ನೂರೊಂದು ನೆನಪು

Shankar Nag ಜೊತೆ ನಾಯಕಿಯಾಗಿ ಆಯ್ಕೆಯಾಗಿದ್ದರು ನನ್ನ ದುರಾದೃಷ್ಟ ನಟಿಸೋಕೆ ಆಗಲಿಲ್ಲ..

0

ಒಂದಾದ ಮೇಲೆ ಒಂದರಂತೆ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಕಾವ್ಯ ಅವರಿಗೆ ಒಂದು ದಾಖಲೆಯ ಪ್ರಯೋಗಾತ್ಮಕವಾದ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು.. ದಿನೇಶ್ ಬಾಬು ಅವರ ನಿರ್ದೇಶನದಲ್ಲಿ Ananth Nag, Shankar Nag, Prabhakar, Srinath, ಈ ಎಲ್ಲಾ ದಿಗ್ಗಜರ ಸಮಾಗಮದಲ್ಲಿ ಕೇವಲ 48 ಗಂಟೆಗಳಲ್ಲಿ ಚಿತ್ರೀಕರಣ ಮಾಡಿದಂತ ಚಿತ್ರ ‘ಇದು ಸಾಧ್ಯ’.. Costume ಬದಲಾವಣೆಗಳಿಲ್ಲ.. Ramesh Aravind, Revati, Disco Shanti  ಶಾಂತಿ, ಅವಿನಾಶ್, ಮಹಾಲಕ್ಷ್ಮಿ, ದೇವರಾಜ್ ಈ ಪ್ರತಿಭಾವಂತರ ಸಾಗರದಲ್ಲಿ ನಾನು ತೊಡಗಿಸಿಕೊಳ್ಳಲು, ಗುರುತಿಸಿಕೊಳ್ಳಲು ಸಿಕ್ಕ ಬಹುದೊಡ್ಡ ಅವಕಾಶ ‘ಇದು ಸಾಧ್ಯ’ ಅನ್ನೋ ಚಿತ್ರ.. “ಯಾವುದೇ ಪಾತ್ರವಾದರೂ ಸರಿ, ಚಿತ್ರದಲ್ಲಿ ಬರುವ ರಾಜನ ಪಾತ್ರಕ್ಕೆ ಛತ್ರಿ ಹಿಡಿಯುವುದಾದರೂ ಸೈ” ಎಂದು ಹೇಳಿದ್ದೆ..

48 ಗಂಟೆಗಳಲ್ಲಿ ಚಿತ್ರೀಕರಣ ಮಾಡೋದೇ ಒಂದು thrilling experience.. ಈ ಚಿತ್ರ ಹಲವು ಭಾಷೆಗಳಲ್ಲಿ dubbing ಕೂಡ ಆಯ್ತು.. Guiness Record ಕೂಡ ದಾಖಲೆ ಆಯ್ತು.. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಎರಡು ಸೆಟ್ಟ ಹಾಕಲಾಗಿತ್ತು.. ಒಂದು ಆಸ್ಪತ್ರೆಯ ಸೆಟ್ ಆದರೆ ಮತ್ತೊಂದು ಡ್ರಾಮಾ rehearsal ದು.. ಈ 48 ಗಂಟೆಗಳ ಅವಧಿಯಲ್ಲಿ ಒಂದು ಹಾಡು ಕೂಡ ಮಾಡಲಾಗಿತ್ತು.. ‘ಇದು ಸಾಧ್ಯ’ ಚಿತ್ರದಲ್ಲಿ ಶಂಕರ್ ನಾಗ್ ಅವರೊಂದಿಗೆ ನಾನು ನಟಿಸಿದ್ದು ಬರೀ ಎರಡೆ ದಿನಗಳು.. ಆ ಎರಡು ದಿನದಲ್ಲಿ ಅವರನ್ನು ನೋಡಿ ನನಗೆ ಅನಿಸಿದ್ದು ಯಾರೋ ನನ್ನ ಅಣ್ಣ, ಚಿಕ್ಕಪ್ಪ, ತಮ್ಮ, ಸೋದರ ಮಾವ ಅವರ ಜೊತೆಗೆ ಬೆರೆತ ಭಾವನೆ ಹಾಗೂ ಅನುಭವ.. Set ನಲ್ಲೂ ಅಷ್ಟೇ, ಶಂಕರ್ ನಾಗ್ ಅವರು ತುಂಬಾ ತುಂಬಾ ಆರಾಮಾಗಿರೋರು.. ಬರೀ ಅವರ scene ಇದ್ದಾಗ ಬಂದು act ಮಾಡಿ ಹೋಗ್ತಾ ಇರ್ಲಿಲ್ಲ.. ನಮಗಂತೂ ಈ ಚಿತ್ರ ಯಾವಾಗ act ಮಾಡ್ತಾ ಇದ್ದೀವಿ?? ಯಾವಾಗ ಸುಮ್ನೆ ಮಾತಾಡ್ಕೊಂಡು ಕೂತಿದೀವಿ?? ಅನ್ನೋದೇ ಗೊತ್ತಾಗ್ತಿರ್ಲಿಲ್ಲ . ನಿರ್ದೇಶಕ ದಿನೇಶ್ ಬಾಬು ಮಲಯಾಳಂ, ತೆಲುಗು, ತಮಿಳು ಎಲ್ಲಾ ಚಿತ್ರರಂಗದಿಂದ ಕಲಾವಿದರನ್ನು ಕರೆಸಿ ತುಂಬಾ ಅಚ್ಚುಕಟ್ಟಾಗಿ ಈ ಚಿತ್ರ ಎಲ್ಲಾ ಭಾಷೆಗೂ ಹೊಂದಿಕೆಯಾಗುವಂತೆ ಚಿತ್ರೀಕರಣ ಮಾಡಿದ್ದರು..

