ನೂರೊಂದು ನೆನಪು

Appu, ಬೊಂಬೆ ಮಾತ್ರವಲ್ಲ ನರ ಬೊಂಬೆಯೂ ಹೇಳುವುದು ನೀವೇ ರಾಜಕುಮಾರ

0
Puneeth rajkumar

ನಾನು ಮೊಟ್ಟಮೊದಲ ಬಾರಿಗೆ ಅಪ್ಪು ಅವರನ್ನ ನೇರವಾಗಿ ನೋಡಿದ್ದು 1994, March 6, ಬೆಂಗಳೂರಿನ ಅಶೋಕ ಪಿಲ್ಲರ್ ನಲ್ಲಿರುವ ‘ಚಂದ್ರಸಾಗರ್ ಕಲ್ಯಾಣ ಮಂಟಪ’ದಲ್ಲಿ,  ನಮ್ಮ ಒಬ್ಬ ಹತ್ತಿರ ಬಳಗದ ಮದುವೆಯಲ್ಲಿ.. ವೈಯಾಲಿಕಾವಲ್ ಹಾಗೂ ಸದಾಶಿವನಗರದ ಠಾಣೆ ಗಳಿಗೆ ಇವರು Circle Inspector ಆಗಿದ್ದರು.. ಹಾಗಾಗಿ ಅಣ್ಣಾವ್ರ ಕುಟುಂಬದ ಜೊತೆ ಒಡನಾಟ ಇತ್ತು. ಇವರ ಮದುವೆಗೆ ಅಣ್ಣಾವ್ರು, ಅಮ್ಮ ಹಾಗೂ ಅಪ್ಪು ಸರ್ ಇವರು ಮೂರು ಜನರು ಮದುವೆಗೆ ಬಂದು ಹರಸಿ ಹಾರೈಸಿದ್ದರು..

ನಂತರ ನಾನು ಅಪ್ಪು ಅವರನ್ನು Regular ಆಗಿ ನೋಡ್ತಾ ಇದ್ದಿದ್ದು ಸದಾಶಿವನಗರದ Classic Gym  ಅನ್ನೋ ಜಾಗದಲ್ಲಿ.. ಅವರನ್ನ ಮಾತಾಡಿಸಲು ಆಸೆ ಆದರೆ ಅಣ್ಣಾವ್ರ ಮಗ, ನಾವು ಹೇಗೆ ಹೋಗಿ ಮಾತಾಡೋದು ಅನ್ನೋ ಆತಂಕ ಹಾಗೂ ಭಯ.. ಕೆಲ ದಿನಗಳ ನಂತರ ಮುಖ ಪರಿಚಯವಾದ ನಂತರ ಅವರ ನಗುವಿನಂದಲೇ ನಮ್ಮನ್ನ ಮಾತನಾಡಿಸಲು ಶುರು ಮಾಡಿದರು.. ಕೆಳಗೆ ಶಾಂತಿ ಸಾಗರ್ ಹೋಟೆಲ್ ಇತ್ತು.. ಕೆಲವು ಬಾರಿ ಬೆಳಗಿನ ಹೊತ್ತು ಅವರೊಟ್ಟಿಗೆ ಬಿಸಿ ಬಿಸಿ ಇಡ್ಲಿ ಸಾಂಬಾರ್ ತಿಂದಿದ ನೆನಪು ಇನ್ನೂ ಹಸಿಯಾಗಿ ಇದೆ..

