ಸಿನಿಮಾ ಸರಸ್ವತಿ

Chiranjeevi Sarja, Meghana Raj ಗೆ ನಾ ಮಾಡಬೇಕಾಗಿದ್ದ ಸಿನಿಮಾ

1

2019, ಹೊಸ ವರ್ಷದ ಸಂಭ್ರಮ ಜನವರಿಯ ಮೊದಲ ವಾರದಲ್ಲಿ ನಿರ್ಮಾಪಕ ಸೂರಪ್ಪ ಬಾಬು ಅವರಿಂದ ನನಗೊಂದು Phone ಬಂತು.. ರಘು Chiranjeevi Sarja ಗೆ ನಿನ್ನ ಹತ್ರ ಯಾವುದಾದರೂ Subject ಇದ್ಯಾ ಅಂತ ಕೇಳಿದ್ರು.?? ” ಬಾಬಣ್ಣ ಇದೆ” ಅಂತ ಹೇಳಿದ ತಕ್ಷಣ..”Race view ಹೋಟೆಲ್ ಗೆ ಒಂದು ಚೂರು ಬಾಮ್ಮ” ಅಂತ ಹೇಳಿದರು..
ಸಿನಿಮಾ ಮಾಡಬೇಕು ಅನ್ನೋ ಹಸಿವು ತವಕ ನನ್ನಲ್ಲಿ ಇದ್ದಿದ್ದರಿಂದ immediately ಹೋದೆ.. ಆಗ ಅಲ್ಲಿ ಕುಮಾರ್ ಅನ್ನೋ ಒಬ್ಬ ನಿರ್ಮಾಪಕನನ್ನ ಪರಿಚಯಿಸಿ ” ಇವರು Chiranjeevi Sarja ಅವರಿಗೆ advance ಕೊಟ್ಟಿದ್ದಾರೆ, ಯಾವುದಾದರೂ ಒಳ್ಳೆ ಕಥೆ ಇದ್ರೆ ಹೋಗಿ ಚಿರುಗೆ ಹೇಳಿ ಬಾ” ಎಂದು ಹೇಳಿದರು.

ಸೂರಪ್ಪ ಬಾಬು ಅವರಿಗೆ ನನ್ನ ಕೃತಜ್ಞತೆಗಳನ್ನು ತಿಳಿಸಿ ನನ್ನ ಬಳಿ ಇದ್ದ ಕಥೆಯ ಎಳೆಯನ್ನು ಕುಮಾರ್ ಅವರಿಗೆ ವಿವರಿಸಿದೆ. ಆಗ ಕುಮಾರ್ ಅವರು ” ಚೆನ್ನಾಗಿದೆ ರಘು, ಚಿರು ಅವರಿಗೆ ಯಾವಾಗ ಕಥೆ ಹೇಳ್ತೀರಾ? ” ಅಂತ ಕೇಳಿದ್ರು..” ಸರ್, ನಾನು ready ಇದೀನಿ. ಅವರ free time ತಿಳ್ಕೊಂಡು ನನಗೆ update ಮಾಡಿ” ಎಂದು ಹೇಳಿ ಹೊರಟೆ..

Chiranjeevi Sarja

ಇದಾದ ಎರಡು ಮೂರು ದಿನಗಳಲ್ಲಿ ಕುಮಾರ್ ಅವರು Phone ಮಾಡಿ ” ರಘು ನಾಳೆ 11:30 – 12 ಗಂಟೆಗೆ ಚಿರು ಅವರು ಕಥೆ ಕೇಳ್ತಾರಂತೆ, KR road ನಲ್ಲಿರುವ ಅವರ ಮನೆಗೆ ಹೋಗಬೇಕು, ಒಟ್ಟಿಗೆ ಹೋಗೋಣ” ಅಂತ ಹೇಳಿ Phone ಇಟ್ಟರು.
ಮರುದಿನ ಬೆಳಗ್ಗೆ ಎದ್ದು, ದೇವರಿಗೆ ಪೂಜೆ ಸಲ್ಲಿಸಿ, ಒಬ್ಬ Hero ಗೆ ಕಥೆ ಹೇಳಲು ಹೋಗುತ್ತಿದ್ದೇನೆ ಎಲ್ಲ ಒಳ್ಳೆಯದು ಆಗೋ ಹಾಗೆ ಮಾಡು ಎಂದು ಬೇಡಿಕೊಂಡು, ಗಾಂಧಿನಗರದಲ್ಲಿ ನಿರ್ಮಾಪಕ ಕುಮಾರ್ ಅವರನ್ನ Pick ಮಾಡಿಕೊಂಡು ಚಿರು ಅವರ ಮನೆಗೆ ಸುಮಾರು  12 – 12:15 ಅಷ್ಟೊತ್ತಿಗೆ ಹೋದ್ವಿ.