ಇದು ಸಾಧ್ಯ’ ಚಿತ್ರದಲ್ಲಿ ನನಗೆ ಅನಂತ್ ನಾಗ್ ರೊಂದಿಗೆ combination .. ಅವರದು ಸ್ವಲ್ಪ comical character.. Act ಮಾಡ್ಬೇಕಾದ್ರೆ ನನಗೆ ಅನಂತ್ ಸಾರ್ ಮುಖ ನೋಡಬೇಕಾದ್ರೆನೇ ನಗು ಬಂದುಬಿಡುವುದು.. ಯಾಕಂದ್ರೆ ಅವರು ಅಷ್ಟು ಸಹಜವಾಗಿ ಅಭಿನಯಿಸುತ್ತಿದ್ದರು.. Technicalities ಬಗ್ಗೆ ಸಾಕಷ್ಟು ತಿಳಿದುಕೊಳ್ಳೋಕೆ ಅವಕಾಶ ಇತ್ತು.. Double camera setup ಅಲ್ಲಿ ಚಿತ್ರೀಕರಣ ನಡಿತಾ ಇತ್ತು.. ಒಂದು portion PKH Das ಅವರು photography ಮಾಡಿದ್ರೆ ಇನ್ನೊಂದು ಕಡೆ ಸ್ವತಹ ದಿನೇಶ್ ಬಾಬು ಅವರೇ camera work ಮಾಡುತ್ತಿದ್ದರು.. 48 ಗಂಟೆಗಳಲ್ಲಿ ಶೂಟಿಂಗ್ ಮುಗಿಸಿ ಬೇಕಾಗಿದ್ದರಿಂದ spot ಬಿಟ್ಟು ಎಲ್ಲೂ ಆಚೆ ಹೋಗಕ್ಕೆ ಆಗ್ತಾ ಇರ್ಲಿಲ್ಲ.. ಹಾಗಾಗಿ ಕಲಿತುಕೊಳ್ಳಲು ಒಂದು ಒಳ್ಳೆ ಅವಕಾಶವಾಗಿತ್ತು..