ನಂತರದ ದಿನಗಳಲ್ಲಿ ನಾನು ಕೆಲವು ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದೆ.. ಮಾಧ್ಯಮಗಳಲ್ಲಿ ಕೆಲಸ ಮಾಡಿದೆ.. ನಂತರ ನನಗೆ ಅತ್ಯಂತ ಗುರುತು ಹಾಗೂ ಗೌರವ ತಂದು ಕೊಟ್ಟಂತ ಚಿತ್ರ ಹಾಗೂ ಪಾತ್ರ ‘ಜೋಗಿ’ ಚಿತ್ರದಲ್ಲಿ ‘ಅಣ್ಣಮ್ಮನ ದೇವಸ್ಥಾನದ ಯೋಗೀಶ’ನ ಪಾತ್ರ..
ಅಪ್ಪು ಅವರಿಗೆ ಆ ಚಿತ್ರ, ನನ್ನ ಪಾತ್ರ ಎಷ್ಟು ಇಷ್ಟವಾಗಿತ್ತಂದರೆ ರಾಘಣ್ಣನ ಮೂಲಕ ನನಗೆ ಕರೆ ಮಾಡಿ, ಮಾತಾಡಿ ಅವರ ‘ಅಜಯ್’ ಚಿತ್ರದಲ್ಲಿ ಪ್ರಮುಖವಾದ ಅವರ ಗೆಳೆಯನ ಪಾತ್ರವನ್ನು ಕೊಡಿಸಿದರು..

ಹುಬ್ಬಳ್ಳಿಯಲ್ಲಿ ಶೂಟಿಂಗ್.. ನಾನು ಮೊಟ್ಟಮೊದಲ ಬಾರಿಗೆ ಹುಬ್ಬಳ್ಳಿಗೆ ಹೋಗಿದ್ದು ಆಗಲೇ.. ನನಗೆ ಹುಬ್ಬಳ್ಳಿಯಲ್ಲಿ ‘ಸ್ವಾತಿ’ ಅನ್ನೋ ಒಂದು ಹೋಟೆಲಿನಲ್ಲಿ ಉತ್ತಮ Room ವ್ಯವಸ್ಥೆ ಮಾಡಲಾಗಿತ್ತು.. ನನಗೆ Appu ಸರ್ ಇಂದ ಕರೆ ಬಂತು.. “ಎಲ್ಲಿದ್ದೀಯಾ??”; “ಸರ್..!! ಸ್ವಾತಿ ಹೋಟೆಲ್”.. “Change your room.. ಗಾಡಿ ಕಳಿಸ್ತಾ ಇದ್ದೀನಿ.. You come here” ಅಂತ ಹೇಳಿದ್ದು ಇನ್ನು ನನ್ನ ಕಿವಿಯಲ್ಲಿ ಗುಯಿಗುಡ್ತಾ ಇದೆ.. ಅವರು ಇದ್ದ ‘ನವೀನ್’ ಅನ್ನೋ ಬಹುದೊಡ್ಡ ಹೋಟೆಲ್ನಲ್ಲಿ ಅವರ Room ಪಕ್ಕನೆ ನನಗೆ ಒಂದು Room ಮಾಡಿಕೊಟ್ಟು “Get ready, we shall go out” ಅಂತ ಹೇಳದ್ರು..


ಗಾಡಿ ಹೊರಟಿತು ಸೀದಾ ‘ಸಿದ್ಧಾರೂಢ ಮಠ’ದ ಬಳಿ ಹೋಗಿ ನಿಂತಿತು.. ಸಂಜೆ ಸುಮಾರು 4:30 ಯಿಂದ 5:00 ಸಮಯವಿರಬಹುದು.. ಸ್ವಲ್ಪಮಟ್ಟಿಗೆ ಜನ ಇದ್ದರು.. Power Star car ನಿಂದ ಇಳಿದಿದ್ದನ್ನು ನೋಡಿ ಹುಬ್ಬಳ್ಳಿಯ ಹೂ ಬಳ್ಳಿ ಮನಸ್ಸಿನ ಜನರು ಅಪ್ಪುಗೆ ಪ್ರೀತಿಯ ಅಪ್ಪುಗೆ ಕೊಟ್ಟು, ಮುತ್ತಿಗೆ ಹಾಕಲು ಶುರು ಮಾಡಿದರು.. ಆಗ ಅಲ್ಲಿದ್ದ Police ಸಿಬ್ಬಂದಿ ಬಂದು ನಮ್ಮನ್ನ ಮಠದ ದರ್ಶನವನ್ನು ಮಾಡಿಸಿ ಮತ್ತೆ ಕಾರಿನ ಒಳಗೆ ಸುರಕ್ಷಿತವಾಗಿ ಕೂರಿಸಿ ಕಳಿಸಿದರು.

