ಬರವಣಿಗೆಯ ಮೆರವಣಿಗೆ

My Birthday Lesson !! ನನ್ನ ಹುಟ್ಟು ಹಬ್ಬದ ಪಾಠ !!

0

ಜುಲೈ 9 ನನ್ನ ಹುಟ್ಟುಹಬ್ಬ. ಈಗ ಮೊನ್ನೆ ಅಷ್ಟೇ ನನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡೆ. ಈ ಒಂದು Blog ನಲ್ಲಿ ಏನಾದರೂ ವಿಚಾರವನ್ನು ಅಥವಾ ನನ್ನ ಅನುಭವಗಳನ್ನ, ನೆನಪುಗಳನ್ನ ನಿಮ್ಮೊಡನೆ ಹಂಚಿಕೊಳ್ಳಬೇಕು ಅಂತ ನನ್ನ ಮನಸ್ಸು ಚಡಪಡಿಸುತ್ತೆ.. ಆಗ ನನಗೆ ಜ್ಞಾಪಕ ಬಂದಿದ್ದು ಈ ಒಂದು incident

ಈಗ ನನಗೆ 46 ವರ್ಷ, 17 – 18 ವರ್ಷಗಳ ಹಿಂದೆ, ಅಂದರೆ ನನಗೆ ಸುಮಾರು 28 – 29 ವರ್ಷಗಳಿರಬಹುದು..ಆ ವಯಸ್ಸಿನಲ್ಲಿ ನನಗೆ ಹುಟ್ಟುಹಬ್ಬ ಅಂದರೆ ಒಳ್ಳೆ ಬಟ್ಟೆ ಹಾಕೋಬೇಕು, ದೊಡ್ಡ ಹೋಟೆಲ್ ಗೆ ಹೋಗಿ ಊಟ ಮಾಡಬೇಕು ಇಂತಹ ಹುಚ್ಚು ಆಸೆಗಳು. ಸಣ್ಣ ವಯಸ್ಸಿನಲ್ಲಿ ಅಪ್ಪ ಅಮ್ಮ ಒಳ್ಳೆ ಬಟ್ಟೆಗಳು ಕೊಡ್ಸೋರು, ಅವರ Pocket ಎಷ್ಟು permit ಮಾಡ್ತಿತ್ತೋ, ಅಂತ ಕಡೆ ಹೋಗಿ ಊಟ ಮಾಡ್ತಿದ್ವಿ. ದಿನ ಕಳೆದಂತೆ ನಾನು ಸಂಪಾದನೆ ಮಾಡಲು ಶುರು ಮಾಡಿದ ಮೇಲೆ ‘ನನ್ನ ದೊಡ್ಡ ಕುದುರೆ ಚೇಷ್ಟೆಗಳು’ ಜಾಸ್ತಿ ಆಯ್ತು..

ಈಗ main ವಿಷಯಕ್ಕೆ ಬರ್ತೀನಿ. 2007 ಜುಲೈ 9, ನನ್ನ ಹುಟ್ಟು ಹಬ್ಬದ ದಿನ ಸಂಜೆ ನಾನು, ನನ್ನ ಹೆಂಡತಿ, ನನ್ನ ದೊಡ್ಡ ಮಗಳು, ಜೊತೆಗೆ ಒಂದು ಮೂರು ಜನ ಸ್ನೇಹಿತರು ಅಂದಿನ ಸಮಯದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಆದ Gold Finch ಗೆ ಹೋಗಿದ್ವಿ..ಆಗ ಅಲ್ಲಿ ಈ ‘barbeque’ concept ಹೊಸದಾಗಿ ಶುರುವಾಗಿತ್ತು. ನನ್ನ ಶ್ರೀಮತಿ, ನಾನು ಹಠ ಹಿಡಿದಿದ್ದಕ್ಕೆ, ಆಸೆ ಪಟ್ಟಿದ್ದಕ್ಕೆ, ಎಲೆ ತಿಂಗಳಿಂದ ನನ್ನ salary ಅಲ್ಲಿ ಒಂದಿಷ್ಟು ಹಣ save ಮಾಡಿ 3,500 ರೂಪಾಯಿವರೆಗೂ ಸಂಗ್ರಹ ಮಾಡಿ ನನ್ನ Birthday ಗೆ ರಾತ್ರಿಯ Dinner ಅಲ್ಲೇ ಮಾಡಬೇಕು ಅಂತ plan ಮಾಡಿದ್ದರು.

