“ಗಗನವು ಎಲ್ಲೋ,ಭೂಮಿಯು ಎಲ್ಲೋ,ಒಂದು ಅರಿಯೇ ನಾ “
“ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ”..
“ಪಂಚಮವೇದ ಪ್ರೇಮದನಾದ”..
“ಅರೆರೆ ರೆ ಗಿಣಿ ರಾಮ ಹೊಯ್ ಪಂಚರಂಗಿ ರಾಮ”..
ಮಿನುಗುತಾರೆ Kalpana ಅವರ ಸೂಪರ್ ಹಿಟ್ ಹಾಡಿನ ಸಾಲುಗಳನ್ನ ಮನದಲ್ಲಿ ಗುನುಗಿಸುತ್ತ, ಅಕ್ಷರದಲ್ಲಿ ಬರೆಯುತ್ತಾ, ಕಲ್ಪನಾ ಅವರನ್ನು ನೆನೆಯುತ್ತಾ ಇಂದಿನ ನನ್ನ ಬರವಣಿಗೆಯ ಮೆರವಣಿಗೆ ಶುರು ಮಾಡ್ತಾ ಇದ್ದೀನಿ..
ಇವತ್ತು ನಮಗೆ Text friend, mail friend, app friend.. ಹೀಗೆ ಸ್ನೇಹದ ಸೇತುವೆಯನ್ನು ಕಟ್ಟೋಕೆ ನಾನಾ ಸಂಪರ್ಕಗಳು.. ಸುಮಾರು 45 ರಿಂದ 46 ವರ್ಷಗಳ ಹಿಂದೆ technology ಹೀಗೆ ಬೆಳೆದಿರಲಿಲ್ಲ. ಯಾರಂದ್ರವರು, ಹೆಂಗ್ ಅಂದ್ರಂಗೆ, ಎಲ್ಲಿ ಬೇಕಾದ್ರು friends ಆಗೋಕೆ ಆಗ್ತಿರ್ಲಿಲ್ಲ..
ಇಷ್ಟೆಲ್ಲಾ ಪೀಠಿಕೆ ಹಾಕಿ ಈಗ ಮುಖ್ಯ ಕಥೆಗೆ ಬರ್ತೀನಿ.. ನನ್ನ ಅಮ್ಮ Canara bank employee.. ನನಗೆ ಈ ಸಿನಿಮಾ ಹುಚ್ಚು, ಪ್ರೀತಿ, ಅಭಿಮಾನ ಬರೋಕೆ ನಮ್ಮಮ್ಮಾ ನೇ ಕಾರಣ. ಯಾಕೆಂದರೆ ಅವರಿಗೂ ಸಿನಿಮಾ ಕಲಾವಿದರು ಎಂದರೆ ಅತ್ಯಂತ ಪ್ರೀತಿ ಹಾಗೂ ಗೌರವ. ನನ್ನ ತಾಯಿ ನನ್ನ ಬಳಿ ಹೇಳಿದ ಪ್ರಕಾರ ಆಗೆಲ್ಲಾ pen friend ಅಂತ ಒಂದು Concept ( ಪರಿಕಲ್ಪನೆ) ಇತ್ತಂತೆ..
ನಮಗೆ ಯಾವುದಾದರೂ ಗೊತ್ತಿಲ್ಲದವರ ವಿಳಾಸ ಸಿಕ್ಕಿದ್ದರೆ ;ಅದು ಬೇರೆ ಊರಿನದ್ದೋ, ರಾಜ್ಯದ್ದೋ, ದೇಶದ್ದೋ ಯಾವುದೇ ಆದರೂ ಸರಿ ಆ ವಿಳಾಸಕ್ಕೆ ಪತ್ರವನ್ನು ಬರೆದು, ನೀವು ನನಗೆ Pen firiend ಆಗಲೂ ಇಚ್ಛಿಸುತ್ತೀರಾ?? ಎಂದು ಬರೆದ ಮೇಲೆ, ಆ ಕಡೆಯಿಂದ ಪ್ರತ್ಯುತ್ತರ ಬಂದರೆ ಸ್ನೇಹದ ಸೇತುವೆ ನಿರ್ಮಾಣವಾಗ್ತಿತ್ತಂತೆ..
ಈಗಿನ ಜನರೇಷನ್ ಗೆ ಅರ್ಥ ಆಗೋತರ ಹೇಳಬೇಕೆಂದರೆ ಯಾವುದೋ unknown number ಗೆ text ಮಾಡ್ತೀವಿ.. ಆ ಕಡೆಯಿಂದ ಅವರು revert ಮಾಡದ್ರೆ ಹೇಗೆ friendship develop ಆಗತ್ತೋ, ಮೊದಲೆಲ್ಲಾ ಭಾವನೆಗಳ ವಿನಿಮಯ ಪತ್ರಗಳ ಮೂಲಕ ಆಗುತ್ತಿತ್ತು.. ದೇಶ-ವಿದೇಶಗಳಿಂದ ಎಲ್ಲಾ Pen friends ಆಗ್ತಾ ಇದ್ರಂತೆ.
