ನೂರೊಂದು ನೆನಪು

‘Gangadhar’ ಕನ್ನಡ ಚಿತ್ರರಂಗ ಕಂಡ ಒಬ್ಬ ಸುರದ್ರೂಪಿ ನಾಯಕನಟ.

0
Gangadhar


Puttanna Kanagal ರವರ ಗರಡಿಯಲ್ಲಿ ಸಾಕಷ್ಟು ಪ್ರಖ್ಯಾತಿ ಪಡೆದ ಅಪ್ಪಟ ಕನ್ನಡದ ಕಲಾವಿದ. ಮೂಲತಹ ಗಂಗಾಧರ್ ಅವರ ಕುಟುಂಬ ,ಅಂದರೆ ಅವರ ತಾತ, ಮುತ್ತಾತ ಎಲ್ಲರೂ Andhra Pradeshದ Penagonda ಕಡೆಯವರು.. ಅಲ್ಲಿಂದ ನಮ್ಮ ಕರುನಾಡ Tumkur ಗೆ ವಲಸೆ ಬಂದರು. 1936 ರಲ್ಲಿ Gangadhar ಅವರ ತಂದೆ ‘Shyam Sons Readymade’ wear ಅನ್ನೋ Dress Manufacturing ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭ ಮಾಡಿದರು.

ಇವರಿಗೆ ಮದುವೆಯಾಗಿ 8 ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಆಗ ತುಮಕೂರಿನ Siddaganga ಮಠಕ್ಕೆ ಹೋಗಿ, “ನಮಗೇನಾದರೂ ಮಕ್ಕಳಾದರೆ ನಿಮ್ಮ ಹೆಸರನ್ನೇ ಇಡುತ್ತೇವೆ” ಎಂದು ಹರಕೆ ಹೊತ್ತರಂತೆ. ಸರಿಯಾಗಿ ಇವರು ಬೇಡಿಕೊಂಡ ಒಂದು ವರ್ಷದಲ್ಲಿ 7/9/1938 ರಲ್ಲಿ ಒಂದು ಗಂಡು ಮಗು ಹುಟ್ಟಿತು. ಸಿದ್ದಗಂಗಾ ಮಠದ ವರಪ್ರಸಾದವೇ ಕನ್ನಡ ಚಿತ್ರರಂಗದ ಬೆಳ್ಳಿತೆರೆಯ ಮುದ್ದಾದ ನಾಯಕನಟ ‘Sri Gangadhar’

Gangadhar

ಗಂಗಾಧರ್ ಅವರ ತಂದೆಯವರು ಕೆಲಸ ಮಾಡುತ್ತಿದ್ದ ಸಂಸ್ಥೆ ತುಮಕೂರಿನಿಂದ ಬೆಂಗಳೂರಿಗೆ ವರ್ಗಾವಣೆ ಆಯ್ತು. ಆಗ ಅವರ ಕುಟುಂಬ ಬೆಂಗಳೂರಿಗೆ ಬಂದು ನೆಲೆಸಿದರು. Cubbon Pete ಯ ಎಂಟನೇ ಗಲ್ಲಿಯಲ್ಲಿ ಬೆಳೆದು, United Mission School, J C Road ನಲ್ಲಿರುವ ಶಾಲೆಯಲ್ಲಿ ಹತ್ತನೇ ತರಗತಿಯವರೆಗೂ ವಿದ್ಯಾಭ್ಯಾಸವನ್ನು ಮುಗಿಸಿದರು. SSLC ಆದನಂತರ, ಅವರ ಆರ್ಥಿಕ ಪರಿಸ್ಥಿತಿಯಿಂದ ಹೆಚ್ಚಾಗಿ ವಿದ್ಯಾಭ್ಯಾಸ ಮುಂದುವರಿಸಲು ಆಗಲಿಲ್ಲ. ಹಾಗಾಗಿ Sheet Metal training ತರಬೇತಿಯನ್ನು ITI ನಲ್ಲಿ ಪಡೆದರು.

ಗಂಗಾಧರ್ ಅವರಿಗೆ ಸುಮಾರು 18 ವರ್ಷದ ಪ್ರಾಯದಲ್ಲಿ ಒಂದು ದೊಡ್ಡ ಆಘಾತ ಉಂಟಾಯಿತು. ಅವರು ಅವರ ತಂದೆಯನ್ನು ಕಳೆದುಕೊಳ್ಳುತ್ತಾರೆ. ಆಂಧ್ರದ ಪೆನಗೊಂಡದಲ್ಲಿ ಅವರ ತಂದೆ ಸಾವನ್ನಪ್ಪುತ್ತಾರೆ. ಇದರಿಂದ ತೀವ್ರವಾಗಿ ಮಾನಸಿಕ ಆಘಾತಕ್ಕೆ ಒಳಗೊಂಡ ಗಂಗಾಧರ್ ಅವರು ತಂದೆಯ ದೇಹವನ್ನು ನೋಡಿ “ಅಪ್ಪ!!!” ಅಂತ ಕೂಗಿದ ತಕ್ಷಣ, ಅವರ voice choke ಆಗಿ, ಅವರ ಧ್ವನಿಯನ್ನೇ ಕಳೆದುಕೊಳ್ಳುತ್ತಾರೆ.