‘ ಮುತ್ತಿನ ಹಾರ’ ಚಿತ್ರದ ನಂತರ ಸುಹಾಸಿನಿ ಅವರು ತೆಲುಗು ‘ಅಮ್ಮ’ ಅನ್ನೋ ಚಿತ್ರಕ್ಕೆ ನನ್ನ refer ಮಾಡಿದರು.. ಆ ಸಿನಿಮಾದ ನಿರ್ದೇಶಕರು ರಜನಿಕಾಂತ್ ಅವರ ಭಾಷಾ ಚಿತ್ರವನ್ನು ನಿರ್ದೇಶಿಸಿದ ಸುರೇಶ್ ಕೃಷ್ಣ ಅವರು.. ಸುಹಾಸಿನಿ ಅವರಿಗೆ ಶರತ್ ಬಾಬು ಜೋಡಿಯಾದರೆ ನನಗೆ ‘ಪ್ರೇಮ ಖೈದಿ’ ಅನ್ನೋ ಒಂದು ಚಿತ್ರದಲ್ಲಿ ನಟಿಸಿ ಯಶಸ್ವಿ ನಟರಾಗಿದ್ದವರು ನಾಯಕ ಹರೀಶ್.. ಸುಹಾಸಿನಿ ಅವರು ಒಂದು ದಿನ ನನಗೆ call ಮಾಡಿ “ಈ ಚಿತ್ರದ ಪಾತ್ರ ಚೆನ್ನಾಗಿದೆ. ನೀನು act ಮಾಡು” ಎಂದು ಹೇಳಿದರು.. ನನಗೆ ಖುಷಿ ಏನೋ ಆಯಿತು ಆದರೆ ತೆಲುಗು ಭಾಷೆ ನನಗೆ ಗೊತ್ತಿರಲಿಲ್ಲ.. ಹಾಗಾಗಿ ಒಂದು ಸಣ್ಣ ಮುಜುಗರ ಕೂಡ ಇತ್ತು.. ಚಿತ್ರದ ಸಹ ನಿರ್ದೇಶಕರು ನನಗೆ ತುಂಬಾ ಸಹಾಯ ಮಾಡಿದರು.. ಅವರಿಗೆ ಕನ್ನಡ ಭಾಷೆ ಬರ್ತಿತ್ತು.. ತೆಲುಗಿನ ಅರ್ಥಗಳನ್ನು ಕನ್ನಡದಲ್ಲಿ ಹೇಳಿ ನಾನು ಸರಿಯಾದ expressions ಕೊಡಲು ಅವರು ತುಂಬಾ ಸಹಕಾರಿಯಾದರು.. ಹಿಂದಿನ ದಿನ ರಾತ್ರಿಯೇ ಅವರು ಬಂದು Next day shooting ದು script ಕೊಟ್ಟು prepare ಮಾಡಿಸೋರು.. ತೆಲುಗು ಚಿತ್ರರಂಗದಲ್ಲಿ ನಾನು ನೋಡಿದ್ದು they all were very organised.. ಪ್ರತಿಯೊಂದಕ್ಕೂ ಸಿದ್ಧತೆ ಹಾಗೂ ಪೂರ್ವಸಿದ್ಧತೆ ಅಚ್ಚುಕಟ್ಟಾಗಿ ಮಾಡಿಕೊಳ್ಳುವರು..

ಒಂದು ಉದಾಹರಣೆ ಹೇಳ್ಬೇಕಂದ್ರೆ ಐಗಿರಿ ನಂದಿನಿ ಈ ಇಡೀ ಹಾಡನ್ನು ಹೇಳುವ ಒಂದು ಸನ್ನಿವೇಶ.. ಮೊದಲು ಅವರು ಏನು plan ಮಾಡಿಕೊಂಡರು ಅಂದ್ರೆ ಹಾಡಿನ ಮೊದಲ ಕೆಲವು ಸಾಲುಗಳನ್ನ ಚಿತ್ರೀಕರಣ ಮಾಡೋದು ಅಂತ. ಆಮೇಲೆ ಗೊತ್ತಾಯ್ತು. ಸ್ತೋತ್ರವಾಗಲಿ, ಮಂತ್ರವಾಗಲಿ, ದೇವರ ಹಾಡು ಆಗಲಿ ಅರ್ಧ ಹೇಳಬಾರದು ಅಂತ.. ಆಗ ಅವರು ಇಡೀ ಪ್ರೋಗ್ರಾಮ್ ನ next day ಗೆ shift ಮಾಡಿ complete ಹಾಡನ್ನ shoot ಮಾಡದ್ರೂ.. ಈ ಹಾಡಲ್ಲಿ ಅಭಿನಯಿಸಬೇಕಾದರೆ ನನಗೆ ತುಂಬಾ ಭಯ ಇತ್ತು.. ಆ ಭಯಾನ ನನ್ನಿಂದ ಓಡಿಸಿದ್ದು ಸುಹಾಸಿನಿ ಅವರು.. ಹಾಡಿನಲ್ಲಿ ಭಾವನೆಗಳನ್ನು ತೋರಿಸಬೇಕಾದರೆ ಬರೀ lip movement ಒಂದೇ ಅಲ್ಲ. ಕಣ್ಣುಗಳ expression ನಲ್ಲೂ ಹಲವಾರು ರೀತಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು ಎಂದು ಹೇಳಿಕೊಟ್ಟವರು ಸುಹಾಸಿನಿ ಅವರು..

