‘ಸಿಂಗಾರಿ ಬಂಗಾರಿ’ ಚಿತ್ರದ ನಂತರ Kavya ಅವರು ಮಾಡಿದ ಮತ್ತೊಂದು ಸಿನಿಮಾ ‘ಸುರಸುಂದರಾಂಗ’.. ಇದರ ನಿರ್ದೇಶಕರು T S Nagabharana.. ಐದು ಜನ ನಾಯಕಿಯರಲ್ಲಿ ಒಬ್ಬರು.. ಈ ಚಿತ್ರದ ಮೂಲಕ ತಾರಾ ಅವರೊಂದಿಗೆ ಕಾವ್ಯ ಅವರಿಗೆ ಸ್ನೇಹ ಸಂಪರ್ಕವಾಯಿತು. ಈ ಚಿತ್ರದಲ್ಲಿ ಕಾಶಿನಾಥ್ ಅವರದ್ದು ಡಬಲ್ ಆಕ್ಟಿಂಗ್.. ತಂದೆಯಾಗಿ, ಮಗನಾಗಿ ಎರಡು ಪಾತ್ರಗಳಲ್ಲೂ ಅಭಿನಯಿಸಿದ್ದಾರೆ.. ತಂದೆ ಪಾತ್ರಕ್ಕೆ ಜೋಡಿಯಾಗಿ ಗಿರಿಜಾ ಲೋಕೇಶ್ ಅವರು ಅಭಿನಯಿಸಿದ್ದರು. “ಹಾಗಾಗಿ ನಾನು ಗಿರಿಜಾ ಲೋಕೇಶ್ ಅವರಿಗೆ ರೇಗಿಸ್ತಿದ್ದೆ..
ಈ ಸಿನಿಮಾದಲ್ಲಿ 5 ನಾಯಕಿಯರಲ್ಲ, ಆರು ಜನ.. ನೀವು ಕೂಡ ಈ ಚಿತ್ರದ ನಾಯಕಿನನೇ ” ಅಂತ.. “ನಾಗಾಭರಣ ನಿರ್ದೇಶನದಲ್ಲಿ ತುಂಬಾ Perfectionist. ಒಂದು ದಿನವೂ Set ನಲ್ಲಿ ಕೋಪ ಮಾಡಿಕೊಳ್ಳುವುದು, ಬೇಜಾರಾಗುವುದು, ಗದರೋದು, ಇದ್ಯಾವುದು ಇಲ್ಲ ತುಂಬಾ cool ಆಗಿ ಇರೋರು. ಅವರ ಶ್ರೀಮತಿ ನಾಗಿಣಿ ಭರಣ ಅವರು ಕೂಡ ನಿರ್ದೇಶನದಲ್ಲಿ ಸಹಾಯ ಮಾಡ್ತಾ ಇದ್ರು. Infact ನನಗೆ ‘ಸುರ ಸುಂದರಾಂಗ’ ಚಿತ್ರದಲ್ಲಿ ಅಯ್ಯಂಗಾರಿ ಹುಡುಗಿಯ ಪಾತ್ರ, ನನ್ನ ವೇಷಭೂಷಣಗಳು, ಅಯ್ಯಂಗಾರಿ ಸಂಪ್ರದಾಯದಂತೆ ಸೀರೆ ಉಡುವುದು, ಇವೆಲ್ಲದಕ್ಕೂ ಸಹಾಯ ಮಾಡ್ತಾ ಇದ್ದಿದ್ದು ಶ್ರೀಮತಿ ನಾಗಿಣಿ ಭರಣ ಅವರೇ. ಇದು ಒಂದು ಅದ್ಭುತ ಅನುಭವ. ಈ ಚಿತ್ರದ Climax ನಲ್ಲಿ ಮದುವೆ ಮನೆಯ ದೃಶ್ಯವೊಂದನ್ನು ಚಿತ್ರೀಕರಿಸಬೇಕಾಗಿತ್ತು.
ಈ ಸಂದರ್ಭದಲ್ಲಿ ನಾನು, ತಾರಾ, ಅಭಿನಯ, ಗಿರಿಜಾ ಲೋಕೇಶ್ ಅವರು, ಜೊತೆಗೆ ಇನ್ನಿಬ್ಬರು ಪರಭಾಷಾ ನಾಯಕಿಯರು.. ನಾವೆಲ್ಲ Set ನಲ್ಲಿ ಸಕ್ಕತ್ ಮಜಾ ಮಾಡ್ತಾ ಇದ್ವಿ”. ಕಾವ್ಯ ಅವರ ನೂರೊಂದು ನೆನಪು ಗಳಲ್ಲಿ ಈ ನೆನಪು ಕೂಡ ಅವರ ಮನಸ್ಸಿನಲ್ಲಿ ತುಂಬಿದೆ.
