ಸಿನಿಮಾ ಸರಸ್ವತಿ

Upendra ಅವರ ಜೀವನದ ‘ಮರೆಯದ ದೀಪಾವಳಿ’

0

ಗಿರಗಿರ ಕಣ್ಣುಗಳ ಕಲೆಗಾರ.. ಮಿರಮಿರ ಮಾತುಗಳ ಸರದಾರ. ನಗಿಸಿ, ನಟಿಸಿ, ಬರೆಯೋ, ಬೇರೆಯೋ allrounder ನಮ್ಮ ಈ Super Star….

ಇವತ್ತಿನ Uppi sir ಎಲ್ಲರಿಗೂ ಗೊತ್ತು. Upendra super star ಆಗುವ ಮುಂಚೆ, ಅವರ ಬಾಲ್ಯದಲ್ಲಿ ನಡೆದ ಒಂದು ಸತ್ಯದ ವಿಚಾರವನ್ನ ನಿಮ್ಮುಂದೆ ಹಂಚಿಕೊಳ್ಳುತ್ತಾ ಇದ್ದೀನಿ..

ನಾನು ಸಿನಿಮಾಗೆ ಬರುವ ಮೊದಲು ETV ಕನ್ನಡ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದೆ.. ಹಬ್ಬದ ಸಾಲುಗಳು ಬಂತೆಂದರೆ, ನನಗೆ ಇದ್ದ ಜವಾಬ್ದಾರಿ ಸಿನಿಮಾದವರನ್ನು ಇಟ್ಟುಕೊಂಡು ವಿಶೇಷ ಕಾರ್ಯಕ್ರಮಗಳನ್ನು ಮಾಡೋದು. ಹೀಗೆ deepavali ಹಬ್ಬ ಬಂತು. Special programs preparations start ಆಯ್ತು. ಉಪ್ಪಿ ಸರ್ ಅವರೊಂದಿಗೆ ‘ಮರೆಯದ ದೀಪಾವಳಿ’ ಅನ್ನೋ ಕಾರ್ಯಕ್ರಮ ಮಾಡೋಣ ಅಂತ ಆಸೆ ಆಯಿತು.. ಈ ನಿಟ್ಟಿನಲ್ಲಿ ಉಪ್ಪಿ ಸರ್ ಬಳಿ ಮಾತನಾಡಿ ಅವರು ಕೂಡ ಪ್ರೀತಿಯಿಂದ ಒಪ್ಪಿಕೊಂಡು, ಅವರ ಮನೆಗೆ ನಮ್ಮ ತಂಡವನ್ನು ಕರೆಸಿಕೊಂಡರು. Program shooting ಆಯ್ತು. ಆದಮೇಲೆ ಲೋಕಾ ರೂಢಿಯಾಗಿ ಮಾತಾಡ ಬೇಕಾದರೆ ಉಪ್ಪಿ ಸರ್ ಅವರ ‘ಜೀವನದ ಮರೆಯದ ದೀಪಾವಳಿಯ’ ಬಗ್ಗೆ ಅವರ ಬಾಲ್ಯದ ನೆನಪಿನ ಬಗ್ಗೆ ನನ್ನೊಂದಿಗೆ ಹಂಚಿಕೊಂಡರು.

