ನೂರೊಂದು ನೆನಪು

Kavya ಅವರಿಗೆ ಮೊದಲು ಬಣ್ಣ ಹಚ್ಚಿಸಿದ್ದು ಯಾರು ?

0
Kavya, Arathi

Kavya ಅವರು ಬಣ್ಣದ ಲೋಕಕ್ಕೆ ಬಂದಿದ್ದು ಅವರ ಶಾಲಾ ದಿನಗಳಲ್ಲಿಯೇ.. ಅವರ ಶಾಲೆಯ ಶಿಕ್ಷಕರಾದ (HNM) ಹೆಚ್ ನಿಜಗುಣ ಮೂರ್ತಿಯವರು ಕನ್ನಡ ಚಲನ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಅವರ ಮೂಲಕ ಕಾವ್ಯ ಅವರಿಗೆ ದೂರದರ್ಶನದ ಒಂದು ಧಾರಾವಾಹಿಗೆ ಬಣ್ಣ ಹಚ್ಚಲು ಒಂದು ಅವಕಾಶ ಸಿಕ್ಕಿತು. ಅದರ ಹೆಸರು “ನಮ್ಮನಮ್ಮಲ್ಲಿ”..

ನಟಿ Arathiಯವರು ಈ ಸಂಚಿಕೆಯ ನಿರ್ದೇಶಕರಾಗಿದ್ದರು. ಆ ದಾರವಾಹಿಯಲ್ಲಿ ಒಂದು ಪಾರ್ಟಿ ನಡೆಯುತ್ತೆ. ಆ ಪಾರ್ಟಿಯಲ್ಲಿ ಜೂಸ್ ಕುಡಿಯುತ್ತಾ ಹೋಗುವ ದೃಶ್ಯ (passing shot). ಈ ಸನ್ನಿವೇಶಕ್ಕಾಗಿ ಆರತಿ ಅವರ ಸಹಾಯಕರು HNM ಮೂಲಕ ಕಾವ್ಯ ಅವರು ಓದುತ್ತಿದ್ದ ಶಾಲೆಗೆ ಬಂದು, 3-4 ಜನಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಕಾವ್ಯ ಕೂಡ ಒಬ್ಬರು. ಕಾವ್ಯ ಹೇಳ್ತಾರೆ “ನಮ್ಮದು ತುಂಬ ಸಂಪ್ರದಾಯಸ್ಥ ಕುಟುಂಬ. ಸಂಜೆ 7 ರ ಒಳಗೆಲ್ಲ ಮನೆಗೆ ಸೇರಬೇಕಾಗಿತ್ತು. Shooting ಎಂದ ಮೇಲೆ ತಡ ಆಗೆ ಆಗುತ್ತೆ.. ಮಧ್ಯಾಹ್ನ ಶುರುವಾದ ಚಿತ್ರೀಕರಣ ತುಂಬ ಸಮಯ ಹಿಡಿಯಿತು. ಈ ಕಾರಣಕ್ಕಾಗಿಯೇ ನಮ್ಮ teacher ಆಗಿದ್ದ HNM ಅವರು ನಮ್ಮನ್ನ ಕ್ಷೇಮವಾಗಿ ಮನೆಗೆ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಆದ್ದರಿಂದ ನನ್ನ ತಂದೆ ತಾಯಿ ಮನೆಯಲ್ಲಿ ನೆಮ್ಮದಿಯಾಗಿ ಇರುತ್ತಿದ್ದರು.

Kavya

ತುಂಬಾ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನನಗೆ ಆರತಿಯವರು ನನ್ನ ಅಭಿನಯವನ್ನು ಗಮನಿಸಿ “ಮುಂದಿನ ಬೇರೊಂದು ಸಂಚಿಕೆಯಲ್ಲಿ ಒಂದು dialogue ಇರೋ ಪಾತ್ರ ಕೊಡ್ತೀನಿ ಮಾಡ್ತೀಯಾ?” ಅಂತ ಕೇಳಿದರು. ಆಗ ನಾನು “ಮನೆಯಲ್ಲಿ ಅಪ್ಪ ಅಮ್ಮನ ಕೇಳಿ ಹೇಳ್ತೀನಿ” ಎಂದು ಹೇಳಿ ಬಂದೆ. ನನ್ನ teacher ಬಂದು ಅಪ್ಪ ಅಮ್ಮನ ಬಳಿ “Arathi ಅವರು ಈ ತರ ಕೇಳಿದ್ದಾರೆ” ಅಂತ ಹೇಳಿದಾಗ ಮನೆಯಲ್ಲೂ ಕೂಡ ಸಂತೋಷದಿಂದ ಒಪ್ಪಿ ಕಳುಹಿಸಿದರು.” ಅಪರ್ಣ ಅವರ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡು ಮೊದಲ ಬಾರಿಗೆ ನಾನು ಬಣ್ಣ ಹಚ್ಚಿದ್ದು” ಎಂದು ಕಾವ್ಯ ನೆನಪಿಸಿ
ಕೊಳ್ಳುತ್ತಾರೆ.

