ಸಿನಿಮಾ ಸರಸ್ವತಿ

Niveditha Jain ಅವರಿಗೆ ಅವರ ಸಾವಿನ ಬಗ್ಗೆ ಮೊದಲೇ ತಿಳಿದಿತ್ತ??

6

ನಿಮ್ಮೆಲ್ಲರ ಬಳಿ ನನ್ನದೊಂದು ಹೃದಯಪೂರ್ವಕ ಮನವಿ.. ಸುಮಾರು ಎರಡು ವರ್ಷಗಳಿಂದ ನಿವೇದಿತಾ ಜೈನ್ ಅವರ ಕುಟುಂಬವನ್ನು ಹುಡುಕಲು ಸತತ ಪ್ರಯತ್ನ ಪಡುತ್ತಿದ್ದೇನೆ. ನಾನು ಯಾವ ಕಡೆ ಪಯಣಿಸಿದರೂ, ನನಗೆ ಸಿಗುತ್ತಿರುವುದು Dead end. ಅವರ ಕುಟುಂಬದವರು ಇವಾಗ ಯಾರ್ಯಾರಿದ್ದಾರೆ, ಎಲ್ಲಿದ್ದಾರೆ ಎಂಬ ಸಣ್ಣ ಸುಳಿವು ಸಿಕ್ತಾ ಇಲ್ಲ. ಈ Blog ಅನ್ನು ಓದಿದ ಯಾರಿಗಾದರೂ ಅವರ ಕುಟುಂಬದ ಬಗ್ಗೆ ಮಾಹಿತಿ ಇದ್ದಲ್ಲಿ ದಯಮಾಡಿ 6363821739 ನನ್ನ ಈ Whatsaap number ಗೆ ಸಂಪರ್ಕಿಸಿ ಅಥವಾ rrdreamfactory@gmail.com ಈ ನನ್ನ mail ID ಗೆ ಆದ್ರೂ ಸಂದೇಶ ಕಳಿಸಿ


ಬದುಕು ಅನಿರೀಕ್ಷಿತ, ಸುಖ ದುಃಖ ನೋವುಗಳಂತೂ ಶಾಶ್ವತ. 1979, ಜೂನ್ 9, Captain ರಾಜೇಂದ್ರನ್ ಜೈನ್ ಹಾಗೂ ಗೌರಿ ಪ್ರಿಯ ದಂಪತಿಗಳಿಗೆ ಹುಟ್ಟಿದ ಮುದ್ದಿನ ಕೂಸು ಈ ನಿವೇದಿತಾ ಜೈನ್. ಇವರಿಗಿದ್ದ ಮತ್ತೊಂದು ಪ್ರೀತಿಯ ಅಡ್ಡ ಹೆಸರು ‘ರಿಂಕಿ’
ಮುಗ್ಧ,ಸುಂದರ ಹುಡುಗಿಯಾದ ನಿವೇದಿತಾ ಜೈನ್ 1994ರಲ್ಲಿ Miss Bangalore ಎಂಬ ಪಟ್ಟ ಕೂಡ ದಕ್ಕಿಸಿಕೊಂಡರು. ಇದಾದ ಎರಡೇ ವರ್ಷಗಳಲ್ಲಿ, ಅವರಿಗೆ ಸುಮಾರು 16, 17 ವರ್ಷಗಳಿರಬಹುದು, ರಾಘಣ್ಣ ಅವರೊಂದಿಗೆ ” ಶಿವರಂಜಿನಿ” ಅನ್ನೋ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.
ಅರ್ಜುನ್ ಸರ್ಜಾ ಹಾಗೂ ತಬು ಅಭಿನಯದ ‘ತಾಯಿನ್ ಮಣಿ ಕೊಡಿ’ ಎಂಬ ತಮಿಳು ಚಿತ್ರ, ” ಬಾಳಿದ ಮನೆ” ಹಾಗೂ ರಮೇಶ ಅರವಿಂದ್ ಅವರೊಂದಿಗೆ ಅಮೃತವರ್ಷಿಣಿ ಚಿತ್ರದಲ್ಲಿ ಭಲೇ ಭಲೆ ಚಂದದ ಚಂದುಳ್ಳಿ ಹಣ್ಣಾಗಿ Cameo ಪಾತ್ರದಲ್ಲಿ ನಟಿಸಿದ್ದರು. ಶಿವಸೈನ್ಯ, ನೀ ನುಡಿದ ಮಲ್ಲಿಗೆ, ಬಾಳಿನ ದಾರಿ ಇನ್ನು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಇದು ನಿವೇದಿತ ಜೈನ್ ಅವರ ಸಿನಿ ಬದುಕಿನ ಬಗ್ಗೆ ಒಂದು ಸಣ್ಣ Brief.

