ಬರವಣಿಗೆಯ ಮೆರವಣಿಗೆ

Rebel Star ಹಾಗು ನಾನು ನನ್ನ ಸಂಪಾದನೆಯಲ್ಲಿ ಮೊದಲು ಕೊಂಡ ನನ್ನ Swift Car.

0
Ambareesh and Raghuram

ಮೊದಲು ಅನ್ನೋದು ಎಲ್ಲರಿಗೂ ಒಂದು ಉತ್ಸಾಹ, ಸಂತೋಷ, ಸಂಭ್ರಮ.. ಮೊದಲ ದಿನ ಶಾಲೆಗೆ ಹೋಗೋದು, ಮೊದಲ ದಿನ ಕೆಲಸಕ್ಕೆ ಹೋಗೋದು,ಇಲ್ಲ ಮೊದಲನೆಯ ಸಂಪಾದನೆಯನ್ನು ಪಡೆದುಕೊಳ್ಳುವುದು,ಎಲ್ಲವೂ ಸಂತಸವೆ.. ಸದಾ ಸಿಹಿ ನೆನಪುಗಳು ನಮ್ಮ್ ಒಳಗಡೆ ಆವರಿಸಿಕೊಂಡಿರುತ್ತದೆ.. ಮನುಷ್ಯನ ಹಣೆಬರಹ ದೇವರು ಹೇಗೆಲ್ಲ ಗಿಚ್ ಇರುತ್ತಾನೋ ನಿಜವಾಗಲೂ ಗೊತ್ತಿಲ್ಲ.. He is a perfect writer..

ನನ್ನ ಹಿಂದಿನ ಬರಹದಲ್ಲಿ ನಿಮಗೆ ತಿಳಿಸಿದಂತೆ, ನಾನು ಹುಟ್ಟಿದ್ದು, ಏಳನೇ ತರಗತಿವರೆಗೆ ಓದಿದ್ದು ಎಲ್ಲ ಮೈಸೂರಿನಲ್ಲಿ. ಮೈಸೂರಿನ ನಮ್ಮ ಮನೆಯ ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಅವರ ಸಂಬಂಧಿಕರ ಮನೆಯೊಂದಿತ್ತು. ಸುಮಾರು 1981-1982 ರಲ್ಲಿ Dolphin car ಅಂತ ಬರ್ತಿತ್ತು.. ಇದು Maruthi 800 ಮಾರುಕಟ್ಟೆಗೆ ಬರುವ ಮುನ್ನ.

ಹಳದಿ ಬಣ್ಣದ ಆ ಕಾರನ್ನು ಓಡಿಸಿಕೊಂಡು ಅವರ ಸಂಬಂಧಿಕರ ಮನೆಗೆ ಬರುತ್ತಿದ್ದರು. ನನಗೆ ಆಗ 5 ವರ್ಷ. ಅಲ್ಲಿರುವ ಮಕ್ಕಳೊಂದಿಗೆ ಒಮ್ಮೊಮ್ಮೆ ಕ್ರಿಕೆಟನ್ನು ಕೂಡ ಆಡುತ್ತಿದ್ದರು. ನಾನು ತುಂಬ ಸಣ್ಣವನು. ಸಿನಿಮಾ, ಸಿನಿಮಾ ಕಲಾವಿದರೆಂದರೆ ಏನೋ ಒಂದು ಆಕರ್ಷಣೆ. ಹೋಗಿ ನನಗೂ ಆಡಬೇಕು ಅನ್ನೋ ಆಸೆ, ಆದರೆ ಮನಸ್ಸಿನಲ್ಲಿ ಒಂದು ಭಯ; ಸಣ್ಣ ಹಿಂಜರಿಕೆ. ದೂರದಿಂದಲೇ Rebel star ನನ್ನ ನೋಡಿ ಕಣ್ಣು ತುಂಬಿ ಕೊಳ್ಳುತ್ತಿದ್ದೆ..

