ನೂರೊಂದು ನೆನಪು

Kavya ಅವರ ಬಾಲ್ಯದ ನೆನಪು

0
Kavya

ಕಾವ್ಯ ಹುಟ್ಟಿದ್ದು ಜೂನ್ 29 ಬೆಂಗಳೂರಿನಲ್ಲಿ. ತಂದೆ ರಾಮಚಂದ್ರ ,HAL employee ; ತಾಯಿ ಲೀಲಾವತಿ ,School teacher. ಅವರ ತಂದೆ ತಾಯಿಗೆ Kavya ಒಬ್ಬಳೇ ಮಗಳು. ಮಗಳನ್ನೇ ಮಗನಾಗಿ ಅತೀ ಪ್ರೀತಿಯಿಂದ, ಮುದ್ದಿನಿಂದ ಬೆಳೆಸಿದ ಕುಟುಂಬ. Kavya ಅವರಿಗೆ ಬಂಧು-ಬಾಂಧವರು ಕುಟುಂಬ ಎಂದರೆ ತುಂಬಾ ಪ್ರೀತಿ. ಅವರು ಬೆಂಗಳೂರಿನ Jayanagar T-Block ಕಡೆಯವರು. ಜಯನಗರದಲ್ಲಿರುವ ಅವರ ತಾತನ ಮನೆ ಅಂದರೆ ಇವರ ಕುಟುಂಬದಲ್ಲಿರುವ ಎಲ್ಲರಿಗೂ ಒಂಥರಾ Headoffice ಇದ್ದ ಹಾಗೆ. ಯಾರೇ ಊರಿಂದ ಬಂದರು ಇಲ್ಲಿ ಬಂದು ಖುಷಿಯಾಗಿ ಕಾಲ ಕಳೆಯುತ್ತಿದ್ದರು. ಚಿಕ್ಕಪ್ಪ-ಚಿಕ್ಕಮ್ಮ, ತಾತ-ಅಜ್ಜಿ, ಎಲ್ಲರ ಪ್ರೀತಿ ಆರೈಕೆಯಲ್ಲಿ ಅರಳಿದ ಮುದ್ದಾದ ಸುಂದರ ಹೂವೇ ಈ ‘Kavya.’

ಇಡೀ ವಂಶಕ್ಕೆ ಇವರೇ ಮೊದಲ ಮೊಮ್ಮಗಳು ಆಗಿದ್ದರಿಂದ ತುಂಬಾ ಜವಾಬ್ದಾರಿ ಹಾಗೂ ಇವರ ಮೇಲೆ expectations ಅವರ ನಡವಳಿಕೆ ಹಾಗೂ ಬೆಳವಣಿಗೆಯ ಬಗ್ಗೆ ಇತ್ತು.. ಪಕ್ಕ ಜಯನಗರದ ಹುಡುಗಿಯಾದ ಕಾವ್ಯ ಅವರಿಗೆ ಬೆಂಗಳೂರಿನ Malleshwaram, ಇತರೆ ಭಾಗಗಳಿಗೆ ಬರಬೇಕೆಂದರೆ, ಬೇರೆ ಊರಿಗೆ ಬಂದಂತಹ ಅನುಭವ ಆಗ್ತಿತ್ತಂತೆ.

ಕಾವ್ಯ ಅವರ ಮೂಲ ಹೆಸರು ‘ಲಕ್ಷ್ಮಿಶ್ರೀ’. ಸಾಮಾನ್ಯವಾಗಿ ಶ್ರೀಲಕ್ಷ್ಮಿ ಅನ್ನೋ ಹೆಸರನ್ನು ಕೇಳಿರುತ್ತೀರಿ. ಆಗಿನಕಾಲದಲ್ಲಿ Lakshmi Shree ಅನ್ನೋದು ಸ್ವಲ್ಪ ಅಪರೂಪದ ಹೆಸರು. ಈ ಹೆಸರನ್ನು ಅವರ ತಂದೆ ಇಡುವುದಕ್ಕೂ ಒಂದು ಕಾರಣವಿದೆ. ಶ್ರೀಲಕ್ಷ್ಮಿ ಅಂತ ಇಟ್ಟರೆ, ಸ್ಕೂಲ್ ಗಳಲ್ಲಿ English Alphabetical order ಪ್ರಕಾರ S ಇಂದ ಶುರುವಾಗೋ ಹೆಸರು ಕೊನೆಯಲ್ಲಿ ಬರತ್ತೆ. Attendence list ಅಲ್ಲಿ ಕೊನೆಯ ಹೆಸರು ಆಗತ್ತೆ ಅಂತ ಲಕ್ಷ್ಮಿಶ್ರೀ ಅಂತ ಹೆಸರಿಟ್ಟರು.