ಹೋದ ನಂತರ ಒಂದು ಆತ್ಮೀಯದ ಬಿಗಿಯಾದ ಅಪ್ಪುಗೆಯೊಂದಿಗೆ ಮಾತುಕತೆ ಪ್ರಾರಂಭವಾಯಿತು. ಚಿರು ಅವರು ಹಸನ್ಮುಖಿ, ನಗುತ್ತಲೇ ತಮಾಷೆ ಮಾಡುತ್ತಲೇ ಕಾಲ ಕಳೆಯುವರು. ಮೊದಲು Casual ಆಗಿ ಎಲ್ಲ ವಿಚಾರಗಳನ್ನು general ಆಗಿ ಮಾತಾಡಕ್ಕೆ ಶುರು ಮಾಡಿ, ನಂತರ ನನ್ನ ಕಥೆ ಹೇಳಲು ಪ್ರಾರಂಭಿಸಿದೆ..


1 hour ನಡೆದ ಕಥೆ ನರೇಶನಲ್ಲಿ, ಚಿರು ಅವರಿಗೆ ನಾನು ಹೇಳಿದ ಕಥೆ ಅಷ್ಟಾಗಿ ಇಷ್ಟ ಆಗಲಿಲ್ಲ.. ಅವರು ಸುತ್ತಿ ಬಳಿಸದೆ ನೇರವಾಗಿ ನಯವಾಗಿ “ಇದಕ್ಕಿಂತ ಬೇರೆ ಯಾವುದಾದರೂ ಒಳ್ಳೆ ಕಥೆ ಇದ್ರೆ ಮಾಡೋಣ ರಘು” ಅಂತ ಹೇಳಿದರು.

ಅಷ್ಟು ಹೊತ್ತಿಗೆ 1:30 ಆಗಿತ್ತು. ಊಟದ ಸಮಯ ಅಂತ ಹೇಳಿ ಚಿರು ಅವರು ಊಟ ಮಾಡೋದಕ್ಕೆ ತುಂಬಾ ಬಲವಂತ ಮಾಡಿದರು. ಆದರೆ ಕಥೆ ಒಪ್ಪಿಸುವುದರಲ್ಲಿ ಎಲ್ಲೋ ನಾನು ವಿಫಲನಾಗಿದ್ದರಿಂದ, ಮತ್ತೊಂದು ಅವಕಾಶ ಕೈ ತಪ್ಪಿತ್ತಲ್ಲ ಅನ್ನೋ ಬೇಜಾರಿನಿಂದ ನನಗೆ ಊಟದ ಕಡೆ ಮನಸ್ಸಿರಲಿಲ್ಲ. ಆದರೆ ಚಿರು ಬಿಡಲಿಲ್ಲ. Cake, puff, cool Drinks ಮುಂತಾದವುಗಳನ್ನು ಹೊಟ್ಟೆ ತುಂಬಿಸುವಷ್ಟು ತಿನ್ನಿಸಿ ” ಬೇಜಾರಾಗಬೇಡಿ ರಘು, ಬೇರೆ ಯಾವುದಾದರೂ ಕಥೆ ಇದ್ರೆ ಹೇಳಿ definitely ಮಾಡೋಣ” ಅಂತ ಹೇಳಿದರು.

