ನಾನು ನನ್ನ ಹಿಂದಿನ ಬರವಣಿಗೆಯಲ್ಲಿ ತಿಳಿಸಿದ ಹಾಗೆ Sharapanjara ಚಿತ್ರದ ಮೂಲಕ Gangadhar ಅವರು ಹೇಗೆ ಸ್ಟಾರ್ ಆದರೂ? ಆ ಚಿತ್ರದ ಚಿತ್ರೀಕರಣದ ಅನುಭವಗಳೇನು? Dr. Rajkumar ಜೊತೆಗಿನ ಅವರ ಅನುಬಂಧ, ಎಲ್ಲವನ್ನೂ ಹೇಳ್ತಾ ಹೋಗ್ತೀನಿ…
‘Sharapanjara’ ಚಿತ್ರಕ್ಕೂ ಮುಂಚೆ Gangadhar ಅವರು ವರನಟ Dr. Rajkumar ಅವರೊಂದಿಗೆ ಮೊದಲ ಬಾರಿಗೆ ‘ನನ್ನ ತಮ್ಮ’ ಅನ್ನೋ ಚಿತ್ರದಲ್ಲಿ Screen Share ಮಾಡಿಕೊಂಡರು..
‘ನನ್ನ ತಮ್ಮ’ ಚಿತ್ರದ ಚಿತ್ರೀಕರಣ ಮದ್ರಾಸ್ನಲ್ಲಿ ನಡೀತಾ ಇತ್ತು.. ಗಂಗಾಧರ್ ಅವರಿಗೆ ಸಾಕಷ್ಟು ಚಿತ್ರದಲ್ಲಿ ಅಭಿನಯಿಸಲು ಹೆಚ್ಚಿನ ಅವಕಾಶಗಳು ಸಿಕ್ತಾಯಿದ್ವು .. ಕೆಲವೊಮ್ಮೆ ಎರಡು – ಮೂರು shift ಗಳಲ್ಲಿ ಕೆಲಸ ಮಾಡುತ್ತಿದ್ದರು.. ಒಂದು ದಿನ ‘ನನ್ನ ತಮ್ಮ’ ಸಿನಿಮಾದ ಶೂಟಿಂಗ್ packup ಆಯ್ತು.. ಮದರಾಸಿನ ಆ studio ನಿಂದ hotel ಗೆ ಹೋಗೋಕ್ಕೆ car ಗಾಗಿ ಗಂಗಾಧರ್ ಅವರು ಕಾಯ್ತಾ ಇದ್ದರು.. Dr. Rajkumar ಅವರೂ ಕೂಡ ಚಿತ್ರೀಕರಣ ಮುಗಿಸಿ ಅವರ ಮನೆಗೆ ಹೋಗೋ ಸಂದರ್ಭದಲ್ಲಿ ಗಂಗಾಧರ್ ಅವರನ್ನು ನೋಡಿ “ಬನ್ನಿ, ನಾನೇ ನಿಮ್ಮನ್ನ hotel ವರ್ಗು drop ಮಾಡುತ್ತೇನೆ”, ಎಂದು ಕಾರಲ್ಲಿ ಹತ್ತಿಸಿ ಕೊಂಡರು. Studio ನಿಂದ ಅವರ hotel ಗೆ ಹೋಗುವ ಆ ಪಯಣದ ಅವಧಿಯಲ್ಲಿ ಗಂಗಾಧರ್ ಅವರ ಬದುಕನ್ನು ಬದಲಿಸುವ ಒಂದು ಮಾತನ್ನು Dr. Rajkumar ಹಾಗೂ ಶ್ರೀಮತಿ Parvathamma Rajkumar ಅವರು ಹೇಳಿದರು.. ಅದೇನೆಂದರೆ “ಗಂಗಾಧರ್..ಇವತ್ತು ಜೀವನ ಚೆನ್ನಾಗಿ ನಡಿತಾ ಇದೆ. ಕೈ ತುಂಬ ಕೆಲಸ, ಅವಕಾಶಗಳು.. ಇಂಥ ಸಮಯದಲ್ಲೇ ಬುದ್ಧಿವಂತರಾಗಿ ಇವತ್ತಿನ ಜೀವನದ ಜೊತೆಗೆ ನಾಳೆಯ ಭವಿಷ್ಯವನ್ನು ಭದ್ರ ಮಾಡಿಕೊಳ್ಳಿ. ನಿಮ್ಮ ಸಂಪಾದನೆಯಲ್ಲಿ ಹಣವನ್ನು ಕೂಡಿಹಾಕಿ, ಮುಂದಿನ ಸುಖ ಸಂಸಾರಕ್ಕೆ ನಾಂದಿ ಹಾಡಿ” ಎಂದು ಹೇಳಿದರಂತೆ..
ಈ ಮಾತುಗಳು ಗಂಗಾಧರ ಅವರ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಅವರ ಶ್ರೀಮತಿ, ಮಗ, ಅತ್ತೆ ಬೆಂಗಳೂರಿನ ತ್ಯಾಗರಾಜನಗರದ ಮನೆಯಲ್ಲಿ ವಾಸವಿದ್ದರು. ಗಂಗಾಧರ್ ಅವರು ತಿಂಗಳಲ್ಲಿ 20 ದಿವಸಗಳು ಚಿತ್ರೀಕರಣಕ್ಕಾಗಿ ಮದರಾಸಿನಲ್ಲಿರುತ್ತಿದ್ದರು. ಒಮ್ಮೊಮ್ಮೆ ಅಲ್ಲಿಂದ ಬೆಂಗಳೂರಿಗೆ flight ನಲ್ಲಿ ಬಂದು; ಹೆಂಡತಿ ಮಗುವನ್ನು ಮಾತಾಡಿಸಿ; ನೇರವಾಗಿ ಚಿತ್ರೀಕರಣಕ್ಕಾಗಿ ಮೈಸೂರಿಗೆ ಕೂಡ ಹೋಗಿದ್ದುಂಟು.. ಅಣ್ಣಾವ್ರು ಹೇಳಿದ ಮಾತನ್ನು ತಮ್ಮ ಶ್ರೀಮತಿಯೊಂದಿಗೆ ಚರ್ಚಿಸಿ, ಆಲೋಚಿಸಿ, ಕಾರ್ಯರೂಪಿಸಿ, ಗಳಿಸಿ, ಬೆಳೆಸಿ ಉಳಿಸಿಕೊಂಡರು.. ಅಣ್ಣಾವ್ರು ಹೇಳಿದ ಮಾತನ್ನು ಕೊನೆಯವರೆಗೂ ಗಂಗಾಧರ್ ಅವರು ನೆನಪಿಸಿಕೊಂಡು “ಆ ಪರಮಾತ್ಮನೇ Dr. Rajkumar ಅವರ ಬಾಯಲ್ಲಿ ನನ್ನ ಭವಿಷ್ಯವನ್ನು ಭದ್ರ ಮಾಡಿಕೊಳ್ಳಲು ಈ ನುಡಿಯನ್ನು ನುಡಿಸಿದರು,” ಅಂತ ಹೇಳ್ತಾನೆ ಇದ್ದರಂತೆ..
ಸ್ಟಾರ್ ಆಗುವ ಮುನ್ನ ಗಂಗಾಧರ್ ಅವರು ಅವರ ಶ್ರೀಮತಿಯೊಂದಿಗೆ ಹೇಗೆ ಕಾಲಕಳೆಯುತ್ತಿದ್ದರೆಂದರೆ; ಭಾನುವಾರ ಬಂತೆಂದರೆ ವಿದ್ಯಾರ್ಥಿ ಭವನದ ಮಸಾಲೆ ದೋಸೆ , ಜಾಮೂನು ತಿಂದು ;ದೊಡ್ಡ ಗಣಪತಿ ದೇವಸ್ಥಾನ (ಬ್ಯೂಗಲ್ ರಾಕ್) ಬಳಿ ಹೋಗಿ ಸ್ವಲ್ಪ ಹೊತ್ತು ವಿರಾಮಿಸಿ, ಗಣೇಶನ ಬಳಿ ಹೋಗಿ ಪ್ರಾರ್ಥಿಸಿ ಬರೋದು ಅವರ ವಾಡಿಕೆ. ಮದುವೆಯಾಗಿ 8 ವರ್ಷಗಳಾದರೂ ಗಂಗಾಧರ್ ಅವರಿಗೆ ಮಕ್ಕಳಾಗಿರಲಿಲ್ಲ. ಹೀಗೆ ಒಂದು ದಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ದೇವರ ಮುಂದೆ ಗಂಗಾಧರ್ ಒಂದು ಬೇಡಿಕೆ ಇಟ್ಟರು “ದಯವಿಟ್ಟು ನನಗೆ ಮಕ್ಕಳಾಗಲೆಂದು ಅನುಗ್ರಹಿಸು. ನನಗೇನಾದರೂ ಗಂಡು ಮಗುವಾದರೆ ನಿನ್ನ ಹೆಸರನ್ನೇ ಇಡುತ್ತೇನೆ “ಎಂದು ಹರಕೆ ಹೊತ್ತಿದ್ದರು. ಆ ಹರಕೆ ಹೊತ್ತ ಕೆಲವೇ ದಿನದಲ್ಲಿ ಗಂಗಾಧರ್ ಅವರಿಗೆ ಒಂದು ಗಂಡು ಮಗು ಜನನವಾಯಿತು.
ಆ ಮಗುವಿಗೆ ‘ಗಣೇಶ’ ಎಂದು ಹೆಸರಿಟ್ಟು ; ದೊಡ್ಡ ಗಣಪತಿ ದೇವಸ್ಥಾನಕ್ಕೆ ಒಂದು ಕಿರೀಟವನ್ನು ಕೂಡ ಮಾಡಿಸಿಕೊಟ್ಟರು. ಅವರ ಮಗ ಹುಟ್ಟಿದ ಕೆಲವೇ ದಿನಗಳಲ್ಲಿ ಜಯನಗರದ Cosmopolitan club ಬಳಿ ಒಂದು site ಅನ್ನು ಖರೀದಿಸಿ, ಮನೆ ಕಟ್ಟಿಸಿ, 1971 ಅಲ್ಲಿ ಗೃಹಪ್ರವೇಶ ಮಾಡಿ, ಆ ಮನೆಗೆ ‘ಗಣೇಶ ಕೃಪ’ ಎಂದು ಹೆಸರಿಟ್ಟರು. ಈ ಮನೆಗೆ ಹೋದ ಕೆಲವು ವರ್ಷಗಳಲ್ಲಿ, ಅಂದರೆ 1975 ಅಲ್ಲಿ ಅವರಿಗೆ ಮತ್ತೊಬ್ಬ ಮಗ ಜನಿಸಿದರು. ಅವರಿಗೆ ‘ಸುಬ್ರಮಣ್ಯ’ ಎಂದು ನಾಮಕರಣ ಮಾಡಿದರು. ಗಂಗಾಧರ್ ಅವರ ದೊಡ್ಡಮಗ ವ್ಯವಹಾರಿಕವಾಗಿ ‘ರವಿಕುಮಾರ್’ ಎಂದು ಹೆಸರು ಬದಲಿಸಿಕೊಂಡಿದ್ದರು ಸಹ ಈಗಲೂ ಅವರ ಮನೆಯಲ್ಲಿ, ಅವರ ಬಳಗದಲ್ಲಿ ಅವರನ್ನು ಕರೆಯೋದು, ಮಾತನಾಡಿಸುವುದು ಅವರ ಮೂಲ ಹೆಸರು ಗಣೇಶ ಅನ್ನೋ ಹೆಸರಿನಿಂದಲೇ .
Puttanna Kanagal ಅವರ ನಿರ್ದೇಶನದಲ್ಲಿ, Kalpana ಹಾಗೂ Gangadhar ಅವರ ಅಮೋಘ ಅಭಿನಯದಲ್ಲಿ ಬಿಡುಗಡೆಯಾದ ಚಿತ್ರ ‘Sharapanjara’.. ಈ ಚಿತ್ರ release ಆದ ನಂತರ impact ಯಾವ ರೀತಿ ಇತ್ತು ಅಂದ್ರೆ, ಗರ್ಭಿಣಿ ಹೆಣ್ಣು ಮಕ್ಕಳು ಸಾಧಾರಣವಾಗಿ ಈ ಚಿತ್ರವನ್ನು ನೋಡೋದಕ್ಕೆ ಹೋಗ್ತಾ ಇರಲಿಲ್ಲ.. ಮಕ್ಕಳನ್ನು ಕೂಡ ಕರ್ಕೊಂಡ್ ಹೋಗಕ್ಕೆ avoid ಮಾಡ್ತಿದ್ರು.. ಯಾಕಂದ್ರೆ ದೃಶ್ಯಗಳು ಅಷ್ಟು ನೈಜವಾಗಿ ಪರಿಣಾಮಕಾರಿಯಾಗಿ, ಮನಮುಟ್ಟುವಂತೆ ಚಿತ್ರೀಕರಿಸಿದ್ದರು. Kalpana ಅವರು ಎಷ್ಟರ ಮಟ್ಟಿಗೆ ‘ಕಾವೇರಿ’ ಪಾತ್ರದಲ್ಲಿ ತಲ್ಲೀನರಾಗಿದ್ದರೆಂದರೆ ಕಡೆಯ ದೃಶ್ಯದಲ್ಲಿ ಗಂಗಾಧರ್ ಅವರೊಂದಿಗೆ ಮಾನಸಿಕ ರೋಗಿಯಾಗಿ ಅಭಿನಯಿಸ ಬೇಕಾದರೆ ನಿಜವಾಗಿಯೂ ಗಂಗಾಧರ್ ಅವರ ಕಪಾಳಕ್ಕೆ ಹೊಡೆದಿದ್ದರಂತೆ..
‘Sharapanjara’ climax ಶೂಟಿಂಗ್ ನಡಿಬೇಕಾದ್ರೆ, last shot ತೆಗಿ ಬೇಕಾದರೆ ಒಂದು ತಪ್ಪಾಗಿದೆ.. ಅದೇನೆಂದರೆ, ಕಲ್ಪನಾ ರವರನ್ನು ಗಂಗಾಧರ್ “ಹುಚ್ಚಿ ಹುಚ್ಚಿ” ಅಂತ ಹೇಳಿ, ಕಲ್ಪನಾ ಅವರನ್ನು Car ನಲ್ಲಿ ಕೂರಿಸಿಕೊಂಡು ಹೊರಡೋ ಸನ್ನಿವೇಶ.. ಈ ಇಡೀ ದೃಶ್ಯವನ್ನ ಪುಟ್ಟಣ್ಣನವರು ಒಂದೇ shot ನಲ್ಲಿ ತೆಗೆಯಲು plan ಮಾಡಿದ್ದರು.. Camera roll ಆಗಿದೆ ;ನಿರ್ದೇಶಕರು action ಅಂತ ಹೇಳಾಗಿದೆ; ಕಲಾವಿದರ ಅಭಿನಯನೂ ಶುರುವಾಗಿದೆ.. ಕಡೆಯಲ್ಲಿ car start ಮಾಡಿ ಮುಂದೆ ಹೋಗಬೇಕು ಅನ್ನುವಷ್ಟರಲ್ಲಿ ಗಂಗಾಧರ್ ಅವರಿಗೆ clutch ಹಿಡಿದು gear ಹಾಕೋಕೆ ಗೊತ್ತಾಗಲಿಲ್ಲ.. ಅವರಿಗೆ Driving ಬರ್ತಾ ಇರಲಿಲ್ಲ.. ಜೊತೆಗೆ ಒಂದೇ Shot ನಲ್ಲಿ ಮುಗಿಸುವ ಒತ್ತಡ ಬೇರೆ. Car jerk ಹೊಡೆದಿದೆ; ಮುಂದೆ ಹೋಗಲಿಲ್ಲ. ಅಂದುಕೊಂಡಿದ್ದ ದೃಶ್ಯ; ಅಲ್ಲಿಯವರೆಗೂ ಅದ್ಭುತವಾಗಿ; ಭಾವನಾತ್ಮಕವಾಗಿ; ನೈಜವಾಗಿ; ಮೂಡಿಬಂದ ಸನ್ನಿವೇಶ ಕಡೆಯ ದೃಶ್ಯದ ಕಡೇ ಕ್ಷಣ ಮಾತ್ರ ತಪ್ಪಾಯ್ತು.
ಪುಟ್ಟಣ್ಣನವರು “ಹೇ ಗಂಗಾಧರ್!! ಗಾಡಿ ಓಡಿಸೋಕೆ ಬರಲ್ವಾ ನಿಮಗೆ.?” ಅಂತ ಗದರಿದಾಗ, “ಇಲ್ಲಾ ಸಾರ್, ಗಾಬರಿಯಲ್ಲಿ ನನ್ನ ಕೈಕಾಲು ಓಡಲೇ ಇಲ್ಲ!!” ಅಂತ ಹೇಳಿದ್ದಾರೆ.. ಇಷ್ಟೊಂದು ಪರಿಣಾಮಕಾರಿಯಾಗಿ ಬಂದ ಸನ್ನಿವೇಶವನ್ನು ಮತ್ತೆ ಮರು ಚಿತ್ರಿಸಲು ಪುಟ್ಟಣ್ಣನವರಿಗೆ ಇಷ್ಟ ಇರಲಿಲ್ಲ. ಇವತ್ತಿಗೂ ನೀವು ಶರಪಂಜರದ climax ನೋಡಿದ್ರೆ, ಕಡೆಯ ದೃಶ್ಯ freeze ಆಗತ್ತೆ.. Freeze ಆದನಂತರ ” ಗೆದ್ದವಳು ಮಾತ್ರ ಕಾವೇರಿ ಆಗಿರಲಿಲ್ಲ” ಅನ್ನೋ text ಬರುವ ಮೂಲಕ ಚಿತ್ರ ಮುಗಿಯುತ್ತೆ..
Film festival ಗಳಲ್ಲಿ ಈ ಚಿತ್ರವನ್ನು ವೀಕ್ಷಿಸಿದ jury ಗಳು ಆಗಿದ್ದ ಈ ತಾಂತ್ರಿಕ ತಪ್ಪನ್ನು “Wow!! What a directorial touch in the end” ಅಂತ ಅಭಿನಂದಿಸಿದ್ದರು..
ನಮಗೆ ಅರಿಯದೆ ತಪ್ಪಾದಾಗ; ಜನರು ಅದನ್ನೇ ಪ್ರೀತಿಯಿಂದ ಕೊಂಡಾಡಿದಾಗ ; ಕಲಾವಿದರ, ತಂತ್ರಜ್ಞರ ಹಾಗೂ ತಂಡದ ಸಿನಿಮಾ ಕೃಷಿ ಫಲಿಸಿದಾಗ ; ಬರುವ ಅತ್ಯಂತ ಶ್ರೇಷ್ಠವಾದ, ಬೆಳ್ಳಿಪರದೆಯ ಫಸಲೇ, ಈ ‘ಶರಪಂಜರ’ ಅನ್ನೋ ಅದ್ಭುತ ಕಲಾಕೃಷಿ…
Comments