ನೂರೊಂದು ನೆನಪು

“Chaitrada Premanjali “- ಗಾಂಧಿನಗರದ ಗಲ್ಲಿಯೊಳಗೆ

0
Chaitrada Premanjali

ಕಲಾವಿದರ ಪ್ರತಿಭೆ ಹಾಗೂ ಶ್ರಮ, ತಂತ್ರಜ್ಞರ ಬೆವರು ಮತ್ತು ಪರಿಶ್ರಮದಿಂದ ‘Chaitrada Premanjali’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿ ಇತರೆ ಪೋಸ್ಟ್ ಪ್ರೊಡಕ್ಷನ್ ಹಾಗೂ ಇನ್ನೆಲ್ಲಾ ಕೆಲಸಗಳನ್ನು ಮುಗಿಸಿ ಪ್ರಥಮ ಪ್ರತಿ ಸಿದ್ಧವಾಯಿತು .

ವ್ಯಾಪಾರಕ್ಕೆಂದು ಗಾಂಧಿನಗರಕ್ಕೆ ಕಾಲಿಟ್ಟಾಗ Raghuveer ಅವರಿಗೆ ನಿಜವಾದ ಅಗ್ನಿಪರೀಕ್ಷೆ, ಸತ್ವಪರೀಕ್ಷೆ ಶುರುವಾಯಿತು. ಸಾಕಷ್ಟು ಜನ ಈ ಚಿತ್ರವನ್ನು ಹೀಯಾಳಿಸಿದರು. “ಈ ಹೀರೋದು ಒಂದು ಮುಖಾನ, ಇದೊಂದು ಸಿನಿಮಾನಾ, ಈ ಸಿನಿಮಾವನ್ನು ದುಡ್ಡುಕೊಟ್ಟು ನೋಡೋರು ಹುಚ್ಚರು” ಅಂತ ಅವಮಾನಿಸಿದರು.

ಸಾಧಾರಣವಾಗಿ Star ಕಲಾವಿದರ ಚಿತ್ರವು ಬಿಡುಗಡೆಗೆ ಸಿದ್ಧವಾದಾಗ ಬರೀ ಜಾಹೀರಾತು ಹಾಗೂ ಪ್ರಚಾರಗಳನ್ನು ನೋಡಿಯೇ ವ್ಯಾಪಾರ ಆಗುತ್ತೆ. ಹೊಸ ತಂಡದ ಹೊಸ ಚಿತ್ರ ಬಂದಾಗ ವ್ಯಾಪಾರಕ್ಕಾಗಿ ಬಿಡುಗಡೆಯ ಮುಂಚೆ ಹಲವರಿಗೆ ಚಿತ್ರವನ್ನು ಪ್ರದರ್ಶಿಸಬೇಕಾಗುತ್ತದೆ. ‘ಚೈತ್ರದ ಪ್ರೇಮಾಂಜಲಿ’ ಬಿಡುಗಡೆಗೂ ಮುನ್ನ ಸುಮಾರು 40 ಪ್ರದರ್ಶನಗಳನ್ನು ವಿತರಕರಿಗೆ ಹಾಕಲಾಗಿತ್ತು. ಯಾರು ಕೂಡ ಚಿತ್ರವನ್ನು ಬಿಡುಗಡೆ ಮಾಡುವ ಧೈರ್ಯ ಮಾಡಲಿಲ್ಲ.