Niveditha jain


ಈಗ main ವಿಷಯಕ್ಕೆ ಬರ್ತೀನಿ. ಜಯಶ್ರೀದೇವಿಯ ನಿರ್ಮಾಣ ಸಂಸ್ಥೆಯ ಹೆಸರು ‘ಚಿನ್ನಿ ಚಿತ್ರ’. ಈ ಸಂಸ್ಥೆಯ ಅಡಿಯಲ್ಲಿ ತಯಾರಾಗಿ, ದಾಖಲೆಯ ಪ್ರದರ್ಶನ ಕಂಡು ಐತಿಹಾಸಿಕ ಗೆಲುವು ಪಡೆದ ಚಿತ್ರ, ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಮ್ಮೂರ ಮಂದಾರ ಹೂವೆ’. ಸಿನಿಮಾ ಯಾವಾಗ ದೊಡ್ಡ success ಆಯಿತೋ, ನಿರ್ಮಾಪಕಿ ಜಯಶ್ರೀದೇವಿ ಅವರಿಗೆ ಈ success ನ encash ಮಾಡಿಕೊಳ್ಳಲು, same combination ನಲ್ಲಿ ಇನ್ನೊಂದು ಚಿತ್ರ ಮಾಡಬೇಕು ಅನ್ನೋ ಆಸೆ, ಹಂಬಲ, ಹಠ ಶುರುವಾಯಿತು. ಈ ನಿಟ್ಟಿನಲ್ಲಿ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರಿಗೆ ನಿರ್ಮಾಪಕಿ ಜಯಶ್ರೀ ದೇವಿ ಅವರು ಒಂದು script ಮಾಡಬೇಕೆಂದು pressure ಹಾಕಿದರು. ದೇಸಾಯಿ ಅವರ ಬಳಿ ಯಾವುದೇ script ಇರಲಿಲ್ಲ, ಕಥೆಯೂ ಇರಲಿಲ್ಲ thought ಕೂಡ ಇರಲಿಲ್ಲ.

Sunil Kumar Desai

ನಿರ್ಮಾಪಕರ ಒತ್ತಡಕ್ಕೆ ಮಣಿದು, ಒಂದು ಕಥೆ ಹಾಗೂ ಚಿತ್ರ ಕಥೆಯನ್ನು ಸಿದ್ಧ ಮಾಡಿ, “ನಮ್ಮೂರ ಮಂದಾರ ಹೂವೆ” ಚಿತ್ರದಲ್ಲಿ ನಟಿಸಿದ ನಾಯಕ ನಟರು, ಅದೇ ಸಂಗೀತ ನಿರ್ದೇಶಕ, ಅದೇ ನಿರ್ಮಾಣ ಸಂಸ್ಥೆ, ಎಲ್ಲರೂ ಒಟ್ಟಾಗಿ ಸೇರಿ announce ಮಾಡಿದ ಚಿತ್ರವೇ “ಪ್ರೇಮ ರಾಗ ಹಾಡು ಗೆಳತಿ”
ಆದರೆ ಇಲ್ಲಿ ಒಂದು ಪ್ರಮುಖವಾದ ಬದಲಾವಣೆ ಆಗಿದ್ದೇನೆಂದರೆ, “ನಮ್ಮೂರ ಮಂದಾರ ಹೂವೆ” ಯಲ್ಲಿ ಪ್ರೇಮ ಅವರು ನಾಯಕಿ ಆಗಿದ್ದರೆ, ಈ ಚಿತ್ರದಲ್ಲಿ ನಿವೇದಿತಾ ಜೈನ್ ಅವರು ನಾಯಕಿಯಾಗಿ ಆಯ್ಕೆಯಾದರು. ಆ ಚಿತ್ರದಲ್ಲಿ ಶಿರಸಿಯ back drop ಇದ್ದರೆ, ಈ ಚಿತ್ರ “ಪ್ರೇಮ ರಾಗ ಹಾಡು ಗೆಳತಿ” ಕೊಲ್ಲೂರು – ಕುಂದಾಪುರ back drop ನಲ್ಲಿ ನಡೆಯುತ್ತೆ.

