ನೂರೊಂದು ನೆನಪು

Gangadhar ಅವರು ‘ಗೆಜ್ಜೆಪೂಜೆ’ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿದ್ದು ಹೇಗೆ..??

0

12/9/1968, Gangadhar ಅವರ ಜೀವನದಲ್ಲಿ ಒಂದು ಮಹತ್ವವಾದ ದಿನ. ಅಂದಿನ ಕಾಲದ ಶ್ರೇಷ್ಠ ನಿರ್ದೇಶಕ ‘G. V. Iyer’ ಕಡೆಯಿಂದ, “ನಾನು ನಿರ್ಮಾಣ ಹಾಗೂ ನಿರ್ದೇಶನ ಮಾಡುತ್ತಿರುವ ಮೂರು ಚಿತ್ರಗಳಿಗೆ ನಿಮ್ಮನ್ನು ನಾಯಕ ನಟನಾಗಿ ಆಯ್ಕೆ ಮಾಡಿದ್ದೇನೆ. ನೀವು ನಟಿಸಲು ಒಪ್ಪುತ್ತೀರಾ? ನಿಮಗೆ ಮದರಾಸಿಗೆ ಬರಲು ಆಗುತ್ತಾ??”.

ಮಧ್ಯಾಹ್ನ 12:00 ಗಂಟೆಗೆ ಸರಿಯಾಗಿ ಗಂಗಾಧರ್ ಅವರಿಗೆ ಈ ಪತ್ರ ಬಂದು ತಲುಪಿದೆ.. ಅದೇ ದಿವಸ, ಅದೇ ಸಮಯಕ್ಕೆ ಮತ್ತೊಂದು ಸಂತೋಷಕರ ಘಟನೆ ನಡೆದಿದ್ದು, ಇವರ ಮದುವೆಯಾಗಿ 8 ವರ್ಷಗಳ ನಂತರ ಒಂದು ಗಂಡು ಮಗು ಜನಿಸಿತು. ಆ ಮಗುವಿಗೆ ‘Ganesh’ ಅಲಿಯಾಸ್ ‘Ravikumar’ ಎಂದು ಹೆಸರಿಟ್ಟಿದ್ದಾರೆ..

ಮಗು ಹುಟ್ಟಿದ ಘಳಿಗೆ; ತಂದೆಗೆ ಚಂದನ ವನಕ್ಕೆ ಪೂರ್ಣ ನಾಯಕ ನಟನಾಗಿ ಅವಕಾಶವನ್ನು ಕಲ್ಪಿಸಿಯೇ; ತಾಯಿಯ ಒಡಲಿನಿಂದ ಭೂತಾಯಿಯ ಮಡಿಲಿಗೆ ಬಂದಿದೆ. ‘ಜೀ. ವೀ. ಐಯೆರ್’ ರವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಗಂಗಾಧರ್ ಅವರು ಪೂರ್ಣ ಪ್ರಮಾಣದ ನಾಯಕ ನಟರಾಗಿ ನಟಿಸಿದ ಮೊದಲನೇ ಚಿತ್ರವೇ ‘ಚೌಕದ ದೀಪ.’ ಈ ಚಿತ್ರಕ್ಕೆ ಗಂಗಾಧರ್ ಅವರ ಹೆಸರನ್ನು ರಾಜೇಂದ್ರಕುಮಾರ್ ಎಂದು ಬದಲಿಸಲಾಗಿತ್ತು.. ಈ ಚಿತ್ರ, ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ ಗಂಗಾಧರ್ ಅವರ ಬಗ್ಗೆ, ಅವರ ನಟನೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಗು ಹುಟ್ಟಿದ ಘಳಿಗೆ; ತಂದೆಗೆ ಚಂದನ ವನಕ್ಕೆ ಪೂರ್ಣ ನಾಯಕ ನಟನಾಗಿ ಅವಕಾಶವನ್ನು ಕಲ್ಪಿಸಿಯೇ; ತಾಯಿಯ ಒಡಲಿನಿಂದ ಭೂತಾಯಿಯ ಮಡಿಲಿಗೆ ಬಂದಿದೆ. ‘ಜೀ. ವೀ. ಐಯೆರ್’ ರವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಗಂಗಾಧರ್ ಅವರು ಪೂರ್ಣ ಪ್ರಮಾಣದ ನಾಯಕ ನಟರಾಗಿ ನಟಿಸಿದ ಮೊದಲನೇ ಚಿತ್ರವೇ ‘ಚೌಕದ ದೀಪ.’ ಈ ಚಿತ್ರಕ್ಕೆ ಗಂಗಾಧರ್ ಅವರ ಹೆಸರನ್ನು ರಾಜೇಂದ್ರಕುಮಾರ್ ಎಂದು ಬದಲಿಸಲಾಗಿತ್ತು.. ಈ ಚಿತ್ರ, ಗಲ್ಲಾ ಪೆಟ್ಟಿಗೆಯಲ್ಲಿ ಅಷ್ಟಾಗಿ ಯಶಸ್ಸು ಕಾಣದಿದ್ದರೂ ಗಂಗಾಧರ್ ಅವರ ಬಗ್ಗೆ, ಅವರ ನಟನೆಯ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇದಾದ ಕೆಲವು ದಿನಗಳಲ್ಲಿ ನಟ Shivaram ಅವರು ಅವರ ಸಹೋದರ ರಾಮನಾಥ್ ಅವರೊಂದಿಗೆ ಸೇರಿ, ಚಿತ್ರ ನಿರ್ಮಾಣಕ್ಕೆ ಕೈ ಹಾಕ್ತಾರೆ.. ಆ ಚಿತ್ರವೇ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ ಚಿತ್ರ ‘Gejje Pooje’. Puttana Kanagal ಅವರ ನಿರ್ದೇಶನ; Kalpana ಅವರು ನಾಯಕಿಯಾಗಿ ಆಯ್ಕೆ ಆಗುತ್ತಾರೆ. ಈ ಚಿತ್ರದ ನಾಯಕನ ಪಾತ್ರಕ್ಕೆ “ಯಾರನ್ನ ಆಯ್ಕೆ ಮಾಡಬಹುದು?” ಎಂದು ಚರ್ಚಿಸ ಬೇಕಾದರೆ, ಮೊದಲು ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆದವರು ಸ್ವತಹ ನಿರ್ಮಾಪಕರೂ ಆದ ಶಿವರಾಮ ಅವರು..

