ನೂರೊಂದು ನೆನಪು

Kavya ಬಣ್ಣದ ಬದುಕಿಗೆ goodbye ಹೇಳಿದ್ದು ಯಾಕೆ ?

0

Kavya ಬೆಳ್ಳಿಪರದೆಯಿಂದ ದೂರವಾಗಿ ಬಣ್ಣದ ಬದುಕಿಗೆ ವಿದಾಯ ಹೇಳಲು ಮುಖ್ಯವಾದ ಕಾರಣ ಅವರ ವಿದ್ಯಾಭ್ಯಾಸ..

ಅವರ ಸಿನಿಮಾ ಭವಿಷ್ಯ ಗಟ್ಟಿಯಾಗುತ್ತಿದ್ದಂತೆ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಲು ಸಮಯದ ಅಭಾವ ವಾಗುತ್ತಿತ್ತು.. ಶಿಕ್ಷಣ ಮುಂದುವರಿಸಲು ಉಳಿದ college ಜೀವನವನ್ನ enjoy ಮಾಡಲು ಕಾವ್ಯ ಅವರು ಬಣ್ಣದ ಬದುಕಿನ ವಿದಾಯದ ನಿರ್ಧಾರವನ್ನು ಕೈಗೊಂಡರು.. ಅವರ ಸ್ನೇಹಿತರೆಲ್ಲ ತುಂಬಾ ಅವರಿಗೆ Support ಮಾಡ್ತಿದ್ರಂತೆ..

ಕಾವ್ಯ ಅವರ ಸಿನಿಮಾ ನಿವೃತ್ತಿಗೆ ಇನ್ನೊಂದು ಮುಖ್ಯವಾದ ಕಾರಣ ಅದ್ಭುತವಾದ production house ಗಳು, ಒಳ್ಳೊಳ್ಳೆ ನಿರ್ದೇಶಕರು, ದೊಡ್ಡ ದೊಡ್ಡ ಕಲಾವಿದರು ಕಾವ್ಯ ಅವರಿಗೆ ಅವರ ಬಳಗ ಎಷ್ಟು ದೊಡ್ಡದೋ, ಸಿನಿಮಾ ಅನ್ನೋ ಸಂಬಂಧದಲ್ಲೂ ಕಾವ್ಯ ಅವರದು ತುಂಬ ದೊಡ್ಡ ಕುಟುಂಬ.. ಚಿತ್ರದಿಂದ, ಚಿತ್ರ ಪಾತ್ರದಿಂದ, ಹೀಗೆ ಹೆಸರು ಕೀರ್ತಿ ಎಲ್ಲವನ್ನು ಸಂಪಾದಿಸುತ್ತಿರ ಬೇಕಾದರೆ whats next? ಮುಂದೇನು?? ನಾನು ಅದು ಮಾಡಬೇಕು, ಇದು ಮಾಡಬೇಕು.. ಯಾವುದು ನನಗೆ thoughts ಬರಲಿಲ್ಲ.. ನಾನು Heroine ಆಗಿದ್ರೂ ಶ್ರೀಸಾಮಾನ್ಯರ simple life ತುಂಬಾ ಇಷ್ಟ ಆಗ್ತಿತ್ತು.. ನನ್ನ ಅಭಿಮಾನಿಗಳ ಮನಸ್ಸಿನಲ್ಲಿ ಕಾವ್ಯ ಹಾಗೆ ಹಚ್ಚಹಸಿರಾಗಿ ಉಳಿಯಲಿ ಎಂಬ ಆಸೆಯಿಂದ ನನ್ನ ತುಂಬು ಹೃದಯದ ಸ್ವಂತ ನಿರ್ಧಾರದಿಂದ ಬಣ್ಣದ ಬದುಕಿನಿಂದ ದೂರವಾಗಬೇಕು ಎಂದು ನಿರ್ಧರಿಸಿದೆ..

