Shakthi Prasad, ಕನ್ನಡ ಚಿತ್ರ ಪ್ರೇಮಿಗಳು ಎಂದೂ ಮರೆಯದ ಹೆಸರು.. ಸಿನಿಮಾದಲ್ಲಿ ಬರುವ ಒಬ್ಬ ಮಮತೆಯ ತಂದೆಯಾಗಿರಬಹುದು, ಖಳನಾಯಕನಾಗಿರಬಹುದು, ಯಾವುದೇ ಪಾತ್ರವಾದರೂ, ಜೀವ ತುಂಬಿ ಅಭಿನಯಿಸಿ ತಮ್ಮ character ಒಳಗೆ ಪರಕಾಯ ಪ್ರವೇಶ ಮಾಡುತ್ತಿದ್ದ ಹೆಮ್ಮೆಯ ಕಲಾವಿದ..
ಶಕ್ತಿಪ್ರಸಾದ್ ಅವರಿಗೆ ಚಿಕ್ಕಂದಿನಿಂದಲೂ police inspector ಆಗಬೇಕು ಎಂಬ ಮಹಾದಾಸೆ ಇತ್ತು.. ಆದರೆ ಜೀವನದ ಅನಿವಾರ್ಯತೆ, ಅವಶ್ಯಕತೆ ಅವರನ್ನ ಮೊದಲು ಒಂದು ಶಾಲೆಯಲ್ಲಿ ದೈಹಿಕ ಶಿಕ್ಷಕ (PT master) ಕಾರ್ಯವನ್ನು ನಿರ್ವಹಿಸುವ ಹಾಗೆ ಮಾಡಿತು.. ಕಾಲ ಉರುಳಿದಂತೆ ಶಕ್ತಿಪ್ರಸಾದ್ ಅವರು ಬಣ್ಣದ ಬದುಕಿಗೆ ಬಂದು ನೂರಾರು ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನೆ ಮನೆ ಮಾತದರೂ ಆದರೆ ಅವರು ಆಸೆ ಪಟ್ಟಂತೆ Police officer ಆಗಲು ಆಗಲಿಲ್ಲ..
ಅವರ ಮಗ ಶ್ರೀನಿವಾಸ್ ಸರ್ಜಾ ಹುಟ್ಟಿದ ಮೇಲೆ, Oh! I’m Sorry , ಶ್ರೀನಿವಾಸ್ ಸರ್ಜಾ ಅಂದರೆ ಬಹುಶಹ ಕೆಲವರಿಗೆ ಅರ್ಥ ಆಗಲ್ಲ ಅನ್ಸುತ್ತೆ.. ಈ ಶ್ರೀನಿವಾಸ್ ಸರ್ಜನೆ ನಮ್ಮ ಪ್ರೀತಿಯ Arjun Sarja.. “ನನ್ನ ಆಸೆಯಂತೂ ನೆರವೇರಲಿಲ್ಲ. ನನ್ನ ಮಗನನ್ನು ಪೋಲಿಸ್ ಅಧಿಕಾರಿಯಾಗಿ ಮಾಡಿ ನನ್ನ ಕನಸನ್ನು ನನಸು ಮಾಡ್ಕೋತೀನಿ” ಎಂಬ ತುಂಬಾ ನಿರೀಕ್ಷೆ ಇಟ್ಟು ಕೊಂಡಿದ್ದರು.. ಈ ನಿಟ್ಟಿನಲ್ಲಿ ಅರ್ಜುನ್ ಸರ್ಜಾ ಅವರಿಗೆ ಅವರ ಸಣ್ಣ ವಯಸ್ಸಿನಲ್ಲೇ ವ್ಯಾಯಾಮ, ಗರಡಿ, ದೈಹಿಕ ಕಸರತ್ತು ಈ ಎಲ್ಲಾ ಚಟುವಟಿಕೆಗಳ ಮೇಲೆ ಸಾಕಷ್ಟು ಗಮನಹರಿಸುತ್ತಿದ್ದರು..
ಒಮ್ಮೆ ಸಾಕಷ್ಟು ದೇಹವನ್ನು ದಂಡಿಸಿ,ಕಸರತ್ತು ಮಾಡಿ ಎದಣಿದು, ಮನೆಗೆ ಬಂದು ಮಲಗಿದ್ದಾಗ ಮಗನ ಕಾಲುಗಳನ್ನು ಒತ್ತುತ್ತಾ ಕೂತಿದ್ದರು ಶಕ್ತಿಪ್ರಸಾದ್.. ನಿದ್ರೆಯಿಂದ ಎಚ್ಚರವಾಗಿ ಅರ್ಜುನ ಅವರು “ಅಪ್ಪ..!! ಯಾಕಪ್ಪ..?? ಕಾಲನ್ನ ಒತ್ತುತ್ತಾ ಇದಿಯಾ??” ಅಂತ ಕೇಳ್ದಾಗ, “ನನ್ನ ಆಸೆಯನ್ನ ನೆರವೇರಿಸೋಕೆ ನೀನು ಇಷ್ಟು ಶ್ರಮ ವಹಿಸಬೇಕಾದರೆ, ನಿನ್ನ ನೋವನ್ನ ನಾನು ತಗೊಳಕ್ಕಾಗಲ್ಲ.. ಆದರೆ ಅದನ್ನ ಸ್ವಲ್ಪ ಮಟ್ಟಿಗಾದ್ರೂ ಸುಧಾರಣೆ ಮಾಡೋ ಕೆಲಸ ಮಾಡ್ತಾ ಇದೀನಿ.. ನೀನು ಮಲ್ಕೊಂಡ್ rest ತಗೋಪ..” ಎಂದು ಬಹಳ ಪ್ರೀತಿಯಿಂದ ಹೇಳದ್ರಂತೆ..