Kavya as a baby

ಕಾವ್ಯ ಅವರ ತಾಯಿ ಲೀಲಾವತಿಯವರು, ಮೂಲತಹ ಮೈಸೂರಿನ ಕೃಷ್ಣಮೂರ್ತಿ ಪುರದವರು. ಅವರ ತಾಯಿಗೆ 6ಜನ ಅಕ್ಕತಂಗಿಯರು ಹಾಗೆ ಇಬ್ಬರು ಅಣ್ಣತಮ್ಮಂದಿರು. ಇವರೆಲ್ಲರೂ ಬೇಸಿಗೆ ರಜಾ ಬಂತೆಂದರೆ, ಒಟ್ಟಾಗಿ ಮೈಸೂರಿನ ತಾತನ ಮನೆಯಲ್ಲಿ ಸೇರಿ, ಆಟ-ಪಾಠ ತುಂಟಾಟ ಇವೆಲ್ಲವನ್ನು ಮಾಡುತ್ತಿದ್ದರು. ಈ ನೆನಪುಗಳೆಲ್ಲಾ ಕಾವ್ಯ ಅವರಲ್ಲಿ ಇನ್ನೂ ಹಚ್ಚ ಹಸುರಾಗಿದೆ.

ಕಾವ್ಯ ಅವರನ್ನು ತುಂಬಾ ಮುದ್ದಿನಿಂದ ಬೆಳೆಸುವುದರ ಜೊತೆಗೆ, ಹಿರಿಯರೊಂದಿಗೆ ಹೇಗೆ ವರ್ತಿಸಬೇಕು ಎಂದು ತುಂಬಾ ಸಂಸ್ಕಾರದಿಂದ ಬೆಳೆಸಿದ್ದರು. ಬೆಂಗಳೂರಿನ Holy Saint ಶಾಲೆಯಲ್ಲಿ 5ನೇ ತರಗತಿವರೆಗೂ ವಿದ್ಯಾಭ್ಯಾಸ ಮುಗಿಸಿ; ಆರು ಮತ್ತು ಏಳನೇ ತರಗತಿಯನ್ನು ಬೆಂಗಳೂರಿನ Ashoka pillar ಬಳಿ ಇದ್ದ ಸರಸ್ವತಿ ವಿದ್ಯಾಮಂದಿರದಲ್ಲಿ ಮುಂದುವರಿಸಿದರು ಯಾಕೆಂದರೆ ಅದೇ ಶಾಲೆಯಲ್ಲಿ ಕಾವ್ಯ ಅವರ ತಾಯಿ ಕೂಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ನಂತರ high school ವಿದ್ಯಾಭ್ಯಾಸವನ್ನು ಜಯನಗರದ MES ಶಾಲೆಯಲ್ಲಿ ಮುಂದುವರಿಸಿದರು. ಅಪ್ಪ-ಅಮ್ಮ ಇಬ್ಬರೂ ಕೆಲಸದಲ್ಲಿದ್ದ ರಿಂದ ಅಜ್ಜಿ, ತಾತ, ಚಿಕ್ಕಪ್ಪ ಹಾಗೂ ಅವರ ಮನೆಯ ಕೆಳಗಡೆ ಬಾಡಿಗೆಗೆ ಇದ್ದ tenant ಕೂಡ ಕಾವ್ಯ ಅವರನ್ನು ನೋಡಿಕೊಳ್ಳುತ್ತಿದ್ದರು. ಸರಸ್ವತಿ ವಿದ್ಯಾಮಂದಿರದಲ್ಲಿ ಓದುತ್ತಿರಬೇಕಾದರೆ, ಕಾವ್ಯ ಅವರು teacher ಮಗಳಾಗಿದ್ದರಿಂದ ಎಲ್ಲಾ competition ಗಳಲ್ಲೂ ಭಾಗವಹಿಸುತ್ತಿದ್ದರು. ಅವರ ತಾಯಿನೇ ಕೆಲವು group dance ನೃತ್ಯ ಹೇಳಿ ಕೊಟ್ಟಿರುವುದು ಉಂಟು. ಮಾಧವರಾವ್ ಎನ್ನುವವರು ಕಾವ್ಯ ಅವರ ಪ್ರತಿಭೆಯನ್ನು ಗುರುತಿಸಿ ನಾಟಕಗಳು, ಏಕಪಾತ್ರಾಭಿನಯ, ಈ ಎಲ್ಲದರಲ್ಲೂ ಕಾವ್ಯಅವರನ್ನು ಸೇರ್ಪಡೆ ಮಾಡುತ್ತಿದ್ದರು. ಶಾಲೆಯಲ್ಲಿ ಶುಕ್ರವಾರದ ಸರಸ್ವತಿ ಪೂಜೆ, ಪ್ರಸಾದಕ್ಕೆಂದು ಕೊಡುತ್ತಿದ್ದ ಕಡ್ಲೇಪುರಿ, ಈ ಎಲ್ಲದರ ನೆನಪುಗಳನ್ನ ಕಾವ್ಯ ಅವರು ಈಗಲೂ ಮೆಲುಕು ಹಾಕುತ್ತಾರೆ.