jayashree Devi

ಕೊಲ್ಲೂರು – ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡಿತಾ ಇದೆ. ಒಂದು ದಿನ ಸಿಕ್ಕಾಪಟ್ಟೆ ಮಳೆ. ಬೆಳಗ್ಗೆ ಚಿತ್ರೀಕರಣಕ್ಕೆ ಎಂದು ಹೊರಟ ಚಿತ್ರ ತಂಡ, ಮಳೆರಾಯನ ನಿರ್ಗಮನಕ್ಕೆ ಕಾಯುತ್ತ ಕೂತಿತ್ತು. ಜೋರಾದ ಗಾಳಿ, ಗುಡುಗು, ಸಿಡಿಲಿನಿಂದ ಇದ್ದ ವರುಣನ ಆರ್ಭಟ ನಿಲ್ಲುತ್ತೆ ಅಂತ ಎಷ್ಟು ಹೊತ್ತು ಕಾದರೂ ಅದು ನಿಲ್ಲಲಿಲ್ಲ. ಮೋಡದೊಳಗೆ ಸೂರ್ಯ ಕರಗುತ್ತಾ ಬಂದ. Outdoor ಚಿತ್ರೀಕರಣಕ್ಕೆ ಬೇಕಾದ ಬೆಳಕು ಕೂಡ ಕಮ್ಮಿ ಆಗುತ್ತಾ ಬಂತು. ಇದನ್ನ ನೋಡಿ ನಮ್ಮ ನಿರ್ದೇಶಕ ದೇಸಾಯಿ ಅವರು ” ಇವತ್ತು ಚಿತ್ರೀಕರಣ ಮಾಡೋದು ಬೇಡ, ನಾಳೆ ಮಾಡೋಣ ಅಂತ ನಿರ್ಧರಿಸಿದ್ದರು”

Shooting ಇಲ್ಲ ಅಂತ ಗೊತ್ತಾದ ತಕ್ಷಣ, Artists, technicians ಎಲ್ಲರೂ ಒಟ್ಟಾಗಿ ಸೇರಿ ಹಾಡು, ಹರಟೆ, ಮಾತುಕತೆ ಪ್ರಾರಂಭಿಸಿದರು. ಆ ಸಮಯದಲ್ಲಿ ದೇವಸ್ಥಾನದ ಆಸು ಪಾಸಿನಲ್ಲಿ ಓಡಾಡುತ್ತಿದ್ದ, ಗಿಣಿ ಮರಿಯನ್ನು ತನ್ನ ಪುಟ್ಟ ಪಂಜರದೊಳಗೆ ಇಟ್ಟು, ಭವಿಷ್ಯವನ್ನು ನುಡಿಯುವ ಒಬ್ಬ astrologer ( ಜ್ಯೋತಿಶಿ) ಆ ಜಾಗಕ್ಕೆ ಬಂದರು. ಇಚ್ಛೆ ಇದ್ದವರು ಶಾಸ್ತ್ರವನ್ನು ಕೇಳಿದರು, ಅವರ ಭವಿಷ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು.

ನಿವೇದಿತ ಜೈನ್ ಅವರಿಗೂ ಗಿಣಿ ರಾಮನ ಮೂಲಕ ತನ್ನ ಮುಂದಿನ ಜೀವನ, ಬದುಕು, ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಗಿಣಿ ರಾಮ ಬಂದು, ಒಂದು card ಅನ್ನು ತೆಗೆದು ಆ ಜ್ಯೋತಿಷಿ ಕೈಗೆ ಇಟ್ಟಾಗ ಆತ, ಆ card ನಲ್ಲಿ ಬರೆದಿರುವ ವಿಚಾರಗಳನ್ನು ನಿವೇದಿತ ಜೈನ್ ಅವರಿಗೆ ತಿಳಿಸಿ, ಅವರ ಎಡಗೈಯನ್ನು ಒಮ್ಮೆ ತೋರಿಸಲು ಹೇಳಿದರು. ನಿವೇದಿತಾ ಅವರ ಹಸ್ತ ರೇಖೆಗಳನ್ನು ಕೆಲ ಹೊತ್ತು ದೀರ್ಘವಾಗಿ ಗಮನಿಸುತ್ತಾ, ಅವರ ಬದುಕಿನಲ್ಲಿ ನಡೆದ ಕೆಲವು ವಿಚಾರಗಳನ್ನ ಹೇಳಿ ” ನಿಮ್ಮ ಆಸೆ ಕನಸುಗಳು ಏನೇನಿದೆ ಎಲ್ಲಾ ಆದಷ್ಟು ಬೇಗ ಮುಗಿಸಿಕೊಳ್ಳಿ. ನಿಮ್ಮ ಬಳಿ ಜಾಸ್ತಿ ಸಮಯ ಇಲ್ಲ” ಎಂದು ಮಾರ್ಮಿಕವಾಗಿ ಹೇಳಿ ಹೊರಟರು.