ಅಷ್ಟೊತ್ತಿಗೆ ಸುಮಾರು 2:30 –  3:00 ಆಗಿತ್ತು. ಆಗ ನಾನು ” ಸರ್ ನನ್ ಹತ್ರ ಇನ್ನೊಂದು ಕಥೆ ಇದೆ, ಅದು Action Subject ಅಲ್ಲ.. ಪಕ್ಕ ಗಂಡ ಹೆಂಡತಿಯ real love story. ನೀವು Meghana maam combination ಮಾಡಿಲ್ಲ. ಈ subject ಅಲ್ಲಿ ನೀವಿಬ್ರು ಮಾಡಿದ್ರೆ ತುಂಬಾ ಚೆನ್ನಾಗಿರುತ್ತೆ, First time combination ಆಗುತ್ತೆ. ಆದರೆ ಇದು ನಿಮ್ಮ Action Image ಇರುವುದಿಲ್ಲ. ನಿಮಗೆ Ok ಅನ್ಸಿದ್ರೆ line ಹೇಳ್ತೀನಿ.” Immediate ಆಗಿ ಚಿರು ಅವರು “ಹೇಳು ರಘು” ಅಂತ ಹೇಳಿದರು.. ಕಥೆ ಹೇಳಲು ಪ್ರಾರಂಭ ಮಾಡಿ ಮುಗಿಸಿದೆ.

ಚಿರು ಎದ್ದು ನಿಂತು ನನ್ನನ್ನ ಬಾಚಿ ತಬ್ಬಿಕೊಂಡು, ” ಇದು, ಬೇಕಾಗಿರೋ script ! ಅದ್ಭುತವಾಗಿದೆ. ಮೇಘನಾ ಗೆ ಯಾವಾಗ narration ಕೊಡ್ತೀಯಾ” ಅಂತ ಕೇಳಿದರು. ” ಮೇಡಂ Time ನೋಡಿಕೊಂಡು ನೀವು ಹೇಳಿ. ಆದರೆ ಜನವರಿ 15 ರಾತ್ರಿ, ನಾನು US ಪ್ರವಾಸ ಮಾಡ್ತಾಯಿದೀನಿ. ಬರೋದು 20 – 25 ದಿನ ಆಗುತ್ತೆ” ಎಂದು ಹೇಳಿ ಎದ್ದು ನಿಂತೆ. ” Sure will definitely let you know” ಅಂತ ಹೇಳಿ ನಿರ್ಮಾಪಕ ಕುಮಾರ್ ಅವರಿಗೆ ” ಕುಮಾರ್ ಅವರೇ, ಈ subject ಗೆ fix ಆಗೋಣ. ಮೇಘನಾ ಒಂದು ಸತಿ ಕಥೆ ಕೇಳಿದ್ಮೇಲೆ ಮಿಕ್ಕಿದ ವಿಚಾರಗಳನ್ನು ಮಾತನಾಡೋಣ” ಅಂತ ಹೇಳಿ ನಮ್ಮನ್ನ ಕಳಿಸಿಕೊಟ್ಟರು..

ನಾನು US ಗೆ ಹೊರಡುವ ಹಿಂದಿನ ದಿನ ಸಂಕ್ರಾಂತಿ ಹಬ್ಬ. ಬೆಳಗ್ಗೆ 9:00 ಸಮಯಕ್ಕೆ ನಿರ್ಮಾಪಕ ಕುಮಾರ್ ಅವರು ಫೋನ್ ಮಾಡಿ ” ರಘು Happy ಸಂಕ್ರಾಂತಿ! ಚಿರು ಫೋನ್ ಮಾಡಿದ್ರು ಇವತ್ತು ಸಂಜೆ 4:30 ಗೆ Free ಇದ್ರೆ Meghana ಅವರಿಗೆ ಕಥೆ Narration ಕೊಡಬಹುದಾ ಎಂದು ವಿಚಾರಿಸಿ ನೋಡಿ. ಅಂತ ಕೇಳಿದ್ರು, ಆಗತ್ತ ರಘು? ” ಅಂತ ಕುಮಾರ್ ಅವರು ಹೇಳಿದರು.
 ನಾನು Immediately ” ಸರ್ Ok, Done, ಎಲ್ಲಿ ಹೋಗಿ ಕಥೆ ಹೇಳ್ಬೇಕು ಅಂತ ಕೇಳಿದೆ ” ಆಗ ಅವರು “ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ಅವರ ಮನೆಯಲ್ಲಿ Meeting, ನಾನು Urvashi Theatre ಬಳಿ ಇರ್ತೀನಿ On the way ನನ್ನನ್ನು Pick ಮಾಡಕ್ಕಾಗುತ್ತಾ” ಅಂತ ಕುಮಾರ್ ಅವರು Request ಮಾಡಿದ್ರು. “No problem sir, sure” ಎಂದು ಹೇಳಿ 4:00 ಗಂಟೆಗೆ ನಾನು ಕುಮಾರ್ ಅವರನ್ನು Pick ಮಾಡಿ sharp 4:30 ಗೆ ಸುಂದರ್ ರಾಜ್ ಅವರ ಮನೆ ಬಳಿ ಇದ್ವಿ.

