“ಸಮಯ, ಅನುಭವ, ಬದುಕಿನ ವೇಗ, ಆವೇಗ, ಆವೇಶದಲ್ಲಿ, ಅವನು ಹಾಕಿಕೊಳ್ಳುವ ವೇಷದಲ್ಲಿ ಸತ್ಯದ ಅರಿವಾಗುತ್ತದೆ. ಜೀವನದಲ್ಲಿ ಬದುಕಿನ ಬಗ್ಗೆ ನಿಜವಾದ ಬೆಲೆ ಗೊತ್ತಾಗುತ್ತೆ.”
ಈ ಸಾಲುಗಳನ್ನು ಯಾಕೆ ಬರೆದೆ ಅಂದರೆ, Raghuveer ಒಮ್ಮೆ ನನ್ನ ಬಳಿ ಹೇಳಿದ್ರು “ದುಡ್ಡು ನನಗೆ ಮೊದಲು ಸ್ನೇಹಿತನಾಗಿದ್ದ, ದಿನಕಳೆದಂತೆ ಬಹುದೊಡ್ಡ ವೈರಿಯಾದ ” ಅಂತ . ಅವರು ನಾಯಕರಾಗಿ, ನಿರ್ಮಾಪಕರಾಗಿ ಮಾಡಿದ ಚಿತ್ರ ‘Chaitrada Premajali‘ Box office ನಲ್ಲಿ ಸಾಕಷ್ಟು ಯಶಸ್ಸು ಕಂಡಿತು. ಆದರೆ ಇದರಿಂದ ರಘುವೀರ್ ಅವರು ಕೋಟಿ ಕೋಟಿ ಸಂಪಾದನೆ ಮಾಡಲಿಲ್ಲ ; ಹಾಕಿದ ಬಂಡವಾಳ ಮೇಲೆ ಒಂದಿಷ್ಟು ಲಾಭ ಬಂತು. ಇದರಿಂದ ಅವರ ಮುಂದಿನ ಚಿತ್ರವಾದ ‘Shrungara Kaavya’ ವನ್ನು ಇನ್ನಷ್ಟು ಅದ್ದೂರಿಯಾಗಿ, ದೊಡ್ಡ ತಾರಾ ಬಳಗದೊಂದಿಗೆ, ಸಾಕಷ್ಟು ಖರ್ಚು ಮಾಡಿ ಚಿತ್ರೀಕರಿಸಬೇಕು ಎಂದು ನಿರ್ಧರಿಸಿದರು.
ಮೊದಲ ಚಿತ್ರದ ಗೆಲುವಿನಿಂದ ರಘುವೀರ್ ಅವರು ನಾಯಕ ನಟರಾಗಿ ಪ್ರಖ್ಯಾತರಾದರು. ಆದರೆ ‘Srungara Kavya’ ಚಿತ್ರ ನಿರ್ಮಾಣ ಮಾಡಕ್ಕೆ, ಮತ್ತೆ ಸಾಲ ಮಾಡಿ ಚಿತ್ರೀಕರಣ ಶುರು ಮಾಡಿದರು. ಸಾಕಷ್ಟು ಜನರಿಗೆ ಗೊತ್ತಿರಬಹುದು ಗೊತ್ತಿಲ್ಲದೆಯೂ ಇರಬಹುದು. ‘ಶೃಂಗಾರ ಕಾವ್ಯ’ ಚಿತ್ರವು ಸಿನಿಮಾ ಬಿಡುಗಡೆಯ ವಾಡಿಕೆಯಂತೆ ಶುಕ್ರವಾರ ತೆರೆ ಕಾಣಲಿಲ್ಲ. ಯಾಕೆಂದರೆ Finance Problem. ಇದರಿಂದ ಮೊದಲನೆಯ ದಿನ ಚಿತ್ರ ನೋಡಲು ಥಿಯೇಟರ್ ಗೆ ಬಂದ ಜನರು ನಿರಾಸೆಗೊಂಡು, ಕೋಪಗೊಂಡು ಬೆಂಗಳೂರಿನ ಮುಖ್ಯ ಚಿತ್ರಮಂದಿರವಾದ ‘ತ್ರಿಭುವನ’ ಥಿಯೇಟರಿಗೆ ಕಲ್ಲು ಹೊಡೆದರು, ಗಲಾಟೆ ಮಾಡಿದರು. ಇದನ್ನು ಗಮನಿಸಿದ ರಘುವೀರ್, ಅಭಿಮಾನಿಗಳು ಇಷ್ಟು ನಿರಾಸೆ ಆದರಲ್ಲ ಎಂದು ಪರಿತಪಿಸಿ, ಎಲ್ಲಾ ಹಣಕಾಸಿನ ತೊಂದರೆಗಳನ್ನು ಬಗೆಹರಿಸಿಕೊಂಡು ಶನಿವಾರ ಬಿಡುಗಡೆ ಮಾಡಿದರು.
