ಸಿನಿಮಾ ಸರಸ್ವತಿ

Balakrishna ಅವರ ಬಗ್ಗೆ ಒಂದು ಮುಚ್ಚಿಹೋದ ಸತ್ಯ ಕಥೆ..

0
balakrishna

ಎಲ್ಲರಿಗೂ ನಿಮ್ಮ ರಘುರಾಮ್ ಮಾಡುವ ನಮಸ್ಕಾರಗಳು.  ಬಹಳ ದಿನಗಳಾಯಿತು, ಅಕ್ಷರಗಳ ಮೂಲಕ ನಿಮ್ಮೆಲ್ಲರ ಜೊತೆ ನಾನು ಮಾತಾಡಿ. ಕೆಲಸಗಳ ಒತ್ತಡ ಹಾಗೂ ಕೆಲ ವೈಯಕ್ತಿಕ ಕಾರಣಗಳಿಂದ ಬರವಣಿಗೆಯ ಕಡೆ ಗಮನಹರಿಸಲು ಸ್ವಲ್ಪ ಕಷ್ಟವಾಯಿತು.. ಇನ್ಮುಂದೆ ಸಾಧ್ಯವಾದಷ್ಟು ಅಪರೂಪದ ವಿಚಾರಗಳನ್ನ ಸತ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ..ಪ್ರೀತಿ ಇರಲಿ, ಪ್ರೋತ್ಸಾಹವಿರಲಿ..

ಈಗ ನಾನು ಹೇಳಲು ಹೊರಟಿರುವ ಒಂದು ಸತ್ಯ ಕಥೆ ಕನ್ನಡ ಚಿತ್ರರಂಗದ ಅತ್ಯಾದ್ಭುತ ಕಲಾವಿದ ಶ್ರೀ ಬಾಲಕೃಷ್ಣ(ಬಾಲಣ್ಣ ) ಅವರಿಗೆ ಸಂಬಂಧ ಪಟ್ಟಿದ್ದು.. ನಿಮ್ಮನ್ನೆಲ್ಲ ನಾನು 63 ವರ್ಷಗಳ ಹಿಂದಿನ Flash back ಗೆ ಕರ್ಕೊಂಡು ಹೋಗ್ತಾ ಇದ್ದೀನಿ… ಆಗ ಅಂದಿನ Madras ಇಂದಿನ Chennai ನಲ್ಲಿ ನಮ್ಮ ಚಿತ್ರರಂಗದ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿದ್ದ ಸಂದರ್ಭ.. Madras ಇನ ಒಂದು Studio ದಲ್ಲಿ ಬಾಲಣ್ಣ ಹಾಗೂ ಮತ್ತೊಬ್ಬ ಕನ್ನಡ ಚಿತ್ರರಂಗದ ದಿಗ್ಗಜ ಜೀವಿ ಅಯ್ಯರ್ ಒಂದು ಚಿತ್ರದ ಚಟುವಟಿಕೆಯಲ್ಲಿ ನಿರತವಾಗಿದ್ದಾರೆ.. GV ಅಯ್ಯರ್ ಹಾಗೂ ಬಾಲಣ್ಣ ತುಂಬಾ ಆತ್ಮೀಯ ಸ್ನೇಹಿತರು.. ಗಳಸ್ಯಕಂಠಸ್ಯ ಅಂತ ಹೇಳಿದ್ರು ತಪ್ಪಾಗಲ್ಲ.. ಸಲಗೆಯಿಂದ, ಪ್ರೀತಿಯಿಂದ ಬಾಲಣ್ಣರವರನ್ನ ಅಯ್ಯರ್ ರವರು ‘ಕಿವುಡ’ ಎಂದೇ ಕರೆಯುತ್ತಿದ್ದರು.. “ಆಯ್ತಪ್ಪ” ಅಂದು, ಅದಕ್ಕೆ ಪ್ರತ್ಯುತ್ತರವಾಗಿ GV ಅಯ್ಯರ್ ಅವರಿಗೆ ಬಾಲಣ್ಣನವರು ‘Great Villian Iyer’ ಎಂದು ರೇಗಿಸುತ್ತಿದ್ದರು..

Balakrishna and GV Iyer

Studio ಒಂದರಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದಾಗ, ಆ Studio Landline ಗೆ ಒಂದು ದೂರವಾಣಿ ಕರೆ ಬಂದಿದೆ.. ಆ Phone Call ಮೂಲಕ ಗೊತ್ತಾದ ವಿಷ್ಯವೇನೆಂದರೆ Balakrishna ಅವರಿಗೆ ಕೆಲ ನಿಮಿಷಗಳ ಮುಂಚೆ ಒಂದು ಹೆಣ್ಣು ಮಗು ಜನಿಸಿದ್ದಾಳೆ ಎಂದು.. ವಿಷಯ ಕೇಳಿದ ಬಾಲಣ್ಣರವರ ಕಣ್ಣಿನಲ್ಲಿ ಆನಂದ ಭಾಷ್ಪ, ಭಾವನೆಯ ಸಾಗರವೇ ಅಲೆಗಳ ರೂಪದಲ್ಲಿ ಹೊರಹೊಮ್ಮುತ್ತಿದ್ದ ಘಳಿಗೆ.. ಅತ್ಯಂತ ಸಂತೋಷವಾಗಿದ್ದ ಬಾಲಣ್ಣ Phone ಅನ್ನು ಇಟ್ಟು ಏನನ್ನು ಮಾಡಬೇಕೆಂದು ತೋಚದೆ pen paper ಹಿಡಿದುಕೊಂಡು ಆ ಘಳಿಗೆ, ಆ ನಿಮಿಷ, ಆ ಹೊತ್ತಿನಲ್ಲಿ ಮಾತುಗಳು, ಭಾವನೆಗಳನ್ನ ಅಕ್ಷರ ರೂಪದಲ್ಲಿ ತೆರೆದಿಟ್ಟರು..

