ಬರವಣಿಗೆಯ ಮೆರವಣಿಗೆ

Khushboo, ಇವರು ಚಿತ್ರರಂಗಕ್ಕೆ ಒಂದು ಸೊಬಗು

0
Khusboo

‘ರಣಧೀರ’ನ ರಾಧೆ , ‘ಅಂಜದ ಗಂಡಿ’ನ ಆಶಾ, ಇಷ್ಟು ನಾನು ಬರೀತಾ ಇರುವ ಹಾಗೇನೆ ಒಂದು small hint ನಿಮಗೆ ಸಿಕ್ಕಿರುತ್ತದೆ, ಇವರು ಯಾರು ಅಂತ.. ಇವರ screen name ಇಡೀ ಭಾರತದಲ್ಲೇ, ಅದರಲ್ಲೂ ದಕ್ಷಿಣ ಭಾರತದಲ್ಲಿ ಸಾಕಷ್ಟು ಪ್ರಖ್ಯಾತಿಗೊಂಡಂತ ಹೆಸರು. ಇವರ ಮೇಲೆ ತಮಿಳುನಾಡಿನ ಪ್ರೇಕ್ಷಕರು ಯಾವ ಮಟ್ಟದಲ್ಲಿ ಅಭಿಮಾನ ಇಟ್ಟಿದ್ದಾರೆಂದರೆ, ಇವರಿಗಾಗಿ ದೇವಾಲಯ ಒಂದನ್ನು ನಿರ್ಮಾಣ ಮಾಡಿದ್ದರು. ಇವರ ನಿಜವಾದ ಹೆಸರು, ಮೂಲ ಹೆಸರು ‘ನಖತ್ ಖಾನ್’


1980 ರಲ್ಲಿ, ‘ ದಿ ಬರ್ನಿಂಗ್ ಟ್ರೈನ್’ ಅನ್ನೋ ಹಿಂದಿ ಸಿನಿಮಾ ಮೂಲಕ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದೆ ತುಂಬಾ ಇಂಟರೆಸ್ಟಿಂಗ್ ಆಗಿರೋ ಕಥೆ. ನಖತ್ ಖಾನ್ ಅವರಿಗೆ ಮೂರು ಜನ ಅಣ್ಣಂದಿರು.

Khusboo brothers

ಅದರಲ್ಲಿ ಹಿರಿಯ ಅಣ್ಣ, ಭಾರತದ ಹೆಮ್ಮೆಯ ಕಲಾವಿದೆ ಹೇಮಾ ಮಾಲಿನಿ ಅವರ ಸಂಬಂಧಿಕರೊಬ್ಬರಿಗೆ ಅತ್ಯಂತ ಆಪ್ತರಾಗಿದ್ದರು. ಅವರನ್ನು ಭೇಟಿ ಮಾಡಲು ಹೇಮಮಾಲಿನಿ ಅವರ ಮನೆಗೆ ಹೋಗುತ್ತಿದ್ದ ಸಂದರ್ಭ. ನಖಾತ್ ಖಾನ್ ಕೂಡ ಅವರ ಅಣ್ಣನ ಜೊತೆಗೆ ಆ ಮನೆಗೆ ಹೋಗಿ, ಅಲ್ಲಿ ಆಟ ಆಡುತ್ತಾ ಕಾಲ ಕಳೆಯುತ್ತಿದ್ದರು. ಅಲ್ಲಿ ಹೇಮಮಾಲಿನಿ ಅವರು ಮೇಕಪ್ ಮಾಡಿಕೊಳ್ಳುವುದು, ನಿರ್ಮಾಪಕರು ನಿರ್ದೇಶಕರು ಬರೋದು, ಎಲ್ಲವನ್ನು ತಮ್ಮ, ಅರಿವಿಲ್ಲದ ವಯಸ್ಸಿನಲ್ಲಿ ನೋಡುತ್ತಾ ಬಂದರು.
ನಖಾತ್ ಖಾನ್ ಗೆ ಹೇಮಮಾಲಿನಿ ಅವರನ್ನು ಕಂಡರೆ ಪಂಚಪ್ರಾಣ. ಹೇಮಮಾಲಿನಿ ಅವರ ತಾಯಿಗೆ ನಖತ್ ಖಾನ್ ಅವರ ಕಂಡರೆ ತುಂಬಾ ಪ್ರೀತಿ.