Car ಹೋಗಲು ಶುರುವಾದಂತೆ ಅಪ್ಪು ನನಗೆ ಹೇಳಿದ ಮೊದಲ ಮಾತು “ಅಪ್ಪಾಜಿ ಹೇಳಿದ್ರು ರಘು, ಯಾವಾಗ ನೀವು ಹುಬ್ಬಳ್ಳಿಗೆ ಬಂದರೂ ನೀವಿಲ್ಲಿಗೆ ಬಂದು ದರ್ಶನ ಮಾಡಿ ಆಶೀರ್ವಾದ ತೊಗೊಳಿ ಅಂತ.. ಅಪ್ಪಾಜಿ ಕೆಲಸದ ಮೇಲೆ ಬೇರೆ ಕಡೆ ಹೋದಾಗ ಅವ್ವ( ಡಾ. ರಾಜ್ ಅವರ ತಾಯಿ) ಇಲ್ಲೇ ಇದ್ದಿದ್ದು.. ನನ್ನ ತಾಯಿಗೆ ಅನ್ನ ಹಾಗೂ ಆಶ್ರಯ ಕೊಟ್ಟ ಜಾಗ ಇದು. ನಮ್ಮ ಕುಟುಂಬದವರು ಯಾರೇ ನಾವು ಹುಬ್ಬಳ್ಳಿಗೆ ಬಂದರೂ ಇಲ್ಲಿಗೆ ಬಂದು ಹೋಗದೆ ಇರೋಲ್ಲ.. ಇದು ನಮ್ಮ ಕುಟುಂಬದ ವಾಡಿಕೆ..”


ನಂತರ ನಮ್ಮ Car ಮತ್ತೆ Hotel ಕಡೆ ಹೋಯಿತು.. Power Star room ಗೆ ಹೋಗಿ, ಬಟ್ಟೆ ಬದಲಿಸಿ,  ಒಂದು Tracks, T-shirt ಹಾಗೂ Shoes ನಲ್ಲಿ ಬಂದರು.. ಸತತ ಒಂದುವರೆ ಗಂಟೆಗಳ ಕಾಲ Naveen Hotelನ Gym ನಲ್ಲಿ ವ್ಯಾಯಾಮ ಮುಗಿಸಿ, “ರಘು Fresh ಆಗಿಬಿಡು, we will go out for dinner” ಅಂತ ಹೇಳಿದ್ರು.. ಇರೋದೆ Star Hotel ನಲ್ಲಿ. ಎಲ್ಲಿ Dinner ಗೆ ಹೋಗಬಹುದು ಅನ್ನೋ ಯೋಚನೆ ನನಗೆ.. ಕೇವಲ 15 ರಿಂದ 20 ನಿಮಿಷಗಳಲ್ಲಿ Ready ಆಗಿ ಬಂದು “ಬಾ ಹೋಗೋಣ” ಅಂತ ಕರೆದ್ರು.. ಆಗ Car ಹುಬ್ಬಳ್ಳಿಯ ‘ದುರ್ಗದ ಬಯಲು’ ಅನ್ನೋ ಜಾಗಕ್ಕೆ ಹೋಯಿತು..  ಅಲ್ಲಿ ಆಹಾರಗಳ ಸಾಲು ಸಾಲು ಅಂಗಡಿಗಳು, ವಿಧವಿಧವಾದ ಊಟ ತಿಂಡಿಗಳು ಸಿಗುವಂತ ಜಾಗ (ಹುಬ್ಬಳ್ಳಿ ಮಂದಿಗೆ ಚೆನ್ನಾಗಿ ತಿಳಿದಿರುತ್ತೆ..)