ಈ ಚಿತ್ರ ಯಶಸ್ವಿ ಪ್ರದರ್ಶನ ಆಗಬೇಕಾದರೆ ಇದರ ಓಟವನ್ನು ನಿಲ್ಲಿಸಲು, ಚಿತ್ರವನ್ನು ಕೊಲ್ಲಲು ಸಾಕಷ್ಟು ಪಿತೂರಿಗಳು ನಡೆಯಿತು. ‘Chaitrada Premajali’ ಚಿತ್ರದಷ್ಟು ಯಶಸ್ಸು ಕಾಣದಿದ್ದರೂ ರಘುವೀರ್ ಅವರಿಗೆ ‘ಶೃಂಗಾರ ಕಾವ್ಯ’ ಒಂದು ಸಣ್ಣ ಗೆಲುವು ತಂದುಕೊಟ್ಟಿತು. ನಿಮಗೆಲ್ಲ ಗೊತ್ತಿರುವ ಹಾಗೆ ‘ಶೃಂಗಾರ ಕಾವ್ಯ’ ಚಿತ್ರೀಕರಣ ಸಮಯದಲ್ಲಿಯೇ Raghuveer ಹಾಗೂ Sindhu ಅವರ ಪ್ರೀತಿ ಉಂಟಾಗಿದ್ದು.
ಜನಗಳ ಪ್ರೀತಿ, ಚಿತ್ರ ಬದುಕಿನಲ್ಲಿ ಸಿಕ್ಕ ಒಂದು ಯಶಸ್ಸು, ಅವಕಾಶಗಳು, ಇವೆಲ್ಲವನ್ನು ನಂಬಿಕೊಂಡು ರಘುವೀರ್; ಮನೆಯವರು ನಿಶ್ಚಯ ಮಾಡಿದ ಹುಡುಗಿಯನ್ನು ತಿರಸ್ಕರಿಸಿ, ಅಪ್ಪ ಅಮ್ಮನನ್ನು ಬಿಟ್ಟು, ಸಿಂಧು ಅವರನ್ನು ಮದುವೆಯಾಗಿ, ಸ್ವತಂತ್ರವಾಗಿ ಜೀವನ ನಡೆಸಲು ತೀರ್ಮಾನಿಸಿದರು. ಆಗ ಅವರ ಕೈಯಲ್ಲಿದ್ದ ಚಿತ್ರಗಳು ‘ತುಂಗಭದ್ರ’ ‘ಹೊಂಗಿರಣ’ ‘ನವಿಲೂರ ನೈದಿಲೆ’ ‘ಮೌನ ಸಂಗ್ರಾಮ’ ಇನ್ನೂ ಕೆಲವು ಚಿತ್ರಗಳು. ಈ ಎಲ್ಲಾ ಸಿನಿಮಾಗಳು ನೆಲಕಚ್ಚಿದವು. ಕೆಲವರು ಮಾಡಿದ ಚಿತ್ರಗಳಿಗೆ ಸಂಭಾವನೆ ಕೊಟ್ಟರು; ಇನ್ನುಳಿದವರು ಕೊಡಲಿಲ್ಲ. ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ರಘುವೀರ್ ಗೆ ಸೋಲೆಂಬ ಸಿಡಿಲು ಹೊಡೆದು ನಿಲ್ಲಿಸಿತು. ಕನ್ನಡ ಚಿತ್ರರಂಗದಲ್ಲಿ ಯಾರೂ ರಘುವೀರ್ ಅವರಿಗೆ ಅವಕಾಶ ಕೊಡಲಿಲ್ಲ. ಅಷ್ಟು ಹೊತ್ತಿಗಾಗಲೇ ಅವರ ಮಗಳು Shreya ಕೂಡ ಹುಟ್ಟಿದ್ದರು.