Hema Malini & her mother

ಒಮ್ಮೆ ಬಾಲಿವುಡ್ ನ ಪ್ರಖ್ಯಾತ ವ್ಯಕ್ತಿ ” ರವಿ ಚೋಪ್ರಾ” ಎನ್ನುವರು ಹೇಮ ಮಾಲಿನಿ ಅವರ ಬಳಿ ಮಾತನಾಡಲು ಅವರ ಮನೆಗೆ ಹೋಗಿದ್ದಾರೆ.
8-10 ವರ್ಷದ ನಖತ್ ಖಾನ್ ಚೂಟಿಯಾಗಿ ಆಟ ಆಟವಾಡುವುದು ಓಡಾಡುವುದನ್ನು ನೋಡಿದ ರವಿಚೋಪ್ರಾ ಅವರು “ನನ್ನ ಸಿನಿಮಾದಲ್ಲಿ ಆಕ್ಟ್ ಮಾಡ್ತೀಯಾ ಅಂತ ಕೇಳಿದ್ದಾರೆ”. ದಿನ ಒಂದು ಐಸ್ ಕ್ರೀಮ್ ಕೊಡಿಸಿದರೆ ಮಾಡ್ತೀನಿ ಅಂತ ಮುಗ್ಧ ಹಾಗೂ ತುಂಟತನದಿಂದ ಹೇಳಿ ಮತ್ತೆ ಆಟ ಆಡಲು ಓಡಿ ಹೋಗಿದ್ದಾರೆ.
ಈ ವಿಚಾರವನ್ನು ಹೇಮಮಾಲಿನಿ ಅವರ ತಾಯಿಯ ಬಳಿ ಪ್ರಸ್ತಾಪಿಸಿ. ಅವರ ತಾಯಿನ ಅವರ ಕುಟುಂಬದ ಹತ್ತಿರ ಪ್ರಸ್ತಾಪಿಸಿ, ಬೆಳ್ಳಿ ಪರದೆಗೆ ಪಾದಾರ್ಪಣೆ ಮಾಡಲು ಕಾರಣವಾದರೂ.

Nakath Khan

ನಂತರ ಕೆಲವಾರು ಹಿಂದಿ ಚಿತ್ರಗಳಲ್ಲಿ ಬಾಲ ಕಲಾವಿದೆ ಆಗಿ ನಟನೆ, ಇನ್ನಷ್ಟು ಚಿತ್ರಗಳಲ್ಲಿ ಸಹನಟಿ ಆಗಿ ಅಭಿನಯ ಮಾಡುತ್ತಿದ್ದ ಸಂದರ್ಭದಲ್ಲಿ ‘Meri Jung’ ಅನ್ನೋ ಹಿಂದಿ ಚಿತ್ರದಲ್ಲಿ, ಅನಿಲ್ ಕಪೂರ್ ಅವರ ತಂಗಿಯ ಪಾತ್ರದಲ್ಲಿ ಅಭಿನಯಿಸಿ ಸಾಕಷ್ಟು ಗುರುತು ಗೌರವ ಪಡೆದುಕೊಂಡಿದ್ದರು. ಆದರೆ ಅವರು ಮೇನ್ ಸ್ಟ್ರೀಮ್ ನಾಯಕಿಯಾಗಿ ಅಭಿನಯಿಸುವ ಅವಕಾಶ ಹುಡುಕಬೇಕಾದ ಸಂದರ್ಭದಲ್ಲಿ, ‘Meri Jung’ ಹಿಟ್ ಆಗಿದ್ದರಿಂದ ಅವರನ್ನು ಹುಡುಕಿ ಬರುತ್ತಿದ್ದ ಪಾತ್ರ, ತಂಗಿಯ ಪಾತ್ರವೇ ಹೆಚ್ಚಾಗಿಯೇ ಆಗಿತ್ತು.

ಇದೇ ಸಂದರ್ಭದಲ್ಲಿ ನಮ್ಮ ದಕ್ಷಿಣ ಭಾರತದಿಂದ ವಿಕ್ಟರಿ ವೆಂಕಟೇಶ್ ಅವರೊಂದಿಗೆ ನಾಯಕಿಯಾಗಿ ತೆಲುಗು ಸಿನಿಮಾದಲ್ಲಿ ಅಭಿನಯಿಸಲು ಒಂದು ಅವಕಾಶ ಬಂದಿತ್ತು. ನಂತರ ನಾಗಾರ್ಜುನ ಅವರ ಜೊತೆಗೆ ಹೀರೋಯಿನ್ ಆಗಿ ‘ಕ್ಯಾಪ್ಟನ್ ನಾಗಾರ್ಜುನ’ ಅನ್ನೋ ಚಿತ್ರವನ್ನು ಮಾಡುತ್ತಾರೆ. ಅದು ಕೂಡ ಹಿಟ್ ಆಗುತ್ತೆ.