Kavya ಅವರ ತಂದೆ ಅವರನ್ನು ತುಂಬಾ ಪ್ರೀತಿಸುತ್ತಿದ್ದರು, ಅಷ್ಟೇ Strict ಆಗಿ ಕೂಡ ಇರ್ತಿದ್ರು. Kavya ಅವರ ತಂದೆಗೆ ಬಹಳ ಬೇಗ ಕೋಪ ಬರುತ್ತಿತ್ತಂತೆ . ಒಮ್ಮೆ ಕೋಪ ಅತಿಯಾದಾಗ ಸಣ್ಣದಾಗಿ ಪೆಟ್ಟು ಕೊಟ್ಟಿರುವುದು ಉಂಟು. ತಕ್ಷಣ ಕೋಪ ಕಡಿಮೆಯಾಗಿ ಮಗಳನ್ನು ಕರೆದುಕೊಂಡು ಹೋಗಿ ice cream ಕೊಡಿಸುತ್ತಿದ್ದರು. ಐಸ್ ಕ್ರೀಮ್ ಕೊಡಿಸುತ್ತಾರೆ ಅನ್ನೋ ಖುಷಿ ಇತ್ತೆ ಹೊರತು ಅವರ ತಂದೆ ಹೊಡೆಯುತ್ತಾರೆ ಅನ್ನುವ ಬೇಜಾರು ಕಾವ್ಯ ಅವರಿಗೆ ಆಗುತ್ತಿರಲಿಲ್ಲ. ಈಗ ಅವರ ತಂದೆಯನ್ನು ನೋಡಿದಾಗ “ನಮ್ಮ ಅಪ್ಪನಿಗೆ ಅಷ್ಟೊಂದು ಕೋಪ ಬರುತ್ತಿತ್ತಾ? ” ಅಂತ ಅನ್ಸತ್ತೆ.

ಇನ್ನು ಸಿನಿಮಾ ನೋಡುವ ವಿಚಾರಕ್ಕೆ ಬಂದರೆ ಕಾವ್ಯ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಮೀರಾ ಅವರು ದೊಡ್ಡ Rajkumar ಅವರ ಅಭಿಮಾನಿ. ಅಣ್ಣಾವ್ರ ಅಭಿನಯದ ಚಿತ್ರಗಳನ್ನು ನೋಡಿ ಆ ಕಥೆಗಳನ್ನು ಬಂದು Kavya ಅವರಿಗೆ ಹೇಳುತ್ತಿದ್ದರಂತೆ. ಇನ್ನು ಕಾವ್ಯ ಅವರ ಮನೆಯಲ್ಲಿ, ಭಕ್ತಿ ಪ್ರಧಾನ ಚಿತ್ರಗಳಿಗೆ ಮಾತ್ರ ಕರೆದುಕೊಂಡು ಹೋಗುತ್ತಿದ್ದರು. ಭಾನುವಾರ ಬಂತೆಂದರೆ Jayanagar Complex ನಲ್ಲಿ ಇದ್ದ ‘ಗುರುಪ್ರಸಾದ್’ ಹೋಟೆಲಿಗೆ ಕಾವ್ಯ ಅವರನ್ನು ಅವರ ತಂದೆ-ತಾಯಿ ಕರ್ಕೊಂಡು ಹೋಗ್ತಾ ಇದ್ರು. ಹೋಟೆಲಿನ ಮಸಾಲ್ ದೋಸೆ ಅಂದರೆ ಇವರಿಗೆ ತುಂಬಾ ಇಷ್ಟ. ಜೊತೆಯಲ್ಲಿರುವ ಪಲ್ಯವನ್ನು ಪಕ್ಕಕ್ಕಿಟ್ಟು, ಪೂರ್ತಿ ದೋಸೆಯನ್ನು ಮೊದಲು ತಿನ್ನುತ್ತಿದ್ದರಂತೆ. ಪಲ್ಯ ಎಂದರೆ ಇವರಿಗೆ ಬಹಳ ಇಷ್ಟ. ಪಲ್ಯವನ್ನು ಕಡೆಯಲ್ಲಿ ತಿನ್ನೋಣ ಎಂದು ಆಸೆಯಿಂದ ಎತ್ತಿಕೊಂಡಾಗ, Hotel ಮಾಣಿ ಬಂದು ಇವರು ತಿಂದು ಆಗಿದೆ ಎಂದು ಭಾವಿಸಿ plate ಅನ್ನು ತೆಗೆದುಕೊಂಡು ಹೋಗುತ್ತಿದ್ದರು. ತಿನ್ನುವುದರಲ್ಲಿKavya ಅವರು ತುಂಬಾ ನಿಧಾನ.

