Gangadhar ಅವರಿಗೆ ಕಣ್ಣಿನ ದೃಷ್ಟಿ ಹೋಗಿತ್ತಾ?? ಅವರಿಗೆ ಆರೋಗ್ಯದಲ್ಲಿ ಏನು ವ್ಯತ್ಯಾಸ ಆಗಿತ್ತು.. ಈ ರೀತಿ ಹಲವಾರು ಪ್ರಶ್ನೆಗಳು ಅವರ ಅಭಿಮಾನಿ ಬಳಗದಲ್ಲಿ ಇದೆ.. ಅದಕ್ಕೆಲ್ಲ ಈಗ ಉತ್ತರ ನಿಮ್ಮ ಮುಂದೆ..
ಗಂಗಾಧರ ಅವರಿಗೆ ಸುಮಾರು 42-43 ವರ್ಷ ಇದ್ದಾಗ, ಸಕ್ಕರೆ ಕಾಯಿಲೆ ಅವರಿಗೆ ಬಂದು ಅಂಟಿಕೊಂಡಿದೆ. ಅವರ ಮಗ ರವಿಕುಮಾರ್ ಅವರು ಹೇಳುವ ಪ್ರಕಾರ “Diabeties” ಅಂದರೆ Die in bits ಅಂತ.. ಆಗಿನ ಕಾಲದಲ್ಲಿ medical technology ಇಷ್ಟು update ಆಗಿರಲಿಲ್ಲ. ಈಗ ಮನೆಯಲ್ಲೇ ನೆ Sugar levels ನ monitor ಮಾಡಬಹುದು. ಆಗ ಪರೀಕ್ಷೆಗೆ ಲ್ಯಾಬ್ ಗಳಿಗೆ ಹೋಗಿ ರಕ್ತವನ್ನು ಕೊಟ್ಟು ಬರಬೇಕಾಗಿತ್ತು. ಗಂಗಾಧರ್ ಅವರಿಗೆ ಈ ರೀತಿ ಸಕ್ಕರೆ ಕಾಯಿಲೆ ಪರೀಕ್ಷೆ ಹೆಚ್ಚಾಗ್ತಾ ಹೋಯ್ತು. ಅವರು ಯಾವುದೇ ಲಾಬಿಗೆ ಹೋದಾಗ ಅಲ್ಲಿರುವ ಜನಗಳು ಗಂಗಾಧರ್ ಅವರನ್ನು ಗುರುತಿಸಿ ಅವರಿಗೆ ಸ್ವಲ್ಪ ಕಸಿವಿಸಿ ಆಗುವ ವಾತಾವರಣ ಉಂಟು ಮಾಡುತ್ತಿದ್ದರು. Doctors, hospitals ಇದಕ್ಕೆಲ್ಲ ಓಡಾಟ ಯಾವಾಗ ಜಾಸ್ತಿ ಆಯ್ತು, ಮಗ ರವಿಕುಮಾರ್ ಅವರ ಬಳಿ ಗಂಗಾಧರ್ ಹೇಳಿದ್ದಾರೆ. “ಏನಪ್ಪಾ ಇದೆಲ್ಲಾ, ಸಾಕಾಗೋಗಿದೆ ನನಗಂತು.”
