ನೂರೊಂದು ನೆನಪು

Gangadhar – ಸಂಸಾರದ ಸ ರಿ ಗ ಮ ದಲ್ಲಿ

1
Sharapanjara

Gangadhar  ಅವರದು ಒಂದು ಸುಂದರ ಸುಖೀ ಕುಟುಂಬ. ಗಂಗಾಧರ್,ಅವರ ಶ್ರೀಮತಿ Kausalya bai ,ಅವರ ಹಿರಿಯ ಮಗನಾದ Ganesh ಅಲಿಯಾಸ್ Ravikumar ಹಾಗೂ ಅವರ ಕಿರಿಯಮಗ Subramanya; ಇಷ್ಟೇ ಅವರ ಪ್ರಪಂಚ. ಒಂದು ಸುಂದರವಾದ ಹಕ್ಕಿಯ ಗೂಡು ಮುದ್ದು ಮರಿಗಳು ಎರಡು.

ಅವರ ಹಿರಿಯ ಮಗ ಗಣೇಶ್ ಅವರಿಗೆ ಸುಮಾರು 18 ವರ್ಷ ಆಗುವವರೆಗೂ ತಂದೆಯವರನ್ನು ‘ಅಪ್ಪಾಜಿ’ ಎಂದು ಕರೆಯುತ್ತಿದ್ದರಂತೆ. ಸ್ವಲ್ಪ Maturity ಬಂದಮೇಲೆ, ಇಡೀ ಸಂಸಾರದ ಭಾರವನ್ನು ಹೊತ್ತು ಸಾಗುತ್ತಿದ್ದ ತನ್ನ ತಂದೆ ಒಬ್ಬ ‘ಯಜಮಾನ’ ಎಂದನಿಸಿತು. ಅಂದಿನಿಂದ ಅವರು ಅವರ ಅಪ್ಪನನ್ನು “ಯಜಮಾನ್ರೆ” ಅಂತಾನೇ ಕರೀತಿದ್ರು ; ಅವರ ತಾಯಿನ ಈಗಲೂ “ಯಜಮಾನಮ್ಮ” ಅಂತ ಕರೆಯುವುದುಂಟು.

Gangadhar's Familly

ಬಹಳ ವರ್ಷಗಳ ನಂತರ Dr. Rajkumar ಅವರ ಜೊತೆ ‘ಭಕ್ತ ಪ್ರಹ್ಲಾದ’ ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ಗಂಗಾಧರ್ ಅಭಿನಯಿಸುತ್ತಿದ್ದರು. Shooting ಗಾಗಿ Madras ಗೆ ಹೋಗಿ ಬರುವುದು ಅವರ routine ಆಗಿತ್ತು. ಭಕ್ತ ಪ್ರಹ್ಲಾದ ಚಿತ್ರದ Shooting experience ಗಳು; ಪಾತ್ರದೊಳಗೆ ಅಣ್ಣಾವ್ರು ಮಾಡಿದ ಪರಕಾಯ ಪ್ರವೇಶ; ಸಂಭಾಷಣೆ,ಸಾಹಿತ್ಯ, ಸಂಗೀತ ಇವೆಲ್ಲದರ ಬಗ್ಗೆ ಮನೆಯಲ್ಲಿ ಬಂದು ಚರ್ಚಿಸುತ್ತಿದ್ದರು.

ಭಾನುವಾರ ಬಂತೆಂದರೆ ಗಂಗಾಧರ್ ಅವರ ಮನೆಯಲ್ಲಿ ವಿಶೇಷ. ಅವರೇ ತಮ್ಮ ಶ್ರೀಮತಿಗೆ ಹಾಗೂ ಮಕ್ಕಳಿಗೆ ಬಿಸಿ ಬಿಸಿ ಮಸಾಲೆ ದೋಸೆ ಮಾಡಿ ಕೊಡುವುದು ಅವರ ವಾಡಿಕೆ; ಭಕ್ತ ಪ್ರಹ್ಲಾದ ಚಿತ್ರದ ಒಂದು ಹಾಡಿನ ಬಗ್ಗೆ ಮನೆಯಲ್ಲಿ ಮಾತುಕತೆ. ಅವರ ಮಗ ಗಣೇಶ್ (ರವಿಕುಮಾರ್) ಅವರು ಲೋಕಾರೂಢಿಯಾಗಿ “ನಾನೂ ಆ ಹಾಡನ್ನ ಹಾಡ್ತಿನಿ” ಅಂತ ಹೇಳಿದ್ರು. ಆಗ ಗಂಗಾಧರ್ ಅವರು ಬಿಸಿ ಬಿಸಿ ತುಪ್ಪದ ದೋಸೆ ಮಾಡಿಕೊಟ್ಟು; ಆ ಚಿತ್ರದಲ್ಲಿ ಅಣ್ಣಾವ್ರು ಅಭಿನಯಿಸ ಬೇಕಾದರೆ, Rajkumar ಅವರ ತಂದೆಯವರು ಅವರ ದೇಹದ ಒಳಗಡೆ ಪ್ರವೇಶಿಸಿ ಇವರ ಮೂಲಕ ಅಭಿನಯಿಸಿದರು ಅನ್ಸತ್ತೆ. ಯಾಕೆಂದರೆ ನಾಟಕಗಳಲ್ಲಿ Dr. Raj ಅವರ ತಂದೆ ಹಿರಣ್ಯಕಷಪು ಪಾತ್ರ ನಿರ್ವಹಿಸುವುದರಲ್ಲಿ ನಿಸ್ಸೀಮರು..