“ನಾನು ತುಂಬಾ ಅದೃಷ್ಟವಂತೆ. ಸಾಕಷ್ಟು ಜನ Arathi ಅವರೊಂದಿಗೆ ಕಲಾವಿದರಾಗಿ ಪರದೆಯನ್ನು ಹಂಚಿಕೊಂಡಿದ್ದಾರೆ. ನಾನು ಅವರ ನಿರ್ದೇಶನದಲ್ಲಿ ಕಲಾವಿದೆಯಾಗಿ ಅಭಿನಯಿಸಿದೆ. ಅವರ ‘ಭಕ್ತ ಸಿರಿಯಾಳ’ ಸಿನಿಮಾದ ಒಂದೊಂದು ದೃಶ್ಯವೂ ನನ್ನ ಮನದಲ್ಲಿ ಛಾಪು ಒತ್ತಿತು. ನನ್ನ ಅಜ್ಜಿಯ ಚೌರಿಯನ್ನ ಎತ್ತಿಕೊಂಡು ಮನೆ ಹಿತ್ತಲಿನಲ್ಲಿ ‘ಭಕ್ತ ಸಿರಿಯಾಳ’ ಚಿತ್ರದ ದೃಶ್ಯಗಳನ್ನ ನಾನು enact ಮಾಡ್ತಿದ್ದಿದ್ದು ಉಂಟು.”

“ಇನ್ನು ಅರತಿಯವರ ನಿರ್ದೇಶನದ ಬಗ್ಗೆ ಹೇಳಬೇಕೆಂದರೆ ಅವರು ತುಂಬಾ calm and composed. ಅಷ್ಟು ದೊಡ್ಡ ಕಲಾವಿದೆಯಾದರೂ ಅನಗತ್ಯವಾದ ಹಮ್ಮು-ಬಿಮ್ಮು ಇರಲಿಲ್ಲ. ತೀರ ಸಾಮಾನ್ಯರಂತೆ set ನಲ್ಲಿ ಇರುತ್ತಿದ್ದರು. ಆದರೆ ನಿರ್ದೇಶನಕ್ಕೆ ಅಂತ ಬಂದಾಗ ಅವರಿಗೆ ಏನು ಬೇಕೋ ಅದನ್ನ ಕಲಾವಿದರಿಂದ ಕೆಲಸ ತೆಗೆತಿದ್ರು. ಅವರ ಮೂಲಕ ನಾನು ಬಣ್ಣದ ಲೋಕಕ್ಕೆ ಬಂದಿದ್ದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ,” ಎಂದು ಕಾವ್ಯ ಹೇಳಿದ್ದಾರೆ.

Kavya ಅವರ ಜೀವನದ ಅತ್ಯಂತ ಉತ್ತಮ ಹಾಗೂ ಶ್ರೇಷ್ಠವಾದ ದಿವಸಗಳೆಂದರೆ ಅವರ college days.. ಬೆಂಗಳೂರಿನ NMKRV college ನಲ್ಲಿ ಕಾವ್ಯ ಅವರು ಅವರ PUC ಹಾಗೂ degree ಮುಗಿಸಿದ್ದರು. ಆ ಕಾಲೇಜಿಗೆ ಸೇರಿದ್ದು ಒಂದು ರೋಚಕ ಕಥೆ.