Upendra with his parents

ನಿಮಗೆಲ್ಲ ತಿಳಿದಿರುವಂತೆ Upendra ಅವರು ತುಂಬಾ ಕಷ್ಟಪಟ್ಟು, ನೋವು, ಅವಮಾನಗಳನ್ನು ಅನುಭವಿಸಿ ಇವತ್ತು ಈ ಮಟ್ಟಕ್ಕೆ ಬೆಳೆದು ನಿಂತಿರುವುದು. ಉಪ್ಪಿ ಸರ್ ಅವರ ತಂದೆ ಶ್ರೀ ‘ಮಂಜುನಾಥ ರಾವ್’ ಹಾಗೆ ತಾಯಿ ‘ಅನುಸೂಯಮ್ಮ’ ಇಬ್ಬರು ದಂಪತಿಗಳಿಗೆ ‘Sudhindra’ Upendra’ ಎಂಬ ಎರಡು ಗಂಡು ಮಕ್ಕಳು. ಉಪ್ಪಿ ಅವರ ಕುಟುಂಬಕ್ಕೆ ಈ ಹಿಂದೆ ಆರ್ಥಿಕ ಪರಿಸ್ಥಿತಿ ಅಷ್ಟಾಗಿ ಚೆನ್ನಾಗಿ ಇರಲಿಲ್ಲ. ಅವರ ತಂದೆಯವರು ಅಡುಗೆ ಕೆಲಸ ಮಾಡಿ ಇಡೀ ಸಂಸಾರವನ್ನು ಸುಖವಾಗಿ ಸಾಗಿಸುತ್ತಿದ್ದರು. ಉಪ್ಪಿ ಹಾಗೂ ಅವರ ಅಣ್ಣನಿಗೆ ಬಾಲ್ಯದಲ್ಲಿ ಜಾಮೂನ್ ಎಂದರೆ ತುಂಬಾ ಇಷ್ಟ. ಯಾವಾಗಲೂ ತಂದೆತಾಯಿಯನ್ನು ಜಾಮೂನ್ ತಂದು ಕೊಡಿ ಜಾಮೂನ್ ತಂದು ಕೊಡಿ ಅಂತ ಕೇಳ್ತಾ ಇದ್ರು. ಒಂದು ದಿನ ಉಪ್ಪಿ ಅವರ ತಾಯಿ ಅವರ ಗಂಡನ ಬಳಿ ಕೇಳಿಕೊಂಡರಂತೆ. “ಮಕ್ಕಳು ತುಂಬಾ ಆಸೆ ಪಡುತ್ತಿದ್ದಾರೆ. ಇವತ್ತು ಕೆಲಸ ಮುಗಿಸಿಕೊಂಡು ಬರಬೇಕಾದರೆ ಜಾಮೂನ್ ತಗೊಂಡು ಬನ್ನಿ.”

ಬೆಳಗ್ಗೆಯಿಂದ ಈ ಮಕ್ಕಳಿಗೆ ‘ಅಪ್ಪ ಸಂಜೆ ಬರ್ತಾರೆ, ಜಾಮೂನ್ ತರ್ತಾರೆ ಅದನ್ನು ತಿನ್ನಬೇಕು ಅನ್ನೋ ಆಸೆ.’ ಸಂಜೆಯಾಯಿತು. ರಾತ್ರಿಯಾಯಿತು. ಅವರ ತಂದೆ ಕೆಲಸದಿಂದ ಬರಲೇ ಇಲ್ಲ. ಆಗ ಅವರ ತಾಯಿ ಮಕ್ಕಳನ್ನು ಸಮಾಧಾನ ಪಡಿಸಿ ರಾತ್ರಿ ಊಟ ಮಾಡಿಸಿ ಮಲಗಿಸಿದರು.

