ನೂರೊಂದು ನೆನಪು

Dr.Raj ಕ್ಯಾಂಪಿನಿಂದ, Dr. Vishnuvardhan ಅವರ Compoundಗೆ Kavya ಅವರು ನಡೆದು ಬಂದ ಹಾದಿ

0
Kavya and Vishnuvardhan

ಪಾತ್ರಗಳು ದೊರಕುವುದು ಅದರ ಇಷ್ಟ ಹಾಗೂ ಕಲಾವಿದರ ಅದೃಷ್ಟ..
ಈ ಮಾತನ್ನು ಏನಕ್ಕೆ ಹೇಳ್ದೆ ಅಂದ್ರೆ Dr. Rajkumar ಕ್ಯಾಂಪಿನಲ್ಲಿ ನಟಿಸಿ ಸೈ ಎನಿಸಿಕೊಂಡ Kavya ಅವರಿಗೆ ಮತ್ತೊಂದು ದೊಡ್ಡ offer ಬರತ್ತೆ.. ಅಂದಿನ ಸಮಯದಲ್ಲಿ ಸಾಕಷ್ಟು craze ಹುಟ್ಟಿಸಿದ್ದ ಕನ್ನಡ ಸಿನಿಮಾವನ್ನು ಹಿಂದಿ ಸಿನಿಮಾ ಮಟ್ಟಿಗೆ ತೆಗೆದ ಚಿತ್ರ ಸಾಹಸಸಿಂಹ Dr. Vishnuvardhan, Suhasini ಅಭಿನಯದ, S V Rajendra Singh Babu ಅವರ ನಿರ್ದೇಶನದ ‘Muttina Haara’..

ಆಕಡೆ ವಿಷ್ಣುದಾದ ‘ಕೊಡಗಿನೋಳು ಬೆಡಗಿ ನೋಳು ನನ್ ಹೆಂಡ್ರು ನಂಜಿ’ ಅಂದ್ರೆ, ಈ ಕಡೆ ಸುಹಾಸಿನಿ ಯವರು ‘ಮಡಿಕೇರಿ ಸಿಪಾಯಿ’ ಅಂದ್ರು.. ಯಾರೂ ಊಹಿಸದ ಕಡೆ ಬೇರೊಂದು ಧ್ವನಿ ಬಂದು ಇನ್ನೊಂದು ಹಾಡು ಬಂತು.. ಅದೇ ‘ಸಾರು ಸಾರು military ಸಾರು’.. ಕಾವ್ಯ ಅವರ ಚಿತ್ರ ಜೀವನದಲ್ಲಿ ಮತ್ತೊಂದು ಅತ್ಯುತ್ತಮ ಅವಕಾಶ. ಭಾರಿ Budget ನ ಚಿತ್ರದಲ್ಲಿ ವಿಷ್ಣು ಸರ್ ಹಾಗೂ ಸುಹಾಸಿನಿ ಅವರೊಂದಿಗೆ ದಿಟ್ಟ ಅಭಿನಯ ನೀಡೋ ಒಂದು ಅದ್ಭುತವಾದ ಅವಕಾಶ.. ಈ ಪಾತ್ರವನ್ನು ಬೇರೆ ಯಾರೋ ಕಲಾವಿದರು ಮಾಡ್ಬೇಕ್ಆಗಿತ್ತಂತೆ.. ಕಾರಣಾಂತರಗಳಿಂದ ಅವರು ಮಾಡೋಕೆ ಆಗಲಿಲ್ಲ.. ಆಗ ಈ ಪಾತ್ರ Kavya ಅವರ ಪಾಲಾಯಿತು