ಕನ್ನಡ ಚಿತ್ರರಂಗದಲ್ಲಿ ದುಡಿಯಲು ಅವಕಾಶಗಳಿಲ್ಲದಿದ್ದ ಕಾರಣ ಸಂಸಾರ ಸಮೇತರಾಗಿ ಚೆನ್ನೈಗೆ ಹೋಗಿ ನೆಲೆಸಿದರು. ಸಿಂಧು ಅವರು ಮೂಲತಹ ತಮಿಳಿನವರು ಆಗಿದ್ದರಿಂದ ಅಲ್ಲಿನ ಕೆಲವು ದಾರವಾಹಿಗಳು, ಸಿನಿಮಾಗಳಲ್ಲಿ ನಟಿಸಿ ಜೀವನ ಪುನರಾರಂಭಿಸಿದರು. ಮಾಡೋಕೆ ಕೆಲಸ ಇಲ್ಲ ; ಹೆಂಡತಿಯ ದುಡಿಮೆಯಲ್ಲಿ ಜೀವನ; ಅಪ್ಪ ಅಮ್ಮ, ಬಂಧು ಬಾಂಧವರಿಂದ ದೂರ..
ರಾಜನಾಗಿ ಮೆರೆದವನು, ಗುಲಾಮನಾಗಿ ಬದುಕುವ ಪರಿಸ್ಥಿತಿ. ಈ ಎಲ್ಲಾ ಘಟನೆಗಳಿಂದ ವಿಚಲಿತಗೊಂಡ Raghuveer Sindhu ನಡುವೆ ಮನಸ್ತಾಪಗಳು ಪ್ರಾರಂಭವಾದವು. ಸಣ್ಣ ಸಣ್ಣ ವಿಷಯಗಳಿಗೆ ಶುರುವಾದ ಜಗಳ, ದೊಡ್ಡದಾಗಿ ಬೆಳೆದು Divorce ಹಂತಕ್ಕೆ ಬಂದು ತಲುಪಿತು.
ಇತ್ತ ಬೆಂಗಳೂರಿಗೂ ಬರೆದೆ, ಅತ್ತ ಚೆನ್ನೈನಲ್ಲೂ ಇರದೆ ರಘುವೀರ್ ಶಿರಡಿಗೆ ಹೋಗಿ ಸೇರಿದರು. ಯಾವ ರಘುವೀರ್ ಪಂಚತಾರಾ ಹೋಟೆಲ್ ಗಳಲ್ಲಿ, AC ರೂಮಿನಲ್ಲಿ, ಸ್ನೇಹಿತರಿಗೆ ಮೋಜು-ಮಸ್ತಿ ಮಾಡಿಸಿ ಸಂಭ್ರಮಿಸುತ್ತಿದ್ದರೋ , ಅದೇ Raghuveer ಎಲ್ಲವೂ ಇದ್ದು ಏನೂ ಇಲ್ಲದ ಹಾಗೆ ಪೂಣೆ ದಲ್ಲಿರುವ ಐವತ್ತು ರೂಪಾಯಿ, ನೂರು ರೂಪಾಯಿ ಬಾಡಿಗೆಗೆ ಸಣ್ಣ ರೂಮಿನಲ್ಲಿ ಇರಲು ಶುರುಮಾಡಿದರು.
ಅವರು ಮದುವೆಯಾದ ನಂತರ ರಘುವೀರ್ ಪಟ್ಟ ಪಾಡು ಯಾವ ಶತ್ರುಗೂ ಬರಬಾರದು. ರಘುವೀರ್ ಅವರಿಂದ ಅವಕಾಶಗಳನ್ನು ಗಿಟ್ಟಿಸಿಕೊಂಡು, ಭದ್ರವಾಗಿ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿ, ಅವರಿಂದ ಸಾಕಷ್ಟು ಹಣ ಸಂಪಾದನೆ ಮಾಡಿದವರು ಯಾರೂ ಕೂಡ ರಘುವೀರ್ ಅವರ ಕಷ್ಟಕ್ಕೆ ಕೈ ಹಿಡಿಯಲಿಲ್ಲ. ಉಂಡು, ತಿಂದು ಕುಡಿದು, ಮೋಜು – ಮಸ್ತಿ ಮಾಡಿದ ಗೆಳೆಯರು ಕೂಡ ಇವರ ಬಗ್ಗೆ ಕ್ಯಾರೆ ಅನ್ನಲಿಲ್ಲ.
