‘Hamsalekha‘ ನಮ್ಮ ಚಂದನವನದ ನಾದಬ್ರಹ್ಮ ಅಕ್ಷರದಾತ.. ಇವರು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಬರುವ ಮುನ್ನ ವಾದ್ಯಗೋಷ್ಠಿ ಗಳಲ್ಲಿ (Orchestra) ಕೆಲಸ ಮಾಡ್ತಿದ್ರು..
ಅವರ ದಿನಚರಿ ಹೇಗಿತ್ತು ಎಂದರೆ ಸಂಜೆ ಯಾವುದಾದರೂ ಸಂಗೀತ ಕಾರ್ಯಕ್ರಮಕ್ಕೆ ಹೋದರೆ, ಅದನ್ನು ಮುಗಿಸಿ ತಡರಾತ್ರಿ ಮನೆಗೆ ಬಂದು ಮರುದಿನ ಬೆಳಗ್ಗೆಯಿಂದಲೇ ಶ್ರೀಮತಿ Latha Hamsalekha ಅವರೊಂದಿಗೆ ಮನೆ ಕೆಲಸಗಳಲ್ಲಿ ಸಹಾಯ ಮಾಡುತ್ತಾ, ಅಡಿಗೆ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಳ್ಳುತ್ತಾ, ಸಾಕಷ್ಟು ಸಮಯ ಅವರ ಶ್ರೀಮತಿ ಅವರೊಂದಿಗೆ ಕಾಲಕಳೆಯುತ್ತಿದ್ದರು..
ಹಂಸಲೇಖ ಅವರು ಚಿತ್ರರಂಗಕ್ಕೆ ಬಂದು, ‘Premaloka’ ಬಿಡುಗಡೆಯಾದ ಮೇಲೆ ಕಣ್ಣು ಮುಚ್ಚಿ ಬಿಡುವುದರೊಳಗೆ ಕನ್ನಡ ಚಿತ್ರರಂಗದ Star ಸಂಗೀತ ನಿರ್ದೇಶಕನ ಪಟ್ಟಕ್ಕೇರಿದರು.. ಬೆಳಿಗ್ಗೆ 5 ಗಂಟೆಗೆ ಅವರ ದಿನ ಪ್ರಾರಂಭವಾದರೆ, ಕೆಲಸ ಮುಗಿಯುತ್ತಾ ಇದ್ದಿದ್ದು ರಾತ್ರಿ 9:00-10:00 ಗಂಟೆಗೆ.. ಊಟ ಮಾಡಿ ದಿಂಬು ಕಡೆ ಮುಖ ಮಾಡಿ ಮಲಗುತ್ತಿದ್ದರು ನಮ್ಮ ಹಂಸಲೇಖ.
ಇದನ್ನು ಗಮನಿಸುತ್ತಾ ಬಂದ ಲತಾ ಹಂಸಲೇಖ ಅವರು ಹೀಗೆ ಅವರು ಮಲಗಲು ಹೋದಾಗ ಒಂದು ಪ್ರೀತಿಯ ಜಗಳ ಶುರುಮಾಡಿದ್ದಾರೆ.. ವಿಷಯ ಏನೆಂದರೆ “ಮೊದಲು ನೀವು ಎಷ್ಟು ಸಮಯ ನನ್ನೊಂದಿಗೆ ಕಳೆಯುತ್ತಿದ್ರಿ.. ಈಗ ನೀವು ಚಿತ್ರಗಳಲ್ಲಿ busy ಆದಮೇಲೆ, ಹಗಲು-ಇರುಳು ಅಂತ ದುಡಿತೀರ ; ಮನೆಗೆ ಬಂದ ತಕ್ಷಣ ಆಯಾಸದಿಂದ ಮಲಗಿ ಬಿಡ್ತೀರಾ.” “ನನಗೆ ಸವತಿ ಕಾಟ ಇಲ್ಲ, ಆದರೆ ನಿಮ್ಮ ನಿದ್ದೇನೆ ನನಗೆ ಸೌತಿ ಆಗಿದೆ ” ಅಂತ ಹೇಳಿದಾಗ, ಆ ನಿದಿರಾದೇವಿಯ ಮಡಿಲಲ್ಲಿ ಮಲಗಿದ್ದ ಹಂಸಲೇಖ ಅವರ ಮೆದುಳಿಗೆ ಈ ಕೆಳಗಿನ ಸಾಲುಗಳು ಹೊಳೆದವು.. ಆ ಸಾಹಿತ್ಯವೇ ‘ನಿದ್ದಿ ಯಂಬುದು ಒಂದು ದೇವತಿ, ಪ್ರೇಮಿಗಳಿಗಾಗಿ ಸವತಿ.. ಏನಾಗರತಿ ನಿನ್ನ ಸವತಿ ಬಂದರ್ ಈಗ ಏನು ಮಾಡುತ್ತಿ”.
ಈ ಪದಗಳನ್ನೇ ಬಳಸಿ S. V. Rajendra Singh Babu ಅವರ ನಿರ್ದೇಶನದ ‘ಹೂವು ಹಣ್ಣು’ ಚಿತ್ರದ ‘ನಿಂಗಿ ನಿಂಗಿ’ ಅನ್ನೋ ಗೀತೆ ‘C. Ashwath’ ಅವರ ಕಂಠಸಿರಿಯಲ್ಲಿ ಧ್ವನಿಮುದ್ರಣ ವಾಗಿದ್ದು..
ರವಿ ಕಾಣದ್ದನ್ನು ಕವಿ ಕಂಡ, ನಿದ್ದೆಯಲ್ಲೂ ದಾರಕ್ಕೆ ಮುತ್ತು ಪೋಣಿಸಿದಂತೆ, ಅಕ್ಷರಗಳನ್ನ ಪೋಣಿಸಿದ ಈ ಅಕ್ಷರ ಬ್ರಹ್ಮನ ಕಲ್ಪನೆಗೆ ಮಿತಿಯೇ ಇಲ್ಲ..
Comments