ಪುಟ್ಟಣ್ಣ ಅವರು ಸೃಷ್ಟಿಸಿದ ಪಾತ್ರದ ಆಳ, ಕಲ್ಪನಾ ಅವರ ಮುಂದೆ ನಿಂತು ಅಭಿನಯಿಸಬೇಕಾದ ಚಾಕು ಚಕ್ಯತೆ, ಜೊತೆಗೆ ನಿರ್ಮಾಣದ ಜವಾಬ್ದಾರಿ ಬೇರೆ.. ಇವೆಲ್ಲವನ್ನು ಹೆಗಲಮೇಲೆ ಹೊರೋದು ಕಷ್ಟ ಎಂದು ನಿರ್ಧರಿಸಿ, ‘ಲಗ್ನ ಪತ್ರಿಕೆ’ ಚಿತ್ರದಲ್ಲಿ ಗಂಗಾಧರ್ ಅವರು ಮಾಡಿದ ಪಾತ್ರ ಶಿವರಾಮ್ ಅವರಿಗೆ ನೆನಪಾಗುತ್ತೆ.. ಶಿವರಾಮ್ ಅವರು ಕೂಡ ‘ಲಗ್ನಪತ್ರಿಕೆ’ ಸಿನಿಮಾದಲ್ಲಿ ನಟಿಸಿದ್ದರು.. ಗಂಗಾಧರ್ ಅವರನ್ನ ಪುಟ್ಟಣ್ಣ ಅವರ ಮುಂದೆ ಕರೆದು ನಿಲ್ಲಿಸಿ, “ಇವರು ‘Gejje Pooje’ ಚಿತ್ರಕ್ಕೆ ನಾಯಕನಾದರೆ ಸೂಕ್ತ” ಎಂದು ವಿನಂತಿ ಮಾಡಿ ಕೊಂಡರಂತೆ.

Kalpana

‘ಚೌಕದ ದೀಪ’ ಚಿತ್ರದ ಮೂಲಕ ಬೆಳ್ಳಿ ಪರದೆಗೆ ರಾಜೇಂದ್ರಕುಮಾರ್ ಆಗಿ ಪರಿಚಯವಾಗಿದ್ದ ಇವರು ‘ಗೆಜ್ಜೆಪೂಜೆ’ ಚಿತ್ರಕ್ಕೆ ತಮ್ಮ ಮೂಲ ಹೆಸರು ‘ಗಂಗಾಧರ್’ ಆಗಿಯೇ ಮತ್ತೊಮ್ಮೆ ಚಿತ್ರ ಜಗತ್ತಿಗೆ ಮರು ಪರಿಚಯವಾದರು..

ಚಿತ್ರೀಕರಣ ವಾಗಿ ‘ಗೆಜ್ಜೆಪೂಜೆ’ ಬಿಡುಗಡೆಯಾದ ಮೇಲೆ ಇದು ಸೃಷ್ಟಿಸಿದ್ದೆಲ್ಲ ಬರೀ ಇತಿಹಾಸನೇ.. ‘ಗೆಜ್ಜೆಪೂಜೆ’ impact ಹೇಗಿತ್ತು ಎಂದರೆ, ಸಿನಿಮಾ ಬಿಡುಗಡೆಯಾಗಿ ಸುಮಾರು ಹದಿನಾಲ್ಕು ಹದಿನೈದು ವರ್ಷಗಳಾದ ಮೇಲೆ ಬೆಂಗಳೂರಿನ ‘ಸಂಜಯ’ ಚಿತ್ರಮಂದಿರದಲ್ಲಿ, ಪುಟ್ಟಣ್ಣ ಕಣಗಾಲ್ ಅವರ ಕೆಲವು ಚಿತ್ರಗಳ screening ವ್ಯವಸ್ಥೆ ಮಾಡಲಾಗಿತ್ತಂತೆ. ಆ ಪಟ್ಟಿಯಲ್ಲಿ ‘ಗೆಜ್ಜೆಪೂಜೆ’ ಚಿತ್ರ ಕೂಡ ಇತ್ತು.