ನಾನು ಚಿತ್ರರಂಗಕ್ಕೆ ಬರಬೇಕು ಅಂದಾಗ ನನ್ನ ತಂದೆ ತಾಯಿ ಹೇಗೆ ಪ್ರೋತ್ಸಾಹ ಕೊಟ್ಟರೋ, ನಾನು ಬಿಡಬೇಕು ಎಂದು ಅಂದುಕೊಂಡಾಗ ನನ್ನ decision ನ ಅಪ್ಪ-ಅಮ್ಮ ಅಷ್ಟೇ respect ಮಾಡುದ್ರು.. ಸುಂದರವಾದ ಚಿಕ್ಕದಾದ ನನ್ನ ಸಿನಿಮಾದ ಪಯಣ ಸದಾ ಎಲ್ಲರ ನೆನಪಿನಲ್ಲಿ ಹಾಗೆ ಉಳಿಯಲಿ ಎನ್ನುವುದು ನನ್ನ ಆಸೆಯಾಗಿತ್ತು.. ನಟನೆಯಿಂದ ನಾನು ದೂರವಾದರೂ ಕಲೆ ಹಾಗೂ ಬೇರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನನ್ನನ್ನ ನಾನು ತೊಡಗಿಸಿಕೊಳ್ಳಬೇಕು ಏನೋ ಉದ್ದೇಶವಿತ್ತು.. I think I took the right decision at the right time..

ಕಾವ್ಯ ಅವರು ಚಿತ್ರರಂಗದಿಂದ ದೂರವಾದ ಮೇಲೆ ಅವರ ಗುರುಗಳು ‘ಸಂಚಯ’ ಎಂಬ amateur theatre ತಂಡ ಮಾಡಿ ಸಾಕಷ್ಟು ನಾಟಕಗಳನ್ನು ಆಡುತ್ತಿದ್ದರು. ಅಲ್ಲಿ ‘ಹಾವು ಹೊಕ್ಕ ಮನಗಳು’ ಎಂಬ ನಾಟಕ ಶುರು ಮಾಡ್ತಾ ಇದ್ದೀವಿ.. ಪಾತ್ರ ಮಾಡ್ತೀಯಾ?? ಎಂದು ಕೇಳಿದಾಗ, “ಖಂಡಿತ ಮಾಡ್ತೀನಿ!!” ಯಾಕೆಂದರೆ, ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ನನ್ನನ್ನ ತೊಡಗಿಸಿಕೊಳ್ಳಲು ನನಗೆ ಇಷ್ಟ ಇದ್ದಿದ್ದರಿಂದ ಆಯ್ತು ಎಂದೆ.. ಆ ನಾಟಕದ ಮೂಲಕ ಕಾವ್ಯ ಅವರಿಗೆ ಅವರ ಪತಿ ರಮೇಶ್ ಅವರ ಪರಿಚಯವಾಯಿತು.. Rehearsal ಗಳಲ್ಲಿ, stage ನಲ್ಲಿ, ಅವರೊಂದಿಗೆ ಸಮಯ ಕಳೆಯಲುಸಾಕಷ್ಟು ಅವಕಾಶ ಸಿಗುತ್ತಿತ್ತು. ಒಮ್ಮೊಮ್ಮೆ ಲೇಟ್ ಆದಾಗ ರಮೇಶ್ ಅವರೇ ಕಾವ್ಯ ಅವರನ್ನು ಅವರ ಮನೆಗೆ ಡ್ರಾಪ್ ಮಾಡುತ್ತಿದ್ದರಂತೆ.. ಇವರ ಮೀಟಿಂಗ್ ಎಲ್ಲಾ ನಾಟಕದ ತಂಡಗಳ ಜೊತೆಯಲ್ಲೇ ಆಗುತ್ತಿತ್ತು.. ಕಾವ್ಯ ಅವರ ಮನೆಗೆ ರಮೇಶ್ ಅವರು ಹೋಗುವುದು, ರಮೇಶ್ ಅವರ ಮನೆಗೆ ಕಾವ್ಯ ಅವರು ಹೋಗುವುದು ವಾಡಿಕೆಯಾಗಿತ್ತು.. ಇವರ ಸ್ನೇಹದಿಂದ ಎರಡು ಕುಟುಂಬಗಳ ನಡುವೆಯೂ ಉತ್ತಮ ಸ್ನೇಹಹಾಗೂ ಬಾಂಧವ್ಯ ಉಂಟಾಗಿ ಮನೆಯವರ ಪರಸ್ಪರ ಒಪ್ಪಿಗೆಯ ಮೇರೆಗೆ ಕಾವ್ಯ ಹಾಗೂ ರಮೇಶ್ May 7th 1995, ಬೆಂಗಳೂರಿನ ರಾಜಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಸಾಂಪ್ರದಾಯಕವಾಗಿ ಸತಿಪತಿಯಾದರೂ..