Destiny ಕಾವ್ಯ ಅವರ ಸಿನಿಮಾ ವಿಷಯದಲ್ಲಿ ತುಂಬಾ ಸಹಕರಿಸಿದೆ. ಧಾರವಾಹಿಯಲ್ಲಿ ಅಭಿನಯಿಸಿದ ಒಂದು Photo ವನ್ನು ವಜ್ರೇಶ್ವರಿಯ ‘ಚನ್ನ’ ಅವರು ಗೌರಿಶಂಕರ್ ಅವರಿಗೆ ಕೊಟ್ಟು, ‘ಏಳು ಸುತ್ತಿನ ಕೋಟೆ’ ಚಿತ್ರದಲ್ಲಿ ಪುಟ್ಟದೊಂದು ಪಾತ್ರದ ಮೂಲಕ ಬೆಳ್ಳಿಪರದೆಗೆ ಪ್ರವೇಶಿಸಿದರು. ಕನ್ನಡ ಚಿತ್ರರಂಗದ ಮಾತೃಸಂಸ್ಥೆ ಪ್ರತಿಷ್ಠಿತ ಸಂಸ್ಥೆ ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಅವರ ಒಡೆತನದ ‘ ವಜ್ರೇಶ್ವರಿ ಕಂಬೈನ್ಸ್’
. ಶಿವಣ್ಣ ಅವರ ಹೊಸ ಚಿತ್ರದ ತಯಾರಿ ನಡೆಸುತ್ತಿದ್ದರು. ದಿನೇಶ್ ಬಾಬು ಅವರು ನಿರ್ದೇಶಕರಾಗಿ ಆಯ್ಕೆ ಆಗಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವುದರಲ್ಲಿ, ಪ್ರೋತ್ಸಾಹಿಸುವುದರಲ್ಲಿ Dr Raj ಅವರ ಸಂಸ್ಥೆ ಸದಾ ಮುಂದು. ಕಾವ್ಯ ಅವರ ಜಯನಗರದ ಮನೆಯಲ್ಲಿ ಬಾಡಿಗೆಗೆ ಇದ್ದ ಮೀರಾ ಅವರು ಕಾವ್ಯ ಅವರಿಗೆ, ಅಣ್ಣಾವ್ರು ಅಭಿನಯಿಸಿದ ಚಿತ್ರಗಳ ಕಥೆಯನ್ನು ಹೇಳುತ್ತಿದ್ದರು. ನೋಡಿ ಹಣೆಬರಹ ಹೇಗೆ ಅಂದ್ರೆ ಅದೇ ಅಣ್ಣಾವ್ರು ನಿರ್ಮಾಣದ ಸಂಸ್ಥೆಯ, ಅವರ ಸುಪುತ್ರ ನಾಯಕನಾಗಿ ನಟಿಸುವ ಚಿತ್ರಕ್ಕೆ, ಕಾವ್ಯ ಅವರು ನಾಯಕಿಯಾಗಿ ಆಯ್ಕೆ ಆಗುತ್ತಾರೆ. ಕಾವ್ಯ ಅವರು ಹೇಳುತ್ತಾರೆ “ಅಣ್ಣಾವ್ರ ಸಂಸ್ಥೆಯಲ್ಲಿ ಕೆಲಸ ಮಾಡುವುದು, ಅವರ ನಿರ್ಮಾಣದ ಚಿತ್ರಕ್ಕೆ ನಾನು ನಾಯಕಿ ಅನ್ನೋದಕ್ಕಿಂತ ಹೆಚ್ಚಾಗಿ ಬದುಕಿನ ಮೌಲ್ಯಗಳನ್ನು ತಿಳಿದುಕೊಳ್ಳುವ, ಕಲಿತುಕೊಳ್ಳುವ ವಿಶ್ವವಿದ್ಯಾಲಯ ಅಂತ ಹೇಳಬಹುದು.