 

ಕಾವ್ಯ ಅವರ ಮುಂದಿನ ಚಿತ್ರ ಎಸ್ ಮಹೇಂದರ್ ನಿರ್ದೇಶನದ ಮೊದಲ ಚಿತ್ರ ರಮೇಶ್ ಅವರೊಂದಿಗೆ ಅಭಿನಯಿಸಿದ ‘ಪ್ರಣಯದ ಪಕ್ಷಿಗಳು’.. ರಮೇಶ್ ಜೊತೆಗೆ ಅಭಿನಯಿಸುವುದೇ ಒಂದು challenge. ಅದೂ emotion scene ನೇ ಆಗಲಿ ಅಥವಾ comedy scene ನೇ ಆಗಲಿ he is too good.. ಈ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡ್ತಾ ಇದ್ವಿ.. ಬೆಟ್ಟದ ಮೇಲೆ ಓಡಿ ಬಂದು ಬೀಳೋ ದೃಶ್ಯ..Scene natural ಆಗಿ ಬರಲಿ ಅಂತ ರಮೇಶ್ ಅವರು ಬೇಕಂತಲೆ ಬಿದ್ದು ಎದ್ದು ಓಡುತ್ತಿದ್ದರು.. ನನಗಂತೂ ಇದನ್ನು ನೋಡಿದಾಗ ತುಂಬಾ ಭಯ ಆಗೋದು ಎಂದು ಹೇಳುತ್ತಾರೆ ಕಾವ್ಯ..ಮಾದೇಶ್ವರನ ಬೆಟ್ಟದ ಬಳಿ ಶೂಟಿಂಗ್ ನಡೀತಾ ಇತ್ತು.. ಅಲ್ಲಿ ಜನ ಎಷ್ಟು ಪ್ರೀತಿ ತೋರಿಸಿದರು ಅಂದರೆ ಪ್ರತಿದಿನ ನಮ್ಮನ್ನ ಅವರ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ನನಗಂತೂ ಫ್ಯಾಮಿಲಿ ಜೊತೆ ಟ್ರಿಪ್ಪಿಗೆ ಬಂದಿದ್ದೇನೆ, ನಮ್ಮ relatives ನನ್ನನ್ನ ಊಟಕ್ಕೆ ಕರೀತಿದ್ರು ಅನಿಸ್ತಾ ಇತ್ತು.. ಈ ಸಿನಿಮಾದಲ್ಲಿ ತುಂಬಾ ಓಡುವ ದೃಶ್ಯಗಳು ಇತ್ತು..ಹಾಗಾಗಿ ಮಹೇಂದರ್ ಅವರು ನನಗೆ ಯಾವಾಗಲು ರೇಗಿಸ್ತಾ ಇದ್ರು.. ಈ ಸಿನಿಮಾ ಶೂಟಿಂಗ್ ಮುಗಿಯೋದ್ರೊಳಗೆ ನಾನು ತುಂಬಾ ಸಣ್ಣ ಆಗ್ಬಿಡ್ತೀನೀ ಅಂತ..