ಗಂಗಾಧರ್ ಅವರ ಮಾನಸಿಕ ಒದ್ದಾಟ ನೋಡಿ ಅವರ ಮಗ ರವಿಕುಮಾರ್ ಅಪ್ಪ ತುಂಬಾ ಚಿಕ್ಕವಯಸ್ಸಿನಿಂದಲೂ ನೀವು ಸಾಕಷ್ಟು ದುಡಿದಿದ್ದಾರೆ, ಕಷ್ಟಪಟ್ ಇದ್ದೀರಾ. ನಿಮ್ಮ ದೇಹಕ್ಕೆ ದಣಿವಾಗಿದೆ. ನಿಮ್ಮ ಎಲ್ಲಾ ಜವಾಬ್ದಾರಿಗಳನ್ನು ನಾನು ತಗೊಳ್ತೀನಿ. ನಿಮಗೆ ಹೆಂಗೆ ಬೇಕೋ ಹಂಗೆ ಲೈಫ್ನಲ್ಲಿ ಮಾಡಿ. You are free to do it”.. ಈ ಒಂದು ಮಾತು ಗಂಗಾಧರ್ ಅವರಿಗೆ ಆ ಕ್ಷಣದಲ್ಲಿ ಅವರ ಮಗನ ಬಗ್ಗೆ ಸಂತೋಷ ಪ್ರೌಢತೆ ಎಲ್ಲವೂ ಆಯಿತು
ಹೀಗೆ ದಿನಕಳೆದಂತೆ ಆ freedom ನಿಂದ ಆದ ಅನಾನುಕೂಲ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತು. ‘Uncontrolled diabeties.. ನಿಯಂತ್ರಣಕ್ಕೆ ಸಿಗದ ಸಕ್ಕರೆ ಕಾಯಿಲೆ.’ ಇದು ಮೊದಲು ತೊಂದರೆ ಕೊಡುವುದು ದೃಷ್ಟಿಗೆ.
ಗಂಗಾಧರ್ ಅವರಿಗೆ 52 53 ವರ್ಷ ಆಗೋದರೊಳಗೆ, ಅವರ ಕಣ್ಣಿನ ದೃಷ್ಟಿ ಇಂಗಿತ ಬಂತು. Diabetic Retinopathy ಆಯ್ತು. ಆಗಿನ ಕಾಲದ ಜನಪ್ರಿಯ ಕಣ್ಣಿನ ಆಸ್ಪತ್ರೆ ಯಾದ Shankar Eye Clinic ಗೆ ಕರೆದುಕೊಂಡು ಹೋಗಿ ಎರಡು ಕಣ್ಣು Surgery ಮಾಡ್ಸಿದ್ರೂ, ಅವರ ಕಣ್ಣಿನ ರೆಟಿನಾ full damage ಆಗಿತ್ತು. 85 ಭಾಗದಷ್ಟು vision ಹೊರಟುಹೋಗಿತ್ತು. ಆಗ ಮನೆಯವರೆಲ್ಲ ತೀರ್ಮಾನಿಸಿ ಇನ್ನು ಇವರನ್ನು ಹುಷಾರಾಗಿ ನೋಡಿಕೋ ಬೇಕು ಎಂದು ನಿರ್ಧರಿಸಿ ಏನು ಫ್ರೀಡಂ ಕೊಟ್ಟಿದ್ರು ಅದನ್ನೆಲ್ಲ ಬಿಟ್ಟು strict ಆಗಿ diet ನೊಂದಿಗೆ ನೋಡಿಕೊಳ್ಳಲು ಪ್ರಾರಂಭಿಸಿದರು..
ಕಣ್ಣಿನ ದೃಷ್ಟಿ ಹೋದರೆ ಏನಂತೆ ದೇಹದ ಬೇರೆ ಅಂಗಾಂಗಗಳು ಸರಿಯಾಗಿ ಇರುವುದರಿಂದ ಇನ್ನು ಅವರನ್ನು ಚೆನ್ನಾಗಿ ನೋಡಿಕೊಂಡು ಕಾಪಾಡಿಕೊಳ್ಳೋಣ ಎಂದು ತೀರ್ಮಾನಿಸಿ ಆರು ವರ್ಷಗಳ ಕಾಲ ಜೋಪಾನವಾಗಿ ನೋಡಿಕೊಂಡು ಬಂದಿದ್ದಾರೆ.
