ಸಿನಿಮಾ ಸರಸ್ವತಿ

“Dr. Rajkumar ಅವರ ಮುಗ್ಧತೆಯ ಹೂ ಮನಸ್ಸು”

0

ಇತಿಹಾಸ ರಾಮಾಯಣದಲ್ಲಿ ಇರೋದು ರಾಮ ಲಕ್ಷ್ಮಣ ಹಾಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಅಣ್ಣತಮ್ಮ ಅಂದರೆ ನೆನಪಾಗುವುದು Dr. Rajkumar ಹಾಗೂ Sri. Varadappa ನವರು ..

“ಅಣ್ಣನ ಏಳಿಗೆಗಾಗಿ ತಮ್ಮನ ಶ್ರಮ. ತಮ್ಮನ ಸಂಸಾರವನ್ನು ಕಾಯೋದು ಈ ಅಣ್ಣನ ಧರ್ಮ..”

Dr. Rajkumar ಅವರು ಅಭಿನಯಿಸುತ್ತಿದ್ದ ಎಲ್ಲಾ ಚಿತ್ರಗಳಿಗೂ ಸ್ತ್ರೀಶಕ್ತಿ Parvathamma Rajkumar ನವರು , ಸರಸ್ವತಿ ಶಕ್ತಿ Chi. Uday Shankar ಅವರು. ಇವೆಲ್ಲದರ ಜೊತೆಗೆ ಮತ್ತೊಂದು ದೊಡ್ಡ ಶಕ್ತಿ Sri. Varadappa ನವರು.

ಅಣ್ಣಾವ್ರು ಅಭಿನಯಿಸುತ್ತಿದ್ದ ಚಿತ್ರಕ್ಕೆ ಕಥೆ, ಚಿತ್ರಕಥೆ, ಪಾತ್ರ, ಅದರ ಗಾತ್ರ, ಆಳ-ವಿಸ್ತಾರ ಇವೆಲ್ಲವನ್ನು ತೀರ ಗಮನದಲ್ಲಿ ಇಟ್ಟುಕೊಂಡು ನೋಡುತ್ತಿದ್ದು ಶ್ರೀ ವರದಪ್ಪನವರು.

Dr. Rajkumar, Varadappa

ಈ ಅಣ್ಣ-ತಮ್ಮಂದಿರ ಬಗ್ಗೆ ಒಂದು ಚಿಕ್ಕ ಕಥೆ ಹೇಳ್ತೀನಿ..

ಇಬ್ಬರೂ ಬೆಂಗಳೂರಿನಿಂದ ಮೈಸೂರಿಗೆ ambassador car ನಲ್ಲಿ ಹೊರಟಿದ್ದಾರೆ.. ಮಧ್ಯದಲ್ಲಿ ಎಳನೀರು ಕುಡಿಯೋದಕ್ಕೆ car ನಿಲ್ಲಿಸಿದ್ದಾರೆ.. ಈ ಸಂದರ್ಭದಲ್ಲಿ ಅಣ್ಣಾವ್ರನ್ನ ಗುರುತು ಹಿಡಿದು ಒಬ್ಬ ಅಭಿಮಾನಿ ಬಂದು, “ಅಣ್ಣ ನನ್ನ ಮಗಳಿಗೆ ಮದುವೆ ನಿಶ್ಚಯವಾಗಿದೆ. ದಯವಿಟ್ಟು ಆಶೀರ್ವಾದ ಮಾಡಿ. ನಿಮ್ಮ ಕೈಲಾದ ಸಹಾಯ ಮಾಡಿ,” ಎಂದು ಕೇಳಿಕೊಂಡಿದ್ದಾರೆ.

ಆ ತಕ್ಷಣ ಅಣ್ಣಾವ್ರು ಲಗ್ನಪತ್ರಿಕೆಯನ್ನು ತೆಗೆದುಕೊಂಡು ಮನತುಂಬಿ ಆಶೀರ್ವದಿಸಿ ತಮ್ಮ ವರದಪ್ಪ ನವರಿಗೆ, ಆ ಅಭಿಮಾನಿಗೆ ಹಣಕಾಸಿನ ಸಹಾಯ ಮಾಡುವುದಕ್ಕೆ ಸೂಚಿಸಿದ್ದಾರೆ. ವರದಣ್ಣ ಅವರಿಗೆ ಒಂದಿಷ್ಟು ಹಣವನ್ನು ಕೊಟ್ಟು ಆಶೀರ್ವದಿಸಿ ಕಳಿಸಿದ್ದಾರೆ.