ಅಲ್ಲಿ ಕಾರು ಬಂದು ನಿಂತ ತಕ್ಷಣ ಇಲ್ಲಿ Super ಆಗಿರೋ ಎಲ್ಲ Variety ಊಟ ತಿಂಡಿ ಸಿಗತ್ತೆ.. ನಮ್ಮ ಹುಡುಗರು ತಂದ್ಕೊಡ್ತಾರೆ ತಿನ್ನೋಣ ಅಂತ ಖುಷಿಯಲ್ಲಿ ಹೇಳಿದರು.. ನಾನು ಅಪ್ಪು ಅವರ Staff ಜೊತೆ ಹೋಗೋಕೆ ಹೋದೆ.. ಅಲ್ಲಿ ಕೆಲವರು ‘ಜೋಗಿ’ ಚಿತ್ರದಲ್ಲಿ ನಾನು ಅಭಿನಯಿಸಿದ್ದರಿಂದ ನನ್ನನ್ನು ಗುರುತಿಸಲು ಪ್ರಾರಂಭಿಸಿದರು.. ಆಗ Appu sir , “ಬೇಡ ರಘು. ನೀನು ನನ್ನ ಜೊತೆ ಕಾರಲ್ಲೇ ಇದ್ದುಬಿಡು, ಊಟ ತಿಂದ್ಬಿಡೋಣ. ಆಮೇಲೆ ಬೇಕಾದರೆ ಜನಗಳ ಹತ್ರ ಮಾತಾಡ್ಸೋಣ” ಎಂದು ಹೇಳಿ ಅವರ Carನಲ್ಲೇ,  ನಾನು Appu Sir ಒಟ್ಟಿಗೆ ತಿಂದ ಆ ಘಳಿಗೆ ನಾನೆಂದೂ ಮರೆಯೋಲ್ಲ..

ಶಿವಣ್ಣ ಅವರೊಟ್ಟಿಗೆ ನಾನು ನಟಿಸಿದ ‘ಮಾದೇಶ’ ಚಿತ್ರದ ಚಿತ್ರೀಕರಣ Bankok ನಲ್ಲಿ ನಡಿತಿರಬೇಕಾದರೆ ಅಪ್ಪು ಸರ್ ಬಂದಿದ್ದು, ನಮ್ಮ ಗುರುಗಳು ಕ್ರೇಜಿಸ್ಟಾರ್ Dr,V.Ravichandran ಅವರ ಮಗಳ ಮದುವೆಯ Invitation card ಕೊಡಕ್ಕೆ ಹೋಗಿದ್ದು..ಈ ರೀತಿ ಸಿಹಿ ನೆನಪುಗಳು, ಸವಿ ನೆನಪುಗಳು, ನನ್ನ “ನೂರೊಂದು ನೆನಪು” ಸಾಕಷ್ಟಿವೆ.

ನಾನು ನೋಡಿದ ಒಂದು ಸತ್ಯ ಘಟನೆಯನ್ನು ಈಗ ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟಪಡ್ತೀನಿ..

‘ಮೌರ್ಯ’ ಚಿತ್ರದ ಸಾಹಸ ದೃಶ್ಯ ಬೆಂಗಳೂರಿನ Mysore lamps ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು.. ಅದೇ Mysore lamps ನ ಇನ್ನೊಂದು ಜಾಗದಲ್ಲಿ ನಮ್ಮ ಕನ್ನಡ ಚಿತ್ರರಂಗದ ಮತ್ತೊಬ್ಬ Super Star ನಾಯಕ ನಟನ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು..(Once upon a time ನಾನು, ಆ ಸ್ಟಾರ್ ನಟನ ಅತ್ಯಂತ ಆತ್ಮೀಯ ಸ್ನೇಹಿತನಾಗಿದ್ದೆ) ಅವರನ್ನ ಭೇಟಿ ಮಾಡಲು ಆ Location ಗೆ ಹೋಗಿದ್ದೆ.. ಮಾತಾಡ್ತಿರಬೇಕಾದರೆ ಆ Star ನಟ “ಬನ್ನಿ ಗುರುಗಳೇ!! ಪಕ್ಕದಲ್ಲಿ ಅಪ್ಪು ಅವರ Shooting ನಡೀತಾ ಇದೆಯಂತೆ.. ಒಂದು Coffee ಕುಡ್ಕೊಂಡ್ ಬರೋಣ”  ಅಂತ ಹೋದ್ವಿ..