Uppi  ಅವರ ತಂದೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ತಡರಾತ್ರಿ ಆಗಿತ್ತು. ಆ ಮಧ್ಯರಾತ್ರಿಯಲ್ಲೂ ಉಪ್ಪಿಯವರ ತಂದೆ ಮಕ್ಕಳಿಗಾಗಿ ಜಾಮೂನ್ನನ್ನು ಕಟ್ಟಿಸಿಕೊಂಡು ಬಂದಿದ್ದರು. “ಮಕ್ಕಳನ್ನ ಎಬ್ಬಿಸು ಜಾಮೂನ್ ತಿನ್ಲಿ,” ಅಂತ ಅವರ ಶ್ರೀಮತಿಗೆ ಹೇಳಿದ್ರಂತೆ. ಉಪ್ಪಿಯವರ ತಾಯಿ ಕೂಡ ಮಕ್ಕಳನ್ನ ಎಬ್ಬಿಸಿ ಆ ಅರೆ ನಿದ್ರೆಯಲ್ಲಿಯೇ ತಂದಿದ್ದ ಜಾಮೂನ್ ಅನ್ನು ತಿನಿಸಿದರಂತೆ.. ಬೆಳಗ್ಗೆ ಎದ್ದ ತಕ್ಷಣ “ಹೆಂಗ್ ಇತ್ತಪ್ಪ ನೆನ್ನೆ ತಿಂದಿದ್ದ ಜಾಮೂನು?” ಅಂತ ಕೇಳಿದಾಗ, ಆ ಮಕ್ಕಳಿಗೆ ಏನೂ ಜ್ಞಾಪಕ ಇರಲಿಲ್ಲ. ನಿದ್ದೆಯಲ್ಲಿ ತಿಂದ ಜಾಮೂನು ಅವರ ರುಚಿಗೆ, ಅವರ ಗಮನಕ್ಕೆ ಬರಲೇ ಇಲ್ಲ. ಕಾದು ಕಾದು, ಕೊನೆಗೆ ಆಟದ ವಸ್ತು ಕೈಗೆ ಬಾಯಿಗೆ ಬಂದಾಗ, ಅದನ್ನ ಸವಿದಿದ್ದ ನೆನಪು ಕೂಡ ಇವರಲ್ಲಿ ಇರಲಿಲ್ಲ.

ಇದಾದ ಕೆಲ ದಿನಗಳ ನಂತರ Deepavali ಹಬ್ಬ. ದೀಪಾವಳಿ ಹಬ್ಬ ಬಂತೆಂದರೆ ಎಣ್ಣೆ ಸ್ನಾನ, ಹೊಸಬಟ್ಟೆ, ಪಟಾಕಿ ಹೊಡೆಯುವುದು, ಇದು ನಮ್ಮೆಲ್ಲರ ಪದ್ಧತಿ. ಉಪ್ಪಿಯವರ ಅಕ್ಕ-ಪಕ್ಕ ಮನೆಯವರೆಲ್ಲ ಹೊಸ ಬಟ್ಟೆ ಧರಿಸಿ ಪಟಾಕಿ ಹೊಡೆಯೋಕೆ ಶುರು ಮಾಡಿದ್ರು. ಉಪ್ಪಿ ಸರ್ ಹಾಗೂ ಅವರ ಅಣ್ಣ ಕೂಡ ಅವರ ತಂದೆ ತಾಯಿಯ ಬಳಿ ಹೋಗಿ; “ನಾವು ಪಟಾಕಿ ಹೊಡೆಯಬೇಕು, ಹೋಗಿ ಪಟಾಕಿ ತರೋಣ,” ಅಂತ ಕೇಳಿದ್ದಾರೆ. ಎಳೆ ಮನಸ್ಸಿನ ಮಕ್ಕಳ ಆಸೆಯನ್ನು ಸ್ಪಂದಿಸೋಕೆ ತುಂಬಾ ಇಷ್ಟ ಆದರೆ ಅವರ ಆವತ್ತಿನ ಆರ್ಥಿಕ ಪರಿಸ್ಥಿತಿ ಇವೆಲ್ಲವನ್ನು ನಿಭಾಯಿಸೋಕೆ ಸ್ವಲ್ಪ ಕಷ್ಟ ಆಗ್ತಾ ಇತ್ತು. ಸೂಕ್ಷ್ಮ ಮನಸ್ಸನ್ನು ನೋಯಿಸ ಬಾರದು ಎಂದು ಅರ್ಥೈಸಿಕೊಂಡು, ಅವರ ತಂದೆ ಇಬ್ಬರು ಮಕ್ಕಳನ್ನ ಮನೆಹೊರಗೆ ಕರ್ಕೊಂಡು ಹೋಗಿ, ಬೀದಿಯಲ್ಲಿ ಪಟಾಕಿ ಹೊಡೆಯುತ್ತಿದ್ದ ಎಲ್ಲರನ್ನು ತೋರಿಸಿ ಒಂದು ಕಥೆ ಹೇಳಿದ್ರಂತೆ.