Niveditha jain

ಈ ಮಾತು ನಿವೇದಿತಾ ಜೈನ್ ಅವರಿಗೆ ತುಂಬಾ ಕಾಡಲು ಪ್ರಾರಂಭಿಸಿತು. ” ಸಮಯ ಇಲ್ಲ ಅಂದ್ರೆ ಏನು ಅರ್ಥ. ನಾನು ಬೇಗ ಕಾಲವಾಗ್ತಿನ? ನಾನು ಅಲ್ಪ ಆಯುಶಿನ ?” ತಮ್ಮ ಆತ್ಮೀಯರ ಬಳಿ ಯಾವಾಗಲೂ ಹೇಳಿಕೊಳ್ಳುತ್ತಿದ್ದರಂತೆ. ಆಗ ಅವರ ಸ್ನೇಹಿತರು, ಹಿತೈಷಿಗಳು “ಹಾಗೆಲ್ಲ ಏನು ಇಲ್ಲ” ಎಂದು ಮನಸ್ಸಿಗೆ ಧೈರ್ಯ ಕೊಟ್ಟಾಗ ಸ್ವಲ್ಪ ಸುಧಾರಿಸಿದಂತೆ ಕಂಡರೂ, ಅವರ ಒಳಗೆ ಅಡಗಿದ್ದ ಆ ಭಯ ಒಮ್ಮೊಮ್ಮೆ ನಿವೇದಿತ ಜೈನ್ ಮಂಕು ಹಾಗೂ ಮೌನ ಮಾಡುತ್ತಿತ್ತು.

ಹಿರಿಯ ಪತ್ರಕರ್ತ ದಿವಂಗತ ಶ್ರೀ ವಿಜಯಸಾರಥಿ ಅವರ ಬಳಿ ನಿವೇದಿತ ಜೈನ್ ಅವರು ಈ ವಿಚಾರವನ್ನು ಹಂಚಿಕೊಂಡಿದ್ದರಂತೆ. ನನ್ನ ಪತ್ರಿಕೋದ್ಯಮ ದಿನಗಳಲ್ಲಿ ವಿಜಯಸಾರಥಿ ಅವರು ಇದನ್ನು ನನ್ನ ಬಳಿ ಹಂಚಿಕೊಂಡಿದ್ದರು.

May 17, 1998 ರಾತ್ರಿ
ಅವರ ಮನೆಯ ಮೇಲಿಂದ ಕೆಳಗೆ ಬಿದ್ದು, ಗಂಭೀರವಾಗಿ ತಲೆಗೆ ಏಟು ಬಿದ್ದಿದ್ದರಿಂದ ಸುಮಾರು 23 ದಿನಗಳ ಕಾಲ ಕೋಮಾದಲ್ಲೇ ಇದ್ದರು. ಹುಟ್ಟಿದ ಹಬ್ಬ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಹಬ್ಬಾನೇ. ಅದರಲ್ಲೂ ನಿವೇದಿತಾ ಜೈನ್ ಅವರು 19ನೇ ವರ್ಷದ ಪ್ರಾಯಕ್ಕೆ ಕಾಲಿಟ್ಟ ಆ ದಿನಾ ನೆ June 9, 1998..
Yes, that was her birthday.
23 ದಿನಗಳಿಂದ ದಿನ, ವಾರ, ಘಳಿಗೆ, ಸಮಯ, ಏನನ್ನೂ ಅರಿಯದೆ ನಿದ್ದೆಯಲ್ಲೇ ಮಲಗಿದ್ದ ಆ ಜೀವಕ್ಕೆ ಅದರ ಹುಟ್ಟುಹಬ್ಬ ಬಂದಿದ್ದು ಗೊತ್ತಾಗಲಿಲ್ಲ. ಎದೆ ಬಡಿತ, ಉಸಿರೊಂದು ಬಿಟ್ಟರೆ ದೇಹದ ಯಾವ ಅಂಗವೂ ಎಚ್ಚರವಾಗಿರಲಿಲ್ಲ.
ದೇವರ ಆಟ ವಿಧಿಯ ಜೂಟಾಟ
ಆ “ಚಿಕ್ಕಮಂಗಳೂರಿನ ಚಿಕ್ಕ ಮಲ್ಲಿಗೆ”, “ಭಲೇ ಭಲೇ ಚಂದದ ಚಂದುಳ್ಳಿ ಚೆಲುವೆ”ಯ ದೇಹದ ಒಳಗಡೆ ಇದ್ದ ಆತ್ಮ,  ಪರಮಾತ್ಮನ ಬಳಿ ಸೇರಿದ ದಿವಸ June 10, 1998.