ಅಲ್ಲಿ Palaniraj  Fight master ಅವರ ಸಂಯೋಜನೆಯಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು.. ಅಪ್ಪು ಸರ್ ನನ್ನನ್ನ ಹಾಗೂ ಆ ಸ್ಟಾರ್ ಕಲಾವಿದರನ್ನು ನೋಡಿ ಖುಷಿಯಾಗಿ ಸ್ವಲ್ಪ ಹೊತ್ತು ಹರಟಿದೆವು.. ಆಗ Fight master assistant ಬಂದು “Sir, Shot ready” ಅಂತ ಹೇಳಿದರು.. ‘5 mins ಬಂದೆ’ ಅಂತ ಅಪ್ಪು ಸರ್ ಹೋದ್ರು.. ಅಲ್ಲಿ ಎಷ್ಟೋ ಬಾರಿ ಬಿದ್ರು, ಎದ್ರು, Jumps ನ ಮಾಡ್ತಾನೆ ಇದ್ರೂ. ಈ ಸಾಹಸ ಸಂಯೋಜನೆಯಲ್ಲಿ Fight Master ಬಳಿ ನಿರ್ದೇಶಕರಾದ ಶ್ರೀ S.Narayan ಅವರು ಬಂದ್ರು, ಕೆಲ ವಿಚಾರಗಳನ್ನ ಚರ್ಚೆ ಮಾಡಿ ಪುನೀತ್ ರಾಜಕುಮಾರ್ ಅವರಿಗೆ ಹೇಗೆಲ್ಲ ಮಾಡಬೇಕು ಎಂದು ಸೂಚಿಸುತ್ತಿದ್ದರು.. ಸ್ವಲ್ಪ ದೂರದಿಂದಲೇ ಇದನ್ನೆಲ್ಲ ಗಮನಿಸುತ್ತಿದ್ದೆವು ನಾವು..

Shot ಮುಗಿದ ನಂತರ Power star ನಮ್ಮ ಬಳಿಗೆ ಬಂದಾಗ ನಮ್ಮ ಗೆಳೆಯನಾಗಿದ್ದ ಸ್ಟಾರ್ ನಟ ಅಪ್ಪು ಸರ್ ಗೆ ಕೇಳಿದ್ರು, “ಏನ್ ಅಪ್ಪು , ಅವರು ಏನೇ ಹೇಳಿದರೂ ಮಾಡ್ತಾ ಇದ್ದೀರಲ್ಲ… ಸ್ವಲ್ಪ ನೀವು ಏನಾದರೂ ನಿಮ್ಮ inputs ಕೊಡಬಹುದಲ್ವಾ??? “

ಆಗ Immediately Appu ಹೇಳಿದ್ದು ” ನಾನು Setಗೆ ಬರೋತನಕ ನೂರು ಬಾರಿ, ಹಲವಾರು ಪ್ರಶ್ನೆಗಳ್ನ ಹಾಕ್ತೀನಿ. ಒಮ್ಮೆ ಒಪ್ಪಿ Set ಗೆ ಬಂದ ಮೇಲೆ ನನ್ನ ಕಡೆಯಿಂದ ಒಂದು ಪ್ರಶ್ನೆಯೂ ಆ ತಂಡಕ್ಕೆ ಇರುವುದಿಲ್ಲ..ನಿರ್ದೇಶಕರನ್ನ, ನಿರ್ಮಾಪಕರನ್ನ, ತಂತ್ರಜ್ಞರನ್ನ ನಂಬಿ ನನ್ನನ್ನು ನಾನು ಒಪ್ಪಿಸಿಕೊಂಡು ನಟಿಸಬೇಕು. ಇದೇ ನನಗೆ ಅಪ್ಪಾಜಿ – ಅಮ್ಮ ಹೇಳಿ ಕೊಟ್ಟ ಮೊದಲನೇ ಪಾಠ”