ಈ ವಿಷಯವನ್ನು ಅರಿತು ಶುಭಾಶಯಗಳನ್ನು ಕೋರಿ ಪಕ್ಕದಲ್ಲಿ ಇದ್ದ GV Iyer, ಬಾಲಣ್ಣ ಅವರು ಬರೆದಿರುವ ಸಾಲುಗಳನ್ನು ಓದಿ, ಆಶ್ಚರ್ಯ ಪಟ್ಟು,ಸಂತೋಷ ಪಟ್ಟು ಈ ಸಾಲುಗಳನ್ನ, ‘ಈ ಸಾಹಿತ್ಯವನ್ನ ನನ್ನ ಮುಂದಿನ ಚಿತ್ರಕ್ಕೆ ಬಳಸ್ತೀನಿ ಕಣೋ.. ಎಂದು order ಮಾಡಿ ಹೇಳಿದ GV Iyer ಒಂದು ನೇರವಾಗಿಯೇ ಅವರ ಅಭಿಪ್ರಾಯವನ್ನು ತಿಳಿಸಿದರು.. ಅದೇನೆಂದರೆ ಈ ಹಾಡಿನ ಸಾಹಿತ್ಯಕ್ಕೆ ನನ್ನ ಹೆಸರನ್ನೇ ಬಳಸಿಕೊಳ್ಳುವೆ, ಎಂದು ಪ್ರೀತಿಯಿಂದ, ಅಧಿಕಾರದಿಂದ, ಸಲಿಗೆಯಿಂದ, ಸ್ನೇಹದಿಂದ ಬಾಲಣ್ಣನವರ ಬಳಿ ಐಯ್ಯರವರು ಹೇಳಿದ್ದಾರೆ.. ಆ ಖುಷಿಯ ಸಂದರ್ಭದಲ್ಲಿ ನಗುನಗುತ್ತಲೇ ಬಾಲಣ್ಣ ತಲೆ ಆಡಿಸುತ್ತಾ “ನನ್ನ ನಿನ್ನ ಸ್ನೇಹದ ಮಧ್ಯದಲ್ಲಿ ನೀನು ತಾನು ಅನ್ನೋದು ಬೇಡ.. ನಾನು ಬರೆದರು ಅದು ನೀನು ಬರೆದ ಹಾಗೆ. ನೀನು ಚಿತ್ರ ಮಾಡಿದರು ಅದು ನಾನೇ ಮಾಡಿದ ಹಾಗೆ..” ಎಂದು ಒಬ್ಬರಿಗೊಬ್ಬರು ಅವರ ಸ್ನೇಹದ ಮೇಲೆ, ಅವರ ವೃತ್ತಿಯ ಮೇಲೆ ಇಟ್ಟ ಗೌರವಕ್ಕೆ ನಂಬಿಕೆಗೆ ಇದು ಸಾಕ್ಷಿ..

GV Iyer

Finally ಆ ಹಾಡು ಯಾವುದು?? ಆ ಸಾಲುಗಳು ಯಾವುದು?? ಯಾವ ಚಿತ್ರದ್ದು?? ಇಲ್ಲಿದೆ ಉತ್ತರ…
GK Venkatesh ಅವರ ರಾಗ ಸಂಯೋಜನೆಯಲ್ಲಿ 1962 ರಲ್ಲಿ ತೆರೆ ಕಂಡ ” ತಾಯಿ ಕರಳು ” ಚಿತ್ರದ “ಬಾ ತಾಯಿ ಭಾರತೀಯೇ ಭಾವ ಭಾಗೀರತಿಯೇ” ಎಂಬ ಅದ್ಭುತವಾದ ಹಾಡು ಬಾಲಣ್ಣನವರು ಮಗಳು ಹುಟ್ಟಿದ ಸಂತೋಷದ ಸಂದರ್ಭದಲ್ಲಿ ಬರೆದಂತಹ ಗೀತೆ.. ಈ ಹಾಡು ಬರೆದ ನಂತರ ಬಾಲಣ್ಣನವರು ಅವರ ಮಗಳಿಗೆ ‘ಭಾರತಿ’ ಎಂದೇ ಹೆಸರಿಟ್ಟರು..
ಇಂದಿಗೂ ನೀವು ‘ತಾಯಿಯ ಕರಳು’ ಚಿತ್ರದ details ನೋಡಿದರೆ ಈ ಹಾಡಿಗೆ ಸಾಹಿತ್ಯ GV Iyer ಅಂತಾನೆ ಇದೆ.. ದಿನಗಳು ಕಳೆಯುತ್ತೇ.. ವರ್ಷಗಳು ಉರುಳತ್ತೆ.. ಆದರೆ ಹಿರಿಯರು ಮಾಡಿದ ಕೆಲಸಗಳು ಸಾಧನೆಗಳು ಶಾಶ್ವತವಾಗಿರುತ್ತದೆ.. ಕೆಲವು ಮುಚ್ಚಿಹೋದ ಸತ್ಯಗಳು ಸಮಯ ಬಂದಾಗ ತಾನಾಗಿಯೇ ಹೊರಬರುತ್ತೆ..

Lyrics
Raghuram

My Birthday Lesson !! ನನ್ನ ಹುಟ್ಟು ಹಬ್ಬದ ಪಾಠ !!

Previous article

“Suggi” ಚಿತ್ರದ ನಾಯಕಿಯ ತಂದೆಗೆ ಏನಾಗಿತ್ತು ??

Next article

You may also like

Comments

Leave a reply

Your email address will not be published. Required fields are marked *

sixteen − one =