ಅಲ್ಲಿ Veg and non veg ಎರಡು ಇದ್ದಿದ್ದರಿಂದ ನನ್ನ ಅಪ್ಪ ಅಮ್ಮ ತಾವು ಬರಲ್ಲ ಅಂತ ಮೊದಲೇ ತಿಳಿಸಿದ್ದರು. ನಾವು ಮೂರು ಜನ ( ನಾನು, ನನ್ನ ಹೆಂಡತಿ, ನನ್ನ ದೊಡ್ಡ ಮಗಳು) ನನ್ನ ಸ್ನೇಹಿತ ಅವರ ಶ್ರೀಮತಿ ಹಾಗೂ ಮತ್ತೊಬ್ಬ ಸ್ನೇಹಿತ, ಒಟ್ಟು ಆರು ಜನ ಸಂಜೆ Dinner ಗೆ ಹೊರಟವು..
ಆ ಹೋಟೆಲ್ನಲ್ಲಿ, ಅವತ್ತಿನ ದಿಸದಲ್ಲಿ Dinner buffet price 400 + tax..
ಹೋದ್ವಿ , ಹೋಗಿ buffet plate ನ ಕೈಗೆ ತೊಗೊಂಡು ಬಹಳ ಸಂತೋಷವಾಗಿ ನನ್ನ Birthday celebration ಮಾಡ್ತಾ ಇದ್ವಿ. ಅಲ್ಲಿ ನನ್ನ ಸ್ನೇಹಿತ ಒಬ್ಬ Buffet ಅಲ್ಲಿ ಇರೋದರ ಜೊತೆಗೆ ಕೆಲವು sweets ಹಾಗೂ ಕೆಲವು Non Veg dishes ನ extra order ಮಾಡಿದ್ದ.. ಹೀಗಾಗುತ್ತೆ ಅನ್ನೋದು ನಮ್ಮ ತಲೆಯಲ್ಲಿ ಇರಲಿಲ್ಲ.. Bill ಬಂದಾಗ ಎಷ್ಟಾಗಿದೆ ಅಂತ ನೋಡಿಕೊಳ್ಳೋಣ ಅಂತ ನಾವು relax ಆಗಿ dinner ಮುಗಿಸಿದ್ವಿ

ನಂತರ. Bill ಬಂತು. ಒಟ್ಟು 4200 ರೂಪಾಯಿಯ bill ಅಚ್ಚುಕಟ್ಟಾಗಿ ನಮ್ಮ ಮುಂದೆ ಬಂದು ಕೂತ್ಕೋತು. Planning ಮಾಡಿ ನಮ್ಮ pocket ನಲ್ಲಿ ಈ party ಗೆ ಇರೋದು 3500.. Vallet Parking ಗೆ, ಊಟ ಮುಗಿಸಿ ಮನೆಗೆ ಹೋಗುವ ಮುನ್ನ magai paan ತೆಗೆದುಕೊಂಡು ಹೋಗೋಕೆ ಇನ್ನೊಂದು 500 ರೂಪಾಯಿ ಇತ್ತು.. ಇಷ್ಟೆಲ್ಲ ಸೇರಿಸಿದರು ಇನ್ನ 200 ರೂಪಾಯಿಯಲ್ಲಿ Bill shortage ಇದೆ.