Kavya marriage

ರಮೇಶ್ ಅವರು ಮೂಲತಹ ಬೆಂಗಳೂರಿನ ಜೈನಗರ್ ಹಾಗೂ ಜೆಪಿನಗರದ ಕಡೆಯವರು.. ಅವರ ತಂದೆ ಐಟಿಐ ಉದ್ಯೋಗಿಯಾಗಿದ್ದರು.. ತಾಯಿ housewife.. ಅವರು ಒಟ್ಟು ನಾಲ್ಕು ಜನ ಅಣ್ಣತಮ್ಮಂದಿರು. ತುಂಬು ಸಂಸಾರ.. ನಾನು ಒಬ್ಬಳೇ ಮಗಳಾಗಿ ಬೆಳೆದೆ.. ಈ ತುಂಬು ಕುಟುಂಬಕ್ಕೆ ನಾನು ಸೇರಿದಾಗ ತುಂಬಾ enjoy ಮಾಡ್ದೆ.. 1995 ರಲ್ಲಿ ಮದುವೆಯಾದ ಮೇಲೆ 1998 ವರೆಗೂ ಕಾವ್ಯ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು.. 1998 ರಲ್ಲಿ ರಮೇಶ್ ಅವರ ಕೆಲಸದ ಅಂಗವಾಗಿ Singapore ರಿಗೆ shift ಆದ್ರೂ.. ಈಗ ಕಾವ್ಯ ಅವರಿಗೆ ಇಬ್ಬರು ಮಕ್ಕಳು.. ಮಗಳು ಶೀತಲ್, ಪ್ರಸ್ತುತ Australia ದಲ್ಲಿ Masters in Biotech ಮಾಡಿ ಅಲ್ಲಿ ಕೆಲಸವು ಮಾಡುತ್ತಿದ್ದಾರೆ.. ಹಿಂದೂಸ್ತಾನಿ ಸಂಗೀತದಲ್ಲಿ ಡಿಪ್ಲೋಮಾ ಮಾಡಿ, Singapore ನ ಪ್ರತಿಷ್ಠಿತ ತಮಿಳು ಚಾನೆಲ್ ಆದ ವಸಂತಮ್ ಅನ್ನೋ ವಾಹಿನಿಯ ನಮ್ಮIndian Idol ಕಾರ್ಯಕ್ರಮದ ಮಾದರಿಯಲ್ಲಿ ವಸಂತಂ ಸ್ಟಾರ್ಅನ್ನೋ ಒಂದು ಪ್ರೋಗ್ರಾಮ್ ನಡೆಯುತ್ತೆ.. National level Singing competition.. ಅದ್ರಲ್ಲಿ ಕಾವ್ಯ ಅವರ ಮಗಳು ಶೀತಲ್ ಎರಡನೆಯ ಸ್ಥಾನದಲ್ಲಿ ಗೆದ್ದು ವಿಜೇತರಾಗಿದ್ದಾರೆ.. ಈ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ಬಂದಿರುವ ಮೊದಲ ಕನ್ನಡತಿ ಅವರ ಮಗಳು..

