ನೂರೊಂದು ನೆನಪು

“Rebel Star Ambarish Kavya ಅವರಿಗೆ ಕೊಟ್ಟ ಆ 100 ರೂಪಾಯಿ.”

0

ಸಿನಿಮಾ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದ  Kavya ಅವರ ಮೊದಲನೆಯ ದೃಶ್ಯ…

ಹಿಂದಿನ ಬರಹದಲ್ಲಿ ತಿಳಿಸಿದಂತೆ ‘ಏಳು ಸುತ್ತಿನ ಕೋಟೆ’ ಕಾವ್ಯ ಅವರಿಗೆ ಮೊದಲ ಚಿತ್ರವಾಗಿತ್ತು. Rebel Star Ambarish ಅವರ ತಂಗಿಯ ಪಾತ್ರ.. ಪಾತ್ರ ಚಿಕ್ಕದು ಆದರೆ ಆ ಚಿತ್ರದಿಂದ ಕಲಿತ ಅನುಭವ ತುಂಬಾ ದೊಡ್ಡದು.. ಕಾವ್ಯ ಅವರು ಅವರ ತಾಯಿಯೊಂದಿಗೆ shooting ಗೆ ಹೋಗಿದ್ದಾರೆ. ಮೊದಲನೆಯ ದೃಶ್ಯವೇ ಅವರಿಗೆ ಇಷ್ಟ ಇಲ್ಲದೇ ಇರುವ ಮದುವೆಯನ್ನು ಅವರ ತಾಯಿ (ಸಿನಿಮಾ ತಾಯಿ )ಮಾಡಿಸಲು ಹೋಗುವ ದೃಶ್ಯ.. ಬಹುಭಾಷಾ ನಟಿ Gautamiಯೊಂದಿಗೆ combination.. ಮದುವೆ ಹೆಣ್ಣಾಗಿ Kavya ಅವರನ್ನು ಅಲಂಕರಿಸುವ ದೃಶ್ಯ.. ಮೊದಲನೆಯ ಚಿತ್ರ, ಮೊದಲನೆಯ shot, ತುಂಬಾ ಭಯ!!  Coincidentally ಅವತ್ತು ಚಿತ್ರೀಕರಣ ಮಾಡುತ್ತಿದ್ದ ದೃಶ್ಯದಲ್ಲೂ ಕೂಡ ಇದೆ expressions ಬೇಕಿತ್ತು.. ಭಯ, ಮುಜುಗರ ಇವೆಲ್ಲವೂ..

‘ಸ್ವಾಮಿ ಕಾರ್ಯ, ಸ್ವಕಾರ್ಯ’ ಎಂಬುವಂತೆ ಅವರ ಮೊದಲನೆಯ ದಿವಸದಲ್ಲಿ ಆದ ತಳಮಳ ಕ್ಯಾಮರಾದಲ್ಲಿ capture ಆಯ್ತು.. ತುಂಬಾ natural ಆಗಿ ಬಂತು.. ಇಡೀ team full ಖುಷಿಯಾಯಿತು.. Take ok ಆದ ಮೇಲೂ ಕೂಡ ಕಾವ್ಯ ಅವರಿಗೆ ಅನುಮಾನ ಇತ್ತಂತೆ.. ಸಾಕಷ್ಟು ಬಾರಿ ಛಾಯಾಗ್ರಹಕ cum ನಿರ್ದೇಶಕ B C Gowri Shankar ಬಳಿ ‘ಸರ್ ಓಕೆನಾ ಓಕೆನಾ’ ಅಂತ ಕೇಳ್ತಾನೆ ಇದ್ದರಂತೆ.. Gautami ಯವರು well educated.. ತುಂಬಾ disciplined.. ನನಗೆ ತುಂಬಾ support ಮಾಡಿದರು.. ಅಷ್ಟು ದೊಡ್ಡ ನಟಿಯಾಗಿದ್ದರೂ ಒಂದು ಚೂರು ಅಹಂ ಇರಲಿಲ್ಲ. ಅಂಬರೀಶ್ ಅವರು First day shooting ಅಲ್ಲಿ ಇರಲಿಲ್ಲ.. Next day ಬಂದ್ರು.. ಅವರು ಬರೋ ಸ್ಟೈಲೇ ಸೂಪರ್.. ನನ್ನ ಬಳಿ ಮಾತಾಡಿ “ಏನಮ್ಮಾ ಹೇಗಿದ್ದೀಯ?? ಶೂಟಿಂಗ್ ಎಲ್ಲ ಚೆನ್ನಾಗಿ ಆಯ್ತಾ?” ಎಂದು ಎಷ್ಟೋ ವರ್ಷದ ಪರಿಚಯ ದಂತೆ ಮಾತಾಡಿ, ನನ್ನ ತುಂಬಾ comfortable feel ಮಾಡಿಸಿದರು.. ತೆರೆಯ ಮೇಲೆ ಮಾತ್ರ ಅವರು ಅಣ್ಣ ಆಗಿರಲಿಲ್ಲ.. ತೆರೆಯ ಹಿಂದೇನು ನನಗೆ ಅಣ್ಣನಂತೆಯೇ ಇದ್ದರು. Shooting atmosphere ನನಗೆ family picnic ತರ ಆಗ್ಬಿಟ್ಟಿತ್ತು” ಅಂತ Kavya ಹೇಳ್ತಾರೆ..