ಈ ಹಿಂದೆ ಆದಂತ ಅವರ ದೇಹದ ವ್ಯತ್ಯಾಸದಿಂದ ಕಣ್ಣಿನಿಂದ ಪ್ರಾರಂಭವಾಗಿದ್ದು ಅವರ kidney ಯ ವರೆಗೂ ಬಂದು ತಲುಪಿತು. ಅವರ 2 kidney ಗಳು damage ಆಯ್ತು.. 2000 ಇಸವಿ ಬರುವಷ್ಟರಲ್ಲಿ dialysis ಪ್ರಾರಂಭವಾಯಿತು. ವಾರದಲ್ಲಿ ಎರಡು ಮೂರು ಬಾರಿ ಈ ಪ್ರಕ್ರಿಯೆ ನಡೆಯುತ್ತಿತ್ತು. ತುಂಬಾ ಸುಸ್ತಾಗಿ ಬಿಡೋರು. ಎಲ್ಲೆಲ್ಲಿ, ಏನೇನೆಲ್ಲ, ಎಷ್ಟರಮಟ್ಟಿಗೆ ಅವರು ಸರಿ ಹೋಗೋದಕ್ಕೆ ಮಾಡಿಸಬೇಕು ಎಲ್ಲವೂ ಪ್ರಯತ್ನಪಟ್ಟರು.
ಈ process ನಲ್ಲಿ ಈ ಕಾಯಿಲೆಗೆ ಕೆಲವರು human blood ನ transfuse ಮಾಡಿಸ್ತಾರೆ ಆದರೆ ಗಂಗಾಧರ್ ಅವರಿಗೆ ಅವರ ಮಗ ರವಿಕುಮಾರ್ ಅವರು ಇನ್ನು ಉನ್ನತ ಮಟ್ಟದ ಚಿಕಿತ್ಸೆ ಅಂದರೆ Germany ಇಂದ 3500 ಇಂದ 4000 ಸಾವಿರ ಬೆಲೆಬಾಳುವ injection ಸರಿಸಿ ವಾರದಲ್ಲಿ ಎರಡು ಬಾರಿ ಕೊಡಿಸುತ್ತಿದ್ದರು. ಈ ಚಿಕಿತ್ಸೆಯು ನಿರಂತರ ಮೂರು ವರ್ಷಗಳ ಕಾಲ ನಡೆಯಿತು.. ಅದಾದನಂತರ ಡಾಕ್ಟರ್ಸ್ ಗಳು ಗಂಗಾಧರ್ ಅವರ ದೇಹವನ್ನ hale ಸೈಕಲ್ tube ಗೆ ಹೋಲಿಸಿದ್ದಾರೆ. ಹಳೆ ಟ್ಯೂಬಿನಲ್ಲಿ ಪಂಚರ್ ಆದಾಗ ಒಂದು ಕಡೆ ಮುಚ್ಚಕ್ಕೆ ಹೋದರೆ ಇನ್ನೊಂದು ಕಡೆ ಹೇಗೆ ತೂತು ಬಿಟ್ಟುಕೊಳ್ಳದ, ಹಾಗೆ ಗಂಗಾಧರ ಅವರ ದೇಹಕ್ಕೆ ಒಂದು ಕಾಯಿಲೆ ಸುಧಾರಿಸಬೇಕಾದರೆ ಮತ್ತೊಂದು ಕಾಯಿಲೆ ಶುರುವಾಗುತ್ತಿತ್ತು. ಹೀಗೆ ಅವರ ದೇಹ ಸಾಕಷ್ಟು ಹೋರಾಡುತ್ತ ಬಂದು TB (tuberculosis) ಕೂಡ ತುತ್ತಾದರು.