“ಇಂಥ ದೃಶ್ಯಗಳನ್ನು ನನ್ನ ಕಣ್ಣಾರೆ ನೋಡಿದ್ದು ನನ್ನ ಪುಣ್ಯ. ಈ ಅದ್ಭುತ ಚಿತ್ರದಲ್ಲಿ ನಾನೂ ಅಭಿನಯಿಸಿರುವುದು ನನ್ನ ಅದೃಷ್ಟ,” ಎಂದು ಹೇಳಿ ಮತ್ತೆ ಹಾಡಿನ ವಿಷಯಕ್ಕೆ ಬಂದು ; “ಇಷ್ಟೆಲ್ಲಾ ಸಾಧನೆ ಮಾಡಿರುವವರ ಹಾಡನ್ನು ನೀನು ಹಾಡುತ್ತಿನಿ ಅಂತಿದ್ಯಲ್ಲ, ಹಾಡು ” ಅಂತ ಹೇಳಿದಾಗ ಅವರ ಮಗ “ಬಿಡಿ ಯಜಮಾನ್ರೆ, ಏನೋ ಹೇಳ್ದೆ, ತಪ್ಪಾಯ್ತು ” ಅಂದ್ರು. ಗಂಗಾಧರ್ ಅವರು “ಅದೆಲ್ಲ ಆಗಲ್ಲ. ಅಷ್ಟು ಸುಲಭವಾಗಿ ಹೇಳಿದ್ದೆ ಅಲ್ವಾ; ಈಗ ಹಾಡು” ಎಂದು ಹೇಳಿ ಒಂದು ಚೊಂಬಿನಲ್ಲಿ ನೀರು ಇಟ್ಟರಂತೆ. “ನೀನು ಸರಿಯಾಗಿ ಹಾಡಿದರೆ ಈ ನೀರನ್ನು ನನ್ನ ತಲೆ ಮೇಲೆ ಹಾಕೊಳ್ತೀನಿ ; ನೀನು ತಪ್ಪಾಗಿ ಹಾಡಿದರೆ ನಿನ್ನ ತಲೆಗೆ ಸುರಿತೀನಿ” ಅಂತ ಹೇಳಿದ್ದಾರೆ.

ಇಡೀ ಅಡುಗೆಮನೆಯಲ್ಲಿ pin drop silence. ಗಣೇಶ್ ಅವರು ಕಣ್ಣು ಮುಚ್ಚಿ ಹಾಡನ್ನು ಹಾಡಲು ಪ್ರಾರಂಭಿಸಿದ್ದಾರೆ. ಅವರ ತಾಯಿ, ತಮ್ಮ ಹಾಡಿನ ಭಾವವನ್ನು ಸವಿಯುತ್ತಿದ್ದಾರೆ. ಹಾಡು ಮುಗಿಯುವಷ್ಟರಲ್ಲಿ ನೀರು ಬೀಳುವ ಶಬ್ಧ ಕೇಳಿದೆ. ಕಣ್ಣು ಬಿಟ್ಟು ನೋಡಿದಾಗ ಗಣೇಶ್ ಅವರಿಗೆ ಆಶ್ಚರ್ಯ.!! ಗಂಗಾಧರ್ ಅವರು ಮುಂದೆ ಇಟ್ಟಿದ್ದ ಚೊಂಬಿನ ನೀರನ್ನು ತನ್ನ ತಲೆಯ ಮೇಲೆ ಸುರಿದು ಕೊಳ್ಳುತ್ತಿದ್ದರು. ತನ್ನ ಮಗ ಇಷ್ಟು ಅದ್ಭುತವಾಗಿ ಹಾಡುವುದನ್ನ ನೋಡಿ, ಆನಂದ ತಾಳಲಾರದೆ ಸಂತೋಷದಿಂದ ನೀರನ್ನು ತನ್ನ ಮೇಲೆ ಹಾಕಿಕೊಂಡರು.
ಮಕ್ಕಳ ವಿಚಾರದಲ್ಲಿ ಗಂಗಾಧರ್ ಅವರು ತುಂಬಾ possessive.. ಯಾವ ರೀತಿ ಬಟ್ಟೆ ಹಾಕಬೇಕು, haircut ಹೇಗಿರಬೇಕು, shoes ಯಾವುದು ತಗೋಬೇಕು ಇವೆಲ್ಲವನ್ನು ಖುದ್ದು ಸ್ವತಹ ಗಂಗಾಧರ್ ಅವರೇ ನಿರ್ಧರಿಸುತ್ತಿದ್ದರಂತೆ ..