ಇದಾದ ಮೇಲೆ ಕಾವ್ಯ ಅವರು ಮತ್ತೊಂದು ಕನ್ನಡದ ಮಹತ್ವಕಾಂಕ್ಷೆಯ ಚಿತ್ರದಲ್ಲಿ ನಟಿಸಬೇಕಾಗಿತ್ತು.. ಅದೇ ಮಿನಿಸ್ಟರ್ ಕ್ರೇಜಿಸ್ಟಾರ್ ಕನಸುಗಾರ ಕನಸುಗಾರ ಡಾ || ವಿ ರವಿಚಂದ್ರನ್ ಅವರ ನಟನೆಯ ಹಾಗೂ ನಿರ್ದೇಶನದ ಚಿತ್ರ ‘ಸುಂದರ ಲೋಕ’.. ಬಿಎಂ ಗಂಗಾಧರ್ ಈ ಸಿನಿಮಾದ ನಿರ್ಮಾಪಕರು.. ಪ್ರಣಯದ ಪಕ್ಷಿಗಳು ಸಿನಿಮಾ ಮುಗಿದ ಮೇಲೆ ಇನ್ನು ನಾನು ಚಿತ್ರಗಳಲ್ಲಿ ನಟಿಸ ಬಾರದು ಎಂದು ನಿರ್ಧರಿಸಿದ್ದೆ.. ಪ್ರೇಮಲೋಕ ನೋಡಿದ ನನಗೆ ರವಿಚಂದ್ರನ್ಸರ್ ಎಂದರೆ ಅತ್ಯಂತ ಪ್ರೀತಿ ಗೌರವ.. ಅವರು ನನ್ನನ್ನ ಅವರ ಚಿತ್ರದಲ್ಲಿ ಅಭಿನಯಿಸಲು ಕೇಳಿದಾಗ ಇಲ್ಲ ಅಂತ ಹೇಳಲು ಆಗಲಿಲ್ಲ.. ಇದಕ್ಕೆ ಇನ್ನೊಂದು ಮುಖ್ಯವಾದ ಕಾರಣ ಎಂದರೆ ನಾನು ಈ ಚಿತ್ರದಲ್ಲಿಶಂಕರನಾಗ್ ಅವರಿಗೆ ನಾಯಕಿಯಾಗಿದ್ದ.. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಸೆಟ್ ಹಾಕಲಾಗಿತ್ತು.. ಒಂದು ಹಾಡು ಹಾಗೂ ಕೆಲ ದೃಶ್ಯಗಳಲ್ಲಿ ಕೂಡ ನನ್ನ ಭಾಗದ ಚಿತ್ರೀಕರಣ ವಾಗಿತ್ತು.. ಇದು ಸಾಧ್ಯ ಚಿತ್ರದಲ್ಲಿ ನಾನು ಶಂಕರನಾಗ್ ಅವರಿಗೆ pair ಆಗಿರಲಿಲ್ಲ.. ಈ ಚಿತ್ರದಲ್ಲಿ ಅವಕಾಶ ಇದ್ದಿದ್ದರಿಂದ ನಾನು ತುಂಬಾ excite ಆಗಿದ್ದೆ.. ದುರಾದೃಷ್ಟವೆಂದರೆ ಈ ಚಿತ್ರದಚಿತ್ರೀಕರಣ ಮುಂದೆ ಹೋಯಿತು.. ಆ ಸಮಯದಲ್ಲಿ ಶಂಕರ್ ನಾಗ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದರು..

ಚಿತ್ರರಂಗದಿಂದ ಕಾವ್ಯ ವಿದಾಯ.. ವಿದಾಯದ ನಂತರ ಅವರ ಮದುವೆಮಕ್ಕಳು ಜೀವನ ಇದರ ಬಗ್ಗೆ ಮಾಹಿತಿ ಮುಂದಿನ ಬರಹದಲ್ಲಿ..

Raghuram

“ಕನ್ನಡದ Pan India ಸಿನಿಮಾಗಳು..”

Previous article

Kavya ಬಣ್ಣದ ಬದುಕಿಗೆ goodbye ಹೇಳಿದ್ದು ಯಾಕೆ ?

Next article

You may also like

Comments

Leave a reply

Your email address will not be published. Required fields are marked *

14 + nineteen =