Dinner ಗೆ ಅಂತ ಕರೆದಿರುವ ಸ್ನೇಹಿತರ ಬಳಿ 200 ರೂಪಾಯಿ Shortage ಆಗಿದೆ ಅಂತ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ನನ್ನ Debit card ಕೂಡ ಅಂದು ನನ್ನ purse ನಲ್ಲಿ ಇರಲಿಲ್ಲ.. Gold finch ಹೋಟೆಲ್ ಗು ನಮ್ಮ ಮನೆಗೂ ತುಂಬಾ ಹತ್ತಿರದ distance.. Bill ನೋಡಿದ ತಕ್ಷಣ ನಾನು ನನ್ನ ಹೆಂಡತಿಯ ಕಿವಿಯಲ್ಲಿ 10 ನಿಮಿಷ ಇವರ ಹತ್ತಿರ ಮಾತಾಡ್ತಾ ಇರು, ನಾನು ಮನೆಗೆ ಹೋಗಿ ಬರ್ತೀನಿ ಅಂತ ಹೇಳಿ, ನನ್ನ ಸ್ನೇಹಿತರ ಹತ್ತಿರ “ಇಲ್ಲೇ ETV office ಬಳಿ ನನ್ನ ಸಿನಿಮಾ ಸ್ನೇಹಿತರು ಬಂದಿದ್ದಾರೆ, 10 ನಿಮಿಷ ವಾಪಸ್ ಬರ್ತೀನಿ” ಎಂದು ಸುಳ್ಳು ಹೇಳಿ, ನನ್ನ bike ಹತ್ತಿಕೊಂಡು, ಮನೆಗೆ ಬಂದು, ನನ್ನ ಅಮ್ಮನ ಬಳಿ 500 ರೂಪಾಯಿ ಇಸ್ಕೊಂಡು, ಏನು ಯತ್ತಾ ಅಂತ ಅವರಿಗೇನು ಹೇಳದೆ, immediate ಆಗಿ Gold Finch ಗೆ ವಾಪಾಸ್ ಬಂದು, Bill ಅನ್ನು ಪಾವತಿಸಿ, ನನ್ನ ಸ್ನೇಹಿತರಿಗೆ ಒಂದು ಪ್ರೀತಿಯ ಅಪ್ಪುಗೆಯ ಕೊಟ್ಟು, ಅವರನ್ನು ಅವರ ಮನೆಯ ಬಳಿ ಕಳಿಸಿ, ನಾನು, ನನ್ನ ಶ್ರೀಮತಿ, ನನ್ನ ಮಗು ಅಂದಿನ ನನ್ನ ಐರಾವತ ‘KA 04 H 1785’ bike ನ ಹತ್ತಿ ಮನೆ ಕಡೆ ಹೋಗುವಾಗ ಆಗಿದ ಆಭಾಸದ ಬಗ್ಗೆ ಮಾತನಾಡಿಕೊಂಡು ಹೊರಟವು.

ನಾವಿಬ್ಬರು ಒಂದು ಕಲಿತ ಪಾಠ ‘ಹಾಸಿಗೆ ಇದ್ದಷ್ಟು ಕಾಲು ಚಾಚು, Pocket ನಲ್ಲಿ ಇರುವ ದುಡ್ಡು ನೋಡಿ ಖರ್ಚು ಮಾಡು’
ಯಾರನ್ನು ಮೆಚ್ಚಿಸುವುದಕ್ಕೆ, Unwanted Status symbol ಗೆ, ಈ ರೀತಿ ಪಜಿೀತಿಗೆ ಸಿಲುಕಬಾರದು.
ಮೊನ್ನೆ ನನ್ನ ಹುಟ್ಟು ಹಬ್ಬದ ದಿನ ಈ incident ಜ್ಞಾಪಕ ಬಂತು ಅದಕ್ಕೆ ನಿಮ್ಮೊಡನೆ share ಮಾಡಿಕೊಂಡೆ

Raghuram

‘Soundarya’ ಭಾರತೀಯ ಚಿತ್ರರಂಗದ ಅಪರೂಪದ ವೈಡೂರ್ಯ

Previous article

Balakrishna ಅವರ ಬಗ್ಗೆ ಒಂದು ಮುಚ್ಚಿಹೋದ ಸತ್ಯ ಕಥೆ..

Next article

You may also like

Comments

Leave a reply

Your email address will not be published. Required fields are marked *

four × three =