ಅವರವರ ಭಾವನೆಗೆ ಅವರವರ ಭಕುತಿಗೆ ; ಹಲವರು, ಕೆಲವು ರಾಜಕಾರಣಿಗಳ ಒಳಸಂಚು ಈ ಸಾವಿನಲ್ಲಿ ಇತ್ತು ಅಂತ ಹೇಳಿದ್ದೂ ಉಂಟು, ಇನ್ನು ಕೆಲವರು ಚಿತ್ರರಂಗದ ಕೆಲವು ಪ್ರಮುಖರ ಕೈವಾಡ, ಕೆಲವು ಒಳ ರಾಜಕೀಯಗಳು ಇತ್ತು ಅಂತ ಹೇಳಿದ್ದೂ ಉಂಟು. ಆದರೆ ಯಾವುದಕ್ಕೂ ನಿಖರವಾದ ಉತ್ತರವಿಲ್ಲ, ಸ್ಪಷ್ಟವಾದ ಮಾಹಿತಿ ಇಲ್ಲ, ಇದರಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಯಾರಿಗೂ ತಿಳಿದಿಲ್ಲ. ಆದರೆ ನನಗೆ ಅನಿಸ್ತಾ ಇರೋದು ದೇವರಿಗೆ ದಯೆ ಇಲ್ಲ ಸಾವೆದುರು ಜಯವಿಲ್ಲ.

Raghuram

Chiranjeevi Sarja, Meghana Raj ಗೆ ನಾ ಮಾಡಬೇಕಾಗಿದ್ದ ಸಿನಿಮಾ

Previous article

‘Soundarya’ ಭಾರತೀಯ ಚಿತ್ರರಂಗದ ಅಪರೂಪದ ವೈಡೂರ್ಯ

Next article

You may also like

6 Comments

  1. ಬದುಕಿ ಬಾಳಬೇಕಾದ ವ್ಯಕ್ತಿ, ಜೀವನವನ್ನು ನೋಡುವುದಕ್ಕಿಂತ ಮುಂಚೆ ನಶಿಸಿ ಹೋದರೆ, ಅವರ ಸುತ್ತ ಇರುವ ಜೀವಗಳಿಗೆ “ಈ ಜೀವನ ಇಷ್ಟೆನ” ಅನಿಸುತ್ತೆ. ನಿವೇದಿತಾ ಅವರ ತಂದೆ ತಾಯಿ ಹಾಗೂ ಬಂದುಗಳಿಗೆ ಆಗತಾ ಹಾಗೂ ತುಂಬಾಲಾರದ ನಷ್ಟ.

  2. ಕನ್ನಡದ ಅತ್ಯಂತ ಚಂದದ ನಟಿಮಣಿಯರಲ್ಲಿ ನಿವೇದಿತಾ ಜೈನ ಕೂಡಾ ಒಬ್ಬರು, ಪಾಪ ಟೀವಿಲಿ ಅವರ ಚಿತ್ರ, ಹಾಡು ಬಂದಾಗ ಪಾಪ ಅನಿಸುತ್ತೆ, ಬರೀ ವಿಕ್ಷಕರಾದ ನಮಗೆ ಹೀಗನ್ನಸಿದರೇ! ಅವರ ಹೆತ್ತವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಅದೆಷ್ಟು ನೋವಾಗಬೇಡ.
    ಸರ್, ನೀವು ಅವರ ಕುರಿತಾಗಿ ಮಾಹಿತಿ ಕಲೆಕ್ಟ ಮಾಡಿ, ನಮಗೆಲ್ಲಾ ಹಂಚಿ.

  3. Kannada industry would not have been the same without her. She would have taken it to a different level. Sometimes quick success is very scary.

  4. Kannada industry would not have been the same without her. She would have taken it to a different level. Sometimes quick success is very scary. But something terrible much have happened that night. Why was there no investigation?

  5. She would have taken it to a different level. Sometimes quick success is very scary. But something terrible much have happened that night. Why was there no investigation? Or was it covered up? How can anyone just fall off from their own home? She can never be forgotten. Sad!

  6. ನಿವೇದಿತಾ ಜೈನ ಮತ್ತು ದಿವ್ಯ ಭಾರತಿ ಒಂದೇ ರೀತಿ ಸಾವನ್ನು ಅಪ್ಪಿದರು (ಮಹಡಿಯ ಮೇಲಿಂದ ಬಿದ್ದು) ವಿಪರ್ಯಾಸ ಇಬ್ಬರು ಸಣ್ಣ ವಯಸ್ಸಿನಲ್ಲಿ ಉತ್ತುಂಗಕ್ಕೆ ಹೋದವರು

Leave a reply

Your email address will not be published. Required fields are marked *

16 + fourteen =