“ಸಾಲ ಕೊಡಲ್ಲ, ಸಾಲ ತಗೊಳಲ್ಲ” ಇದು ಗಂಗಾಧರ ಅವರ ಸ್ವಯಂಕೃತ ನಿಯಮ
Gangadhar ಅವರು ಒಬ್ಬ ಕಲಾವಿದನಾಗಿ ಸಾಕಷ್ಟು ಯಶಸ್ಸನ್ನು ಪಡೆದುಕೊಂಡರು. ಯಶಸ್ಸಿನ ಜೊತೆಗೆ ಚಿತ್ರರಂಗದ ಅನುಭವ ಕೂಡ ಅವರಿಗೆ ದೊರೆಯಿತು.
ಪ್ರತಿಯೊಬ್ಬ ಕಲಾವಿದನಿಗೂ ಆಸೆ ಹುಟ್ಟುವ ಹಾಗೆ ಗಂಗಾಧರ್ ಅವರಿಗೆ ಚಿತ್ರರಂಗಕ್ಕೆ ‘ನಾವೇನಾದರೂ ಕೊಡುಗೆ ಕೊಡಬೇಕು ; ನಾನು ಒಂದು ಚಿತ್ರ ನಿರ್ಮಾಣ ಮಾಡಬೇಕು’ ಅಂತ ಆ ಕನಸನ್ನು ನನಸು ಮಾಡೋಕೆ ಪಾಲುದಾರಿಕೆಯಲ್ಲಿ Jayanthi ಯವರು ದ್ವಿಪಾತ್ರದಲ್ಲಿ ಅಭಿನಯಿಸಿದ ‘ಜಯವಿಜಯ’ ಅನ್ನೋ ಚಿತ್ರವನ್ನ partnership ನಲ್ಲಿ ನಿರ್ಮಾಣ ಮಾಡುತ್ತಾರೆ.
ಹಾಕಿದ ಬಂಡವಾಳ ದಲ್ಲಿ ಕೊಂಚ loss ಆಗಿದೆ ಎಂದು ವಿತರಕರು ತೋರಿಸಿದ್ದಾರೆ. ಚಿತ್ರನಿರ್ಮಾಣಕ್ಕೆ ಬಂಡವಾಳ ಹೂಡೋದಕೊಸ್ಕರ ಅವರ ಕೆಲ property ಗಳನ್ನ financers ಗಳ ಬಳಿ pledge ಮಾಡಿದ್ದಾರೆ.
ಬಡ್ಡಿಯ ಕಂತು ಕಟ್ಟುವುದರಲ್ಲಿ ಒಂದೆರಡು ತಿಂಗಳು ತಡವಾಗಿದೆ. ಆ ಸಂದರ್ಭದಲ್ಲಿ ಹಣ ಕೊಟ್ಟಂತ Financers ಮಾತನಾಡುವ ರೀತಿ, ಗಂಗಾಧರ್ ಅವರೊಂದಿಗೆ ನಡೆದುಕೊಂಡ ರೀತಿ ಹಾಗೂ “ನಿಮ್ಮ ಆಸ್ತಿಯನ್ನೆಲ್ಲ ಹರಾಜಿಗೆ ಹಾಕ್ತೀವಿ” ಅಂತ ಹೇಳಿ ಹೋದರು.
ಗಂಗಾಧರ್ ಅವರ ಮಡದಿ Smt. Kausalya Bai ತುಂಬಾ ಸ್ವಾಭಿಮಾನಿ. ಅವರ ಕೈಯಲ್ಲಿದ್ದ ಎರಡು ಚಿನ್ನದ ಬೆಳೆಯನ್ನು ಗಂಗಾಧರ್ ಅವರಿಗೆ ಕೊಟ್ಟು ” ಮೊದಲು ಅವರ ಸಾಲ ತೀರಿಸಿ ಬನ್ನಿ. ಯಾರು ನಮ್ಮ ಮನೆ ಬಳಿ ಬಂದು ನಿಮಗೆ ಹೀಗೆ ಮಾತಾಡಬಾರದು “, ಎಂದು ಹೇಳಿ ಕಳಿಸಿದರಂತೆ.
ಇಷ್ಟಕ್ಕೂ ಅವರು ಪಾವತಿಸಬೇಕಾಗಿದೆ ಮೊತ್ತ ಮೂರರಿಂದ ನಾಲ್ಕು ಸಾವಿರ ರೂಪಾಯಿ.
ಅಂದಿನ ದಿನದಲ್ಲಿ ಬೆಂಗಳೂರಿನ Nanda theatre ನ ಜಾಗ ಖರೀದಿಸಲು ಗಂಗಾಧರ್ ಅವರಿಗೆ offer ಬಂದಿತ್ತಂತೆ. ಕೇವಲ ಮೂರು ಸಾವಿರ ರೂಪಾಯಿಗೆ ಆ ಜಾಗ ಖರೀದಿಸಬಹುದಾಗಿತ್ತು. ಆದರೆ ಈ ಸಾಲದ ಒತ್ತಡದಲ್ಲಿ ಇದ್ದಿದ್ದರಿಂದ ಅದರ ಕಡೆ ಗಮನ ಹರಿಸಲು ಆಗಲಿಲ್ಲ. ಆಗೆಲ್ಲ ಜಯನಗರದಲ್ಲಿ 800- 1000 ರೂಪಾಯಿಗೆಲ್ಲ ದೊಡ್ಡ ದೊಡ್ಡ ಸೈಟುಗಳು ಸಿಗುತ್ತಿದ್ದ ವಂತೆ.