ಇದಾದ ಕೆಲವೇ ದಿನಗಳಲ್ಲಿ ಅವರಿಗೆ ಪ್ರತಿಷ್ಠಿತ HAL ಸಂಸ್ಥೆಯಲ್ಲಿ ನೌಕರಿಗಾಗಿ ಸಂದರ್ಶನದ ಕರೆ ಬಂದಿತ್ತು. ಅಲ್ಲಿ ಸಂದರ್ಶನಕಾರರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲೂ ಇವರಿಗೆ ಧ್ವನಿ ಬರಲಿಲ್ಲ. ಅವರು ಕೇಳಿದ ಪ್ರಶ್ನೆಗಳಿಗೆ ಮಾತಿಲ್ಲದೆ ತಮ್ಮ ಅಭಿನಯದ ಮೂಲಕವೇ ಉತ್ತರಗಳನ್ನು ಕೊಡಲು ಪ್ರಯತ್ನಿಸಿದರು ಗಂಗಾಧರ್. ಬಹುಶಃ ಅವರೊಳಗಿದ್ದ ಕಲಾವಿದ ಹುಟ್ಟಿದ್ದು ಆ ಕ್ಷಣದಲ್ಲಿಯೇ ಅನ್ಸತ್ತೆ. ಇದನ್ನು ಗಮನಿಸಿದ ಒಬ್ಬ ಸಂದರ್ಶನಕಾರ, ಇವರ ಪರಿಸ್ಥಿತಿಯನ್ನು ತಿಳಿದುಕೊಂಡು, ನೋವಿಗೆ ಸ್ಪಂದಿಸಿ, HAL ಸಂಸ್ಥೆಯಲ್ಲಿ ಉದ್ಯೋಗ ಖಾತ್ರಿ ಮಾಡಿಕೊಟ್ಟರು.

Gangadhar

Nov 6 1960, ಬೆಂಗಳೂರಿನ ಕಿಲಾರಿ ರೋಡಿನಲ್ಲಿರುವ ದರ್ಜಿ ಪೇಟೆ ಹುಡುಗಿ ‘Kausalya Bai’ ಅವರೊಂದಿಗೆ ಪೆನಗೊಂಡದಲ್ಲಿ ಗಂಗಾಧರ್ ಅವರಿಗೆ ವಿವಾಹವಾಯಿತು. ಆಗ ಅವರಿಗೆ 21 ವರ್ಷ..ಈ ಮದುವೆಯ ಸಂದರ್ಭದಲ್ಲಿ ಅವರು ಅವರ ತಾಯಿಯನ್ನು ಕೂಡ ಕಳೆದುಕೊಂಡಿರುತ್ತಾರೆ. ಗಂಗಾಧರ್ ಅವರ ಶ್ರೀಮತಿಯವರ ತಂದೆ, ಇವರು ಪಡುತ್ತಿದ್ದ ಕಷ್ಟಗಳನ್ನು ನೋಡಿ “ಈ ಹುಡುಗನಿಗೆ ನಮ್ಮ ಸಹಕಾರ ಹಾಗೂ ಸಹಾಯದ ಅಗತ್ಯವಿದೆ” ಎಂದು ಅರ್ಥ ಮಾಡಿಕೊಂಡು, ಇವರೇ ಒಂದು ಬಾಡಿಗೆ ಮನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ವ್ಯವಸ್ಥೆ ಮಾಡಿಕೊಟ್ಟರು .. ತಿಂಗಳ ಸಂಬಳ 75 ರೂಪಾಯಿ ;ಮನೆ ಬಾಡಿಗೆ 12 ರೂಪಾಯಿ. ಹೀಗೆ ಇವರು ಸಂಸಾರದ ಓಂಕಾರವನ್ನು ಶುರುಮಾಡಿದರು..

ಆಗಿನ ಸಂದರ್ಭದಲ್ಲಿ ಹೆಚ್ಚಾಗಿ ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿರಲಿಲ್ಲ.. ಗಂಗಾಧರ್ ಅವರು ತಮಿಳಿನ ‘Shivaji Ganeshan, ತೆಲುಗಿನ N. T. Rama Rao ಅವರ ಬಹುದೊಡ್ಡ ಅಭಿಮಾನಿಯಾಗಿದ್ದರು. ಅವರ ಚಿತ್ರಗಳನ್ನು ನೋಡಿ ಸ್ಫೂರ್ತಿಗೊಂಡು “ನಾನು ಯಾಕೆ ಇವರ ತರ ಕಲಾವಿದನಾಗಬಾರದು? ” ಅನ್ನೋ ಆಸೆ, ಹಠ ಎರಡನ್ನು ಬೆಳಸಿಕೊಂಡರು.