ರವಿಕುಮಾರ್ ಹೇಳ್ತಾರೆ “ಒಮ್ಮೊಮ್ಮೆ ನನಗೆ 80 ವರ್ಷ 85 ವರ್ಷ ಬದುಕಿರುವ ನೋಡಿದಾಗ ನಾವೆಷ್ಟು ದುರಾದೃಷ್ಟವಂತರುನಮ್ಮ ತಂದೆ ನಾ ಎಷ್ಟು ಬೇಗ ಕಳೆದುಕೊಂಡು ಬಿಟ್ಟೆ. ಎಲ್ಲೋ ನಾನು ಅವರಿಗೆ sugar ಬಂದ ಮೇಲೆ ಕೊಟ್ಟ ಸ್ವಾತಂತ್ರ ಅವರ ಆರೋಗ್ಯಕ್ಕೆ ಮುಳ್ಳಾಯಿತಾ??” ಹೀಗೆಲ್ಲ ಹಲವಾರು ಪ್ರಶ್ನೆ ನನಗೆ ಕಾಡುತ್ತದೆ” ಅಂತ ಹೇಳ್ತಾರೆ.. ಇನ್ನೊಂದು ಕೊನೆಯಿಂದ ಯೋಚಿಸಿದಾಗ “ಅವರು ಕಷ್ಟಪಟ್ಟಿದ್ದು ಅವರು ಸಂಪಾದಿಸಿದ್ದು ಅವರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲುನಾನು ಯಾವೂರು ದೊಣ್ಣೆ ನಾಯಕ??” ಅಂತ ಕೂಡ ಅನಿಸುತಂತೆ..
ಈ ಡಯಾಲಿಸಿಸ್ ಗೆ ಗಂಗಾಧರನ ಕರೆದುಕೊಂಡು ಹೋಗಬೇಕಾದರೆ ಕ್ಲಾಸ್ಗೆ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಒಂದು ಬೇಕರಿ ಇತ್ತು. ಆ ಬೇಕರಿಯಲ್ಲಿ ಸುಂಟಿ ಹಾಕಿರುವ ಒಂದು 100ಗ್ರಾಂ ಬಿಸ್ಕೆಟ್ ಗಳನ್ನು ತೆಗೆದುಕೊಂಡು ಕಾಫಿ ಜೊತೆ ಅದನ್ನು ತಿಂದು ಡಯಾಲಿಸಿಸ್ ಗೆ ಹೋಗ್ತಿದ್ರು. ಇದು ಒಂದು ಮೂರು ಗಂಟೆಗಳ procedure . ಒಂದು ಗಂಟೆಗೆ ಹೋದರೆ ನಾಲ್ಕು ಗಂಟೆಗೆ ಮುಗಿದಿತ್ತು..ಮುಗಿಸಿಕೊಂಡು ಬರಬೇಕಾದರೆ ಅದೇ ಬನಶಂಕರಿಯಲ್ಲಿ SLV ಹೋಟೆಲಿನ ಖಾರ ಬಾತು ವಡೆ ತಿಂದುಕೊಂಡು ಬರೋದು ಇವರ ವಾಡಿಕೆ.
ಡಿಸೆಂಬರ್ 27 2003, ಹೀಗೆ ಡಯಾಲಿಸಿಸ್ ಮುಗಿಸಿಕೊಂಡು SLV ಬಳಿ ಗಂಗಾಧರ್ ಅವರಿಗೆ ಅವರ ಮಗ ಖಾರಾಬಾತ್ ತಿನ್ನಿಸುತ್ತ ಇದ್ದಾರೆ . ಅಂದು ಹಾಸ್ಪಿಟಲ್ನಲ್ಲಿ ಡಾಕ್ಟರು ಇವರ ಆರೋಗ್ಯ ಕ್ಷೀಣಿಸುತ್ತಾ ಇದೆ ಅನ್ನೋ ಒಂದು ಸಣ್ಣ ಸುಳಿವು ಕೊಟ್ಟಿದ್ದರು. ಗಂಗಾಧರ್ ಅವರು ತಿನ್ನುತ್ತಾ ಅವರ ಮಗನಿಗೆ ಹೇಳಿದ್ದಾರೆ.