ಮೈಸೂರಿನ ಲಕ್ಷ್ಮಿ ಚಿತ್ರಮಂದಿರದಲ್ಲಿ ‘ನವಭಾರತ’ ‘ಪ್ರಜಾಪ್ರಭುತ್ವ,’ ಗಾಯತ್ರಿಯಲ್ಲಿ ‘ಅಂತ’, ವುಡ್ಲಂಡ್ಸ್ ನಲ್ಲಿ ಗಜೇಂದ್ರ, ಲಿಡೋ ನಲ್ಲಿ ‘ತಾಯಿಗೊಬ್ಬ ಕರುಣ ‘, ಹೀಗೆ ಮೈಸೂರಿನ ಯಾವ ಯಾವ ಚಿತ್ರಮಂದಿರಗಳಲ್ಲಿ ಅಂಬರೀಶ್ ಅವರ ಚಿತ್ರ ಬಿಡುಗಡೆಯಾಗುತ್ತಿದವೋ ಎಲ್ಲವನ್ನೂ ನೋಡಿದ ನೆನಪು.

ನನ್ನ ಕನಸು ಮನಸಿನಲ್ಲೂ ಕೂಡ, ನಾನು ಬೆಳೆದು ದೊಡ್ಡವನಾದ ಮೇಲೆ ಅಂಬರೀಶ್ ಅವರನ್ನು ಭೇಟಿ ಮಾಡ್ತೀನಿ,ಅವರೊಂದಿಗೆ ಕಾಲ ಕಳೆಯುತ್ತೇನೆ ಅಂತ ಎಂದು ನೆನೆಸಿರಲಿಲ್ಲ.
ತಮಗೆ ಈ ಹಿಂದೆಯೇ ತಿಳಿಸಿದಂತೆ ನಾನು ಮೊದಲು ಕೆಲವು ಖಾಸಗಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದೆ. ಚಿತ್ರರಂಗದವರ ಸಂಪರ್ಕ ನನಗೆ ಅಲ್ಲಿಂದಲೇ ಇತ್ತು.

TV ಲೋಕದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ Rebel Star Ambarish ಅವರ Dial in ಕಾರ್ಯಕ್ರಮದ ನೇರ ಪ್ರಸಾರ ‘Hello Star’ ಎಂಬುವ ಹೆಸರಿನಲ್ಲಿ ಈಟಿವಿ ಕನ್ನಡ ವಾಹಿನಿಗೆ ನಾನು ಮತ್ತು ನನ್ನ ತಂಡ ಮೊದಲು ಮಾಡಿದ್ದು ಅನ್ನೋ ಹೆಗ್ಗಳಿಕೆ ಮತ್ತು ಹೆಮ್ಮೆ ಎರಡು ನನಗಿದೆ.

Ambareesh and Raghuram

ವೃತ್ತಿ ಬದುಕಿನಲ್ಲಿ ಹಂತಹಂತವಾಗಿ ಮೆಟ್ಟಿಲುಗಳನ್ನು ಏರುತ್ತಾ ಬಂದ ನನಗೆ ಸುಮಾರು 15 ವರ್ಷಗಳ ಹಿಂದೆ (2008) ರಲ್ಲಿ ಒಂದು ದಿನ Maruthi Swift car ಖರೀದಿಸಬೇಕು ಅನ್ನೋ ಆಸೆ. Down payment ಗಾಗಿ ಒಂದಿಷ್ಟು ಹಣ ವ್ಯವಸ್ಥೆ ಮಾಡಿಕೊಂಡು, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಇದನ್ನ book ಮಾಡಲು ನಾನು ನನ್ನ ಹೆಂಡತಿ Bannergatta ರಸ್ತೆಯ Sagar Automobiles ಹೋಗಿ ಭೇಟಿಕೊಟ್ಟೆವು. ಆಗ Maruthi swift car ಗೆ ಇನ್ನಿಲ್ಲದ demand. ಒಂದು ಸಣ್ಣ advance ಕೊಟ್ಟು ಹೋದ ನಂತರ 4-6 ತಿಂಗಳು waiting period. ಕಾಯುವ ಮನಸ್ಥಿತಿಯಲ್ಲಿ ನಾನಿರಲಿಲ್ಲ. ತೆಗೆದುಕೊಳ್ಳಬೇಕು ಎಂದಾಗ ಆ ತಕ್ಷಣ ಅದನ್ನ ಪಡೆಯದಿದ್ದರೆ ಅದಕ್ಕೆಂದೇ ಎತ್ತಿಟ್ಟಿದ್ದ ಹಣ ಬೇರೆ ವಿಷಯಗಳಿಗೆ ಖರ್ಚಾಗಿ ಬಿಟ್ಟರೆ ಮತ್ತೆ ಹಣ ಹೊಂದಿಸಿ car ಖರೀದಿಸಲು ಇನ್ನಷ್ಟು ಸಮಯ ಬೇಕಾಗುತ್ತೆ. ಏನ್ ಮಾಡೋದು ಗೊತ್ತಾಗ್ಲಿಲ್ಲ. ಆ ಕಂಪನಿಯವರ ಬಳಿ ನಾನು ಎಷ್ಟೇ ರಿಕ್ವೆಸ್ಟ್ ಮಾಡಿಕೊಂಡರು ಪ್ರಯೋಜನಕ್ಕೆ ಬರಲಿಲ್ಲ.