” ನೋಡಪ್ಪ, ಈಗ ನಾನು ಹೇಳೋದನ್ನ ಕಲ್ಪಿಸಿಕೊಂಡು ಹೋಗ್ತಾ ಇರು. ನನ್ನನ್ನ ಮಹಾರಾಜ ಅನ್ಕೋ, ನಿಮ್ಮಮ್ಮನ ಮಹಾರಾಣಿ ಅನ್ಕೋ. ನೀವಿಬ್ಬರೂ ಯುವರಾಜರು. ಇದು ನಮ್ಮ ಊರು. ಈ ಪಟಾಕಿ ಹೊಡಿತಿರೋ ಎಲ್ಲಾ ನಮ್ಮ ಪ್ರಜೆಗಳು, ನಮ್ಮ ಬಂಧು ಬಳಗ ಇದ್ದಂತೆ. ರಾಜನ ಕರ್ತವ್ಯವೇನು? ಅವನನ್ನು ನಂಬಿದ ಪ್ರಜೆಗಳನ್ನ ಯಾವುದೇ ಕೊರತೆ ಬಾರದಂತೆ ಚೆನ್ನಾಗಿ ನೋಡಿಕೊಳ್ಳುವುದು. ಹಾಗೆ ನಾವು ಕೂಡ ಈಗ ನಮ್ಮ ಅಕ್ಕಪಕ್ಕದ ಮನೆಯವರಿಗೆ ಪಟಾಕಿಗಳನ್ನು ತಂದು ಹಬ್ಬವನ್ನು ಸಂಭ್ರಮದಿಂದ ಹರುಷದಿಂದ ಆಚರಿಸಲಿ, ಎಂದು ನಮ್ಮ ಮನೆಯಲ್ಲಿದ್ದ ಎಲ್ಲಾ ಪಟಾಕಿಗಳನ್ನು ಹಂಚಿದ್ದೇವೆ” ಅಂತ ಅನ್ಕೋ. ‘ಅವರ ಸಂಭ್ರಮ ಅವರ ನಗು ನೋಡಿದಾಗ; ನಮಗೆ ಇಲ್ಲ ಅನ್ನೋ ಕೊರಗು ದೂರವಾಗಿ, ಇನ್ನೊಬ್ಬರ ಖುಷಿಗೆ ನಾವು ಕಾರಣವಾಗಿ ಭಾಗಿಯಾದರೆ, ಅದಕ್ಕಿಂತ ಇನ್ನೊಂದು ದೊಡ್ಡ ಹಬ್ಬ ಇಲ್ಲ.’

ಇಂಥ ಮೌಲ್ಯಾದಾರಿತ ನೀತಿ ಪಾಠಗಳನ್ನು, ಸಂಸ್ಕಾರಗಳನ್ನ ಹೇಳಿಕೊಟ್ಟು ಬೆಳೆಸಿದವರು ಶ್ರೀಮತಿ ಮತ್ತು ಶ್ರೀ ಮಂಜುನಾಥ್ ರಾವ್ ಅವರು..

ಇದನ್ನೆಲ್ಲಾ ನೋಡಿ ಅಂತ ಕಾಣತ್ತೆ ಕವಿಗಳು, ಸಾಹಿತಿಗಳು ಬರಹಗಾರರು, ಎಲ್ಲರೂ ಹೇಳೋದು ಒಂದೇ ಮಾತು “ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣೋ ದೇವರು..”

ಇದು Uppiಯವರ ಮರೆಯದ ದೀಪಾವಳಿ.. ಸಿಹಿ ಕಹಿ ನೆನಪುಗಳ ಹಾವಳಿ..

Raghuram

Gangadhar Star ನಟ ಆಗಿದ್ದು ಹೇಗೆ?

Previous article

Gangadhar – ಸಂಸಾರದ ಸ ರಿ ಗ ಮ ದಲ್ಲಿ

Next article

You may also like

Comments

Leave a reply

Your email address will not be published. Required fields are marked *

2 × three =