ನನ್ನ ಹಿಂದಿನ ಬರಹದಲ್ಲಿ ನಾನು ತಿಳಿಸಿದಂತೆ ಗಂಗಾಧರ್ ಅವರಿಗೆ basic astrology ತಿಳಿದಿತ್ತು. ಅವರಾ ಜಾತಕದ ಪ್ರಕಾರ ಅವರಿಗೆ 90 ವರ್ಷಗಳ ತನಕ ಆಯಸ್ಸು ಅದನ್ನು ನೆನಪಿಸಿಕೊಂಡು ಮಗನ ಬಳಿ ಹೇಳಿದ್ದಾರೆ.. ” ಜಾತಕದ ಪ್ರಕಾರ ನನ್ನ ಭವಿಷ್ಯ ಏನೇ ಇದ್ದರೂ ಇವತ್ತು ಈ ಡಾಕ್ಟರ್ ನನ್ನ ಆರೋಗ್ಯದ ಬಗ್ಗೆ ಹೇಳಿದ್ದು ಯಾಕೋ ಯೋಚನೆ ಮಾಡೋ ತರ ಆಗ್ತಾ ಇದೆ. ಆಯಸ್ಸು ಪೂರ್ತಿಯಾಗದೆ ಜೀವ ಹೋದರೆ ಆತ್ಮಕ್ಕೆ ಮೋಕ್ಷ ವಿಲ್ಲದೆಪ್ರೇತಾತ್ಮ ವಾಗತ್ತೆ ಅಂತ ಹೇಳ್ತಾರೆ.. ಆ ರೀತಿ ನನಗೇನಾದರೂ ಆದರೆನಾನು ಭೂತವಾಗಿ ಬಂದರು ನನ್ನ ನಿನ್ನ ಮನೆ ಒಳಗೆ ಸೇರಸ್ತ್ಯ?? ” ಅಂತ ಮಗನಿಗೆ ಪ್ರಶ್ನಿಸಿದ್ದಾರೆ.. ಆಗ ರವಿಕುಮಾರ್ ಅವರು “ಭಗವಂತ ಇರೋ ಕಡೆ ಭೂತ ಬರಲ್ಲ, ಭೂತ ಇದ್ದ ಕಡೆ ಭಗವಂತ ಇರಲ್ಲ. ಒಂದು ವೇಳೆ ನೀವೇನಾದರೂ ಆ ಹಾಗೆ ಬಂದರೆನನ್ನ ಮನೆಯಲ್ಲಿ ಒಂದೇ ಒಂದು ದೇವರ ಫೋಟೋ ಕೂಡ ಇರಲ್ಲ. ಆ ಫೋಟೋಗಳನ್ನು ಆಚೆ ಇಟ್ಟು ನಿಮ್ಮನ್ನ ಮನೆ ವೊಳಗೆ ತುಂಬಿಸಿಕೊಳ್ಳುತ್ತೇನೆ..”
ಈಗಲೂ ನಮ್ಮಪ್ಪ ನಮ್ಮೊಂದಿಗೆ ಇಲ್ಲ ಅಂತ ನನಗೆ ಅನಿಸೋದೇ ಇಲ್ಲ.ಏನೋ ಒಂದು ಕೆಲಸ ಮಾಡಕ್ಕೆ ಹೋಗಿರ್ತೀನಿ.. ಕಾರಣನೇ ಇಲ್ದೆ ವಾಪಸ್ ಬಂದಿರುತ್ತೇನೆ. ಆಮೇಲೆ ನನಗೆ ಗೊತ್ತಾಗೋದುನಮ್ಮಪ್ಪನೇ ನನ್ನನ್ನ ವಾಪಸ್ ಕರ್ಕೊಂಡು ಬಂದಿದ್ದಾರೆ. ಯಾವ ಕೆಲಸ ನನ್ನಿಂದ ಆಗಬೇಕೋ ಅಥವಾ ಆಗಬಾರದೋ ಅನ್ನೋದನ್ನ intution ಮೂಲಕ ನನಗೆ ತಿಳಿಸುತ್ತಾರೆ.. “
ಗಂಗಾಧರ್ ಅವರಿಗೆ ಕಣ್ಣು ಮಂಜ ದಾಗ ಅವರ ಮಗ ರವಿಕುಮಾರ್ ಅವರಿಗೆ ಊರುಗೋಲಾಗಿದ್ದ ರು.. ತದನಂತರ ರವಿಕುಮಾರ್ ಅವರ ಮಗ ಗಂಗಾಧರ್ ಅವರ ಮೊಮ್ಮಗ ಅವರು ಕೂಡ ಇದೇ ಕಾಯಕವನ್ನೇ ಮಾಡುತ್ತಿದ್ದರು. ನಾನು ಆಗಲೇ ತಿಳಿಸಿದಂತೆ ಡಿಸೆಂಬರ್ 27 2003 ಎಲ್ಲರೂ ಮನೆಯಲ್ಲೇ ಇದ್ದಾರೆ.. ರಾತ್ರಿ ಸುಮಾರು 10.15 ಸಮಯ. ರವಿಕುಮಾರ್ ಅವರ ಶ್ರೀಮತಿ ಅವರ ತವರೂರು ತುಮಕೂರಿಗೆ ಹೋಗಿ ವಾಪಸ್ ಬಂದಿದ್ದರು.. ರವೆ ಇಡ್ಲಿ ಎಂದರೆ ಗಂಗಾಧರ ಅವರಿಗೆ ತುಂಬಾ ಇಷ್ಟ.