ಮನೆಯವರು ನಿಶ್ಚಯಿಸಿದ ಹುಡುಗಿಯನ್ನು ತಿರಸ್ಕರಿಸಿದ್ದರಿಂದ ರಘುವೀರ್ ಅವರ ತಂದೆ, ಅಣ್ಣ ತಮ್ಮಂದಿರಿಗೆ ಇವರ ಮೇಲೆ ತುಂಬಾ ಬೇಜಾರಾಗಿತ್ತು. ಅವರು ಕೂಡ ರಘುವೀರ್ ಅವರನ್ನು ಮೊದಮೊದಲು ಸಂಪರ್ಕ ಮಾಡಲು ಪ್ರಯತ್ನಿಸಲಿಲ್ಲ. ರಘುವೀರ್ ಅವರು Shirdi ಗೆ ಬಂದು ನೆಲೆಸಿ ಮೂರು ತಿಂಗಳು ಆದಮೇಲೆ, ಇಲ್ಲಿ ಅವರ ಮನೆಯವರಿಗೆ ‘ಮಗ ಈಗ ಹೆಂಡತಿಯೊಂದಿಗೆ ಇಲ್ಲ. ಎಲ್ಲಿದ್ದಾನೋ ಏನೋ’ ಅನ್ನೋ ಆತಂಕ ಶುರುವಾಯಿತು.
America ದಲ್ಲಿ ನೆಲೆಸಿದ ರಘುವೀರ್ ಅವರ ಸಹೋದರಿಗೆ ಹೇಗೋ ಇವರು ಶಿರಡಿಯಲ್ಲಿದ್ದಾರೆ ಎಂದು ತಿಳಿದು, ಅವರ ತಂದೆಯವರಿಗೆ ವಿಷಯವನ್ನು ಮುಟ್ಟಿಸಿ, ದೂರವಾಣಿ ಮೂಲಕ ರಘುವೀರ್ ಅವರೊಂದಿಗೆ ಮಾತನಾಡಿ, ಬೆಂಗಳೂರಿಗೆ ವಾಪಸ್ ಕರೆಸಿಕೊಂಡು, ಹಿಂದೆ ಅವರಿಗೆ ನಿಶ್ಚಯಿಸಿದ Gowri ಅವರೊಂದಿಗೆ ಪುನರ್ವಿವಾಹ ಮಾಡಿಸಿದರು.
ಕಾಲ ಎಷ್ಟು ಕೆಟ್ಟದ್ದು ಅಂದ್ರೆ ರಘುವೀರ್ ಶಿರಡಿಗೆ ಬರುವ ಕೆಲ ದಿನಗಳ ಮುಂಚೆ ಅವರ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ತಾಯಿಯನ್ನು ನೋಡಲು ಮಗ ಆಸ್ಪತ್ರೆಗೆ ಹೋದಾಗ, ಅವರ ತಂದೆಗೆ ತಿಳಿಯದಂತೆ ಮಗ ರಘುವೀರ್ ಅವರಿಗೆ ತಾಯಿ ಚಿನ್ನಮ್ಮ ಅವರು ದಿಂಬಿನ ಕೆಳಗಿನಿಂದ ಒಂದಿಷ್ಟು ಹಣವನ್ನು ಕೊಟ್ಟು “ಇಟ್ಕೊ, ನಿನಗೆ ಉಪಯೋಗಕ್ಕೆ ಬರುತ್ತೆ” ಅಂತ ಹೇಳಿದ್ದರು.
ರಘುವೀರ್ ಎಷ್ಟು ದುರ್ದೈವಿ ಅಂದರೆ ತನ್ನ ತಾಯಿ ಕಂಡ ಕನಸು ಅಂದರೆ ತನ್ನ ತಮ್ಮನ ಮಗಳು Gowri ಅವರನ್ನು ರಘುವೀರ್ ವಿವಾಹವಾಗಬೇಕು ಎನ್ನುವ ಕನಸು ನನಸಾಗುವ ಸಂದರ್ಭದಲ್ಲಿ ಚಿನ್ನಮ್ಮ ನವರು ಬದುಕಿರಲಿಲ್ಲ. “ನನ್ನ ಕಷ್ಟದ ಸಮಯದಲ್ಲಿ ಒಂದಿಷ್ಟು ನೆಮ್ಮದಿ ಸಿಕ್ಕಿದ್ದು ಎಂದರೆ ಅದು Shirdi ಬಾಬನ ಸನ್ನಿಧಿಯಲ್ಲಿ..ಅವರ ದಯೆಯಿಂದಲೇ ಮತ್ತೆ ಮರಳಿ ನಾನು ನನ್ನ ತಂದೆಯ ಬಳಿ ಹೋದೆ.”
ಬಹುಶಃ ಈ ಎಲ್ಲಾ ನೋವುಗಳು ರಘುವೀರ್ ಅವರೊಳಗೆ ಇದ್ದಿದ್ದರಿಂದ ಅನ್ಸತ್ತೆ ನನ್ನ ಬಳಿ ಅವರು ಹೇಳಿದ್ದು “ಹಣ ನನಗೆ ಶತ್ರುನೋ ಸ್ನೇಹಿತನೋ ಅಂತ ಗೊತ್ತಿಲ್ಲ”..
Comments