ಈ ಸಂಸ್ಥೆಯ ಬಗ್ಗೆ ಸಾಕಷ್ಟು ಜನ ಸಾಕಷ್ಟು ರೀತಿಯಲ್ಲಿ ಅವರವರ ಅನುಭವಗಳು, ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಆದ್ರೆ ನಾನ್ ಏನು ಹೇಳ್ತೀನಿ ಅಂದ್ರೆ ಊಟದ ಬೆಲೆ ನಾನು ಸರಿಯಾಗಿ ತಿಳಿದುಕೊಂಡಿದ್ದೆ ಅಲ್ಲಿ. ಪ್ರತಿಯೊಬ್ಬ ತಂತ್ರಜ್ಞನಿಗು, ಕಲಾವಿದರಿಗೆ ಒಂದೇ ತರಹದ ಊಟ.. ಯಾವುದರಲ್ಲೂ ಬೇದ ಭಾವ ಇಲ್ಲ. ಎಲ್ಲರೂ ಒಟ್ಟಾಗಿ ಕೂತು ಊಟ ಮಾಡಿ ತಟ್ಟೆ ಖಾಲಿಯಾದಾಗ ಆಗುವ ಸಂತೋಷವೇ ಬೇರೆ.
Dr. Rajkumar ಅವರು set ಅಲ್ಲಿ ಇರಲಿ ಇಲ್ಲದೆ ಹೋಗಲಿ ಅವರ ಮೌಲ್ಯಗಳು ಮಾತ್ರ ಪ್ರತಿಯೊಬ್ಬರೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುತ್ತಿದ್ದರು. ನನ್ನ ಜೀವನದ ಒಂದು ದೊಡ್ಡ ಅನುಭವ ಆ Company ಯಲ್ಲಿ ನಾನು ಕೆಲಸ ಮಾಡಿದ್ದು. ಒಂದು ಮಟ್ಟಕ್ಕೆ ನಾನು Dance ಮಾಡ್ತಾ ಇದ್ದೆ. ಆದರೆ Shivanna ಅವರ Speed ಗೆ, pace ಗೆ, style ಗೆ Match ಮಾಡೋದು ಕಷ್ಟ ಆಗ್ತಾ ಇತ್ತು. ಅವರು ಒಂದು ‘Power house of energy ‘. ಇಬ್ಬರದು ಒಟ್ಟಿಗೆ Shot ಇದ್ದಾಗ ಪ್ರತಿಬಾರಿಯೂ ಅವರ Take ok ಆಗ್ತಾ ಇತ್ತು ನಾನು ಸುಮಾರು Takes ತಗೋತಾ ಇದ್ದೆ. ಎಲ್ಲೂ ಅವರು ತಾಳ್ಮೆ ಕಳೆದುಕೊಳ್ಳದೆ, ಪ್ರತಿದಿನವೂ ಅದೇ energy ಅಲ್ಲಿ ಇರುತ್ತಿದ್ದರು.
ಕಷ್ಟ ಆದರೂ ಅವರಿಂದ ನಾನು ತುಂಬಾ ಕಲಿತುಕೊಂಡೆ. ನನ್ನ ಪ್ರಕಾರ ನಾನು ಸರಿಯಾಗಿ Dance ಮಾಡ್ತಾ ಇದ್ದೀನಿ ಅಂತ ಇತ್ತು. ಆದರೆ ಅದು Camera ಗೆ ಸರಿಯಾಗಿ ಕಾಣ್ತಾ ಇರ್ಲಿಲ್ಲ. Inspector Vikram ಚಿತ್ರೀಕರಣವೇ ಒಂದು ಪಯಣ. ಆ ಕಥೆ ಪ್ರಕಾರ ಸಾಕಷ್ಟು ಜನ ನೃತ್ಯಗಾರರು Travel ಮಾಡೋದು ಇತ್ತು. ಶೂಟಿಂಗ್ ಗಾಗಿ Location ಗೆ ಹೋಗುವಾಗಲೇ ದಾರಿಯಲ್ಲಿ ಎಲ್ಲಾ ಚಿತ್ರೀಕರಣ ಮಾಡ್ತಾ ಹೋದ್ವಿ. ‘ಈ ಕಣ್ಣನೋಟ’ ಹಾಡನ್ನು ನೀವು ಈಗಲೂ ಗಮನಿಸಿದರೆ ನಿಮಗೆ ಗೊತ್ತಾಗುತ್ತೆ. Early morning Sunrise Shots ಹಾಗೂ Evening sunset shots ಅಲ್ಲಿಯೇ ಜಾಸ್ತಿ ತೆಗೆದಿರೋದು.”