Gangadhar and wife Smt Kausalya Bai

HAL ಸಂಸ್ಥೆಯಲ್ಲಿ ಸಾಕಷ್ಟು ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಗಂಗಾಧರ್ ಅವರು ಅಲ್ಲಿ ಆಯೋಜಿಸಲಾಗುತಿದ್ದ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ‘Basheer’ ಎಂಬುವ ಒಬ್ಬ ಬರಹಗಾರ ಬರೆಯುತ್ತಿದ್ದ ಸಾಕಷ್ಟು ನಾಟಕಗಳಿಗೆ ಮುಖ್ಯ ಪಾತ್ರಧಾರಿ ಗಂಗಾಧರ್ ಅವರೇ ಆಗಿರುತ್ತಿದ್ದರು.

ಒಬ್ಬ ವ್ಯಕ್ತಿಗೆ ಅದೃಷ್ಟ ಹಾಗೂ ಅವಕಾಶ ಹೇಗೆ ಬರುತ್ತೆ ಅಂತ ಹೇಳೋಕಾಗಲ್ಲ. ಒಂದು ದಿನ ಹೆಚ್.ಎ.ಎಲ್ ಅಲ್ಲಿ ನಾಟಕ ನಡೆಯುವ ಸಂದರ್ಭ. ಆ ನಾಟಕವನ್ನು ನೋಡಲು ‘ಮಾದವಯ್ಯ’ ಎನ್ನುವ ಒಬ್ಬ makeup artist ಬಂದಿದ್ದರು. ಇವರು ಮೂಲತಹ ತೆಲುಗಿನವರು. ಅಂದಿನ ಕಾಲದಲ್ಲಿ ಜನಪ್ರಿಯ ನಾಯಕ ನಟಿ ಆಗಿದ್ದ ‘ವಾಣಿಶ್ರೀ’ ಅವರ personal makeup man ಈ ‘ಮಾಧವಯ್ಯ’. ಅವರು ಇಲ್ಲಿ ಗಂಗಾಧರ್ ಅವರ ಅಭಿನಯವನ್ನು ನೋಡಿ, ‘ಲಗ್ನಪತ್ರಿಕೆ’ ಅನ್ನುವ ಒಂದು ಚಿತ್ರಕ್ಕೆ, ಇವರನ್ನು ಆಯ್ಕೆ ಮಾಡಲು ಶಿಫಾರಸ್ಸು ಮಾಡಿದರು.

ಇದೇ ‘Lagnapatrike’ ಚಿತ್ರದ ಮೂಲಕ, ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಕಲಾವಿದ ಪಾದಾರ್ಪಣೆ ಮಾಡಿದರು. ಅವರೆ ‘ಪ್ರಣಯರಾಜ ಶ್ರೀನಾಥ್’. ಈ ಚಿತ್ರಕ್ಕೆ ನಾಯಕನಟರಾಗಿದ್ದವರು ವರನಟ ‘Dr. Rajkumar. ‘ ‘ಲಗ್ನಪತ್ರಿಕೆ’ ಸಿನಿಮಾದ ಛಾಯಾಗ್ರಾಹಕರಾದ ಕೆ.ಜಾನಕಿರಾಮ್ ಅವರು ತಮ್ಮ camera ಕಣ್ಣುಗಳಿಂದ ಗಂಗಾಧರ್ ಅವರನ್ನು ನೋಡಿ, “ಎಲ್ಲೋ ಬರಬೇಕಾಗಿದ್ದ ಗಂಗಾಧರ್ ಅವರ ಅಭಿನಯದ ದೃಶ್ಯವನ್ನು ಚಿತ್ರದ ಪ್ರಾರಂಭದಲ್ಲೇ ಬಂದರೆ ಚೆನ್ನಾಗಿರುತ್ತೆ” ಎಂದು ಸೂಚಿಸಿದರು..

ಅದರಂತೆಯೇ ‘ಲಗ್ನಪತ್ರಿಕೆ’ ಚಿತ್ರದ ಪ್ರಥಮ ದೃಶ್ಯದಲ್ಲಿ ಗಂಗಾಧರ್ ಅವರು
ಸಾಕ್ಷಾತ್ ಗಂಗಾಧರನ ಅವತಾರದಲ್ಲೇ, I mean ಶಿವನ ಪಾತ್ರದಲ್ಲೆ ಬೆಳ್ಳಿತೆರೆಯ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾದರು…

Kannada film actor Gangadhar
Raghuram

Taj Mahal, ಅಪ್ಪ ಅಮ್ಮನೊಂದಿಗೆ ನನ್ನ First ಪ್ರವಾಸ

Previous article

Dr.Vishnuvardhan ‘ಹಾಲುಂಡ ತವರು’ ಚಿತ್ರೀಕರಣದಲ್ಲಿಏನ್ ಮಾಡದ್ರು..??

Next article

You may also like

Comments

Leave a reply

Your email address will not be published. Required fields are marked *

10 + 8 =