ಬೆಂಗಳೂರಿನ Maharani’s college ಎದುರುಗಡೆ Home science college ಇದೆ. ಆ ಕಾಲೇಜಿನಲ್ಲಿ Nutrition course ಮಾಡಬೇಕು ಅನ್ನೋದು ಕಾವ್ಯ ಅವರ ಆಸೆಯಾಗಿತ್ತು. ಅವರ ತಂದೆ ತಾಯಿಗೆ ಇವರು ಒಬ್ಬಳೇ ಮಗಳಾಗಿದ್ದರಿಂದ; ಅತ್ಯಂತ ಪ್ರೀತಿ, ಹೆಚ್ಚಿನ ಕಾಳಜಿ ಇದ್ದಿದ್ರಿಂದ; ಮಗಳನ್ನ ಕಾಲೇಜಿ ಗೋಸ್ಕರ ದೂರ ಕಳಿಸಲು ಅವರ ತಂದೆಗೆ ಇಷ್ಟ ಇರಲಿಲ್ಲ. ಅವರ ಸ್ಕೂಲು ಕೂಡ ಜಯನಗರದಲ್ಲಿ ಇತ್ತು. ಈಗ ಕಾಲೇಜು ಕೂಡ ಮನೆಯ ಹತ್ತಿರವೇ ಇರುವ NMKRV COLLEGE ನಲ್ಲಿ ಓದಲಿ ಎಂದು ಅಲ್ಲಿ admission ಮಾಡಿಸಿದರು. ಕಾವ್ಯ ಅವರು ಇವಾಗ ಅದನ್ನ ಎಷ್ಟು ಖುಷಿಯಾಗಿ ಹೇಳ್ತಾರೆ ಎಂದರೆ “ನನಗೆ ಅದು Blessing in disguise ಆಯ್ತು.” ಮಗಳ ಓಡಾಟ ಕ್ಕೋಸ್ಕರ ತಂದೆ ಒಂದು ಲೂನಾ ಕೊಡಿಸಿದ್ದರು. ಲೂನ ಮೇಲೆ ಕುಳಿತು ಕಾಲೇಜ್ ಗೆ ಹೋಗಬೇಕು ಅನ್ನೋದೇ ಏನೋ ಒಂದು ಖುಷಿ, ಸಂಭ್ರಮ.
PUC ಯಲ್ಲಿ sanskrit ತೆಗೆದುಕೊಂಡು ಅಲ್ಲಿ ಜೊತೆಗಿದ್ದ ಗೆಳತಿಯರೇ degree ಕಾಲೇಜಿಗೆ ಒಟ್ಟಾಗಿ ಬಂದರು. Degree ಯಲ್ಲಿ Psycology ಆಯ್ಕೆ ಮಾಡಿಕೊಂಡರು. ಆ psychology ಟೀಚರ್ ಆದ Mala Sridhar ಅವರು ವಿದ್ಯೆ ಜೊತೆಗೆ ಮಾತನಾಡುವ ಶೈಲಿ, ನಮ್ಮನ್ನು ನಾವು carry ಮಾಡುವ ರೀತಿ, ಪದಗಳನ್ನು ಬಳಸುವ ಶೈಲಿ, ಎಲ್ಲವನ್ನು ನಮಗೆ ಹೇಳಿಕೊಟ್ಟು ತಿದ್ದಿತೀಡಿದರು. She was my mentor..

ಕಾಲೇಜಿನಲ್ಲಿ ಓದುವ ಸಮಯದಲ್ಲಿ ಕಾವ್ಯ ಅವರು ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದರು. ಒಂದು ಮಟ್ಟದ recognition ಕೂಡ ಇತ್ತು. ಆದರೆ ಎಲ್ಲೂ ಕೂಡ ನಾನು ಸಿನಿಮಾ ನಟಿ ಎಂದು ನನ್ನ ಸ್ನೇಹಿತರು ನನ್ನ treat ಮಾಡಿಲ್ಲ.. ಕೆಲವೊಮ್ಮೆ ಬಂಕ್ ಮಾಡ್ತಿದ್ವಿ. Jayanagar complex ಹೋಗ್ತಾ ಇದ್ವಿ. College ಬೇಗ ಮುಗಿಯುವುದರಿಂದ bunk ಮಾಡಿ ಸುತ್ತಬೇಕು ಅನ್ನೋದೇ ಇರ್ಲಿಲ್ಲ. Class ಮುಗಿದ ಮೇಲೆ ನಾವು ಹೋಗ್ತಾ ಇದ್ವಿ, ಸಿನಿಮಾಗಳನ್ನು ನೋಡ್ತಾ ಇದ್ವಿ. ಇದೆಲ್ಲದರ ಜೊತೆಗೆ academics ನಲ್ಲಿ ಮುಂದೆ ಇರಬೇಕು ಅನೋ responsibility ಕೂಡ ಇತ್ತು.