Gangadhar in Bhaktha prahlada

ಮುಂದೆ ಎಂದೂ ಕಷ್ಟ ಬಾರದಂತೆ; ಹೆಂಡತಿ ಮಕ್ಕಳ ಭವಿಷ್ಯ ಸುಭದ್ರವಾಗಿರಬೇಕು; ನಾನು ಪಟ್ಟ ಕಷ್ಟಗಳನ್ನು ನನ್ನ ಮಕ್ಕಳು ಪಡಬಾರದು ಅನ್ನೋ ಉದ್ದೇಶದಿಂದ; ‘ವಿದ್ಯಾಭ್ಯಾಸ ಮಕ್ಕಳಿಗೆ ಅತ್ಯಂತ ಮುಖ್ಯ;’ ಎಂದು ಬಾಲ್ಯದಿಂದಲೇ ಅರಿವು ಮೂಡಿಸಿ; ಇವತ್ತು ನಾನು ಈ ವಕೀಲ ವೃತ್ತಿ ಮಾಡಲು ನನ್ನ ತಂದೆಯೇ ಕಾರಣ, ಎಂದು ಅತ್ಯಂತ ಗೌರವದಿಂದ ಹೆಮ್ಮೆಯಿಂದ ಅವರ ಮಗ ಹೇಳಿಕೊಳ್ಳುತ್ತಾರೆ.. ಇದು ಗಂಗಾಧರ್ ಅವರ ಸಂಸಾರದ ಕೆಲಸ ಸ್ವಾರಸ್ಯಕರ ವಿಷಯಗಳು..


ಈಗ ನನಗೆ ಮತ್ತೆ ಬೆಳ್ಳಿತೆರೆಯ ಒಂದು ಸತ್ಯ ಘಟನೆಯನ್ನು ನಿಮ್ಮುಂದೆ ಹೇಳಬೇಕು ಅನ್ನೋ ಆಸೆ ಆಗ್ತಾಯಿದೆ. ಅದೇನೆಂದರೆ
ಇಂಥ ಒಬ್ಬ ಕಲಾವಿದನ ಬಣ್ಣದ ಬದುಕಿನಲ್ಲಿ Puttanna Kanagal ಅನ್ನೋ ಚಿತ್ರ ಬ್ರಹ್ಮ ಒಂದು ದೊಡ್ಡ ಪವಾಡ ನೇ ಮಾಡಿದ್ದಾರೆ.. ಯಾರಿಗೂ ಗೊತ್ತಿಲ್ಲದ ತೆರೆಯ ಹಿಂದಿನ ನಗ್ನಸತ್ಯ ಈಗ ನಿಮ್ಮ ಮುಂದೆ ಬಿಚ್ಚಿಡುತ್ತಾ ಇದೀನಿ