ನನ್ನ ಅಮ್ಮನಿಗೆ, ತಕ್ಕ ಮಟ್ಟಿಗೆ ಬರವಣಿಗೆ ಇತ್ತು. ಕನ್ನಡದ ‘ಮಿನುಗುತಾರೆ ಕಲ್ಪನಾ’ ಅವರಿಗೆ ಅವರ ಚಿತ್ರಗಳ ಬಗ್ಗೆ, ಅಭಿನಯದ ಬಗ್ಗೆ ಪತ್ರಗಳನ್ನು ಬರೆಯುತ್ತಿದ್ದರು. ನನ್ನ ತಾಯಿ ಬರೆದ ಪತ್ರಗಳು ಕಲ್ಪನಾ ಅವರಿಗೆ ಮುಟ್ಟುತ್ತಿದ್ದವು. ನಮ್ಮಮ್ಮನ ಅಕ್ಷರ ರೂಪದ ಅಭಿಮಾನವನ್ನು ಕಂಡು ಕಲ್ಪನಾ ಅವರು ಕೂಡ Pen friend ಆಗಿ ನನ್ನ ಅಮ್ಮನಿಗೆ ಪ್ರತಿಕ್ರಿಯಿಸುತ್ತಿದ್ದರು..
ನಾನು ಹುಟ್ಟಿದ ತಕ್ಷಣ ನನ್ನ ತಾಯಿಗೆ ಮಗುವಾಗಿದೆ ಅನ್ನೋ ವಿಷಯ ಕಲ್ಪನಾ ಅವರಿಗೆ ಗೊತ್ತಾಗಿದೆ.. ಪತ್ರದ ಮೂಲಕ ನನ್ನ ಅಮ್ಮನಿಗೆ ಕಲ್ಪನಾ ಅವರು “ನಿನ್ನ ಮಗುವಿನ ಫೋಟೋ ಕಳಿಸು, ನನಗೆ ನೋಡಬೇಕು ಅನ್ನಿಸುತ್ತಿದೆ ” ಎಂದು ಕೇಳಿ ಲೆಟರ್ ಹಾಕಿದ್ರಂತೆ. ಆಗ ನಾನು ಇನ್ನು ತಿಂಗಳ ಕೂಸು. ನನ್ನ ತಾಯಿಗೆ ನಿಲ್ಲದ ಆನಂದ. ಒಳ್ಳೆ ಬಟ್ಟೆ ಹಾಕಿ, ಫೋಟೋ ಸ್ಟುಡಿಯೋಗೆ ನನ್ನನ್ನು ಕರೆದುಕೊಂಡು ಹೋಗಿ, ಈ ಭಾವಚಿತ್ರವನ್ನು click ಕಿಸಿದ್ದಾರೆ.. ಕಲ್ಪನಾ ಅವರು ಎರಡು Photo copy ಯಾಕೆ ಕೇಳಿದ್ದಾರೆ ಎಂದು ನನ್ನ ಅಮ್ಮನಿಗೂ ಆವಾಗ ಗೊತ್ತಾಗಲಿಲ್ಲ. ಅವರ address ಗೆ ಒಂದು ಪತ್ರದ ಜೊತೆಗೆ ನನ್ನ ಎರಡು ಫೋಟೋಗಳನ್ನು post ಮಾಡಿದ್ದಾರೆ.
ಇದಾದ ಕೆಲ ದಿನಗಳ ನಂತರ ನಮ್ಮ ಮೈಸೂರಿನ ಮನೆಗೆ ಒಂದು ಅಂಚೆ ಬಂದಿದೆ.ಅಂಚೆಯನ್ನು ತೆಗೆದು ನೋಡಿದಾಗ ನಮ್ಮಮ್ಮ ಕಲ್ಪನಾ ಅವರಿಗೆ ಕಳಿಸಿದ ಫೋಟೋ ಒಂದು ವಾಪಸ್ ಬಂದಿದೆ.. ಇದ್ಯಾಕೆ ವಾಪಸ್ ಕಳಿಸಿದ್ದಾರೆ? ಎಂದು ಯೋಚನೆ ಮಾಡಿ Photo ವನ್ನು ಹಿಂದೆ ತಿರುಗಿಸಿದ್ದಾಗ ಅಲ್ಲಿ ಕಾಣಿಸಿದ್ದು ಮಿನುಗು ತಾರೆಯ ಮಿನುಗುವ ಅಕ್ಷರಗಳು . ಅವರ ಕೈಬರಹದಲ್ಲಿ ನನಗೆ ಆಶೀರ್ವದಿಸಿ ಕಳುಹಿಸಿದ್ದ ಪ್ರೀತಿಯ ಮಾತುಗಳು..
” ಶ್ರೀ ಗುರು, ಮಗುವಿಗೆ ದೀರ್ಘ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲೆಂದು ಪೂರ್ಣಮನಸ್ಸಿನಿಂದ ಆಶೀರ್ವದಿಸುವ ಕಲ್ಪನಾ 19/10/1977..”
ಮಿನುಗು ತಾರೆಯ ಆ ಮಾತುಗಳು ಆಶೀರ್ವಾದ ನಿಜಕ್ಕೂ ಕಲ್ಪನೆಯಲ್ಲ.. ವಾಸ್ತವ.. ನನ್ನ ಅಪರೂಪದ, ಅಮೂಲ್ಯವಾದ ಆಸ್ತಿ ಈ ಫೋಟೋ…
Raghu ji ಕಲ್ಪನಾ ಅವರು ನಿಮಗೆ ಕಲ್ಸಿರೋ ಆಶೀರ್ವಾದ…ನೀವೇ ಗ್ರೇಟ್