ಕಾವ್ಯ ಅವರು ಮನೆಯಲ್ಲಿ ಕನ್ನಡ ಭಾಷೆ ಮಾತನಾಡುವುದರಿಂದ ಅವರ ಮಗಳಿಗೆ ತಮಿಳು ಭಾಷೆ ಬರುತ್ತಿರಲಿಲ್ಲ.ಈ ಕಾರ್ಯಕ್ರಮಕ್ಕಾಗಿ ತಮಿಳು ಭಾಷೆ ಹಾಗೂ ಅದರ ಹಾಡುಗಳನ್ನು ಕಲಿತು ಕಾರ್ಯಕ್ರಮದಲ್ಲಿ ಗೆದ್ದು ವಿಜೇತರಾದರು..

ಮಗ ಶ್ರೇಯಸ್. ಈಗ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.. ಸಿಂಗಪೂರಿನ ನಿಯಮ ಏನೆಂದರೆ ಗಂಡು ಮಕ್ಕಳಿಗೆ 18 ವರ್ಷ ತುಂಬಿದ ಮೇಲೆ NS (National Service)ಮಿಲಿಟರಿ ಸೇವೆ ಮಾಡಲೇಬೇಕು. ಇದು ಆ ದೇಶದ mandatory rules.. ಶ್ರೇಯಸ್ ಅವರು ಒಳ್ಳೆಯ ತಬಲ ವಾದಕ.. ಸಾಕಷ್ಟು stage show ಗಳನ್ನು ಕೂಡ ಕೊಟ್ಟಿದ್ದಾರೆ..

ಕಾವ್ಯ ಹಾಗೂ ರಮೇಶ್ ಅವರು ಒಂದು ದೃಢ ನಿರ್ಧಾರ ಮಾಡಿದ್ದು ಏನು ಅಂದರೆ ನಾವು ನಮ್ಮ ದೇಶಭಾಷೆಯಿಂದ ದೂರವಿದ್ದರೂ,ನಮ್ಮ ಮಕ್ಕಳಿಗೆ ಅದರ ಆಚಾರ-ವಿಚಾರ ಕಲೆ ಸಂಸ್ಕೃತಿ ಎಲ್ಲವನ್ನೂ ತಿಳಿಸಬೇಕು ಕಲಿಸಬೇಕು ಅನ್ನೋದು.. ಸಿಂಗಪೂರಿನ ವಾತಾವರಣಕ್ಕೆ ಅವರು adjust ಆಗಲೇಬೇಕು.. ಆದರೂ ನಾವು ಮನೆಯಲ್ಲಿ ಕನ್ನಡನೇ ಮಾತಾಡ್ತೀವಿ.. ಹಾಗೂ ನಮ್ಮತನವನ್ನು ಎಂದು ಬಿಡಬಾರದು.. ನಮ್ಮ ಬೇರುಗಳು ಬಿಟ್ಟು ಹೋದರೆ ಸೂತ್ರವಿಲ್ಲದ ಗಾಳಿಪಟ ವಿದ್ದಂತೆ ಎಂದು ಕಾವ್ಯ ಅವರು ಹೇಳುತ್ತಾರೆ..