ಇದನ್ನು ಕೇಳಿದ ನಮಗೆ ಅನಿಸಿದ್ದು ‘ ತುಂಬಿದ ಕೊಡ ತುಳುಕಲ್ಲ, ದೊಡ್ಡ ಮನೆಯ ದೊಡ್ಡತನ ಎಂದು ಕಡಿಮೆಯಾಗಲ್ಲ ‘

ಹೀಗೆ ಹತ್ತು ಹಲವು ಅಪ್ಪು ಸರ್ ಒಂದಿಗಿನ ನನ್ನ ನೆನಪುಗಳಿವೆ..

ನಾವು ಒಟ್ಟಾಗಿ ಶಬರಿಮಲೆಗೆ ಹೋಗಿದ್ದಿರಬಹುದು, ನನ್ನ ನಿರ್ದೇಶನದ ಫೇರ್ ಅಂಡ್ ಲವ್ಲೀ ಚಿತ್ರದ Set ಗೆ ಅವರು ಬಂದಿದ್ದಿರಬಹುದು ಸಾಕಷ್ಟಿವೆ..


ಆದರೆ ಇಂದು ಯಾಕೋ ಈ ವಿಚಾರಗಳನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿತು..

ಶಿವಣ್ಣ ಹಾಗೂ ಅಪ್ಪು ಸರ್ ಅವರನ್ನು ಹತ್ತಿರದಿಂದ ನೋಡಿ, ನಾನು ಕಲಿತ ಹಾಗೂ ಪಾಲಿಸಿಕೊಂಡು ಬಂದಿರುವ ಅಭ್ಯಾಸವೇನೆಂದರೆ ಪ್ರತಿ ರಾತ್ರಿ ಕುಟುಂಬದೊಂದಿಗೆ ಒಂದು Drive ಹೋಗೋದು. October 29, 2021 ಇಂದ ಬದಲಾಗಿದ್ದೇನೆಂದರೆ ಇಂದಿಗೂ ನಾನು Drive ಹೋಗುವ ಪ್ರತೀತಿ ಇದೆ, ಯಾವಾಗ್ಲೂ ಅಪ್ಪು ಸರ್ ಅವರ ಮನೆ ಮುಂದೆ Regular ಆಗಿ Drive ಹೋಗ್ತಾ ಇದ್ವಿ. ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ, ಆ ರಸ್ತೆ ಕಡೆ ನಾನು ಹೋಗೋದು ನನ್ನ ನಿಲ್ಲಿಸಿ ನಾಲ್ಕು ವರ್ಷಗಳಾಗಿದೆ..

ರಾಜಕುಮಾರನಿಲ್ಲದ ಆ ಅರಮನೆಯನ್ನು ನೋಡಲು ನನ್ನಿಂದ ಆಗಲ್ಲ.

ಬರಿ ಬೊಂಬೆ ಮಾತ್ರ ಅಲ್ಲ, ನರ ಬೊಂಬೆಯು ಹೇಳೋದು ಒಂದೇ ಮಾತು ‘ನೀನೇ ರಾಜಕುಮಾರ’

Puneeth rajkumar
Raghuram

Arjun Sarja ಮತ್ತು Shakthi Prasad ತಂದೆ ಮಗ ಅನ್ನೋ ಬಂದದ ಅನುಬಂಧದ ಒಂದು ಸತ್ಯ ಕಥೆ

Previous article

You may also like

Comments

Leave a reply

Your email address will not be published. Required fields are marked *

three × three =