ಅಂದು ರವೆ ಇಡ್ಲಿಯನ್ನು ತಿಂದು “ಯಾಕೋ ಸ್ವಲ್ಪ ನನಗೆ doubt ಆಗ್ತಾ ಇದೆ ಪಾ.. ” ಎಂದರಂತೆ.. “ಬಂದ್ಲಾ ನಿನ್ನ ಹೆಂಡತಿ ಅಂತ ಕೂಡ ಕೇಳಿದ್ದಾರೆ..” ರವಿಕುಮಾರ್ ಕೂಡ ಆಗ ಯಜಮಾನ್ರೆoxygen saturation level ಕಡಿಮೆ ಆಗ್ತಾ ಇದೆ.. ಹೀಗೆ ಇದು ಮುಂದುವರೆದರೆVentilator ನಲ್ಲಿ ನಿಮ್ಮನ್ನ ಇಡಬೇಕು ಅಂತ ಡಾಕ್ಟರ್ ಹೇಳಿದ್ದಾರೆ.. ನೀವು ಮೆಸೇಜ್ ಗಳು ಜೊತೆ ಗೆದ್ದಿರೋ ಇಲ್ಲ ನಮ್ಮಗಳ ಜೊತೆಗಿರ್ತೀರೋ ” ಎಂದಾಗ ಲಕ್ಕಿ” ಇಲ್ಲಪ್ಪ ನಿಮ್ಮಗಳ ಜೊತೆಗೆನೇ ಇರ್ತೀನಿ ಎಂದು ಹೇಳಿ ಗಣಿ ( ರವಿಕುಮಾರ್ ಅವರ ಮೂಲ ಹೆಸರು ಗಣೇಶ್)” ನಾನ್ ಬರ್ತೀನಿ ಅಪ್ಪ” ಎಂದು ಹೇಳಿ ಮನೆಯಲ್ಲಿರುವ ಎಲ್ಲರಿಗೂ ನಮಸ್ಕರಿಸಿದರು..
ಇದಾದ ಹತ್ತು ನಿಮಿಷಗಳಲ್ಲಿ ಶರ ಪಂಜರದಲ್ಲಿ ಪಂಚಮವೇದ ಹಾಡಿದ ಸುರದ್ರೂಪಿ ಗಂಗಾಧರ್ ಪಂಚಭೂತಗಳಲ್ಲಿ ಲೀನವಾದರು..
ಇಂದಿಗೂ ಅವರ ಮಗ ಅವರಿಗಾಗಿ ಅವರ ಜೀವಕ್ಕೆ ಜೀವ ಚಿತ್ರದ “ಎಲ್ಲೆ ಹಾಡಲಿ ಎಲ್ಲೆ ಹೋಗಲಿ ಇದೇ ರಾಗ ನಿನಗಾಗಿ ನಾ ಹಾಡುವೆ” ಎಂದು ಇರುತ್ತಾರೆ..
Comments