ಕಾರಿನ ಪ್ರಯಾಣ ಮತ್ತೆ ಪ್ರಾರಂಭವಾಗಿದೆ. ಮೈಸೂರಿಗೆ ಹೋಗಿ ತಲುಪಿದೆ. ಊಟ ಮಾಡಿ ವಿಶ್ರಾಂತಿ ತೆಗೆದುಕೊಂಡು ಸಂಜೆ coffee ಯ ಸಮಯವಾದರೂ ಅಣ್ಣಾವ್ರು ತಮ್ಮ Varadappaನ ಬಳಿ ಮಾತನಾಡುತ್ತಿಲ್ಲ. ಮೌನವಾಗಿಯೇ ಇದ್ದಾರೆ.. ಇದನ್ನು ಸೂಕ್ಷ್ಮವಾಗಿ ಗಮನಿಸಿದ ವರದಪ್ಪನವರು “ಯಾಕಪ್ಪ ನಂಜೊತೆ ಮಾತಾಡುತ್ತಿಲ್ಲ.?? ಎಂದು ಬಹಳ ವಿನಮ್ರತೆಯಿಂದ ಕೇಳಿದ್ದಾರೆ.

 

 

Dr. Rajkumar, Varadappa

ಹಸುಗೂಸಿನ ಮನಸ್ಸಿನ ಅಪ್ಪಾಜಿ, ಅವರ ತಮ್ಮನ ಬಳಿ ಸ್ವಲ್ಪ ಕೋಪ, ಜಾಸ್ತಿ ಪ್ರೀತಿಯಿಂದಲೇ ಕೇಳಿದ್ದಾರೆ, “ಆ ಅಭಿಮಾನಿಗೆ ಮದುವೆಯ ಕಾರ್ಯಕ್ರಮಕ್ಕೆ ದುಡ್ಡು ಕೊಡಲು ಹೇಳಿದ್ದೆ ಅಲ್ವಾ.? ಎಷ್ಟು ಕೊಟ್ಟೆ??” ಅಂತ ಕೇಳಿದ್ದಾರೆ.. ಆಗ ವರದಣ್ಣ ನವರು “10000 ರೂಪಾಯಿ ಕೊಟ್ಟೆ,” ಅಂತ ಹೇಳಿದ್ದಾರೆ.. “10000 ನಾ..?? ಅಷ್ಟು ದುಡ್ಡು ಕೊಟ್ಟಂಗೆ ಕಾಣಲಿಲ್ಲವಲ್ಲ.!! ನೂರು ರೂಪಾಯಿ ನೋಟುಗಳು ಆದರೆ ಒಂದು ಕಂತೆ ಇರಬೇಕು, ಅದು ಕಾಣಿಸಲಿಲ್ಲ,” ಅಂದಾಗ ವರದಪ್ಪನವರು, “ನೋಡಪ್ಪಾ, ಐನೂರು ರೂಪಾಯಿ ನೋಟು ಬಂದಿದೆ, ಇದರ 20 ನೋಟುಗಳನ್ನ ಕೊಟ್ಟೆ 10000 ಆಯ್ತು,” ಎಂದು ವಿವರಿಸಿದ್ದಾರೆ. 500 ರೂಪಾಯಿ ನೋಟನ್ನು ನೋಡಿ, “ಇದು ಯಾವಾಗ print ಮಾಡಿದ್ರು?? ನನಗೆ ಗೊತ್ತೇ ಆಗ್ಲಿಲ್ಲ.. ನಾನು 10, 20, 50, 100 ರೂಪಾಯಿ ಮಾತ್ರ ಇರೋದು ಅಂದುಕೊಂಡಿದ್ದೆ,” ಎಂದು ಆಶ್ಚರ್ಯದಿಂದ 500 ರೂಪಾಯಿ ನೋಟನ್ನು ನೋಡಿದ್ರಂತೆ..”

ಅಣ್ಣಾವ್ರ ಈ ಗುಣನೇ ಕಲೆಯಲ್ಲಿ ಪರಿಶುದ್ಧತೆ, ಕೆಲಸದಲ್ಲಿ ಬದ್ಧತೆ, ಮಾತು ಹೂವಿನಷ್ಟೇ ಕೋಮಲ, ಮನಸ್ಸು ಬಿಳಿ ಹಾಲಿನಷ್ಟು ನಿರ್ಮಲ..

Raghuram

SHREYA RAGHUVEER -“ಶೃಂಗಾರವಾದ ಬದುಕಿಗೆ ಸಾಕ್ಷಿಯಾದ ಶ್ರೇಯ.”

Previous article

Raghuveer – Gowri “ಋಣಾನು ಬಂಧ ರೂಪೇನ, ಪಶು-ಪತ್ನಿ ಸುತಾಲಯ..”

Next article

You may also like

Comments

Leave a reply

Your email address will not be published. Required fields are marked *

8 + twenty =