Raghuveer

ಒಬ್ಬ ಶಿವಮೊಗ್ಗ ಪ್ರಾಂತ್ಯದ ವಿತರಕ ಬಂದು “ನಿಮ್ಮ ಸಿನಿಮಾ ನೋಡ್ಬೇಕು, ಶೋ ಹಾಕಿ ” ಅಂದ್ರಂತೆ. ಅಂದಿನ ಕಾಲದಲ್ಲಿ ಒಂದು ಖಾಸಗಿ ಚಿತ್ರ ಪ್ರದರ್ಶನಕ್ಕೆ ಸುಮಾರು 600 ಇಂದ 700 ರೂಪಾಯಿ ಖರ್ಚಾಗುತ್ತಿತ್ತು. ಇದರ ಹಿಂದೆಯೇ ಸುಮಾರು 30 ರಿಂದ 40 ಪ್ರದರ್ಶನ ಹಾಕಿದ್ದರಿಂದ ತುಂಬಾ ಹಣ ವೆಚ್ಚವಾಗಿತ್ತು. ಆದರೂ ಸಹ “ಯಾರೋ ಬಂದಿದ್ದಾರೆ, ನನ್ನ ಚಿತ್ರ ಬಿಡುಗಡೆಯಾಗಬೇಕು, ಅದನ್ನು ಜನ ನೋಡಬೇಕು” ಅನ್ನೋ ಆಸೆಯಿಂದ, ಹಾಗೋ ಹೀಗೋ ಪ್ರದರ್ಶನದ ವ್ಯವಸ್ಥೆ ಆಯಿತು. ಸಿನಿಮಾ ಶುರುವಾಗಿ ಸುಮಾರು 45 ನಿಮಿಷದ ನಂತರ ಚಿತ್ರ ನೋಡಲು ಬಂದ ವಿತರಕರು ಕುರ್ಚಿ ಮೇಲೆ ಇಲ್ಲ ; ಪರದೆ ಮೇಲೆ ಚಿತ್ರ ಮಾತ್ರ ಓಡುತ್ತಿತ್ತು. “ಎಲ್ ಹೋದ್ರು?” ಅನ್ನೋ ಪ್ರಶ್ನೆಗೆ ಉತ್ತರ, ಅವರು ವಾಪಸ್ ಬಸ್ ಹತ್ತಿ ಶಿವಮೊಗ್ಗ ಗೆ ತೆರಳಿದ್ದರು. ಅವರು ಸಿನಿಮಾ ನೋಡಲು ಬಂದಿದ್ದ ಉದ್ದೇಶ ವ್ಯಾಪಾರಕ್ಕಲ್ಲ, ಅವರ ಬಸ್ಸಿಗೆ ಒಂದು ಗಂಟೆ ಸಮಯವಿತ್ತು, ಅದಕ್ಕೆ ಕಾಲಹರಣ ಮಾಡೋಕೆ, I mean time pass ಮಾಡೋಕೆ ‘ಚೈತ್ರದ ಪ್ರೇಮಾಂಜಲಿ’ ಚಿತ್ರ ಹಾಕಿಸಿಕೊಂಡು ನೋಡಿದ್ದಾರೆ.

ಈ ಎಲ್ಲ ಅನುಭವಗಳಿಂದ ನಿರಾಶೆಗೊಂಡ ರಘುವಿರ್ ಅವರಿಗೆ Ramu ಅವರು ಈ ಸಿನಿಮಾ ನೋಡಬೇಕು ಅಂತ ಕೇಳ್ತಾರೆ. ಅವರು ಚಿತ್ರರಂಗದಲ್ಲಿ ಅದರಲ್ಲೂ ವಿತರಣೆಯ ವಿಭಾಗದಲ್ಲಿ ಅಂಬೆಗಾಲಿಡುತ್ತಿದ್ದ ಸಮಯ. ರಘುವೀರ್ ಅವರಿಗೆ ಅನ್ನಿಸಿದ್ದು “ಎಂಥ ದೊಡ್ಡ ವಿತರಕರೇ ಬಂದು ಸಿನಿಮಾ ತಗೊಳ್ಳದೆ ಹೋಗಿದ್ದಾರೆ. ಇನ್ನು ಇವರು ತೀರ ಹೊಸಬರು. ಇವರು ವ್ಯಾಪಾರ ಮಾಡ್ತಾರಾ? ” ಅನ್ನೋ ಅನುಮಾನ ತುಂಬಾ ಇತ್ತಂತೆ.
ನಿಮ್ಮೆಲ್ಲರ ಗಮನಕ್ಕೆ ಅಷ್ಟುಹೊತ್ತಿಗಾಗಲೇ ‘ಚೈತ್ರದ ಪ್ರೇಮಾಂಜಲಿ’ ಸಿನಿಮಾದ ಧ್ವನಿಸುರುಳಿ ಬಿಡುಗಡೆಯಾಗಿ Audio Super Hit ಆಗಿತ್ತು.

