ಸಿನಿಮಾ ಸರಸ್ವತಿ

Dr.Vishnuvardhan ‘ಹಾಲುಂಡ ತವರು’ ಚಿತ್ರೀಕರಣದಲ್ಲಿಏನ್ ಮಾಡದ್ರು..??

0

ನಿರ್ದೇಶಕ D Rajendra Babu ಹಾಗೂ ಅಭಿನಯ ಭಾರ್ಗವ Dr. Vishnuvardhan ಅವರ combination ಅಲ್ಲಿ ಮೂಡಿ ಬಂದಂತ super hit ಚಿತ್ರ ‘Haalunda Tavaru ‘..

ಪ್ರತಿಯೊಬ್ಬ ನಿರ್ದೇಶಕರಿಗೂ ತನ್ನದೇ ಆದಂತಹ ಪರಿಕಲ್ಪನೆ. ಚಿತ್ರದ ಕಥೆಯನ್ನ, ಪಾತ್ರಗಳನ್ನ ತನ್ನೊಳಗೆ ಸೇವಿಸಿಕೊಂಡು, ಬೆಳ್ಳಿ ಪರದೆಗೂ ಮುನ್ನ, ತನ್ನ ಕಣ್ಣುಗಳ camera ದೊಳಗೆ ಇಡೀ ಚಿತ್ರವನ್ನು ಮೊದಲು ನೋಡುವುದು ಸಿನಿಮಾ ನಿರ್ದೇಶಕ.. ಆತನ ಕನಸಿಗೆ ರೆಕ್ಕೆಗಳಾಗಿ, ಬೆಂಬಲವಾಗಿ ಜೊತೆಯಾಗೋದು ಕಲಾವಿದರು ಹಾಗೂ ತಂತ್ರಜ್ಞರು..

ಸಾಹಸ ಸಿಂಹ ಡಾ||ವಿಷ್ಣುವರ್ಧನ್ ಅವರ ಬಗ್ಗೆ ಕೆಲಸದಲ್ಲಿರುವ ಅವರ commitmentನ ಬಗ್ಗೆ ನಿಮಗೆ ಒಂದು ಸತ್ಯ ಘಟನೆ ಹೇಳೋಕೆ ಇಷ್ಟ ಪಡ್ತೀನಿ.

Director D.Rajendra Babu

“Haalunda Tavaru” ಚಿತ್ರ. ಆ ಚಿತ್ರದ ಒಂದು ಸನ್ನಿವೇಶಕ್ಕೆ ನಂದಿ ಬೆಟ್ಟದ ಮೇಲೆ, ಬೆಳಗಿನ ಜಾವ 6-6:15 ಗೆ, ಸೂರ್ಯ ಉದಯಿಸುವ ಸಮಯಕ್ಕೆ, ಆ backdrop ನಲ್ಲಿ Dr. Vishnuvardhan ಅವರ ಕೆಲವು ಭಾಗದ ದೃಶ್ಯಗಳನ್ನು ಚಿತ್ರೀಕರಿಸಬೇಕು ಅನ್ನೋದು ನಿರ್ದೇಶಕ ದ Rajendra Babu ಅವರ ಆಸೆಯಾಗಿತ್ತು.. ವಿಷ್ಣು ಸರ್ ಬಳಿ ಹೋಗಿ “ಸರ್!! ನಾಳೆ ಬೆಳಗ್ಗೆ Early morning sunrise shot ತೆಗೆಯಬೇಕು.
“6-6.15 ಗೆ ವಿಥ್ makeup ಬರಬಹುದಾ ಸರ್?? ಆಗತ್ತಾ..??” ಅಂತ ಕೇಳಿದರು. ನಿರ್ದೇಶಕನ ಪರಿಕಲ್ಪನೆಗೆ ನಮ್ಮ ಸಾಹಸ ಸಿಂಹ ಸ್ಪಂದಿಸುವುದು ವಾಡಿಕೆ ಆಗಿತ್ತು.. “ಆಯ್ತು ಬಾಬು ಬರ್ತೀನಿ”, ಅಂತ ವಿಷ್ಣು ಸರ್ ಹೇಳಿದ್ರು..

ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು; makeup ಹಾಗು costume ನ ಮನೆಯಲ್ಲೇ ಹಾಕಿಕೊಂಡು; 4:30 ಸುಮಾರಿಗೆ ಜಯನಗರದ ಅವರ ಮನೆಯಿಂದ ವಿಷ್ಣು ಸರ್ ಹೊರಟರು.. ಸುಮಾರು 5:30-5:40 ಸಮಯ.
ಸೂರ್ಯ ಭೂತಾಯಿಯನ್ನು ಇನ್ನು ಚುಂಬಿಸಿಲ್ಲ. ಚಂದ್ರ ಬಾನಿನಿಂದ ಇನ್ನೂ ದೂರವಾಗಿಲ್ಲ.. ತುಸು ಕತ್ತಲು.. ಸ್ವಲ್ಪ ಮಂಜು.. ಈ ಎಲ್ಲ ಮಿಶ್ರಣಗಳ ಹವಾಮಾನ..
ವಿಷ್ಣು ಸರ್ ಬೇಗ ಬರ್ತಾರೆ, first shot ತೆಗೆಯಬೇಕು ಅನ್ನೋ ತವಕದಲ್ಲಿ, ಇಡೀ ತಂಡ ಬೆಟ್ಟದ ಮೇಲೆ ಹೋಗಿ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡುತ್ತಿದ್ದರು

ನಂದಿಬೆಟ್ಟದ ಪ್ರಾರಂಭದಲ್ಲೇ ವಿಷ್ಣು ಸರ್ ಪ್ರಯಾಣಿಸುತ್ತಿದ್ದ car ನಿಂತೋಯ್ತು.. ಎಷ್ಟೇ ಪ್ರಯತ್ನ ಪಟ್ಟರು Car start ಆಗ್ತಿಲ್ಲ.. ಸಮಯ ಓಡ್ತಾ ಇದೆ.. Early morning ಆಗಿರೋದ್ರಿಂದ tourist ಗಳು ಹೆಚ್ಚಾಗಿ ಓಡಾಡುತ್ತಿಲ್ಲ.. Film unit ಬೆಟ್ಟದ ಮೇಲಿದೆ.. ಅಲ್ಲಿ mobile ಗಳ ಸಂಪರ್ಕ ಕೂಡ ಇಲ್ಲ.. Car driver ಗೆ repair ಮಾಡಿಸಿಕೊಂಡು ಬಾ ಅಂತ ಹೇಳಿ, ಅವರ ಮೇಕಪ್ ಸಹಾಯಕನೊಂದಿಗೆ ನಂದಿ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಲು ಶುರು ಮಾಡಿದರು..

Exactly 6:10-6:15 ಒಳಗಡೆ with makeup ಅಂಡ್ costume ನಲ್ಲಿ ಸಿದ್ದರಾಗಿ ನಿರ್ದೇಶಕ ಕನಸು ಕಂಡಂತೆ camera ಮುಂದೆ ಬಂದು ನಿಂತರು.. ‘ಏಳು ಶಿವ ಏಳು ಶಿವ, ಬಾಳ ಬಂಡಿ ಹೂಡು ಶಿವ; ಹೇ ಪ್ರಭಾತ ನಿನಗೆ ಸುಪ್ರಭಾತ ‘ ಎಂದು ಸೂರ್ಯನಿಗೆ good morning ಅಂತ ಹೇಳಿದರು ಈ ಕರುಣಾಮಯಿ.

ಶ್ರದ್ಧೆ, ಸಮಯಪ್ರಜ್ಞೆ, ಸಂಯಮ, ಶಿಸ್ತು.. ಇವೆಲ್ಲದರ ಅರ್ಥ ಹಾಗೂ ಗುರುತೆ ಸಾಹಸಸಿಂಹ Dr. Vishnuvardhan – A Director’s Actor🙏

Vishnuvardhan in 'Haalunda Tavaru'
Raghuram

‘Gangadhar’ ಕನ್ನಡ ಚಿತ್ರರಂಗ ಕಂಡ ಒಬ್ಬ ಸುರದ್ರೂಪಿ ನಾಯಕನಟ.

Previous article

Gangadhar ಅವರು ‘ಗೆಜ್ಜೆಪೂಜೆ’ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಆಗಿದ್ದು ಹೇಗೆ..??

Next article

You may also like

Comments

Leave a reply

Your email address will not be published. Required fields are marked *

thirteen − 12 =