ನಿರಾಸೆಯಿಂದ ನಾವು ಮನೆಗೆ ಬಂಧ್ವಿ. ಆ showroom ನಲ್ಲಿ ಇರಬೇಕಾದರೆ, 3-4 missed call ಇತ್ತು. ಅದು ಸೀನಣ್ಣ ನವರದು.ಈ ಸೀನಣ್ಣ ಯಾರೆಂದರೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಬಲಗೈ ಬಂಟ. ಅಂಬರೀಶ್ ಅವರನ್ನ ನಾನು ಯಾವಾಗ ಸಂಪರ್ಕಿಸ ಬೇಕಾದರೂ ಸೀನಣ್ಣ ನವರ ಮೂಲಕವೇ ಪ್ರಯತ್ನಿಸುತ್ತ ಇದ್ದಿದ್ದು.

Missed call ನ ನೋಡಿ ನಾನೇ ಸೀನಣ್ಣ ನವರಿಗೆ ಕರೆ ಮಾಡಿದೆ. ” ಅಣ್ಣ ಹೇಳಿ” ಅಂತ ಹೇಳಿದಾಗ ನನ್ನ ಧ್ವನಿಯನ್ನು ಕೇಳಿ ” ಯಾಕಣ್ಣ ಫೋನ್ ತೆಗೆಯಲಿಲ್ಲ, busy ಇದ್ರಾ?? ” “ಇಲ್ಲ ಅಣ್ಣ silent ಅಲ್ಲಿ ಇಟ್ಟಿದ್ದೆ” ಅಂತ ಹೇಳ್ದೆ.. “ಆಚೆ ಇದ್ದೀರಾ?” ಅಂತ ಕೇಳಿದ್ರು. ” ಹೌದಣ್ಣ, ಯಾವುದೋ ಕಾರ್ ಶೋರೂಮ್ ನಲ್ಲಿದ್ದೆ. ಬೇಜಾರ್ ಆಗೋಯ್ತು ಅಂತ ಅಂದು ಶೋ ರೂಮಿನಲ್ಲಿ ನಡೆದ ಎಲ್ಲಾ ಘಟನೆಯನ್ನು ವಿವರಿಸಿದೆ. Immediate ಆಗಿ ಸೀನಣ್ಣ “ಅಣ್ಣ ಬೆಳಗ್ಗೆನೇ ಅಣ್ಣನ ಮನೆಗೆ ಬಂದು ಬಿಡಿ ಅಂತ ಹೇಳಿದ್ರು ( ಅಂಬರೀಶ್ ಅವರ ಮನೆ ).

ನಾನು ಯಾವುದೋ ಕಾರ್ಯಕ್ರಮದ ವಿಚಾರವಾಗಿ ಮಾತಾಡೋದಕ್ಕೆ ಕರೀತಿದಾರೆನೊ ಅಂತ ಅನ್ಕೊಂಡು ಮರುದಿನ JP Nagar ದ Rebel star ambarish ಅವರ ನಿವಾಸಕ್ಕೆ ಹೋದೆ