Sharapanjara

‘Sharapanjara’ ಚಿತ್ರದ final copy ರೆಡಿಯಾಗಿದೆ.. ಪುಟ್ಟಣ್ಣ ಕಣಗಾಲ್ ಅವರು ಇಡೀ ಚಿತ್ರವನ್ನು ನೋಡಿದ್ದಾರೆ.. ಈ ಚಿತ್ರಕ್ಕೆ ಕಥೆ ಕೊಟ್ಟಿರೋದು ತ್ರಿವೇಣಿಯವರು.. ನೀವೆಲ್ಲ ಸಿನಿಮಾನ ನೋಡಿದರೆ, ನೀವು ಗಮನಿಸಿರ ಬಹುದು, Kalpana ರವರ ಪಾತ್ರದ ಹೆಸರು ‘ಕಾವೇರಿ.’ ಗಂಗಾಧರ್ ಅವರ ಪಾತ್ರದ ಹೆಸರು ‘ಸತೀಶ್.’ ಕಲ್ಪನಾ ಅವರಿಗೆ ಆ ಚಿತ್ರದಲ್ಲಿ ಮಾನಸಿಕ ಖಿನ್ನತೆ ಉಳ್ಳಂಥ ಪಾತ್ರ. Flashback ನಲ್ಲಿ ಅವರ ಮೇಲೆ ಅತ್ಯಾಚಾರ ನಡೆದಿರುತ್ತೆ. ಆ shock ನಿಂದಾಗಿ ಕಾವೇರಿ ಪಾತ್ರ ತುಂಬಾ abnormal ಲಾಗಿ behave ಮಾಡ್ತಾ ಇರತ್ತೆ . ಒಂದು ನೆರಳು ಕಾಣತ್ತೆ. ಅದನ್ನ ಕಂಡು, ಈ ಕಾವೇರಿ “ನಾನು ಇಲ್ಲೇ ಕಳ್ಕೊಂಡೆ” ಅಂತ ಕಿರುಚುತ್ತಾರೆ.. ಏನ್ ಕಳ್ಕೊಂಡ್ರು? ಹೇಗೆ ಕಳ್ಕೊಂಡ್ರು? ಯಾವಾಗ ಕಳೆದುಕೊಂಡರು? ಅನ್ನೋದಕ್ಕೆ ಸರಿಯಾದ ಸ್ಪಷ್ಟೀಕರಣ ಇಲ್ಲ. That is the mystery in that..

1975 ಅಲ್ಲಿ ಜನ ತುಂಬಾ conservative thought process ಅಲ್ಲೇ ಇದ್ರೂ.. ಅಂದಿನ ಕಾಲಘಟ್ಟಕ್ಕೆ, ನಾಯಕನ ಮನಸ್ಥಿತಿ, I mean Gangadhar ಅವರು ನಿರ್ವಹಿಸಿದ ಸತೀಶ ಅನ್ನೋ ಪಾತ್ರದ behaviour ಹೇಗೆ ಬದಲಾಗತ್ತೆ ಅಂದರೆ, “ಇಷ್ಟಪಟ್ಟು ನಾನು ಮದುವೆಯಾದ ಹೆಂಡತಿ ಶೀಲವಂತೆಯಾ?? ಈಗಾಗಲೇ ಅತ್ಯಾಚಾರಕ್ಕೆ ಒಳಗಾಗಿದ್ದು, ಆ ವಿಷಯವನ್ನು ನನ್ನಿಂದ ಮುಚ್ಚಿಟ್ಟಿದ್ದಾಳೆ,” ಅನ್ನೋದನ್ನ ತಲೆಗೆ ಹಚ್ಚಿಕೊಂಡು, ಕಾವೇರಿ ಪಾತ್ರದ ಜೊತೆಗೆ ಸತೀಶನ ಪಾತ್ರ ತುಂಬಾ indifferent ಆಗಿ behave ಮಾಡೋಕೆ ಶುರುವಾಗುತ್ತದೆ.

ಇದರಿಂದ ಕಾವೇರಿಗೆ ಇನ್ನಷ್ಟು mental trauma ಆಗಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಾಳೆ. ಈ ನಡುವೆ satish ಪಾತ್ರ ಇನ್ನೊಂದು ಹೆಣ್ಣಿನೊಂದಿಗೆ ಸರಸ ಸಲ್ಲಾಪಗಳಲ್ಲಿ ತೊಡಗುತ್ತಾರೆ. ಈ ಎಲ್ಲಾ ಅಂಶವನ್ನು ಗಮನಿಸಿದ ಪುಟ್ಟಣ್ಣನವರು “ನಾನೇ ನಿರ್ದೇಶನ ಮಾಡಿರುವುದು. ನಾನೇ ಚಿತ್ರಿಸಿರುವುದು. ಸತೀಶನ ಪಾತ್ರ ತೆರೆಯಮೇಲೆ ನೋಡ್ತಾ ಇದ್ರೆ, ಎದುರಿಗೆ ಸಿಕ್ಕಿದ್ರೆ ನನಗೆ ಎರಡು ಕಪಾಳಕ್ಕೆ ಹೊಡಿಯೋಣ ಅಂತ ಅನ್ನಿಸ್ತಾಯಿದೆ.