ಸಿನಿಮಾ ಲೈಫ್ ನಿಂದ ನಾರ್ಮಲ್ ಲೈಫಿಗೆ ಬರಬೇಕು ಅನ್ನೋದು ಕಾವ್ಯ ಅವರ concious decision ಆಗಿತ್ತು.. ಆಡಂಬರ ಅತಿಯಾದ ಪ್ರಚಾರಗಳು ಯಾವುದು ಇಲ್ಲದೆ ಸಾದಾ ಸೀದಾ ಜೀವನವನ್ನು ನಡೆಸಬೇಕು ಎನ್ನುವುದು ಮೊದಲೇ ತೀರ್ಮಾನ ವಾಗಿದ್ದರಿಂದ ಈ ಜೀವನಕ್ಕೆ ಅಡ್ಜೆಸ್ಟ್ ಆಗೋದು ಕಷ್ಟ ಏನೂ ಆಗಲಿಲ್ಲ.. ಮದುವೆಯಾಗಿ ಒಂದು ವರ್ಷಕ್ಕೆಮಗಳು ಹುಟ್ಟುತ್ತಾರೆ.. ತಾಯಿತನ, ವೈವಾಹಿಕ ಜೀವನಹೀಗೆ ಎಲ್ಲವನ್ನೂ ಅತ್ಯಂತ ಪ್ರೀತಿಯಿಂದ ಸಂಭ್ರಮದಿಂದ ಕಾವ್ಯ ಅವರು ಸ್ವಾಗತಿಸಿದ್ದಾರೆ ಖುಷಿಪಟ್ಟಿದ್ದಾರೆ.. ಇದೆಲ್ಲಾ ಆದುದರಿಂದ ಸಿನಿಮಾಯಿಂದ ದೂರ ಆಗಿರೋ ನೋವಿಗಿಂತ ಜೀವನದ ಹೊಸ ಹೊಸ ಅನುಭವಗಳನ್ನು ಹೆಚ್ಚು ಆನಂದಿಸುತ್ತಾ ಹೋದರು.. ಕಾವ್ಯ ಅವರು ಹೇಳ್ತಾರೆ ಇದು ನನ್ನ ಜೀವನದ transition ಅಲ್ಲಾ ಇದು ನನ್ನ ಬದುಕಿನ progression.. ಸಿಂಗಪುರ್ ಗೆ ಬಂದ ಮೇಲೆ ಹೊಸ ದೇಶ, ಹೊಸ ಭಾಷೆ, ಹೊಸ ಜನ, ಹೊಸ ಸಂಬಂಧಗಳು.. ದೇಶಬಿಟ್ಟು ದೇಶಕ್ಕೆ ಬಂದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು, ಇಲ್ಲಿನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಇದು ಯಾವುದೂ ನನಗೆ ಅಷ್ಟು ಕಷ್ಟ ಅನಿಸಲಿಲ್ಲ.. ಸಿಂಗಪೂರ್ ಗೆ ಬಂದಾಗ ಕನ್ನಡದವರು ಯಾರೂ ಇಲ್ಲಿ ಪರಿಚಯವಿರಲಿಲ್ಲ.. ಅಷ್ಟಾಗಿ ಸ್ನೇಹಿತರು ಇರಲಿಲ್ಲ. ಆದರೆ ಕನ್ನಡ ಸಂಘ ಇದೆ ಅಂತ ಗೊತ್ತಾಯ್ತು.. ಕನ್ನಡ ಸಂಘಕ್ಕೆ ನಾಟಕಗಳನ್ನು ನೋಡೋಕೆ ಹೋದಾಗ ಅಲ್ಲಿ ಜನಗಳ ಪರಿಚಯವಾಯಿತು. ಅಲ್ಲಿನ ನಾಟಕಗಳಲ್ಲಿ ಅಭಿನಯಿಸಲು ಅವಕಾಶಗಳು ಸಿಕ್ಕವು.. ರಮೇಶ್ ಅವರಿಗೆ ಹಾಗೂ ಕಾವ್ಯ ಅವರಿಗೆ ಕಲೆಯ ಬಗ್ಗೆ ಇದ್ದ like-mindedness ಇಂದಾಗಿ ಅವರ ಕೆಲಸ ಕಾರ್ಯಗಳ ಒತ್ತಡಗಳ ನಡುವೆಯೂ ಕಲಾಸೇವೆ ಕನ್ನಡದ ಕೆಲಸಕ್ಕಾಗಿ ಸಮಯ ಮಾಡಿಕೊಂಡು ನಾಟಕಗಳನ್ನು ಮಾಡಲು ಪ್ರಾರಂಭಿಸಿದರು.. ಸಿಂಗಪೂರಿನ ಕನ್ನಡ ಸಂಘದ ಯಾವುದೇ ಚಟುವಟಿಕೆ ಗಳಾದರೂ ಕಾವ್ಯ ಅವರು ಬಹಳ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.. ನಾಟಕಗಳು, ಮಕ್ಕಳಿಗಾಗಿ ನೃತ್ಯ ಸಂಯೋಜನೆ ಹಾಗೂ ಒಂದು ನಾಟಕವನ್ನು ಕಾವ್ಯವನ್ನು ನಿರ್ದೇಶನ ಕೂಡ ಮಾಡಿದ್ದಾರೆ.. ಇದರ ಜೊತೆಗೆ Hindu endowment board ಅವರ ಆಶ್ರಯದಲ್ಲಿ ಗೀತ ಜಯಂತಿಯನ್ನು ಮಾಡಿ, chanting competitions cultural shows, ಇದೆಲ್ಲ ಮುಗಿದ ಮೇಲೆ ಕೊನೆಯಲ್ಲಿ 18 ಹವನ ಕುಂಡಗಳನ್ನು ಹಾಕಿ ಹೋಮವನ್ನು ಮಾಡುತ್ತಾರೆ.. 2000-3000 ಜನ ಸೇರುತ್ತಾರೆ.. ಅದರಲ್ಲಿ cultural sub- committee chairman ಆಗಿ ಕಾವ್ಯ ಅವರು ಅವರ ಸೇವೆಯನ್ನು ಸಲ್ಲಿಸಿದ್ದಾರೆ.. ಈ ಸಂದರ್ಭದಲ್ಲಿ ದಶಾವತಾರವನ್ನೂ ಆಧಾರವಾಗಿ ಇಟ್ಟುಕೊಂಡು ಒಂದು stylised script ಮಾಡಿ, sound light effect ನೊಂದಿಗೆ ರಮೇಶ್ ಅವರ ತಾಂತ್ರಿಕತೆಯ ನೆರವು ಹಾಗೂ ಸಹಾಯದೊಂದಿಗೆ, ಎಲ್ಲರ ಸಹಕಾರದೊಂದಿಗೆ ಅದ್ದೂರಿಯಾದ ಒಂದು ಕಾರ್ಯಕ್ರಮ ನೆರವೇರಿತು.. ಚಿನ್ಮಯ ಮಿಷನ್ ಅವರ ಬಾಲ್ ವಿಹರ್ ಕ್ಲಾಸ್ ಗಳನ್ನು ಕಾವ್ಯ ಅವರು ಅವರ ಮನೆಯಲ್ಲಿ ತೆಗೆದುಕೊಳ್ಳುತ್ತಾ, ಸ್ತೋತ್ರಗಳು ದೇವರ ಕಥೆಗಳನ್ನು ಎಲ್ಲಾ ಮಕ್ಕಳಿಗೆ ಕಲಿಸುವ ಕಾಯಕ ಮಾಡುತ್ತಿದ್ದಾರೆ ಕಾವ್ಯ..