Ambareesh's manager Seenanna

ಸೀನಣ್ಣ ಪ್ರೀತಿಯಿಂದ ಬರ ಮಾಡಿಕೊಂಡು Ambarish ಅವರ ಬಳಿ ಕರೆದುಕೊಂಡು ಹೋಗಿ “ಅಣ್ಣ, ನೆನ್ನೆ ಹೇಳಿದ್ನಲ್ಲ.. ರಘು ಕಾರ್ ತಗೊಳ್ಳಬೇಕು ಅಂತ ಇದ್ದಾನೆ.. ಆ showroom ಅವರು 6 ತಿಂಗಳು waiting period ಹೇಳಿದ್ದಾರಂತೆ ಅಣ್ಣ”, ಅಂತ ಹೇಳಿದ ತಕ್ಷಣ ರೆಬೆಲ್ ಸ್ಟಾರ್ ನನ್ನ ಕಡೆಗೆ ತಿರುಗಿ ನೋಡಿ ಒಂದು ಮುಗುಳು ನಗೆಯ ಬೀರಿ ” ಯಾರೋ ಅಲ್ಲಿನ manager?? number ಇದಿಯೇನೋ? ” ಅಂತ ಅವರ style ಅಲ್ಲೇ ಕೇಳಿದರು.. Number ಕೊಟ್ಟಾಗ ಡಯಲ್ ಮಾಡಿ “ನಾನು ಅಂಬರೀಶ್ ಮಾತಾಡ್ತಾ ಇದ್ದೀನಿ. ನೆನ್ನೆ ರಘು ಅಂತ ಒಬ್ಬ ಹುಡುಗ ಕಾರ್ ಬುಕ್ ಮಾಡಕ್ ಬಂದ್ನಲ್ಲ, ಅವನು ನಮ್ ಹುಡುಗ. ಆದಷ್ಟು ಬೇಗ ಗಾಡಿ ಡೆಲಿವರಿ ಮಾಡಿಕೊಡಿ. ನಮಸ್ಕಾರ, ” ಎಂದು ಹೇಳಿದ ರೆಬೆಲ್ ಸ್ಟಾರ್ ಮತ್ತೆ ನನ್ನ ಕಡೆಗೆ ತಿರುಗಿ ನೋಡಿ “ಖುಷಿ ಏನಪ್ಪ? ಹೋಗು ಸಂತೋಷವಾಗಿರು,” ಅಂತ ಮನತುಂಬಿ ಹಾರೈಸಿ ಆಶೀರ್ವದಿಸಿ, ಕಳಿಸಿದರು.

ಅಂಬರೀಶ್ ಅವರ ಕಾಲ್ ಹೋದ 6 ಗಂಟೆಗಳಲ್ಲಿ ನನ್ನ ಕನಸಿನ ಮಾರುತಿ ಸ್ವಿಫ್ಟ್ ಕಾರ್ ನನ್ನ ಮನೆ ಬಳಿ ಇತ್ತು. ಆರು ತಿಂಗಳ waiting period 6 ಗಂಟೆಯಲ್ಲಿ ಮುಗಿದುಹೋಯಿತು.

ಯಾವ ಅಂಬರೀಶ್ ರವರನ್ನು ಬಾಲ್ಯದಲ್ಲಿ ಬೆಳ್ಳಿಪರದೆಯಲ್ಲಿ ನೋಡಿ, ದೂರದಿಂದ ಅವರನ್ನ ಕಂಡು ಸಂಭ್ರಮಿಸುತ್ತಿದ್ದೆನೋ, ಅದೇ ಅಂಬರೀಶ್ ಅವರು ನನ್ನ ಸಂಪಾದನೆಯಲ್ಲಿ ನಾನು ಕೊಳ್ಳುವ ಮೊದಲ ಕಾರಿಗೆ ಸಾಕ್ಷಿಯಾಗುತ್ತಾರೆ ಅಂದ್ರೆ ಆನಂದ, ಆಶ್ಚರ್ಯ, ಎಲ್ಲವೂ ಆಗತ್ತೆ.

ಕಡಲಿಗೆ ಒಂದು ಕೊನೆ ಇದೆ ಸ್ನೇಹಕೆ ಎಲ್ಲಿದೆ..? ಅಂಬಿಯವರ ಈ ಹಾಡನ್ನ ನನ್ನ ಮನಸ್ಸಿನಲ್ಲೇ ಗುನುಗಿಕೊಂಡು ಅಂಬರೀಶ್ ಅವರಿಗೆ ಸೀನಣ್ಣ ನವರಿಗೆ ಹೃದಯಪೂರ್ವಕವಾದ ನನ್ನ ಕೃತಜ್ಞತೆಗಳನ್ನು ಅರ್ಪಿಸಿದೆ..🙏

Ambareesh and Raghuram
Raghuram

Gangadhar “ಸಾಲ ಕೊಡಲ್ಲ, ಸಾಲ ತಗೊಳಲ್ಲ”

Previous article

Gangadhar ಅವರ ಕಡೆ ದಿನಗಳು ಹೇಗಿತ್ತು..??

Next article

You may also like

Comments

Leave a reply

Your email address will not be published. Required fields are marked *

3 + sixteen =