ಕಾಲೇಜು ಮುಗಿಸಿದ ನಂತರ ಕೆಲ ಸ್ನೇಹಿತರು ಸಂಪರ್ಕಕ್ಕೆ ಸಿಗಲಿಲ್ಲ. ಆಕಸ್ಮಿಕವಾಗಿ ನನ್ನ ಗೆಳತಿಯರೆಲ್ಲ ನನ್ನ ತಾಯಿಗೆ ಒಮ್ಮೆ ಭೇಟಿಯಾಗಿ, ಮತ್ತೆ ನಾವೆಲ್ಲರೂ reconnect ಆದ್ವಿ.. ನಾನು ಬೆಂಗಳೂರಿಗೆ ಬಂದಾಗ ಅವರ ಜೊತೆಗೆ ಓಡಾಡೋದು, ಅವರೆಲ್ಲರನ್ನು ನಾನು ನಮ್ಮ Singapore ಗೆ ಕರೆಸಿಕೊಂಡು malaysia ಹಾಗೂ ಇಲ್ಲಿನ ಅನೇಕ ಜಾಗಗಳಿಗೆ ಬೇಟಿ ಕೊಟ್ಟು ಮತ್ತೆ ನಮ್ಮ ಕಾಲೇಜು ದಿನಗಳನ್ನು relive ಮಾಡಿದ್ವಿ. ಈಗಲೂ ಕೂಡ ನನ್ನ ಎಲ್ಲಾ ಸ್ನೇಹಿತರು whatsapp ಮೂಲಕ, zoom call ಮೂಲಕ connect ಆಗೇ ಇದ್ದೀವಿ..

ಶಾಲೆಯ ದಿನಗಳಲ್ಲಿ ‘ನಮ್ಮನಮ್ಮಲ್ಲಿ’ ದಾರವಾಹಿ ಮಾಡಿದನ್ನ ಛಾಯಾಗ್ರಾಹಕ B. C. Gowri Shankar ಅವರು ನೋಡಿದ್ದರಂತೆ.. ಇವತ್ತಿಗೂ ಕಾವ್ಯ ಅವರಿಗೆ ಒಂದು ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ ಅವರ ಫೋಟೋ ವಜ್ರೇಶ್ವರಿ ಸಂಸ್ಥೆಯ ‘ಚನ್ನ’ ಅವರ ಕೈಗೆ ಹೇಗೆ ತಲುಪಿತು ಅನ್ನೋದು..?? ಹೀಗಾಗಿ ಗೌರಿಶಂಕರ್ ಅವರ ನಿರ್ದೇಶನದ Rebel Star Ambarish ಅವರ ಅಭಿನಯದ ‘ಏಳು ಸುತ್ತಿನ ಕೋಟೆ’ ಚಿತ್ರದಲ್ಲಿ ಕಾವ್ಯ ಅವರಿಗೆ ಅಂಬರೀಶ್ ಅವರ ತಂಗಿಯ ಪಾತ್ರ ದೊರಕಿತು. ಅವಕಾಶ ಏನೋ ಸಿಕ್ಕಿತು ಆದರೆ ಅಭಿನಯಿಸಲು ಒಂದು ಸಣ್ಣ ಹಿಂಜರಿಕೆ ಇತ್ತು.. ಆಗ ಸ್ವತಹ ಗೌರಿಶಂಕರ್ ಅವರು ಕಾವ್ಯ ಅವರ ಮನೆಗೆ ಬಂದು ತಂದೆ ತಾಯಿಯನ್ನು ಒಪ್ಪಿಸಿ ಚಿತ್ರದಲ್ಲಿ ನಟಿಸಲು permission ತೆಗೆದುಕೊಂಡರು. ಅವರ ತಂದೆ-ತಾಯಿ ಹಾಕಿದ ಒಂದು condition ಏನೆಂದರೆ ಸಿನಿಮಾ ಶೂಟಿಂಗ್ ಇಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು. ಆಗ ಗೌರಿಶಂಕರ್ ಅವರು ನೀವೇನೂ ಯೋಚನೆ ಮಾಡಬೇಡಿ. Holidays ಅಲ್ಲೇ shooting schedule ನ plan ಮಾಡ್ತೀನಿ ಎಂದು ಆಶ್ವಾಸನೆ ನೀಡಿದರು. ಈ ಚಿತ್ರ ಮೂರು ಜನರಿಗೂ ಪ್ರಥಮ. ನಿರ್ಮಾಪಕ ಸಾರಾ ಗೋವಿಂದು ಅವರಿಗೆ, ಛಾಯಾಗ್ರಾಹಕರಾಗಿದ್ದ ಗೌರಿಶಂಕರ್ ಅವರಿಗೆ ಇದು ನಿರ್ದೇಶನದ ಮೊದಲ ಪ್ರಯತ್ನ.