ಇನ್ನೂ ಬಿಡುಗಡೆಯಾಗಿ ಪ್ರೇಕ್ಷಕರೆದುರು ಬಂದಮೇಲೆ, ಗಂಗಾಧರ್ ಅವರು ನಿರ್ವಹಿಸಿರುವುದು ಬರಿ ಪಾತ್ರ ಅಂತ ಜನ ಅಂದುಕೊಳ್ಳಲ್ಲ. ಸಿನಿಮಾದ ಪಾತ್ರದಿಂದಾಗಿ ಅವರ ನಿಜಬದುಕಿನ image damage ಆಗಬಾರದು,” ಎಂದು ಯೋಚಿಸಿ, ಗಂಗಾಧರ್ ಅವರಿಗೆ phone call ಮಾಡಿ “ಒಂದು ದಿನ ನಿನ್ನ date ಬೇಕು. ಈಗ ಇರುವ ಹಾಗೆ ಚಿತ್ರ ಬಿಡುಗಡೆ ಮಾಡಿದರೆ, ನಿನ್ನ career ಗೆ ತುಂಬಾ effect ಆಗತ್ತೆ.. Public ನಿನ್ನ ಪಾತ್ರವನ್ನ ತುಂಬಾ personal ಆಗಿ connect ಆಗ್ತಾರೆ. ನಿನ್ನ ನಂಬಿ, ನಿರ್ಮಾಣ ಮಾಡಕ್ಕೆ ಬೇರೆ ನಿರ್ಮಾಪಕರು ಸಾಕಷ್ಟು ಬಂಡವಾಳ ಹೂಡಿದ್ದಾರೆ. ಅವರಿಗೆಲ್ಲ ವ್ಯಾಪಾರಕ್ಕೆ ತೊಂದರೆಯಾಗುತ್ತೆ” ಎಂಬ ಮುಂದಾಲೋಚನೆಯನ್ನು ಅರಿತು, ಗಂಗಾಧರ್ ಅವರ ಒಂದು ದಿನದ callsheet ಪಡೆದುಕೊಂಡು; 750 ಅಡಿ negative ನಲ್ಲಿ; ಬರಿ ಒಂದು ಜಾಗದಲ್ಲಿ ಗಂಗಾಧರ್ ಅವರನ್ನು ಕೂರಿಸಿ, lighting ಮಾಡಿ ಪುಟ್ಟಣ್ಣ ಅವರು ಹೇಳಿದ್ರಂತೆ, “ನಾನ್ ಏನ್ ಹೇಳ್ತೀನಿ ಅದಕ್ಕೆ reaction ಕೊಡ್ತಾ ಹೋಗು,” ಎಂದು closeup shot ನಲ್ಲಿ “ಕಾವೇರಿ ನೀತಿಗೆಟೌಳೆ, ಶೀಲಾ ಕಳೆದು ಕೊಂಡವಳೇ, ನಡತೆಗೆಟವಳೇ” ಅನ್ನೋ dialogues ನ ಇದ್ದ ಆ 750 ಅಡಿ negative ನಲ್ಲಿ shoot ಮಾಡಿ, ‘Sharapanjara’ ಸಿನಿಮಾಗೆ ಸೇರಿಸಿದ್ರು.
ಈ ಪಾತ್ರದಿಂದ ಎಲ್ಲೋ ಪೂರ್ತಿಯಾಗಿ damage ಆಗಬೇಕಾಗಿದ್ದ ಗಂಗಾಧರ್ ಅವರ image ಅನ್ನು Puttanna ಅವರು ಕಾಪಾಡಿದರು.

ಅದಕ್ಕೆ ಹೇಳೋದು ನಮ್ಮ ಸಿನಿಮಾ ಪ್ರಪಂಚದಲ್ಲಿ miracles, mistakes ಎಲ್ಲವೂ ಆಗೋದು, ನಡೆಯೋದು ಕ್ಷಣದಲ್ಲೇ ..

Gangadhar in Sharapajara
Raghuram

Upendra ಅವರ ಜೀವನದ ‘ಮರೆಯದ ದೀಪಾವಳಿ’

Previous article

Gangadhar “ಸಾಲ ಕೊಡಲ್ಲ, ಸಾಲ ತಗೊಳಲ್ಲ”

Next article

You may also like

1 Comment

  1. ತುಂಬಾ ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ… ಗಂಗಾಧರ ಅವರ ಬಗ್ಗೆ.

Leave a reply

Your email address will not be published. Required fields are marked *

eight + 11 =