ಅಂದಿನ ಕಾಲದಲ್ಲಿ ಸುಮಾರು ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಆದ ‘ರಮಣಶ್ರೀ ಕಂಫರ್ಟ್ಸ್’ ನಲ್ಲಿ Rebel Star Ambarish, ಕನಸಿನ ರಾಣಿ Malashri ಮುಖ್ಯ ಅತಿಥಿಗಳಾಗಿ ಬಂದು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದ್ದರು.
ರಾಮು ಅವರು ಕೂಡ ಇದರ ಬಗ್ಗೆ ಎಲ್ಲಾ ನೆನೆಸಿಕೊಂಡು ಸಿನಿಮಾ ಪ್ರದರ್ಶನ ನೋಡಿದ ಮೇಲೆ “ಹಾಡುಗಳು ಅದ್ಭುತವಾಗಿದೆ. ನಾನು ಬಿ.ಕೆ.ಟಿ ಏರಿಯಾನಾ ಅಂದ್ರೆ Bangalore, Kolar, Tumkur, ಈ ಪ್ರಾಂತ್ಯದ Distribution ಮಾಡಿಕೊಡ್ತೀನಿ, ದುಡ್ಡು ಕೊಟ್ಟು ಖರೀದಿ ಮಾಡೋಕೆ ನನಗೆ ಸ್ವಲ್ಪ ಕಷ್ಟ” ಅಂತ ಹೇಳಿದ್ರು .


ಆಗ ರಘುವೀರ್ ಅವರು “ಸದ್ಯ ಯಾರೋ ಪುಣ್ಯಾತ್ಮ ಇದನ್ನಾದರೂ ಮಾಡಲು ಮುಂದೆ ಬಂದರಲ್ಲ” ಎಂದು ಸಿನಿಮಾವನ್ನ ಖುಷಿಯಾಗಿ ಬಿ.ಕೆ.ಟಿ ಏರಿಯಾಗಳಲ್ಲಿ ರಾಮು ಅವರು ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಂಡರಂತೆ. ಇದಾದ ನಂತರ ರಾಮು ಅವರೇ ಚಿತ್ರದುರ್ಗ ಹಾಗೂ ಬಳ್ಳಾರಿ ಏರಿಯಾಗೆ ಮಹೇಶ್ ಕೊಠಾರಿ ಅನ್ನೋ ಒಬ್ಬ ವಿತರಕರನ್ನು ಕರೆದುಕೊಂಡು ಬಂದು ವ್ಯಾಪಾರ ಮಾಡಿಸಿದ್ದಾರೆ. ಎರಡು ಲಕ್ಷ ರೂಪಾಯಿಗೆ ಒಪ್ಪಂದವಾಗಿ ಸಿನಿಮಾ ಗೆದ್ದರೆ ಇನ್ನು ಐವತ್ತು ಸಾವಿರ ಹೆಚ್ಚಾಗಿ ಕೊಡುವುದಾಗಿ ಮಾತುಕತೆ ಆಯ್ತು.


ಮೈಸೂರು ವಿಭಾಗದ ವಿತರಣೆಯನ್ನು ಮಾಡಲು ಯಾರು ಬರಲಿಲ್ಲ. ಆಗ ರಘುವೀರ್ ತಾವೇ ಸ್ವತಹಃ ಮೈಸೂರು ಏರಿಯಾದ ವಿತರಣೆ ಮಾಡೋಣ ಎಂದು ತೀರ್ಮಾನಿಸಿದರು. “ಎರಡು ಪ್ರಾಂತ್ಯಕ್ಕೆ ವಿತರಕರು ಸಿಕ್ಕಿದ್ದಾರೆ, ಅವರ ಹೆಸರಿನೊಂದಿಗೆ ಪತ್ರಿಕಾ ಜಾಹೀರಾತು ಕೊಟ್ಟರೆ ಮುಂದಿನ ಏರಿಯಾಗಳ ವ್ಯಾಪಾರಕ್ಕೆ ವಿತರಕರು ಬರೋದಕ್ಕೆ ಒಂದು Goodwill ಸಿಗತ್ತೆ” ಅನ್ನೋ ಲೆಕ್ಕಾಚಾರ ರಘುವೀರ್ ಅವರದಾಗಿತ್ತು.