Kavya, Gautami

December ಟೈಮ್ನಲ್ಲಿ ಶೂಟಿಂಗ್ ನಡೆದಿತ್ತು.. Jan 1st ಕುದುರೆಮುಖ ದಲ್ಲಿ shooting ಅಂತ ನಾನು ಹೋದಾಗ ಅಂಬರೀಶ್ ಅವರು ನನ್ನ ಕರೆದು 100 ರೂಪಾಯಿ ನೋಟನ್ನು ಕೊಟ್ಟು “ಇಟ್ಕೋ.. ಬಣ್ಣದ ಬದುಕಿಗೆ ಬರ್ತಾ ಇದಿಯಾ ಒಳ್ಳೆದಾಗಲಿ. ಹೀಗೆ ಸಾವಿರಾರು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡೋ ತರ ಆಗ್ಲಿ” ಎಂದು ಮನದುಂಬಿ ಹಾರೈಸಿದರು.. ಅಷ್ಟು ದೊಡ್ಡ ವ್ಯಕ್ತಿ ನನ್ನಂತ ಹೊಸ ನಟಿಗೆ ತುಂಬು ಹೃದಯದಿಂದ ಹಾರೈಸಿದ್ದು ಅವರ ವ್ಯಕ್ತಿತ್ವ ಎಂಥದ್ದು ಅಂತ ಗೊತ್ತಾಯ್ತು..
ಈ ನೂರು ರೂಪಾಯಿಯನ್ನು Kavya ಅವರು ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ..

ಈ ಭಾವನೆಗೆ ಅವರ ಒಳ್ಳೆಯ ಮನಸ್ಸಿಗೆ ನನ್ನದೊಂದು ಸಲಾಂ..

Ambarish, Kavya

‘ಏಳು ಸುತ್ತಿನ ಕೋಟೆ’ ಚಿತ್ರದಲ್ಲಿ, ಚಿಕ್ಕದಾದ ಚೊಕ್ಕವಾದ ಪಾತ್ರ ಆದ್ದರಿಂದ ನನಗೆ ಅಷ್ಟೊಂದು ದೊಡ್ಡ recognition ಸಿಗಲಿಲ್ಲ.. ಆಗ ನಾನು SSLC ಓದುತ್ತಿದ್ದೆ.. ಆಗೆಲ್ಲ ಕೆಲವರ ಮನಸ್ಥಿತಿ ಹೇಗಿರುತ್ತದೆ ಸಿನಿಮಾದಲ್ಲಿ ಅಭಿನಯಿಸಿದ್ದರೆ ಅವರು normal life ನಿಂದ
ದೂರವಾಗಿದ್ದಾರೆ ಎನ್ನುವ feeling ಇತ್ತು.. ಆಗ ನನಗೆ ತೀರ ಮುಜುಗರ ಆಯ್ತು, ಅಂಜಿಕೆ ಇತ್ತು.. ಯಾರಾದರೂ ಏನಾದರೂ ಅನ್ಕೊಂಡು ಬಿಡ್ತಾರೆನೋ ಅಂತ.. ಯಾಕಂದ್ರೆ ನಾನು ತೀರ ಸಾಧಾರಣ ಜೀವನದಿಂದ ಬಂದೋಳು.. ಆಗ ನನ್ನ teachers ಎಲ್ಲಾ “ಏನು ಯೋಚನೆ ಮಾಡಬೇಡ ನೀನು ಮೊದಲು ಹೇಗಿದ್ಯೋ ಈಗ್ಲೂ ಹಂಗೆ ಇರು ಅಂತ ಧೈರ್ಯ ತುಂಬುತ್ತಿದ್ರು .. ಹಾಗಾಗಿ ನನಗೆ ಹೆಚ್ಚು ವ್ಯತ್ಯಾಸ ಗೊತ್ತಾಗ್ಲಿಲ್ಲ.”

ಮುಂದಿನ ಬರಹದಲ್ಲಿ ‘ಏಳು ಸುತ್ತಿನ ಕೋಟೆಯ’ ನಂತರ ಅಭಿನಯಿಸಿದ ಚಿತ್ರ ಯಾವುದು.. ಅವರ ಬಣ್ಣದ ಬದುಕು ಮುಂದೆ ಹೇಗೆ ಸಾಗಿತು ಅನ್ನೋದರ ಬಗ್ಗೆ ಮಾಹಿತಿ….

Raghuram

ನನಗೆ ಸಿಕ್ಕ Kalpana ಕೈಬರಹ

Previous article

Ramu – Malashri ಅವರ ಪ್ರೇಮ್ ಕಹಾನಿ..

Next article

You may also like

Comments

Leave a reply

Your email address will not be published. Required fields are marked *

14 + fourteen =