ಶ್ರೀಮತಿ ಪ್ರಮೀಳಾ ಜೋಶೈ ಅವರು ಬಹಳ ಪ್ರೀತಿಯಿಂದ ನಮ್ಮನ ಮನೆಯೊಳಗೆ ಬರಮಾಡಿಕೊಂಡು, ಅವರ Hall ನ Sofa ಮೇಲೆ ಕೂಡಿಸಿದರು. ನಾವು ಕೂತ ಕೆಲವೇ ಹೊತ್ತಿನಲ್ಲಿ Meghana ಅವರು ಬಂದು “Hello, ನಮಸ್ಕಾರ !  ಹೇಗಿದ್ದೀರಾ ?” ಎಂದು ವಿಚಾರಿಸಿ ಸಂಕ್ರಾಂತಿ ಶುಭಾಶಯಗಳು ತಿಳಿಸಿ ಕುಳಿತುಕೊಂಡರು.

ಒಳ್ಳೆ Coffee ಯನ್ನು ಕುಡಿದು ಕಥೆ ಹೇಳಲು ಪ್ರಾರಂಭಿಸಿದೆ. 1:00 ಗಂಟೆಯವರೆಗೂ ಕಥೆ ಹೇಳಿದೆ. ಕಥೆ ಕೇಳಿದ ತಕ್ಷಣ ಅಮ್ಮ ಮಗಳಿಬ್ಬರು (ಮೇಘನಾ ರಾಜ್, ಪ್ರಮೀಳಾ ಜೋಶೈ) ಏನನ್ನು ಪ್ರತಿಕ್ರಿಯಿಸದೆ ಒಳಗೆ ಹೊರಟು ಹೋದರು. ಆಗ Calling Bell ಆಯಿತು

Chiranjeevi Sarja, Meghana Raj

ಸುಂದರ್ ರಾಜ್ ಅವರು ಬಾಗಿಲು ತೆಗೆದು ನೋಡಿದಾಗ ಚಿರು ಅಲ್ಲಿಗೆ ಬಂದಿದ್ರು. 10 – 15 ನಿಮಿಷದ ನಂತರ ಅಮ್ಮ ಮಗಳು ಮತ್ತೆ Hall ಗೆ ಬಂದು, “ನೀವು ಸರಿ ಇಲ್ಲ, ಯಾಕ್ ನಮ್ಮನ್ನ ಇಷ್ಟು ಅಳಿಸಿದ್ರಿ? ” ಅಂತ ಪ್ರಶ್ನೆ ಹಾಕಿದರು. ಆ ಒಂದು ಕ್ಷಣ ನಾನು ಕುಮಾರ್ ಮುಖ ಮುಖ ನೋಡಿಕೊಂಡು ಏನು ಅರ್ಥ ಆಗ್ತಿಲ್ವಲ್ಲ ಅನ್ನೋ expression ನಲ್ಲಿ ಕೂತಿದ್ವಿ. ಆಗ ಮೇಘನಾ ಅವರೇ ” ತುಂಬಾ Emotional ಆಗಿದೆ. ಕಥೆ ಕೇಳಿದ ತಕ್ಷಣ ಏನು React ಮಾಡಬೇಕು ಅಂತ ಗೊತ್ತಾಗದೆ ನಾನು ಒಳಗೆ ಹೋಗಿ ಮುಖ ತೊಳೆದು ಬಂದೆ, ಅಮ್ಮನಿಗೂ same feel ಆಯ್ತಂತೆ” ಮಧ್ಯದಲ್ಲೇ ಪ್ರಮೀಳಾ ಜೋಶೈ ಅವರು ” Climax ಅಲ್ಲಿ ಬಹಳ ಅಳಿಸ್ಬಿಟ್ಟೆ ಕಣೋ ” ಅಂತ ಪ್ರೀತಿಯಿಂದಲೇ ನನಗೆ ಹೇಳಿದರು.. ಈ ಕಡೆ ಸುಂದರಣ್ಣ ಏನು ಮಾತಾಡದೆ ಮೌನದಿಂದಲೇ ನನಗಿನ್ನೂ climax ನ Digest ಮಾಡ್ಕೊಳೋಕ್ಕೆ ಆಗ್ತಿಲ್ಲ ಅನ್ನೋ ಒಂದು ಮಾತನ್ನು ಹೇಳಿದರು.