March 1st 1991 ‘ಚೈತ್ರದ ಪ್ರೇಮಾಂಜಲಿ’ ಚಿತ್ರದ ಬಿಡುಗಡೆ ದಿನಾಂಕ ಪತ್ರಿಕೆಗಳಲ್ಲಿ ಪ್ರಕಟವಾಯಿತು. ‘ಅಪರ್ಣ’ ಮುಖ್ಯ ಚಿತ್ರಮಂದಿರ ವಾಗಿ Confirm ಆಯ್ತು. ಆಗ ಆ ಚಿತ್ರಮಂದಿರದ ಮಾಲೀಕರು ಒಂದು ಶರತ್ತು ಹಾಕಿದರು “ನಿಮ್ಮ ಚಿತ್ರ ಬಿಡುಗಡೆಯಾಗಿ ಎರಡು ಮೂರು ವಾರಕ್ಕೆ Amitabh Bacchan ಅವರ Khuda Gawa ಸಿನಿಮಾ ರಿಲೀಸ್ Date ಇದೆ. ನಿಮ್ಮ ಚಿತ್ರ ಯಶಸ್ವಿ ಪ್ರದರ್ಶನವಾಗುತ್ತಿದ್ದರೂ ಸಹ ಆ ಚಿತ್ರದ ಬಿಡುಗಡೆಯ ದಿನ ನಿಮ್ಮ ಸಿನಿಮಾವನ್ನ ತೆಗೆಯುತ್ತೇವೆ ” ಎಂದು ಹೇಳಿದ್ದರು.

ಇನ್ನು ಎಂ.ಎಂ.ಸಿ.ಎಚ್ ವಿಭಾಗ ಅಂದರೆ Mysore, Mandya, Coorg, Hassan ಪ್ರಾಂತ್ಯಗಳು. ಈ ಪ್ರದೇಶಗಳಲ್ಲಿ ಬಿಡುಗಡೆಗೆ ವ್ಯವಸ್ಥೆ ಮಾಡಿಕೊಂಡು ಆಗಿತ್ತು. ದುರಾದೃಷ್ಟವೆಂದರೆ ‘ಚೈತ್ರದ ಪ್ರೇಮಾಂಜಲಿ’ ಚಿತ್ರಕ್ಕೆ ಮೈಸೂರಿನಲ್ಲಿ ಬಿಡುಗಡೆಗೆ ಸರಿಯಾದ ಚಿತ್ರಮಂದಿರಗಳು ಸಿಗಲಿಲ್ಲ.
Opera ಚಿತ್ರ ಮಂದಿರ ಮಾತ್ರ ಲಭ್ಯವಿತ್ತು. ರಘುವೀರ್ ಅವರು ಮೈಸೂರಿನಲ್ಲಿ ಕಾಲೇಜ್ ಅಭ್ಯಾಸ ಮಾಡಿದ್ದರಿಂದ Opera ಚಿತ್ರಮಂದಿರದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅಲ್ಲಿ ಮೊದಲ ದರ್ಜೆಯ ಸಿನಿಮಾಗಳು ಬಿಡುಗಡೆಯಾಗುತ್ತಿದ್ದದ್ದು ತೀರಾ ಕಡಿಮೆ. ಆದರೂ ಧೈರ್ಯ ಮಾಡಿ ರಘುವೀರ್ ಅಲ್ಲೇ ಸಿನಿಮಾ ಬಿಡುಗಡೆ ಮಾಡೋದು ಅಂತ ತೀರ್ಮಾನಿಸಿದರು. 

ಇನ್ನು ಹಾಸನಕ್ಕೆ ಬರುವುದಾದರೆ Imperial ಚಿತ್ರಮಂದಿರದವರೆ “ಮುಂಗಡ ಹಣವನ್ನು ಕೊಡುತ್ತೇವೆ, ನಮ್ಮ ಚಿತ್ರಮಂದಿರಕ್ಕೆ ಸಿನಿಮಾ ಕೊಡಿ” ಎಂದು ಕೇಳಿಕೊಂಡಿದ್ದರು. ಸಾಕಷ್ಟು ಜನ “Imperial ಚಿತ್ರಮಂದಿರಕ್ಕೆ ಬರಬೇಡಿ, ಅಲ್ಲಿ ಬಂದರೆ ನಿಮ್ಮ ಸಿನಿಮಾ ಓಡಲ್ಲ” ಎಂದು ರಘುವಿರ್ ಅವರಿಗೆ ಹೇಳಿದ್ದರು. ವಿತರಣೆಯ ವ್ಯವಹಾರದಲ್ಲಿ ಅಷ್ಟಾಗಿ ಅರಿವಿಲ್ಲದ ರಘುವೀರ್ ಅವರಿಗೆ ಆ ಕ್ಷಣದಲ್ಲಿ ಯೋಚನೆ ಬಂದಿದ್ದು “ಬಿಡುಗಡೆಗೆ ನಾನು ಸಾಲ ಮಾಡಬೇಕು. ಐವತ್ತು ಸಾವಿರ ರೂಪಾಯಿಗೆ ಹದಿನೈದು ಸಾವಿರ ರೂಪಾಯಿ ಬಡ್ಡಿ ಕಟ್ಟಬೇಕು.