Gangadhar ಅವರು ಅವರ ಶ್ರೀಮತಿ ಕೊಟ್ಟಿದ್ದ ಬಳೆಯನ್ನು ಮಾರಿ,ಆ financers ಗಳ ಆಫೀಸಿಗೆ ಹೋಗಿ ಹಣವನ್ನು ವಾಪಸ್ ಕೊಟ್ಟು, ಆಫೀಸಿನ ಹೊಸಲಿನ ಬಳಿ ತಮ್ಮ ಚಪ್ಪಲಿಯನ್ನು ಬಿಚ್ಚಿ ಮೂರುಬಾರಿ ಅದರಿಂದ ಆ ಹೊಸಿಲಿಗೆ ಹೊಡೆದು ಗಂಗಾಧರ್ ಅವರು ಹೇಳಿದರಂತೆ “ನನ್ನ ಪ್ರಾಣ ಒಂದು ಇದ್ದರೆ ಇನ್ನು ಮುಂದೆ ನನ್ನ ಜೀವನದಲ್ಲಿ ಸಾಲ ಮಾಡಲ್ಲ, ಸಾಲ ಕೊಡಲ್ಲ” ಎಂದು ವಾಪಸ್ ಆದರಂತೆ. ಇದೇ ಪಾಠವನ್ನು ತನ್ನ ಮಕ್ಕಳಿಗೆ ಗಂಗಾಧರ್ ಅವರು ಹೇಳಿದ್ರಂತೆ. ” ನೋಡಪ್ಪಾ ನಾನು ಬದುಕುವವರೆಗೂ ಹೀಗೆ ಬದುಕ್ತೀನಿ. ಒಂದು ರೂಪಾಯಿ ಸಾಲ ಮಾಡಲ್ಲ, ಸಾಲ ಕೊಡಲ್ಲ.
ಈ ಎಲ್ಲ ಅನುಭವಗಳಿಂದ ಗಂಗಾಧರ್ ಅವರ ಮನಸಿಗೆ ಅನಿಸಿದ್ದು, ನಿರ್ಧಾರ ತೆಗೆದುಕೊಂಡಿದ್ದು ಇರುವುದನ್ನ ಉಳಿಸಿಕೊಂಡು ಹೋಗೋಣಾ. ಮುಂದೆ ಸಿನಿಮಾ ನಿರ್ಮಾಣ ಮಾಡಿ ಕೈ ಸುಟ್ಟಿ ಕೊಳ್ಳೋದು ಬೇಡ..
ಒಂದು ಹಂತದಲ್ಲಿ Gangadhar, ಅವರ ಮಕ್ಕಳಿಗೆ ಸಿನಿಮಾದಲ್ಲಿ ತೊಡಗಿಸಿಕೊಳ್ಳುವ ಆಸೆ ಇತ್ತಂತೆ. ಆಗ ಗಂಗಾಧರ ಅವರ ತಾಯಿ “ನಿಮಗೆ ಆಸೆ ಇದ್ದರೆ, ಹೋಗಿ ಯಾವುದಾದರೂ ಚಿತ್ರದಲ್ಲಿ ಬೇಕಾದರೆ free ಆಗಿ ನಟಿಸಿ ಬನ್ನಿ. ನಿಮ್ಮ ಆಸೆ ತೀರಿಸಿಕೊಳ್ಳಿ. ಆದರೆ ನಿರ್ಮಾಣ ಮಾಡಬೇಕು ಅನ್ನೋ ಕನಸುಗಳನ್ನು ಕಂಡು ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ,” ಎಂದು ಹೇಳಿ ಅವರ ಮಕ್ಕಳಿಗೆ ಗಂಗಾಧರ್ ಅವರು ನಿರ್ಮಾಣ ಮಾಡಬೇಕಾದ ಅನುಭವದ ಕಥೆಯನ್ನು ತಿಳಿಸಿ ಮನವರಿಕೆಯಾಗಿ ತಿಳಿದುಕೊಳ್ಳುವ ಹಾಗೆ ಮಾಡಿದ್ದಾರೆ. ಹಾಗಾಗಿ ಗಂಗಾಧರ್ ಅವರ ಮಕ್ಕಳಿಗಾಗಲಿ, ಮೊಮ್ಮಕ್ಕಳಿಗಾಗಿ ಬಣ್ಣದಲೋಕದ ಸೆಳೆತ ಸುಳಿಯಲಿಲ್ಲ. ಅವರ ಮಗ Ravikumar ಹೇಳುವ ಪ್ರಕಾರ ನಿರ್ಮಾಣ ಮಾಡುವುದು ತಪ್ಪು ಅನ್ನೋದು ನಮ್ಮ ಭಾವನೆಯಲ್ಲ. ಅದರ ಲೆಕ್ಕಚಾರ ವ್ಯವಹಾರ ಜ್ಞಾನ ನಮಗೆ ಇಲ್ಲ. ನಾವು ಆ material ಅಲ್ಲ..
ಗಂಗಾಧರ್ ಅವರಿಗೆ ಏನಾಗಿತ್ತು.?? ಕಡೆಗಾಲದಲ್ಲಿ ಅವರಿಗೆ ಕಣ್ಣುಗಳು ಕಾಣುತ್ತಿರಲಿಲ್ವಾ ..?? ಹೇಗೆ ಅವರು ನಮ್ಮಿಂದ ದೂರವಾದರು.. ಈ ಎಲ್ಲಾ ವಿವರಗಳು ನನ್ನ ಮುಂದಿನ ಬರಹದಲ್ಲಿ..
Comments