Kavya ಅವರು ಮೊಟ್ಟಮೊದಲ ಬಾರಿಗೆ ಬೆಳ್ಳಿತೆರೆಯ ಪ್ರವೇಶ.. ಎಷ್ಟು ದುಡ್ಡು ಕೇಳಬೇಕೋ?? ಹೇಗೆ ಮಾತಾಡಬೇಕೋ ?? ಯಾರು ಈ ಸಿನಿಮಾದಲ್ಲಿ ಮಾಡ್ತಾ ಇದ್ದಾರೆ?? ಹೀಗೆ ಹಲವಾರು ಪ್ರಶ್ನೆಗಳು ಅವರ ಮನದಲ್ಲಿ ಇತ್ತಂತೆ.. ಕೇಳ್ಬೋದು ಬೇಡವೋ ಅನ್ನೋ ಸಂದೇಹ.. ಅಲ್ಲಿಯವರೆಗೂ ಲಕ್ಷ್ಮಿಶ್ರೀ ಆಗಿದ್ದ ಕಾವ್ಯ ಅವರಿಗೆ ಗೌರಿಶಂಕರ್ ಅವರು ಬಂದು ಲಕ್ಷ್ಮಿ ಅನ್ನೋ ಹೆಸರಿನ ಸಾಕಷ್ಟು ಜನ ಕಲಾವಿದರಿದ್ದಾರೆ.. ನಿನ್ನ ಹೆಸರು ಬದಲಾಯಿಸ ಬಹುದಾ?? ಎಂದು ಕೇಳಿದ್ದಾರೆ.. ಕಾವ್ಯ ಅವರು ಇದನ್ನು ಒಪ್ಪಿಕೊಂಡಾಗ, ಅವರ ಮುಂದೆ ಗೌರಿಶಂಕರ್ ಎರಡು ಹೆಸರಿನ ಆಯ್ಕೆ ಕೊಟ್ರಂತೆ. ಒಂದು ಶ್ವೇತ, ಇನ್ನೊಂದು ಕಾವ್ಯ.. ಕಾವ್ಯ ಅನ್ನೋ ಹೆಸರು ಲಕ್ಷ್ಮಿಶ್ರೀ ಅವರಿಗೆ ತುಂಬಾ ಇಷ್ಟವಾಗಿದ್ದರಿಂದ ಕಾವ್ಯ ಅನ್ನೋ ಹೆಸರನ ಅವರೇ ಆಯ್ಕೆಮಾಡಿಕೊಂಡರು.

ಅಂದಿನಿಂದ ಬೆಳ್ಳಿಪರದೆಗೆ ದೃಶ್ಯಗಳ ಕಾವ್ಯವಾಗಿ ಕನ್ನಡಿಗರ ಮನಸ್ಸಿಗೆ ಅಚ್ಚೆ ಹೊಡೆದಿದ್ದಾರೆ..

ಕಾವ್ಯ ಅವರ ಚಿತ್ರರಂಗದ ಮತ್ತಷ್ಟು ಅನುಭವಗಳು ನನ್ನ ಮುಂದಿನ ಬರಹದಲ್ಲಿ…………

Raghuram

Kavya ಅವರ ಬಾಲ್ಯದ ನೆನಪು

Previous article

ನನಗೆ ಸಿಕ್ಕ Kalpana ಕೈಬರಹ

Next article

You may also like

Comments

Leave a reply

Your email address will not be published. Required fields are marked *

5 × 4 =