Victory Venkatesh and Khushboo

ನಂತರ ಮತ್ತೆ ವೆಂಕಟೇಶ್ ಅವರ ಜೊತೆಗೆ ಒಂದು ತೆಲುಗು ಸಿನಿಮಾದಲ್ಲಿ ನಟಿಸಬೇಕಾಗಿದ್ದರೆ, ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್ ಅವರ ಕಣ್ಣಿಗೆ ಬಿದ್ದು, ಅವರ ಮೂಲಕ ನಮ್ಮ ಚಂದನವನಕ್ಕೆ ‘ ರಣಧೀರನ ರಾಧೆಯಾಗಿ’ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗುತ್ತಾರೆ ಈ ನಖತ್ ಖಾನ್..ಇವರು ಬೇರೆ ಯಾರು ಅಲ್ಲ ನಮ್ಮ ನಿಮ್ಮ ಪ್ರೀತಿಯ Khushboo.
‘ರಣಧೀರ’ ಚಿತ್ರ ಆದಮೇಲೆ ಖುಷ್ಬು ಅವರ ಬೆಳವಣಿಗೆ ಒಂದು ಇತಿಹಾಸ. ಪ್ರೇಮಲೋಕದ ಅತ್ಯಾದ್ಭುತವಾದ ಯಶಸ್ಸಿನ ನಂತರ, ರಣಧೀರ ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದ ಸಂದರ್ಭದಲ್ಲಿ ಇಲ್ಲಿಗೆ ಬಂದು, ಚಿತ್ರದಲ್ಲಿ ಅಭಿನಯಿಸಿ, ಮನೆಮನೆ ಮಾತಾದ ನಮ್ಮKhushboo, ಚಿತ್ರರಂಗದ ಹೆಮ್ಮೆ, ದಕ್ಷಿಣ ಭಾರತದ ಹೆಮ್ಮೆ.

Ranadheera still

ಇದಾದ ನಂತರ Khushboo ಅವರು ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ರಜನಿಕಾಂತ್ ಅವರ ಜೊತೆಗೆ ‘ಧರ್ಮತ್ತಿಲ್ ತಲೈವನ್’ ಎನ್ನುವ ಚಿತ್ರದಲ್ಲಿ ‘ಶಿವಾಜಿ ಪ್ರಭು’ ಅವರಿಗೆ ನಾಯಕಿಯಾಗಿ ಅಭಿನಯ. ಕಮಲ್ ಹಾಸನ್ ಅವರ ‘ವೆಟ್ರಿ ವಿಳ’ ಚಿತ್ರದಲ್ಲೂ ಇವರು ಒಬ್ಬ ನಾಯಕಿ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿ, ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡವನ್ನ ಮರೆತಿಲ್ಲ, ಕನ್ನಡದ ಕನಸುಗಾರ ಡಾಕ್ಟರ್ ವಿ ರವಿಚಂದ್ರನ್ ಅವರನ್ನ ಯಾವುದೇ ವೇದಿಕೆ ಇರಲಿ ಸಂದರ್ಶನವಿರಲಿ, “ನನ್ನ ಗುರು” ಎಂದು ಬಾಯಿ ತುಂಬಾ ಹೇಳುವುದನ್ನ ನಿಲ್ಲಿಸಿಲ್ಲ.

Khushboo with Ravichandran

ಒಂದೊಂದು ಅಕ್ಕಿ ಕಾಳು ಮೇಲೆ ತಿನ್ನುವರ ಹೆಸರು ಹೇಗೆ ಬರೆದಿರುತ್ತೋ,ಹಾಗೆ ಪ್ರತಿಯೊಂದು ಚಿತ್ರದ ಸ್ಕ್ರಿಪ್ಟ್ ಮೇಲು ಆ ಕಲಾವಿದರ ಹೆಸರು ಹಾಗೆ ಬರೆದಿರುತ್ತೆ. ಎಲ್ಲೋ ಮುಂಬೈನಲ್ಲಿ ಹುಟ್ಟಿ ಅಲ್ಲಿ ಬಣ್ಣ ಹಚ್ಚಿ, ನಮ್ಮ ದಕ್ಷಿಣ ಭಾರತದ ಮನೆಮಗಳು ಆಗಿರುವ ಖುಷ್ಬು ಅವರ ಬಣ್ಣದ ಬದುಕಿನ ಪಯಣ ಸದಾ ಜೀವನದಿಯಂತೆ ಎಲ್ಲಾ ಕಡೆ ಹರಡಲಿ.

‘Khushboo, ಇವರು ಚಿತ್ರರಂಗಕ್ಕೆ ಒಂದು ಸೊಬಗು’

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

Raghuram

“Suggi” ಚಿತ್ರದ ನಾಯಕಿಯ ತಂದೆಗೆ ಏನಾಗಿತ್ತು ??

Previous article

Arjun Sarja ಮತ್ತು Shakthi Prasad ತಂದೆ ಮಗ ಅನ್ನೋ ಬಂದದ ಅನುಬಂಧದ ಒಂದು ಸತ್ಯ ಕಥೆ

Next article

You may also like

Comments

Leave a reply

Your email address will not be published. Required fields are marked *

seven + one =