ದೇಶ ಭಾಷೆಯಿಂದ ದೂರವಾದರೂ ನಮ್ಮ ನಾಡಿನ ಕೀರ್ತಿಯನ್ನು ಇತಿಹಾಸವನ್ನು ನಮ್ಮ ಭಾಷೆಯ ಕಂಪನ್ನು ಹೊರದೇಶದಲ್ಲಿ ಪಸರಿಸಿ, ಹರಡಿಸಿ, ಕನ್ನಡ ಸೇವೆಯನ್ನು ಮಾಡುತ್ತಿರುವ ಕಾವ್ಯ ಅವರ ಮುಂದಿನ ಜೀವನ ಭವ್ಯವಾಗಿ, ಸುಂದರವಾಗಿ ಇನ್ನಷ್ಟು ಕಲಾ ಸೇವೆಯೊಂದಿಗೆ ನೆರವೇರಲಿ ಎಂಬುದೇ ನಮ್ಮ ಆಶಯ..

Raghuram

Shankar Nag ಜೊತೆ ನಾಯಕಿಯಾಗಿ ಆಯ್ಕೆಯಾಗಿದ್ದರು ನನ್ನ ದುರಾದೃಷ್ಟ ನಟಿಸೋಕೆ ಆಗಲಿಲ್ಲ..

Previous article

Vinod Alwa/ Vinod Kumar ಅವರ Life Story

Next article

You may also like

Comments

Leave a reply

Your email address will not be published. Required fields are marked *

18 + two =