ಆಗ ಚಿರು ಅವರು ನಾನು ಹೇಳಿಲ್ವಾ ಮೇಘನಾ Mind Blowing Script.  Climax ಅಂತೂ unpredictable. ಎಂದು ಹೇಳಿ ” ನಾವಿಬ್ರೂ ಗಂಡ ಹೆಂಡ್ತಿ ಕಥೆಯಲ್ಲಿ Act ಮಾಡೋಕೆ ok. ಯಾವಾಗ Shooting Start ಮಾಡೋಣ” ಅಂತ ಪ್ರಶ್ನೆ ಹಾಕಿದರು. ಆಗ ನಾನು ಅವರೆಲ್ಲರಿಗೂ ಧನ್ಯವಾದಗಳು ತಿಳಿಸಿ “ನಾನು ನಾಳೆ US ಗೆ travel ಮಾಡ್ತಾ ಇದ್ದೀನಿ, ಬಂದ ನಂತರ Dialogue ಮತ್ತು Music ಗೆ ನನಗೆ ಒಂದು two Months time ಬೇಕು,.. May 2nd ನಿಮ್ಮಿಬ್ಬರ first year wedding anniversary. ಅವತ್ತೇ ಇದನ್ನ official ಆಗಿ announce ಮಾಡಿ, may second week ಇಂದ shooting start ಮಾಡಣ ಅಂತ ಹೇಳಿ, ಎಲ್ಲರೂ ಖುಷಿಯಾಗಿ ಎಳ್ಳು ಬೆಲ್ಲ ತಿಂದು ಇನ್ನೊಮ್ಮೆ coffee ಕುಡಿದು, ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಪ್ರಮೀಳಾ ಜೋಶೈ ಅವರು ” ರಘು climax ಹಾಗೆ ಮಾಡಬೇಕಾ? ” ಅನ್ನೋ ಪ್ರಶ್ನೆ ಹಾಕಿದ್ರು.

ನಾನು ಮಾತನಾಡುವಷ್ಟರಲ್ಲಿ ಚಿರು ಅವರು “aunty, ಅವರದು ಏನೋ ಒಂದು vision ಇರತ್ತೆ, ಮಾಡ್ಲಿ ಬಿಡಿ”. ಎಂದು ಹೇಳಿದರು. ನಾನು ಬರೆದ ಆ ಕಥೆಯ climax, tragedy ending ಆಗಿತ್ತು.. ಪ್ರಮೀಳಮ್ಮ ಮತ್ತೆ ” ಅಲ್ಲಾ ಮದುವೆಯಾಗಿ ಇನ್ನೂ ಒಂದು ವರ್ಷ ಆಗಿಲ್ಲ, ಇಬ್ಬರು first time ಒಟ್ಟಿಗೆ act ಮಾಡ್ತಿದ್ದಾರೆ. ಈ ರೀತಿ climax ಬೇಕಾ? ” ಇದನ್ನ happy ending ಮಾಡಬಹುದಲ್ವಾ? ” ಎಂದು ನನಗೆ ಪ್ರಶ್ನೆ ಹಾಕಿದರು. ನಾನು ಬರೆದ ಕಥೆಯಲ್ಲಿ ಚಿತ್ರದ ಕೊನೆಯಲ್ಲಿ Hero, Heroine ಇಬ್ಬರ ಅಂತ್ಯವಾಗಿ ಮಗು ಅನಾಥವಾಗುತ್ತೆ ಅನ್ನೋ point ಇತ್ತು. ಆಗ ಚಿರು ಅವರು “Aunty, ಇದು ಸಿನಿಮಾ, ಸಿನಿಮಾ ತರ ನೋಡೋಣ. ನನ್ನ ನಿಜ ಜೀವನದಲ್ಲಿ ಹಂಗಾಗ್ಬಿಡುತ್ತಾ? , ನನ್ನ ಮಗು ಹುಟ್ಟಿ ಅನಾಥ ಆಗ್ಬಿಡುತ್ತಾ? negative ಆಗಿ ಯೋಚನೆ ಮಾಡೋದು ಬೇಡ aunty, ಸಿನಿಮಾನ ಸಿನಿಮಾ ತರ ನೋಡೋಣ. ” ಅಂತ ಹೇಳಿದ್ರು.