ಗಂಗಾಧರ್ ಅವರು ಅವರ ಮಗ ಗಣೇಶ ನೊಂದಿಗೆ ಪುಟ್ಟಣ್ಣ ಕಣಗಾಲ್ ಅವರ ಆಹ್ವಾನದ ಮೇಲೆ ‘ಸಂಜೆಯ’ ಚಿತ್ರಮಂದಿರಕ್ಕೆ ಹೋದಾಗ, ಅಲ್ಲಿ ಬಂದಿದ್ದ ಸಾಕಷ್ಟು ಜನ ಹೆಣ್ಣು ಮಕ್ಕಳು ಗಂಗಾಧರ್ ಅವರನ್ನ ದಿಟ್ಟಿಸಿ ನೋಡುತ್ತಿದ್ದರಂತೆ. ಅದನ್ನು ಗಮನಿಸಿದ ಅವರು, ಅವರ ಮಗ ಗಣೇಶನಿಗೆ “ನೋಡು, ನೋಡು!! ಈ ಹೆಣ್ಣು ಮಕ್ಕಳು ನನ್ನ ಬಳಿ ಬಂದು ನನಗೆ ಬೈತಾರೆ!!” ಎಂದು ಹೇಳಿದ್ದರಂತೆ. ಇದರ ಅರ್ಥ ಪ್ರೇಕ್ಷಕರಿಗೆ ಗಂಗಾಧರ್ ಅವರ ಪಾತ್ರ ಮನದಲ್ಲಿ ಛಾಪು ಒತ್ತಿತ್ತು.. ಹಾಗೆ ಪುಟ್ಟಣ್ಣ ಅವರು ಅಷ್ಟೇ ಅದ್ಭುತವಾಗಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದರು..

ಇದಾದ ನಂತರ ಗಂಗಾಧರ್ ಅವರು ಹಿಂತಿರುಗಿ ನೋಡಲೇ ಇಲ್ಲ.. ‘ಸೀತಾ’, ‘ಜೀವನ ಜೋಕಾಲಿ’, ‘ಬಾಂಧವ್ಯ’, ‘ಅಳಿಯ-ಗೆಳೆಯ’, ಹೀಗೆ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ಕೊಡಲು ಪ್ರಾರಂಭಿಸಿದರು. ಅವರ ಚಿತ್ರಗಳು ಯಾವ ಮಟ್ಟಕ್ಕೆ ಬಿಡುಗಡೆಯಾಗುತ್ತಿತ್ತು ಎಂದರೆ ಗಂಗಾಧರ್ ಅವರ ಚಿತ್ರಗಳಿಗೆ ಗಂಗಾಧರ್ ಅವರ ಮತ್ತೊಂದು ಚಿತ್ರವೇ ಪೈಪೋಟಿ ಆಗುತ್ತಿತ್ತು..

1971, ಗಂಗಾಧರ್ ಎಂಬ ಒಬ್ಬ ಅದ್ಭುತ ಕಲಾವಿದರನ್ನ Star ನಟನಾಗಿ ಮಾಡಿದ ವರ್ಷ.. ಪುಟ್ಟಣ್ಣ ಕಣಗಾಲ್ ಅವರ ಮತ್ತೊಂದು ಅದ್ಭುತ ಕಲಾಕೃತಿ ‘ಶರಪಂಜರ’ ಬಿಡುಗಡೆಯಾದ ವರ್ಷ.. ‘ಶರಪಂಜರ’ ಚಿತ್ರದ ಚಿತ್ರೀಕರಣದಲ್ಲಿ ಏನಾಯ್ತು?? ಆಗಲೇ ಪುಟ್ಟಣ್ಣ ಕಣಗಾಲ್ ‘ಶರಪಂಜರ’ ಚಿತ್ರದ ಅನುಭವಗಳೇನು?? Climax ಅಲ್ಲಿ ಏನೂ ತಪ್ಪಾಯಿತು..?? ಎಲ್ಲಾ ಮುಂದಿನ ಬರಹದಲ್ಲಿ….

Raghuram

Dr.Vishnuvardhan ‘ಹಾಲುಂಡ ತವರು’ ಚಿತ್ರೀಕರಣದಲ್ಲಿಏನ್ ಮಾಡದ್ರು..??

Previous article

Gangadhar Star ನಟ ಆಗಿದ್ದು ಹೇಗೆ?

Next article

You may also like

Comments

Leave a reply

Your email address will not be published. Required fields are marked *

sixteen − fifteen =