ಚಿ ಉದಯಶಂಕರ್ ಅವರ ಮಗ ಗುರುದತ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅವರು ಶಿವರಾಜ್ ಕುಮಾರ್ ಅವರ ಆಪ್ತಮಿತ್ರ ಕೂಡ ಹೌದು. ಅವರ ಮದ್ರಾಸಿನ ದಿನಗಳು, jokes, ಎಲ್ಲ ತುಂಟತನ ಗಳನ್ನು Share ಮಾಡುತ್ತಿದ್ದರು. ದಿಗ್ಗಜ ನಟ ಸುಂದರ್ ಕೃಷ್ಣ ಅರಸ್ ಅವರು ನನ್ನ ತಂದೆಯ ಪಾತ್ರ ಮಾಡಿದ್ದರು; ಮತ್ತೊಬ್ಬ ಧೀಮಂತ ನಟ ಅಶ್ವಥ್ ಅವರು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದರು ಅಂತ ಕಾವ್ಯ ತುಂಬಾ ಹೆಮ್ಮೆಯಿಂದ ಹೇಳುತ್ತಾರೆ.
ಒಂದು ದಿನ ಸದಾಶಿವನಗರದ ಒಂದು ಮನೆಯಲ್ಲಿ ಈ ಚಿತ್ರದ ಚಿತ್ರೀಕರಣ ನಡಿತಾ ಇತ್ತು. ದೃಶ್ಯ ಏನು ಅಂದ್ರೆ ಒಂದು room ನಲ್ಲಿ ನಾನು ಕೋಪ ಮಾಡ್ಕೊಂಡು ಕೂತಿರ್ತೀನಿ. ಶಿವಣ್ಣ ಅವರು ಬರ್ತಾರೆ. ನಾನು ಹೋಗಕ್ಕೆ ಪ್ರಯತ್ನ ಪಡ್ತೀನಿ. ಆಗ ಅವರು ನನ್ನ ಕೈ ಹಿಡಿತಾರೆ. ಈ ದೃಶ್ಯ Shoot ಆಗಬೇಕಾಗಿತ್ತು. ಇದನ್ನು ನೋಡಕ್ಕೆ ಅಣ್ಣಾವ್ರು Set ಗೆ ಬಂದಿದ್ದರು. ಈ ಒಂದು Experience ನ ನಾನು ಎಂದೂ ಮರೆಯಲ್ಲ. ನನಗೆ 3-4 ಚಿತ್ರದ ಅನುಭವ ಗಳಿದ್ದರೂ ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಯಾಕಂದರೆ Set ನಲ್ಲಿ ಇದ್ದಿದ್ದು God Of Kannada Cinema ‘Dr. Rajkumar’. ಅವರು ಕಿಟಕಿಯಿಂದ ಆಚೆ ಇದನ್ನ ನೋಡುತ್ತಿದ್ದಾರೆ. ನನಗೆ ಮೊದಲು ಗೊತ್ತಾಗಲಿಲ್ಲ.
Lights ಎಲ್ಲಾ ಅಡ್ಡ ಇದ್ವು. ಆಕಸ್ಮಿಕವಾಗಿ ತಿರುಗಿ ನೋಡಿದಾಗ ಅಲ್ಲಿ ಅಣ್ಣಾವ್ರು. ಅವರನ್ನು ನೋಡಿದಾಕ್ಷಣ Dialogues ಜೊತೆಗೆ ನನ್ನನ್ನೇ ನಾನು ಮರೆತು ಬಿಟ್ಟೆ. ಅಲ್ಲಿವರೆಗೂ Calm and Cool ಆಗಿ ಅಭಿನಯಿಸುತ್ತಿದ್ದ ನನಗೆ ಆಮೇಲೆ ಸುಮಾರು Take ಗಳನ್ನ ತಗೊಂಡಿದೀನಿ. ಏನ್ ಮಾಡಿದ್ರು Director ಗೆ ಏನ್ ಬೇಕು ಅದನ್ನು ನನ್ಕೈಲಿ ಕೊಡೋಕೆ ಆಗ್ತಿರ್ಲಿಲ್ಲ. ಅಪ್ಪಾಜಿ ನನ್ನ ನೋಡಿದ್ದು ನನಗೆ ಭಯ ಆಗ್ಲಿಲ್ಲ, ಒಂಥರಾ ದಿಗ್ಬ್ರಮೆ ಆಗೋಗಿತ್ತು. ನನ್ನ ಗಮನ ಎಲ್ಲಾ ನಾನು ಅಭಿನಯಿಸಬೇಕಾದರೆ ಅಣ್ಣಾವ್ರ reaction ಹೇಗಿರುತ್ತೆ ಅಂತ ನೋಡೊದ್ರಲ್ಲೇ ನನ್ನ Concentration Divert ಆಗ್ತಾ ಇತ್ತು.