ಷ್ಟೆಲ್ಲ ದಿಗ್ಗಜರ ಸಮಾಗಮದಲ್ಲಿ ತ ತಯಾರಾಗುತ್ತಿರುವ ಚಿತ್ರಕ್ಕೆ ಅವಕಾಶ ಬಂದಾಗ ಇಲ್ಲ ಅಂತ ಕಾವ್ಯ ಅವರು ಹೇಳೋಕೆ ಸಾಧ್ಯವಾಗಲಿಲ್ಲ.. ತುಂಬಾ different ಆದ character.. Acting ಗೆ ಸಾಕಷ್ಟು scope ಇದ್ದು.. ಕಲಿಯೋದಕ್ಕೆ ತುಂಬಾ ಅವಕಾಶಗಳಿತ್ತು.. ಇಂತ ಹಿರಿಯರ ಜೊತೆ ನಟಿಸೋದೇ ಸಿನಿಮಾರಂಗದಲ್ಲಿ ವಿದ್ಯಾರ್ಥಿಯಾಗಿದ್ದ ನನಗೆ professors lecturers ಜೊತೆ ನಟಿಸಿದ ಅನುಭವ.. Kashmir, Rajasthan, Wagah border ಇಲ್ಲೆಲ್ಲ ಶೂಟಿಂಗ್ ಇತ್ತು..

Kavya

ಸಾರು ಸಾರು ಹಾಡಿನ ಬಗ್ಗೆ ಹೇಳಬೇಕೆಂದರೆ ತುಂಬಾ interesting ಆಗಿರೋ ವಿಷಯ ಇದೆ.. ತುಂಬಾ ಒಳ್ಳೆ ಹಾಡು. ಅದರಲ್ಲಿಯೇಒಂದು shot ಬರುತ್ತೆ.. ಕಾವ್ಯ ಅವರು ಎರಡು ಕೋಳಿಗಳನ್ನು ಹಿಡಿದುಕೊಂಡು ಎಸಿಯೋ ಅಂತ ದೃಶ್ಯ .. Basically ಕಾವ್ಯ ಅವರು pure vegetarian and a very big animal lover.. ಗೋಳಿನ ಹಿಡಿದು ಎಸ್ ಯು ದೃಶ್ಯ ಬಂದಾಗತುಂಬಾ ಮುಜುಗರ ಆಗ್ತಿತ್ತಂತೆ.. ಆ ಕೋಳಿಗೆ ಏಟು ಬಿದ್ಬಿಟ್ರೆ, ಏನಾದ್ರೂ ಹೆಚ್ಚುಕಮ್ಮಿ ಆಗ್ಬಿಟ್ರೆ ಅಂತ.. Set ನಲ್ಲಿ ಇರೋರೆಲ್ಲ “ಇಲ್ಲ ಮೇಡಂ, ನೀವು ಸುಮ್ಮನೆ ಈಕಡೆ ಎಸೀರಿ ನಾವು ಅದನ್ನ ಹುಷಾರಾಗಿ ಇಟ್ಟುಕೊಳ್ಳುತ್ತೀವಿ ” ಎಂದು ಧೈರ್ಯ ತುಂಬುತ್ತಿದ್ದರು..

Shot ಮುಗಿದ ತಕ್ಷಣ ಕೋಳಿಯ ಬಳಿ ಓಡಿ ಹೋಗಿ “ಏನು ಆಗಿಲ್ವಾ”, ಅಂತ ಹೋಗಿ ನೋಡುತ್ತಿದ್ದರು.. ಮೂರರಿಂದ ನಾಲ್ಕು ನಿಮಿಷದ ಹಾಡಿಗೆ ಅದರ ಹಿಂದಿನ ಶ್ರಮ, process ನಿಜಕ್ಕೂ hatsoff.. ಇದೇ ಹಾಡಿನಲ್ಲಿ ಇನ್ನೊಂದು ಸಾಲು ಬರುತ್ತೆ.. “ಕಾಯಿ ಕಾಯಿ ಮೆಣಸಿನಕಾಯಿ” ಅಂತ.. ಈ Particular ಸಾಲಿಗೆ ಮೆಣಸಿನಕಾಯಿಯನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು. ಅದನ್ನು ಮುಟ್ಟು ವಾಗಲೇ ಸೀನ್ ಬಂದ್ ಬಿಡೋದು (sneeze)..
Take ಮುಂಚೆನೆ ಕೈಯಲ್ಲಿ ಹಿಡಿದುಕೊಂಡು ನಿಲ್ಲಬೇಕಾದ್ದುದರಿಂದ Director action ಅನ್ನೋದುಕ್ಕು correct ಆಗಿ shot ಟೈಮಿಗೆ ಇವರಿಗೆ ಆಕ್ಷಿ ಬರ್ತಿತ್ತಂತೆ ..

ಮತ್ತೊಂದು ನಾನು ಈ ಹಾಡಿನಲ್ಲಿ ಕಲಿತಿದ್ದು..
ನಿಮಗೆಲ್ಲ ತಿಳಿದಿರುವಂತೆ ಮುತ್ತಿನ ಹಾರ military based subject.. ಇಡೀ ತಂಡ ಹಾಗೂ ಮಿಲಿಟರಿಯವರಿಗಾಗಿ ರಾಜಸ್ಥಾನಿನ ಒಂದು ಖಾಸಗಿ ಹೋಟೆಲ್ ನಲ್ಲಿ Dinner party ಹಮ್ಮಿಕೊಂಡಿದ್ದರು.. ಅಲ್ಲಿ ರಾಜಸ್ಥಾನಿನ traditional tribal dance ಕೂಡ ಇತ್ತು.. ನೃತ್ಯ ನಿರ್ದೇಶಕಿ ದೇವಿಯವರು ಅವರು ಡಾನ್ಸ್ ಮಾಡುತ್ತಿದ್ದನ್ನು ನೋಡಿ ಕಾವ್ಯ ಅವರ ಬಳಿ ಬಂದು ಆ movements ನಾ ಸ್ವಲ್ಪ observe ಮಾಡು.. ನಾಳೆ ಶೂಟಿಂಗ್ ನಲ್ಲಿ ಅದನ್ನೇ ಮಾಡಿದಾಗ ಚೆನ್ನಾಗಿರುತ್ತೆ ಹಾಗೂ connect ಆಗತ್ತೆ ಅನ್ನೋ tips ನ ಕೊಟ್ರು.. ಕೆಲವು movements ಗಳು ಕಾವ್ಯ ಅವರಿಗೆ ಕಷ್ಟ ಆಗ್ತಿತ್ತು.. ದೇವಿಯವರು ಕೊಟ್ಟ ಈ ಸಲಹೆಯಿಂದ ಕಲಿಯೋಕೆ ಒಂದು ಅವಕಾಶ ಸಿಕ್ತು ಹಾಗೂ ನೃತ್ಯ ಮಾಡಲು ಬಹಳ ಸಹಾಯಕಾರಿಯಾಯಿತು..

Vishnuvardhan ಹೆಸರಲ್ಲೇ ಒಂದು ರೋಮಾಂಚನ ರಾಜಗಾಂಭೀರ್ಯ ಎಲ್ಲವೂ ಇದೆ.. ಅವರ ಜೊತೆಗೆ ಪಾತ್ರ ಮಾಡಬೇಕೆಂದಾಗ ನೀವು ಒಂದು ಹತ್ತು ಸರಿ ಯೋಚನೆ ಮಾಡಬೇಕು.. ಏನೇ ಪಾತ್ರವಾಗಲೀ, ಅವರು ಬಹಳ ಸಲೀಸಾಗಿ ಮಾಡ್ಕೊಂಡು ಹೋಗ್ತಾರೆ..
ವಿಷ್ಣು ಅವರ ಜೊತೆ ಅಭಿನಯಿಸುವುದಕ್ಕಿಂತ ಮೊದಲು ಕನ್ನಡಿ ಮುಂದೆ ನಿಂತುಕೊಂಡು expressions ನ practice ಮಾಡ್ತಾ ಇದ್ದೆ.. ಹೇಗೆ ಮಾಡಿದ್ರೆ ನಾನು ಚೆನ್ನಾಗಿ ಅಭಿನಯಿಸ ಬಹುದು ಅಂತ.. ಆದರೆ ಅಲ್ಲಿ ಹೋಗಿ ಅವರನ್ನು ನೋಡಿದ ಮೇಲೆ ಏನ್ ಮಾಡ್ತಿದ್ನೋ ಏನೋ, ನನಗೆ ಗೊತ್ತಾಗುತ್ತಿರಲಿಲ್ಲ.. He used to correct me.. ಹೇಳಿ ಕೊಡೋರು..

ಚಿತ್ರೀಕರಣ ಶುರುವಾಗುತ್ತಿದ್ದ ಮುಂಚೆ ಬೆಂಗಳೂರಿನಲ್ಲೇ army ಅವರು ಒಂದು Party ನ host ಮಾಡಿದ್ರು.. ಅಲ್ಲಿ ವಿಷ್ಣು ಸರ್ ನ ನಾನು ಮೊದಲು ಭೇಟಿಯಾಗಿದ್ದು.. I think he noticed that I was a bit hesitant.. ನನ್ನ ಹತ್ತಿರ ಬಂದು, ನಾನೇನು ಓದ್ತಾ ಇದೀನಿ..?? ನನ್ನ ಫ್ಯಾಮಿಲಿ ಬಗ್ಗೆ, ಎಲ್ಲಾ ಬಹಳ ಪರಿಚಯಸ್ಥರಂತೆ ಮಾತಾಡದ್ರು.. ಭಯ ಆಗ್ತಿದ್ಯಾ ನಿಮಗೆ ಅಂತ ಕೇಳಿದ್ರು.. ನಾನು ಹೂ ಅಂತ ತಲೆ ಆಡಿಸಿದಾಗ ವಿಷ್ಣು ಅವರು ನನಗೆ ಹೇಳಿಕೊಟ್ಟ ಮೊದಲ ಪಾಠ, “ಭಯ ಪಡಬಾರದು.. ಭಯಪಟ್ಟು ನಾವು ಏನೇ ಕೆಲಸ ಮಾಡಿದರೂ ಅರ್ಧ ಮನಸ್ಸಿನಿಂದ ಮಾಡ್ತೀವಿ. ಧೈರ್ಯದಿಂದ ಪ್ರೀತಿಯಿಂದ ಮಾಡಿದಾಗ, ಪೂರ್ಣ ಮನಸ್ಸಿನಲ್ಲಿ ಮಾಡುವಂತ ಕೆಲಸ ಫಲಿಸತ್ತೆ” ಅಂತ.. ಪುಟ್ಟ ಮಕ್ಕಳಿಗೆ ಅವರ ಟೀಚರ್ಗಳು ತಂದೆ-ತಾಯಿಗಳು ಹೇಗೆ ಹೇಳ್ಕೊಡ್ತಾರೆ ಹಾಗೆ ಹೇಳಿಕೊಟ್ಟರು.. ಅಲ್ಲಿ ಭಾರತಿ ಮೇಡಂ ಕೂಡ ಬಂದಿದ್ದರು.. ಅವರನ್ನು ಕೂಡ ಅಲ್ಲೇ first time meet ಆಗಿದ್ದು..

ಇದಾದ ಮೇಲೆ ಸಾಕಷ್ಟು ಬಾರಿ, ಬೆಳದಿಂಗಳ ರಾತ್ರಿಯಲ್ಲಿ ಭಾರತೀ ಅಮ್ಮನವರ ಕೈತುತ್ತಿನ ಊಟ ಮಾಡಿದ್ದೇನೆ..

Rohtang pass border ನಲ್ಲಿ ಶೂಟಿಂಗ್ ನಡೀತಾ ಇತ್ತು.. ಆಗ ಗಲಾಟೆ ಒಂದು ಪ್ರಾರಂಭವಾಯಿತು.. ಸಿಕ್ಕಾಪಟ್ಟೆ ಭಯ ಆಗ್ಬಿಟ್ಟಿತ್ತು.. ಒಂದು, shooting ನಿಂತು ಹೋಗತ್ತೆ ಅಂತ.. Personally, ಏನಾಗಿಬಿಡುತ್ತೋ, war declare ಆಗೋಗತ್ತೋ ಅಂತ ಸಿಕ್ಕಾಪಟ್ಟೆ ಯೋಚನೆಯಾಗಿತ್ತು.. ಆಗ ಅಲ್ಲಿದ್ದ ಆರ್ಮಿ ಅವರೆಲ್ಲ ತುಂಬಾ help ಮಾಡಿದರು.. Hatsoff to Indian Army.. 🙏

Raghuram

Dr Raj ರನ್ನು Shooting ಗೆ ಹುಡುಕಿಕೊಂಡು ಹೋದ ಆ ಹೆಣ್ಣು ಮಗಳು ಯಾರು ??

Previous article

“ಕನ್ನಡದ Pan India ಸಿನಿಮಾಗಳು..”

Next article

You may also like

Comments

Leave a reply

Your email address will not be published. Required fields are marked *

twelve − 11 =