Raghuveer

ಬೇರೆ ಎಲ್ಲೋ ಸಾಲ ಪಡೆಯುವುದರ ಬದಲು, ಹೇಗಿದ್ದರೂ Imperial ಥೀಯೇಟರ್ ನವರು Advance ಐವತ್ತು ಸಾವಿರ ಕೊಡುವುದರಿಂದ ಸಾಲ ಮಾಡೋದು ತಪ್ಪತ್ತೆ” ಅನ್ನೋ ಉದ್ದೇಶದಿಂದ ಇದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಖಾತ್ರಿ ಮಾಡಿಕೊಂಡರು. ಸಿನಿಮಾ ಪ್ರಚಾರಕ್ಕೆ ಅವಾಗಿದ್ದ ಮಾಧ್ಯಮಗಳೆಂದರೆ ಪತ್ರಿಕೆ, ಪೋಸ್ಟರ್ಸ್, Radio, ಹಾಗೂ Doordashan. ದೂರದರ್ಶನದಲ್ಲಿ ಪ್ರತಿ ಗುರುವಾರ ರಾತ್ರಿ ‘ಚಿತ್ರಮಂಜರಿ’ ಅನ್ನೋ ಅತ್ಯಂತ ಜನಪ್ರಿಯ ಹಾಡುಗಳ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆ ಕಾರ್ಯಕ್ರಮದಲ್ಲಿ ಹಾಡನ್ನು ಹಾಕಬೇಕೆಂದರೆ ದೂರದರ್ಶನದವರಿಗೆ ಒಂದೊಂದು ಹಾಡಿಗೆ ಏಳು ಸಾವಿರ ರೂಪಾಯಿ ಕಟ್ಟಬೇಕಾಗಿತ್ತು. ‘ಚೈತ್ರದ ಪ್ರೇಮಾಂಜಲಿ’ ಚಿತ್ರದ ಬಿಡುಗಡೆಯ ಹಿಂದಿನ ದಿನ (ಗುರುವಾರ) ಚಿತ್ರಮಂಜರಿಯಲ್ಲಿ ಈ ಚಿತ್ರದ ಎರಡು ಹಾಡುಗಳು ಬ್ಯಾಕ್ ಟು ಬ್ಯಾಕ ಪ್ರಸಾರವಾದವು. ಮರುದಿನ March 1 ಸಿನಿಮಾ ಬಿಡುಗಡೆ ಆಯಿತು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ‘ಚೈತ್ರದ ಪ್ರೇಮಾಂಜಲಿ’ ಚಿತ್ರವು ದಾಖಲೆಯನ್ನೇ ಸೃಷ್ಟಿಸಿತ್ತು. S.Narayan ಹಾಗೂ ರಘುವೀರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬಹು ಬಲವಾದ ಅಡಿಪಾಯ ಹಾಕಿಕೊಟ್ಟಿತು.
‘Khuda Gawa’ ಚಿತ್ರ ಕೂಡ ಈ ಚಿತ್ರ ಬಿಡುಗಡೆಯಾಗಿ 30 ದಿನಗಳ ನಂತರ ಬಿಡುಗಡೆಯಾಯಿತು.

Raghuram

“Smt Pattammal Veeraswamy – ನನ್ನ ಅವರ ಮೊದಲ ಭೇಟಿ”

Previous article

Hamsalekha ಅವರು ನಿದ್ದೆಯಲ್ಲಿ ಗೀಚಿದ ಸಾಲು ಯಾವುದು..??

Next article

You may also like

Comments

Leave a reply

Your email address will not be published. Required fields are marked *

4 × one =