ಕನ್ನಡ ಚಿತ್ರಗಳು ಭಾರತದ ಚಲನಚಿತ್ರ ಮಾರುಕಟ್ಟೆಗಳಿಗೆ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.. Dr Rajkumar ಅವರ ‘ಬಂಗಾರದ ಮನುಷ್ಯ’ ಸಿನಿಮಾವನ್ನ ವಿದೇಶದಲ್ಲಿ ಪ್ರದರ್ಶಿಸಿ ಅಣ್ಣಾವ್ರಿಗೆ ಕೆಂಟುಕಿ ಕರ್ನಲ್ ಎಂಬ ಬಿರುದು ನೀಡಿ ಗೌರವಿಸಿದ್ದರು.. ಇನ್ನು ದ್ವಾರಕೀಶ್ ಅವರು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ London ನ ಪ್ರತಿಷ್ಠಿತ Studio ಒಂದರಲ್ಲಿ ಅವರ ನಿರ್ಮಾಣದ ‘ಆಫ್ರಿಕಾದಲ್ಲಿ ಶೀಲಾ’ ಎಂಬ ಚಿತ್ರದ Song Recording ನೆರವೇರಿಸಿದ ಸಾಹಸಿ ನಿರ್ಮಾಪಕ.
ಇನ್ನು ಕನ್ನಡದ ಮೊದಲ Pan India ಸಿನಿಮಾ ಅಂತ ಹೆಮ್ಮೆಯಿಂದ ಗರ್ವದಿಂದ ಕನಸುಗಾರ Dr.V. Ravichandran ಅವರ ಒಬ್ಬ ಅಭಿಮಾನಿಯಾಗಿ ಹೇಳುವುದಾದರೆ 04 ಭಾಷೆಗಳಲ್ಲಿ, ಏಕಕಾಲದಲ್ಲಿ, ಆ ಆ ರಾಜ್ಯದ ಕಲಾವಿದರನ್ನು ಬಳಸಿಕೊಂಡು ತೆರೆಗೆ ತಂದಂತ ಚಿತ್ರ Sri.N. Veeraswamy ನಿರ್ಮಾಣದ, ಈಶ್ವರಿ ಸಂಸ್ಥೆಯ ಹೆಮ್ಮೆಯ ಕೊಡುಗೆ ‘Shanti Kranti ‘.
ಈ ಚಿತ್ರದ ಮುಹೂರ್ತ ನಡೆದ ಸಂದರ್ಭದ ಬಗ್ಗೆ ಒಂದು ಸಣ್ಣ ಕಥೆ ಹೇಳುವುದಕ್ಕೆ ಇಷ್ಟಪಡುತ್ತೇನೆ.. ಮುಂಬೈ, ಚೆನ್ನೈ, ಆಂಧ್ರ ಪ್ರದೇಶ್.. ಈ ಎಲ್ಲಾ ರಾಜ್ಯಗಳಿಂದ ಪ್ರತಿಷ್ಠಿತ ಪತ್ರಿಕೆಗಳ ಪತ್ರಕರ್ತರ ದಂಡು.. ನಮ್ಮ ರಾಜಧಾನಿ ಬೆಂಗಳೂರಿಗೆ ಕರೆಸುವ ವ್ಯವಸ್ಥೆ.. ಆಗಿನ ಕಾಲದಲ್ಲಿ ಶ್ರೀ. ಏನ್. ವೀರಸ್ವಾಮಿ ಅವರ Planning ಹಾಗೂ Press Itinery ಹೇಗಿತ್ತೆಂದರೆ:
Day 1 : ಬೆಂಗಳೂರಿಗೆ ಆಗಮನ. ಬೆಂಗಳೂರಿನ ವಿವಿಧ ಪಂಚತಾರಾ ಹೋಟೆಲ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ( ಬೇರೆ ಬೇರೆ ರಾಜ್ಯದ ಪತ್ರಕರ್ತರಿಗೆ ). ಸಂಜೆ 5 ಗಂಟೆಗೆ ಎಲ್ಲರೂ ಒಟ್ಟಾಗಿ ಸೇರಿ ನಮ್ಮೂರಿನ ಜನಾರ್ಧನ್ ಹೋಟೆಲಿನಲ್ಲಿ ಉಪಹಾರ. ಸಂಜೆ 7 ಗಂಟೆಗೆ ಬೆಂಗಳೂರಿನ ಪಲ್ಲವಿ ಚಿತ್ರಮಂದಿರದಲ್ಲಿ ‘ಪ್ರೇಮಲೋಕ’ ಚಿತ್ರದ ವೀಕ್ಷಣೆ (Preview). ಸಿನಿಮಾ ಮುಗಿದ ನಂತರ ಇನ್ನೊಂದು ಪಂಚತಾರಾ ಹೋಟೆಲಿನಲ್ಲಿ Cocktail Party.
DAY 2: ಪತ್ರಕರ್ತರು ತಂಗಿದ್ದ ಹೋಟೆಲಿನಲ್ಲಿ Breakfast ಹಾಗೂ Lunch. ಸಂಜೆ 5 ಗಂಟೆಗೆ MTR Hotel ನಲ್ಲಿ ಸಂಜೆಯ ಉಪಹಾರಕ್ಕಾಗಿ ಭೇಟಿ, ನಂತರ ಏಳು ಗಂಟೆಗೆ ಅದೇ ಪಲ್ಲವಿ ಚಿತ್ರಮಂದಿರದಲ್ಲಿ ರಣಧೀರ ಚಿತ್ರದ ವೀಕ್ಷಣೆ. ಸಿನಿಮಾ ಮುಗಿದ ನಂತರ ಇನ್ನೊಂದು Cocktail party..
DAY 3 : ‘Shanti Kranti’ ಮುಹೂರ್ತ. ತಮಿಳಿನಲ್ಲಿ ರಜನಿಕಾಂತ್; ಹೆಸರು ‘ನಾಟುಕ್ಕೋರು ನಲ್ಲವನ್’. ತೆಲುಗಿನಲ್ಲಿ ನಾಗಾರ್ಜುನ, ಕನ್ನಡದಲ್ಲಿ Crazy Star; ಹೆಸರು ‘ಶಾಂತಿ ಕ್ರಾಂತಿ’. ತಮಿಳು ಹಾಗೂ ಹಿಂದಿ ಚಿತ್ರಕ್ಕೆ ರಜನಿಕಾಂತ್ ನಾಯಕ. ಎಲ್ಲಾ ಭಾಷೆಗಳಿಗೂ Juhi Chawla ಹಾಗೂ Khushboo ನಾಯಕಿಯರು. ಹಿಂದಿಯಲ್ಲಿ ರಜನಿಕಾಂತ್ ಅವರ ತಂದೆ-ತಾಯಿ ಪಾತ್ರವನ್ನು Satyen Kappu ಹಾಗೂ ಅರುಣಾ ಇರಾಣಿ ನಿರ್ವಹಿಸಿದರೆ, ಕನ್ನಡದಲ್ಲಿ ಶ್ರೀನಾಥ್ ಅವರು ಮಾಡಿದ ಪಾತ್ರ ಹಿಂದಿಯಲ್ಲಿ ಅಲೋಕ್ ನಾಥ್ ಅವರು ