ನೂರೊಂದು ನೆನಪು

SHREYA RAGHUVEER -“ಶೃಂಗಾರವಾದ ಬದುಕಿಗೆ ಸಾಕ್ಷಿಯಾದ ಶ್ರೇಯ.”

0
Shreya Raghuveer

1st July 1994, Raghuveer ಹಾಗೂ Sindhu ಅವರ ಒಂದು ಸುಂದರ ಕನಸು ನನಸಾದ ದಿವಸ.. ಮಗಳು Shreya ಹುಟ್ಟಿದ ಸಂತಸ. ರಘುವೀರ್ ಸಿಂಧೂ ಅವರ ಪ್ರೇಮದ ಕಾಣಿಕೆ ಈ Shreya Raghuveer..

ಶ್ರೇಯ ಹುಟ್ಟಿದ್ದು ಬೆಂಗಳೂರಿನಲ್ಲಿ.. ಅವರ UKGನ Good Shepherd ಶಾಲೆಯಲ್ಲಿ ಓದಿದ್ದಾರೆ.. ನಂತರ Chennaiನ Good Shepherd ಅಲ್ಲಿ ಅವರ ಶಾಲಾ ದಿನಗಳನ್ನ ಮುಗಿಸಿ, B.sc in Electronic Media (Visual communication), MOP Vaishnav College, Chennai ನಲ್ಲಿ ಮಾಡಿದ್ದಾರೆ . ನಂತರ A R Rahman ಅವರ ಸಂಗೀತ ಶಾಲೆಯಲ್ಲಿ ಕೆಲ ದಿಸ ವಿದ್ಯೆಯನ್ನು ಕಲಿತಿದ್ದಾರೆ..

ನೋವು-ನಲಿವು, ಆಸೆ-ನಿರಾಸೆ, ಸುಖ-ದುಃಖ ಈ ಎಲ್ಲದರ ಮಿಶ್ರಣವೇ ಅವರ ಬಾಲ್ಯ ಜೀವನ. ಅವರು ಹುಟ್ಟಿ, ಒಂದರಿಂದ ಎರಡು ವರ್ಷಕ್ಕೆ, ಚೆನ್ನೈಗೆ ಬಂದು ನೆಲೆಸಿದರು. ರಘುವೀರ್ ಅವರಿಗೆ ಆಗ ಸಿನಿಮಾ ಇಲ್ಲದೆಯಿರುವ ಸಂದರ್ಭ. ಗಂಡ, ಮಗಳನ್ನ, ಸಂಸಾರವನ್ನ ನಡೆಸುತ್ತಿದ್ದ ಜವಾಬ್ದಾರಿ ಸಿಂಧು ಅವರದಾಗಿತ್ತು. ತಮಿಳಿನ ಧಾರಾವಾಹಿಗಳಲ್ಲಿ ನಟಿಸಿ, ತನ್ನ ಕುಟುಂಬ ಸಾಗಿಸುತ್ತಿದ್ದರು. ಪ್ರೀತಿಸಿ ಮದುವೆಯಾದ Raghuveer-Sindhu ಮಧ್ಯೆ ಮನಸ್ತಾಪ ಶುರುವಾಯಿತು. ಸಣ್ಣದಾಗಿ ಪ್ರಾರಂಭವಾದ ಬೇಸರ, ಬೃಹದಾಕಾರವಾಗಿ ಬೆಳೆದು ನಿಂತಿತು.

Shreya Raghuveer, Ashwin

Raghuveer-Sindhu ಇಬ್ಬರೂ ಬೇರೆಬೇರೆಯಾಗಿ ಜೀವನ ನಡೆಸಲು ಪ್ರಾರಂಭಿಸಿದರು. ರಘುವೀರ್ ಬೆಂಗಳೂರಿನಲ್ಲಿ ; ಸಿಂಧು ಚೆನ್ನೈನಲ್ಲಿ. ಎಳೆ ಮನಸ್ಸಿನ ಪುಟ್ಟ ಕಂದ ಶ್ರೇಯ, ತಂದೆಯ ಪ್ರೀತಿಯಿಂದ ವಂಚಿತಳಾಗಿ, ತಾಯಿಯ ಅಕ್ಕರೆಯಲ್ಲಿ ಬೆಳೆಯಲು ಶುರುಮಾಡಿದಳು.
2004 December ಕೊನೆಯ ವಾರದಲ್ಲಿ Tsunami ಬಂದು ಅಪ್ಪಳಿಸಿತು. ಆ Tsunami ಬರೀ ಪ್ರಕೃತಿಗೆ ಹಾಗೂ ಕೆಲ ಜನ ಗಳಿಗೆ ಮಾತ್ರ ತನ್ನ ವಿಕೃತಿ ತೋರಿಸಲಿಲ್ಲ.. ಏನೂ ಅರಿಯದ ಮುಗ್ಧ ಮನಸ್ಸಿನ ಶ್ರೇಯ ಜೀವನದಲ್ಲೂ, ದೊಡ್ಡ ದುರಂತವನ್ನು ಈ ಸುನಾಮಿ ಉಂಟುಮಾಡಿತು

Tsunami ಯಲ್ಲಿ ನೊಂದಿದ್ದ ನಿರಾಶ್ರಿತರಿಗೆ, ಹಣವನ್ನು ಸಂಗ್ರಹಿಸಲು ತಮಿಳುನಾಡು ಟಿವಿ ಲೋಕದ ಕಲಾವಿದರಗಳಿಂದ ಒಂದು ಕಾರ್ಯಕ್ರಮ ಏರ್ಪಾಡಾಗಿತ್ತು..

ಸಿಂಧೂ ಅವರಿಗೆ ಮೊದಲಿನಿಂದಲೂ ಆರೋಗ್ಯದ ವಿಷಯದಲ್ಲಿ Asthma ದ ತೊಂದರೆ ಇತ್ತು. ಒಂದು ದಿನ ಬೆಳಗ್ಗೆ, ಈ ಕಾರ್ಯಕ್ರಮಕ್ಕೆ ಬಂದು Tsunami Relief Fund ಗಾಗಿ ಹಣವನ್ನು ಶೇಖರಿಸಲು ಸಿಂಧೂ ಅವರು ಅವರ ಕಲಾವಿದರ ಗುಂಪಿನೊಂದಿಗೆ, ಚೆನ್ನೈನ ಆಯ್ದ ಕೆಲ ಭಾಗಗಳಲ್ಲಿ ತಮ್ಮ ಕಾರ್ಯವನ್ನು ಮಾಡಿದರು.

ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ, ಅವರ ಇಡೀ ಗುಂಪಿನಲ್ಲಿ ಇವರೇ ಸಾಕಷ್ಟು ಹಣ ಸಂಗ್ರಹಿಸಿದ್ದು. ಮಧ್ಯ lunch break ನಲ್ಲಿ, ಊಟ ಮಾಡುವಾಗ, ಬೇಗ ಊಟ ಮುಗಿಸಿ ಇನ್ನಷ್ಟು ಕೆಲಸ ಮಾಡಬೇಕು ಅನ್ನೋ ಆತುರದಲ್ಲಿ, ತುತ್ತು ಬಾಯಲ್ಲಿ ಇಟ್ಟಾಗ, ಕೆಲವು ಅನ್ನದ ಅಗಳುಗಳು ಅವರ ಶ್ವಾಸಕೋಶದಲ್ಲಿ ಸಿಲುಕಿಕೊಂಡಿತು. ಮೊದಲೇ Asthma ಕಾಯಿಲೆ ಇದ್ದಿದ್ದರಿಂದ, ಸಿಂಧು ಅವರಿಗೆ ಉಸಿರಾಡಲು ತೀರ ಕಷ್ಟವಾಯಿತು. ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಬೇಕಾದರೆ ಮನಸ್ತಾಪದಿಂದ ದೂರವಾಗಿದ್ದ ಗಂಡ ರಘುವೀರ್ ಅವರನ್ನ; ಮುದ್ದು ಮಗಳು ಶ್ರೇಯರನ್ನ; ತಂದೆ – ತಾಯಿ, ಬಂಧು-ಬಳಗ ಮತ್ತು ಅಪಾರ ಅಭಿಮಾನಿಗಳನ್ನ ಬಿಟ್ಟು, ಶಾಶ್ವತವಾಗಿ ಸಿಂಧು ಅವರು ದೂರವಾದರು..

Sindhu

ಈ ವಿಷಯ ತಿಳಿಯುತ್ತಿದ್ದಂತೆ ರಘುವೀರ್ ಅವರು ಬೆಂಗಳೂರಿನಿಂದ ಚೆನ್ನೈಗೆ ಹೋಗಿ, ತಾನು ನೆರವೇರಿಸಬೇಕಾಗಿದ್ದ ಕರ್ತವ್ಯವನ್ನು ನೆರವೇರಿಸಿ, ಭಾರವಾದ ಹೃದಯದಿಂದಲೆ ಒಬ್ಬಂಟಿಯಾಗಿ ಬೆಂಗಳೂರಿಗೆ ವಾಪಸ್ಸಾದರು. ಶ್ರೇಯ ಮಾತ್ರ ತಂದೆಯೊಂದಿಗೆ ಬರಲೇ ಇಲ್ಲ. ಅಜ್ಜಿ-ತಾತನ ಆರೈಕೆಯಲ್ಲಿ, ಸೋದರಮಾವ ಸಂಜೀವ್ ಅವರ ಅಕ್ಕರೆಯಲ್ಲಿ, ಅಲ್ಲೇ ಅವರ ಮುಂದಿನ ಜೀವನ ನಡೆಸಲು ನಿರ್ಧಾರ ಮಾಡಿದರು.

ಶ್ರೇಯ ಮಗು ಇದ್ದಾಗಿನಿಂದಲೂ, ತಾಯಿ ಸಿಂಧು, ಬೆಳಗ್ಗೆ shooting ಹೋದರೆ, ಬರೋ ಹೊತ್ತಿಗೆ ಕತ್ತಲಾಗುತ್ತಿತ್ತು. ಸಾಕಷ್ಟು ಸಮಯ ಶ್ರೇಯ ಅಜ್ಜಿ-ತಾತ; ಸೋದರ ಮಾವನ ಜೊತೆಯಲ್ಲಿ ಕಳೆದಿದ್ದರಿಂದ, ತಾಯಿಯ ಅಗಲಿಕೆ ಶ್ರೇಯಾ ಅವರ ಮೇಲೆ ತುಂಬ ದೊಡ್ಡ ಪರಿಣಾಮ ಬೀರಲಿಲ್ಲ. ನೋಡಿಕೊಳ್ಳೋಕೆ, ಬೆಳೆಸೋಕೆ, ಪ್ರೀತಿಸೋಕೆ ಸಾಕಷ್ಟು ಜನ ಅವರ ಕುಟುಂಬದಲ್ಲಿದ್ದರು.

ಶ್ರೇಯಾಗೆ ಸುಮಾರು ಹದಿಮೂರು ಹದಿನಾಲ್ಕು ವರ್ಷ ಇರಬೇಕಾದ್ರೆ, ಅವರ ತಾಯಿಯವರಿಗೆ Family friend ಆಗಿದ್ದ ‘Jeeva Ravi’ ಅನ್ನುವವರ ಮಗ ‘Ashwin’ ಅವರೊಂದಿಗೆ ಸ್ನೇಹ ವಾಗುತ್ತದೆ.. ದಿನಕಳೆದಂತೆ, ಸ್ನೇಹ ಗಟ್ಟಿಯಾಗಿ, ಪ್ರೀತಿಗೆ ಪರಿವರ್ತನೆ ಆಗತ್ತೆ. ಶ್ರೇಯಾ ಅವರ 16ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ, ರಘುವೀರ್ ಅವರಿಗೆ ಅವರ ಮಗಳು ಶ್ರೇಯ ಹಾಗೂ Ashwin ಅವರ ಪ್ರೀತಿಯ ಬಗ್ಗೆ ಒಂದು ಸಣ್ಣ hint ಸಿಗುತ್ತೆ. ಅದೇ ಸಂದರ್ಭದಲ್ಲಿ Ashwin ಅವರನ್ನು ರಘುವೀರ್ ಅವರು ಭೇಟಿಯಾಗುತ್ತಾರೆ. “ನನ್ನ ತಂದೆಗೆ ನನ್ನ ಪ್ರೀತಿಯ ಬಗ್ಗೆ ಏನೇ ವಿಷಯ ಗೊತ್ತಿದ್ದರೂ, ಎಂದು ನನ್ನ ಮುಂದೆ ಪ್ರಸ್ತಾಪಿಸಲಿಲ್ಲ.” “ಸಿನಿಮಾಗಳಲ್ಲಿ, ಪ್ರೀತಿ-ಪ್ರೇಮದ ಬಗ್ಗೆ ಮಾತಾಡಿದ ನನ್ನಪ್ಪ, ನಿಜ ಜೀವನದಲ್ಲಿ ಈ ವಿಷಯಗಳ ಬಗ್ಗೆ ತುಂಬಾ ಸ್ಟ್ರಿಕ್ಟ್ ಆಗಿದ್ರು”. He was a very protective father” ಅಂತ ನೆನೆಯುತ್ತಾರೆ ಶ್ರೇಯ..

ಶ್ರೇಯ ಮೂಲತಹ ತುಂಬಾ ಸೌಮ್ಯ ಹಾಗೂ ನಾಚಿಕೆ ಸ್ವಭಾವದವರು. ಇವರ ‘ಶ್ರೇಯ’ ಅನ್ನೋ ಹೆಸರಿಗೂ, ‘Shrungara Kavya‘ ಚಿತ್ರಕ್ಕೂ ತುಂಬ ಸಂಬಂಧವಿದೆ.. ಈ ಚಿತ್ರದ ಚಿತ್ರೀಕರಣದ ಸಮಯದಲ್ಲೇ, ರಘುವೀರ್ ಹಾಗೂ ಸಿಂಧು ಅವರಿಗೆ ಪ್ರೀತಿಯಾಗಿದ್ದು. ಇದಾದ ಕೆಲವೇ ದಿನಗಳಲ್ಲಿ ಇವರಿಬ್ಬರು ಸತಿಪತಿ ಆದರೂ.. ಸಿಂಧು ಅವರು ಗರ್ಭಿಣಿಯಾದಾಗ, ರಘುವೀರ್ ಹಾಗೂ ಸಿಂಧು ಇಬ್ಬರು ಮಾತಾಡ್ ಕೊಂಡಿದ್ದರಂತೆ. “ನಮಗೆ ನಾಳೆ ಮಗು ಹುಟ್ಟಿದಾಗ ಗಂಡಾದರೆ ‘ಶೃಂಗಾರ್’, ಹೆಣ್ಣಾದರೆ ‘ಕಾವ್ಯ’ ಎಂದು ಹೆಸರಿಸೋಣ.” ಈ ದಂಪತಿಗಳಿಗೆ ಹುಟ್ಟಿದ್ದು ಹೆಣ್ಣು ಮಗು. ಕಾವ್ಯ ಅನ್ನೋ ಹೆಸರು ಇಡಬೇಕು ಎಂದು ನಿರ್ಧರಿಸಿದಾಗ, ಸಿಂಧು ಅವರ ತಾಯಿ ಇದಕ್ಕೆ ಒಪ್ಪಲಿಲ್ಲವಂತೆ. ಕಾರಣ, ‘ಶೃಂಗಾರ ಕಾವ್ಯ’ ಚಿತ್ರದಲ್ಲಿ ನಾಯಕಿ ಸಿಂಧೂ ಮಾಡಿದ ಪಾತ್ರದ ಹೆಸರು ಕಾವ್ಯ. ಆ ಪಾತ್ರ ಚಿತ್ರದ climax ನಲ್ಲಿ ಸಾಯುತ್ತೆ. ಹಾಗಾಗಿ ನನ್ನ ಮೊಮ್ಮಗು ಗೆ ಈ ಹೆಸರು ಬೇಡ ಅಂತ ಒಂದೇ ಸಮಾ ಹಟ ಮಾಡದ್ರಂತೆ.. ಆಗ ಈ ಗಂಡ ಹೆಂಡತಿ ಒಂದು ತೀರ್ಮಾನಕ್ಕೆ ಬಂದು, ಶೃಂಗಾರ್ ಅನ್ನೋ ಪದದಿಂದ ‘ಶ್ರೇ’ ಅನ್ನೋದನ್ನ ತೆಗೆದುಕೊಂಡು, ಕಾವ್ಯ ಅನ್ನೋ ಪದದಲ್ಲಿ ‘ಯ’ ಅನ್ನೋ ಅಕ್ಷರ ಬಳಸಿ ಕೊಂಡು ‘ಶ್ರೇಯ’ ಅನ್ನೋ ಹೆಸರನ್ನ ನಾಮಕರಣ ಮಾಡಿದ್ದಾರೆ.

ತನ್ನ ತಂದೆಯ ಚಿತ್ರವನ್ನು ಯಾವಾಗ ನೋಡಿದರೂ, ತನಗೆ ಗೊತ್ತಿಲ್ಲದಂತೆ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತೆ ಎಂದು ಶ್ರೇಯಾ ಅವರು ತುಂಬಾ ಭಾವುಕರಾಗುತ್ತಾರೆ.. “ನನ್ನ ತಂದೆ ತುಂಬಾ ಸೂಕ್ಷ್ಮ ಜೀವಿ. ಚಿಕ್ಕಂದಿನಿಂದಲೂ ನನ್ನ ಸಾಕಷ್ಟು ಮುದ್ದಿಸಿ ಬೆಳೆಸಿದ್ದು ಅವರೇ. ಅಮ್ಮ ಆಗಾಗ ಕೂಗಾಡುತ್ತಿದ್ದರು. ಅಮ್ಮ ಹೋದ ಮೇಲೆ, ಅಪ್ಪನಿಗೆ ನಾನು ಅವರ ಜೊತೆಯಲ್ಲಿ ಬೆಂಗಳೂರಿನಲ್ಲಿ ಇರಬೇಕು ಅಂತ ತುಂಬಾ ಆಸೆ ಇತ್ತು. ಆದರೆ ಅದು ಆಗಲಿಲ್ಲ. ನಾನು ಬೆಂಗಳೂರಿಗೆ ಬಂದಾಗಲೋ ಅಥವ ಅವರು ಚೆನ್ನೈಗೆ ಬಂದಾಗಲ್ಲೂ , ವಾಪಸ್ ಹೋಗುವ ಸಂದರ್ಭದಲ್ಲಿ ತುಂಬಾ ಅಳ್ತಾ ಇದ್ರು..

ಅವರು ತೀರಿಕೊಂಡ ದಿವಸ ನಾನು ಬೆಂಗಳೂರಿಗೆ ಬಂದು ನೋಡಿದಾಗ, ನಮ್ಮ ಮನೆಯಿಂದ ಅವರನ್ನ ಮಲಗಿಸುವ ಮಸಣಕ್ಕೆ ಹೋಗುವ ವರೆಗೂ, ಅವರ ಅಭಿಮಾನಿಗಳನ್ನು ನೋಡಿ, ನನ್ನ ತಂದೆಯ ಬಗ್ಗೆ ತುಂಬಾ ಹೆಮ್ಮೆ ಅನಿಸಿತು.”

2015 ರಲ್ಲಿ ಶ್ರೇಯ ಅವರ ಮದುವೆಯಾಯಿತು. ‘Ashwin’ ತಮಿಳು ಚಿತ್ರರಂಗದಲ್ಲಿ ಒಬ್ಬ ಉದಯೋನ್ಮುಖ ನಿರ್ದೇಶಕ. ತಮಿಳಿನ ಖ್ಯಾತ ‘Atlee’ ಅನ್ನೋ ನಿರ್ದೇಶಕರ ಗರಡಿಯಲ್ಲಿ ಪಳಗಿದವರು. ಇತ್ತೀಚಿಗಷ್ಟೇ ಅವರ ನಿರ್ದೇಶನದ ಮೊದಲನೆಯ ಚಿತ್ರ ‘Anbarivu’ Disney Hotstar ನಲ್ಲಿ direct release ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ದಂಪತಿಗಳಿಗೆ ‘Aiyaan’ ಎನ್ನುವ ನಾಲ್ಕು ವರ್ಷದ ಪುಟ್ಟ ಗಂಡು ಮಗು ಇದೆ. ತಂದೆಯ ನೆನಪಲ್ಲಿ, ತಾಯಿ ಆಶೀರ್ವಾದದೊಂದಿಗೆ, ಚೆನ್ನೈನಲ್ಲಿ ಶ್ರೇಯ ಅವರು ತಮ್ಮದೇ ಸ್ವಂತ Pudding company ಮಾಡಿ ಸುಖ ಸಂಸಾರ ನಡೆಸುತ್ತಿದ್ದಾರೆ…

Raghuram

Kiccha Sudeep ಅವರು ಹಿಂದೆ ಮುಂದೆ ಯೋಚಿಸದೆ, ಯಾವ ನಿರ್ದೇಶಕರಿಗೆ ಅವಕಾಶ ಕೊಟ್ಟರು?

Previous article

“Dr. Rajkumar ಅವರ ಮುಗ್ಧತೆಯ ಹೂ ಮನಸ್ಸು”

Next article

You may also like

Comments

Leave a reply

Your email address will not be published. Required fields are marked *

two × one =