ಸಿನಿಮಾ ಸರಸ್ವತಿ

Kanasugara ಕಂಡ K.S.Ashwath ಕನಸುಗಾರ ಕಂಡ ಕೆ.ಎಸ್.ಅಶ್ವಥ್

0
Dr V Ravichandran

K.S.Ashwath ಅವರು ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ಕಲಾವಿದ.. ಅವರ Professional ethics ಬಗ್ಗೆ ಹೇಳೋಕೆ ಈ ಕಥೆ ನಿಮ್ಮುಂದೆ ಹೇಳ್ತಾ ಇದ್ದೀನಿ..
ಕನಸುಗಾರ Dr.V.Ravichandran ಅವರ ನಿರ್ದೇಶನದಲ್ಲಿ ‘Manedevru’ ಎಂಬ ಒಂದು ಚಿತ್ರ 1993 ರಲ್ಲಿ ತೆರೆಕಂಡಿತ್ತು.. ಈ ಚಿತ್ರದಲ್ಲಿ ನಾಯಕಿ Sudharani ಅವರ ತಂದೆಯ ಪಾತ್ರಕ್ಕೆ ಅಶ್ವತ್ಥ್ ಅವರು ಆಯ್ಕೆಯಾಗಿದ್ದರು.. 12 ದಿವಸಗಳ ಅವರ Call Sheet ನ ಪಡೆದು ಒಂದು ಮೊತ್ತವನ್ನು ಅವರ ಸಂಭಾವನೆಯಾಗಿ ನಿಗದಿ ಮಾಡಿದ್ದರು.. 12 ದಿನಗಳಲ್ಲಿ ಮುಗಿಯ ಬೇಕಾಗಿದ್ದ ಅವರ ಭಾಗದ ಚಿತ್ರೀಕರಣ ಹತ್ತು ದಿನದಲ್ಲೇ ಮುಗಿದು ಹೋಯಿತು. ಅವರ ಮಿಕ್ಕ ಸಂಭಾವನೆಯನ್ನು manager ಮೂಲಕ ಅಶ್ವಥ್ ಅವರಿಗೆ ತಲುಪಿಸುವ ವ್ಯವಸ್ಥೆ ಆಯ್ತು.. ಹಣ ಸಂದಾಯವಾಗಿ ಕೆಲಹೊತ್ತಿನ ನಂತರ ಅಶ್ವಥ್ ಅವರು Ravichandran ಅವರ ಮನೆಗೆ ಬಂದಿದ್ದಾರೆ. ಅಶ್ವಥ್ ಅವರನ್ನು ನೋಡಿ ಪ್ರೀತಿಯಿಂದ ಬರಮಾಡಿಕೊಂಡು, “ಏನ್ ಸರ್? ಊರಿಗೆ ಹೊರಟ್ರಾ?” ಅಂತ ಕೇಳಿದ್ದಾರೆ. ಆಗ ಅಶ್ವಥ್ ಅವರು, ” ಈಗ ಹೊರಟೆ. ಹೊರಡೋ ಮುಂಚೆ ನಿಮ್ಮನ್ನು ನೋಡೋಕೆ ಬಂದೆ” ಅಂತ ಅಂದ್ರಂತೆ.

Dr V Ravichandran

ಆಗ ರವಿ ಸರ್ “ಸರ್, ಮ್ಯಾನೇಜರ್ ಬಂದು ನಿಮಗೆ ಭೇಟಿ ಮಾಡಿಡ್ರಾಲ್ವಾ?” ಅಂತ ಕೇಳಿದಾಗ; “ಹೌದು, ಅದೇ ವಿಷಯವಾಗಿ ಮಾತಾಡೋಕೆ ಬಂದೆ” ಎಂದು ಹೇಳಿ, “ನಿಮ್ಮ ಚಿತ್ರಕ್ಕೆ ಎಷ್ಟು ದಿಸ ನನ್ನ call sheet ತಗೊಂಡ್ ಇದ್ರಿ?” ಅಂತ ಪ್ರಶ್ನೆ ಹಾಕಿದ್ರಂತೆ. ಆಗ ರವಿ ಸರ್ ಮನೆಯಲ್ಲಿದ್ದ ಅವರ ಸಹಾಯಕ “12 ದಿವಸ” ಅಂತ ಹೇಳಿದ್ದಾರೆ. “ಅಲ್ವಾ, ಹತ್ತೇ ದಿವಸದಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿದು ಹೋಗಿದೆ. ಆದರೂ ನೀವು 12 ದಿನಗಳಿಗೆ ನಿಗದಿಯಾಗಿದ್ದ ಸಂಭಾವನೆಯನ್ನು ಕೊಟ್ಟಿದ್ದೀರಾ.” ದಯಮಾಡಿ 2 ದಿನಗಳ ಅಧಿಕ ಸಂಭಾವನೆಯನ್ನು ವಾಪಸ್ ತಗೊಳ್ಳೋಕೆ ವಿನಂತಿ ಮಾಡಿದರು ಅಶ್ವಥ್ ಅವರು. ರವಿಚಂದ್ರನ್ ಅವರು ಎಷ್ಟೇ ಅವರನ್ನು ಒಪ್ಪಿಸಲು ಪ್ರಯತ್ನ ಪಟ್ಟರು. ಪ್ರೀತಿಯಿಂದಲೇ ನಿರಾಕರಿಸಿ ರವಿ ಸಾರ್ ನ ಒಪ್ಪಿಸಿ, ಅವರ ಮ್ಯಾನೇಜರ್ ಬಳಿ ಎರಡು ದಿನದ ಸಂಬಳವನ್ನು ವಾಪಸ್ ಮಾಡಿ, ಮೈಸೂರಿಗೆ ಹೊರಟರು ನಮ್ಮ ಚಾಮಯ್ಯ ಮೇಷ್ಟ್ರು..
ಹಾಕೋ ಬಣ್ಣದಲ್ಲಿ ಶ್ರದ್ಧೆಯನ್ನು, ನಡೆಸೋ ಜೀವನದಲ್ಲಿ ನಿಷ್ಠೆಯನ್ನು ಪಾಲಿಸಿಕೊಂಡು ಬಂದಿರುವ ಅಶ್ವಥ್ ಅವರು ಹಾಗೂ ಅವರ ಗುಣಗಳು ಇಂದಿಗೂ ನಮ್ಮೆಲ್ಲರಿಗೂ ಸ್ಪೂರ್ತಿ.. 🙏

K S Ashwath , Sudharani
Raghuram

‘Raghuveer’ Life Story ; ರಘುವೀರ್ ಜೀವನಯಾನ (CHILDHOOD)

Previous article

“Smt Pattammal Veeraswamy – ನನ್ನ ಅವರ ಮೊದಲ ಭೇಟಿ”

Next article

You may also like

Comments

Leave a reply

Your email address will not be published. Required fields are marked *

fourteen − 9 =