ Cottoncandy ಯನ್ನು ನಾನೂ ತಿಂದು ಮಕ್ಕಳಿಗೂ ಕೊಡುಸ್ತೀನಿ… ನನ್ನ ಹೆಂಡತಿ Bed Sheet ಹಾಗೂ ದಿಂಬಿನ Cover ನ್ನು ತಗೊಳ್ತಾರೆ..
ಆದರೆ ಇಲ್ಲಿಯವರೆಗೂ ಆ ರೀತಿಯ Boat ನನ್ನ ಕಣ್ಣಿಗೆ ಬಿದ್ದಿಲ್ಲ..
ಮತ್ತು ನನ್ನನ್ನು ತುಂಬಾ ಕಾಡೋದು. ಆ ಮೀಸೆ ಗಡ್ಡ ಮಾರುತಿದ್ದ ವ್ಯಕ್ತಿ ಈಗ ಎಲ್ಲಿರಬಹುದು ಹೇಗಿರಬಹುದು ಅಂತ..
ಈ ನನ್ನ ಪ್ರಶ್ನೆಗೆ ಅಲ್ಲಿರುವ ಸ್ಥಳೀಯರಿಂದಲೂ ಉತ್ತರ ಸಿಕ್ಕಿಲ್ಲ, ನನಗೂ ಅದನ್ನ ತಿಳಿದುಕೊಳ್ಳಲು ಇನ್ನು ಆಗಿಲ್ಲ..

ಕೆಲವು ವ್ಯಕ್ತಿಗಳೇ ಹಾಗೆ, ಮನಸ್ಸಿನಲ್ಲಿ ಇರ್ತಾರೆ, ನೋಡಬೇಕು ಅನ್ನೋ ಆಸೆ ಆಗುತ್ತೆ.. ಅವರ ಬಗ್ಗೆ ತಿಳಿದುಕೊಳ್ಳೋ ಕಾತುರ ಇರುತ್ತೆ ಆದರೆ ಒಂಚೂರು ಸುಳಿವು ಸಿಗಲ್ಲ…

ಯಾರಾದರೂ ಈ ಬರಹ ಓದಿದವರಿಗೆ, ಅವರ ಸಂಬಂಧಪಟ್ಟವರೋ, ಸ್ನೇಹಿತರೊ ಇದ್ದರೆ ದಯಮಾಡಿ ಈ ನನ್ನ WhatsApp ಗೆ ಸಂಪರ್ಕಿಸಿ..(9019331986)

ನೆನಪು ಸುಂದರ ನೆನಪು ಮಧುರ ಈ ನೂರೊಂದು ನೆನಪು ಎಂದೆಂದೂ ಅಮರ..

Raghuram

Appu, ಬೊಂಬೆ ಮಾತ್ರವಲ್ಲ ನರ ಬೊಂಬೆಯೂ ಹೇಳುವುದು ನೀವೇ ರಾಜಕುಮಾರ

Previous article

You may also like

Comments

Leave a reply

Your email address will not be published. Required fields are marked *

2 × 5 =