 “ಖಂಡಿತ ಯೋಚನೆ ಮಾಡೋಣ ಮಾ, ನೀವು ತಲೆ ಕೆಡಿಸ್ಕೋಬೇಡಿ.. ಯಾರ feelings hurt ಆಗದೆ ಇರೋ ಹಾಗೆ ಸಿನಿಮಾ ಮಾಡೋಣ” ಅಂತ ಆಶ್ವಾಸನೆ ಕೊಟ್ಟೆ. ಚಿರು ನನ್ನ ಹೆಗಲ ಮೇಲೆ ಕೈ ಹಾಕಿ ಪಕ್ಕಕ್ಕೆ ಕರೆದುಕೊಂಡು ಹೋಗಿ, ” ರಘು, ಏನೋ ದೊಡ್ಡವರಿಗೆ ಒಂದು ನಂಬಿಕೆ, sentiment.. ನೀನು ಅನ್ಕೊಂಡಿರೋ ತರ Climax Shoot ಮಾಡೋಣ, ಇನ್ನೊಂದು Version ನಲ್ಲಿ ನಾನು, ನನ್ನ ಹೆಂಡ್ತಿ ಮಗು ಜೊತೆ ಸುಖವಾಗಿ ಇರೋ ಹಾಗೆಯೂ Shoot ಮಾಡೋಣ, happy ending ಮಾಡೋಣ. Editing ಅಲ್ಲಿ ಎಲ್ಲರಿಗೂ ಯಾವುದು ಇಷ್ಟ ಆಗುತ್ತೋ ಅದನ್ನು ಇಟ್ಟುಕೊಳ್ಳೋಣ, No problem ಅಲ್ವಾ?” ಅಂತ ಒಂದು ಚಿಕ್ಕ ಮಗು ಮನವಿ ಮಾಡೋ ಹಾಗೆ ನನ್ನ ಹತ್ರ ಕೇಳಿದರು. “No problem sir, ಖಂಡಿತ ಮಾಡೋಣ” ಅಂತ ಹೇಳಿ ಒಂದು ಪ್ರೀತಿಯ ಅಪ್ಪುಗೆ ಕೊಟ್ಟು ಅಲ್ಲಿಂದ ಹೊರಟೆ.

ಈಗಲೂ ಚಿರು ಅವರು ನನ್ನ ಹೆಗಲ ಮೇಲೆ ಕೈ ಹಾಕಿ ಹೇಳಿದ ಮಾತುಗಳು ನನ್ನನ್ನ ಕಾಡುತ್ತೆ.

ಚಿರು ನಮ್ಮನ್ನ ಬಿಟ್ಟು ಅಗಲಿದ ನಂತರ ನಾನು ಕೂಡ ನನ್ನ ಕನಸಿನ ಆ script ಅನ್ನ ಎತ್ತು ಪಕ್ಕಕ್ಕೆ ಇಟ್ಟೆ. ಸಿನಿಮಾದಲ್ಲಿ ಬರುವ ಕೆಲವು ಘಟನೆಗಳು ಯಾರ್ಯಾರದೋ ಜೀವನದಲ್ಲಿ ನಡೆದಿರಬಹುದು. ನನ್ನ ಜೀವನದಲ್ಲಿ ನಡೆದ ಈ ಘಟನೆ, ನಾನು ಅಂದುಕೊಂಡಿದ್ದ ಕಥೆಯ climax ; ನಾಯಕ ಕಣ್ಮುಚ್ಚುವುದು ; ಚಿರು ಅವರ ನಿಜ ಜೀವನದಲ್ಲೂ ನಡೆಯುತ್ತೆ ಅನ್ನೋದು ಮಾತ್ರ ಕನಸು ಮನಸ್ಸಲ್ಲೂ ಯಾರಿಂದಲೂ ಊಹಿಸೋಕೆ ಆಗಲ್ಲ.

Love you ಚಿರು sir,

Miss you.

Raghuram

ನಾ ಕಲಿತ ಪಾಠ !!

Previous article

Niveditha Jain ಅವರಿಗೆ ಅವರ ಸಾವಿನ ಬಗ್ಗೆ ಮೊದಲೇ ತಿಳಿದಿತ್ತ??

Next article

You may also like

1 Comment

  1. Just tears from my eyes…
    😞😞

Leave a reply

Your email address will not be published. Required fields are marked *

5 × five =