ಅವರು ಗಮನಿಸಿ “ಪಾಪ ಯಾಕೋ ಹುಡುಗಿ ಹೆದರುತ್ತಿದ್ದಾರೆ. ನಾನು ಆಕಡೆ ಪಕ್ಕದಲ್ಲಿ ಇರ್ತೀನಿ” ಅಂತ ಹೇಳಿದರು. ಅದನ್ನು ಕೇಳಿ ನನಗೆ ಅಂತ ಒಬ್ಬ ಮೇರುನಟ, ನಾನು ಮಾಡುವ ತಪ್ಪುಗಳನ್ನು ನೋಡಿಯೂ ಒಂದು ಚೂರು ಕೋಪ ಮಾಡಿಕೊಳ್ಳಲಿಲ್ಲವಲ್ಲ ಅಂತ ಆಶ್ಚರ್ಯ,ಸಂತೋಷ ಎಲ್ಲಾ ಆಯಿತು. ಕಲಾವಿದರನ್ನು ಅರ್ಥಮಾಡಿಕೊಂಡು ಅವರ ಭಾವನೆಗಳಿಗೆ ಬೆಲೆ ಕೊಟ್ಟು ಸ್ಪಂದಿಸುವುದೇ Dr Rajkumar ಅವರ ವ್ಯಕ್ತಿತ್ವ.
ಈ ದೃಶ್ಯದ ಚಿತ್ರೀಕರಣ ಮುಗಿದ ನಂತರ ನಾನೇ ಅಣ್ಣಾವ್ರ ಬಳಿ ಹೋಗಿ “Sorry ನಾನು ನಿಮ್ಮನ್ನ ನೋಡಿ ತುಂಬಾ Nervous ಆಗ್ಬಿಟ್ಟೆ ” ಅಂತ ಕ್ಷಮೆ ಕೇಳಿದಾಗ ಮುಗ್ಧ ಮಗು ಮನಸ್ಸಿನ ಮುತ್ತುರಾಜ್ ಅವರು ಹೇಳದ್ರಂತೆ “ಯಾಕೆ? ನಾನು ನೋಡಕ್ಕೆ ಅಷ್ಟೊಂದು ಭಯ ಆಗೋಹಾಗೆ ಇದ್ದೀನ??” ಅಂತ. ಆಮೇಲೆ ಅವರ ಜೊತೆ ಕೂತು ಸ್ವಲ್ಪ ಹೊತ್ತು ಮಾತಾಡಿದೆ. ಅವರು ತುಂಬಾ ಪ್ರೀತಿಯಿಂದ ನಡೆಸಿಕೊಂಡರು. “ಈ ಅನುಭವವನ್ನು ನನ್ನ ಜೀವಮಾನದಲ್ಲೇ ಎಂದೂ ಮರೆಯೋಲ್ಲ.” ಎಂದು ಹೇಳುತ್ತಾ ಕಾವ್ಯ ಅವರು ಭಾವುಕರಾಗುತ್ತಾರೆ.
ಇನ್ನು ನಿರ್ದೇಶಕ ದಿನೇಶ್ ಬಾಬು ಅವರ ಬಗ್ಗೆ ಹೇಳುವುದಾದರೆ, ಅವರೊಬ್ಬ ಅದ್ಭುತ ನಿರ್ದೇಶಕ. ಕಥೆ ಬಗ್ಗೆ ಪಾತ್ರದ ಬಗ್ಗೆ ಮುಂಚಿತವಾಗಿಯೇ ಸಾಕಷ್ಟು ವಿವರವಾಗಿ ತಿಳಿಸಿಕೊಟ್ಟು ಕಲಾವಿದರಿಗೆ ಅಭಿನಯಿಸೋಕೆ ಸಂಪೂರ್ಣ ಸ್ವಾತಂತ್ರ್ಯ ಕೊಡೋರು. ಇನ್ನು ಒಬ್ಬ ಛಾಯಾಗ್ರಾಹಕನಾಗಿ ತೆರೆಯ ಮೇಲೆ Miracle ಗಳನ್ನೇ ಮಾಡೋರು. Minimum Make up, Natural Lighting ನಲ್ಲೆ ಹೆಚ್ಚಾಗಿ ಚಿತ್ರೀಕರಿಸಲು ಆಸೆ ಪಡ್ತಿದ್ರು.
ಅಣ್ಣಾವ್ರು ಕ್ಯಾಂಪಿನಿಂದ ಕಾವ್ಯ ಅವರು ವಿಷ್ಣುವರ್ಧನ್ ಅವರ ಕ್ಯಾಂಪಿಗೆ ಹೋಗಿದ್ದು ಹೇಗೆ?? ನಿರೀಕ್ಷಿಸಿ ಮುಂದಿನ ಬರಹದಲ್ಲಿ.
Comments