1973 ರ ಸಮಯ.. Bruclee ಅವರ ‘Enter the Dragon ‘ ಬಿಡುಗಡೆಯಾದ ಸಂದರ್ಭ.. ಆ ಪೀಳಿಗೆಯವರಿಗೆ ಆ ಚಿತ್ರದ Craze ಏನು ಎಂಬುದು ಬಹಳ ಚೆನ್ನಾಗಿ ಗೊತ್ತಿತ್ತು.. Bruclee ಅವರ ಪಾತ್ರದ ಪ್ರಭಾವ ಅರ್ಜುನ್ ಸರ್ಜಾ ಅವರ ಸ್ವಭಾವದ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು..
ಆಸು ಪಾಸಿನ ಸಮಯದಲ್ಲೇ ಕರ್ನಾಟಕ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿ ‘ಶ್ರೀ ಸಾಂಗ್ಲಿಯಾನ’ ಅವರ ಕೆಲಸದ ವೈಖರಿಯ ಬಗ್ಗೆ ಕೂಡ ಪತ್ರಿಕೆಗಳಲ್ಲಿ ಸಾಕಷ್ಟು articles ಬರುತ್ತಿದ್ದವು.. ಇದನ್ನೆಲ್ಲ ಓದಿ ನಾನು ಕೂಡ ಸಾಂಗ್ಲಿಯಾನ ಅವರ ರೀತಿ ಒಬ್ಬ ನಿಷ್ಠಾವಂತ ಪೊಲೀಸ ಅಧಿಕಾರಿಯಾಗಬೇಕು ಅನ್ನೋ ಅರ್ಜುನ್ ಸರ್ಜಾ ಅವರ ಆಸೆ ಮತ್ತಷ್ಟು ದುಪ್ಪಟ್ಟಾಯ್ತು..
ಆದರೆ ವಿಧಿಯ ಬರಹ ಚಿತ್ರರಂಗದಲ್ಲಿ ನಿರ್ದೇಶಕರು ಬರೆದ ಪಾತ್ರಗಳ ಬರಹದಿಂದ ಅರ್ಜುನ್ ಸರ್ಜಾ ಅವರು ಇಡೀ ದಕ್ಷಿಣ ಭಾರತದಲ್ಲೇ ಒಬ್ಬ ದೊಡ್ಡ ಕಲಾವಿದನಾಗಿ, South India ಸೂಪರ್ ಸ್ಟಾರ್ ಆಗಿ ಪ್ರಸಿದ್ಧಿಯಾದರು..
ಶಕ್ತಿಪ್ರಸಾದ್ ಅವರ ಕನಸು ನನಸಾಗಲಿಲ್ಲ..
ಅರ್ಜುನ್ ಸರ್ಜಾ ಅವರ ಮೇಲೆ ಬಾಲ್ಯದಲ್ಲಿinspire ಆದ, influence ಆದ ನಿಜ ಜೀವನದ ಪಾತ್ರಗಳು – ‘ಬ್ರೂಸ್ ಲೀ’ ಹಾಗೂ ‘ಸಾಂಗ್ಲಿಯಾನ’ ಅವರ ಪ್ರಭಾವಳಿಗಳನ್ನು ಮೈಗೇರಿಸಿಕೊಂಡು ಅವರ ಸಾಕಷ್ಟು ಚಿತ್ರಗಳಲ್ಲಿ ಶಕ್ತಿಪ್ರಸಾದ್ ಹಾಗೂ ಅರ್ಜುನ್ ಸರ್ಜಾ ಅವರ ಕನಸನ್ನ ಬೆಳ್ಳಿ ಪರದೆ ಎಂಬ ಬಿಳಿ ವಸ್ತ್ರಸುಂದರಿಯ ಮೇಲೆ ಮನಸ್ಸನ್ನ ಮಾಡಿಕೊಂಡರು.. ಅಂದರೆ, ಸಾಕಷ್ಟು ಚಿತ್ರಗಳಲ್ಲಿ ಅರ್ಜುನ್ ಅವರು ಧೀರ, ದಿಟ್ಟ ನಿಷ್ಠ ಪೊಲೀಸ ಅಧಿಕಾರಿಯಾಗಿ ನಟಿಸಿ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆಯನ್ನು ಗಿಟ್ಟಿಸಿಕೊಂಡು ಆಕ್ಷನ್ ಕಿಂಗ್ ಅನ್ನಿಸಿಕೊಂಡರು..
ಇದನ್ನೆಲ್ಲಾ ನೋಡಿದಾಗ ಹಂಸಲೇಖ ಅವರು ಗೀಚಿದ ಸಾಲು ನನ್ನ ಮನಸ್ಸಿಗೆ ಈಗ ಕಾಡುತ್ತಿದೆ,
“ಅದೃಷ್ಟ ಇರಬೇಕು, ಅವಕಾಶ ಸಿಗಬೇಕು, ಆಗ್ತಿವಿ ನಾವು ಕೂಡ ಸೂಪರ್ ಸೂಪರ್ ಸ್ಟಾರ್..
ಗುರುಬಲ ಬರಬೇಕು, ಬೆನ್ನು ತಟ್ಟೋರಿರಬೇಕು, ಆಗ್ತಿವಿ ನಾವು ಕೂಡ ಸೂಪರ್ ಡೂಪರ್ ಸ್ಟಾರ್..
ಸ್ಟಾರ್ ಸ್ಟಾರ್ ಸ್ಟಾರ್ ಇದ್ರೆ ಎಲ್ಲವೂ ಸಿನಿಮಾ ಸರ್..
Comments