Kavya

ಇದೆಲ್ಲದರ ನಡುವೆ ನಾನು ಇನ್ನೊಂದು ವಿಚಾರ ಹೇಳಲು ಮರೆತೆ. Kavya ಅವರ ಬಾಲ್ಯದ ಮೈಸೂರಿನ ನೆನಪು. ಇವರು ಇವರ cousins ಜೊತೆಗೆ ಒಟ್ಟಿಗೆ ಸೇರಿದಾಗ ಆಚೆ ಹೋಗಲು ಇಷ್ಟಪಡುತ್ತಿರಲಿಲ್ಲ. ಯಾಕೆಂದರೆ ಸಮಯ ವ್ಯರ್ಥವಾಗುತ್ತದೆ. ಆದಷ್ಟು ಮನೆಯಲ್ಲಿ ಕಾಲ ಕಳೆಯೋಣ ಅಂತ. ಕೃಷ್ಣಮೂರ್ತಿ ಪುರದ ಅವರ ತಾತನ ಮನೆಯಲ್ಲಿ ಮುಂದೆ ಒಂದು ಚಿಕ್ಕ ರೂಮಿನಲ್ಲೇ ಈ ಮಕ್ಕಳ ಆಟ ಪಾಠ ಎಲ್ಲಾ. ಒಮ್ಮೊಮ್ಮೆ ರಾತ್ರಿ ಒಬ್ಬ ಮಾನಸಿಕ ಅಸ್ವಸ್ಥ ರೋಡಿನಲ್ಲಿ ಕಿರುಚಿಕೊಂಡು ಓಡಾಡುತ್ತಿದ್ದರಂತೆ. ಆ ದ್ವನಿಯನ್ನು ಕೇಳಿದರೆ ಈ ಮಕ್ಕಳಿಗೆಲ್ಲ ಬಹಳ ಭಯ. ಈ ಮಕ್ಕಳೆಲ್ಲರೂ ಊಟ ಮಾಡಲು ಅಥವಾ ಮಲಗಲು ಹಠ ಮಾಡಿದಾಗ, ಅವರ ತಂದೆತಾಯಂದಿರೆಲ್ಲ ” ನೀವು ಸರಿಯಾಗಿ ಮಾತು ಕೇಳಿಲ್ಲ ಅಂದ್ರೆ ಗುಮ್ಮ ಬಂದಿದ್ದಾನೆ ಅವನ ಜೊತೆ ಕಳಿಸಿಬಿಡ್ತೀನಿ” ಅಂತ ಹೇಳ್ತಿದ್ರಂತೆ..

Kavya ಅವರ ಬಾಲ್ಯ ನಿಮಗೆ ಪರಿಚಯಿಸಿದ್ದೇನೆ ಮುಂದಿನ ಬರಹದಲ್ಲಿ ಸುಂದರ, ಸಂಸ್ಕಾರವಂತೆ Lakshmi Shree ಬೆಳ್ಳಿಪರದೆಯಲ್ಲಿ ನಮಗೆಲ್ಲ ದೃಶ್ಯ’ಕಾವ್ಯ’ ವಾಗಿ ಪರಿಚಯವಾಗಿದ್ದು ಹೇಗೆ ಅನ್ನೋದನ್ನ ತಿಳಿಸ್ತೀನಿ…..

Kavya's Grandparent's house
Raghuram

Gangadhar ಅವರ ಕಡೆ ದಿನಗಳು ಹೇಗಿತ್ತು..??

Previous article

Kavya ಅವರಿಗೆ ಮೊದಲು ಬಣ್ಣ ಹಚ್ಚಿಸಿದ್ದು ಯಾರು ?

Next article

You may also like

Comments

Leave a reply

Your email address will not be published. Required fields are marked *

twelve + 19 =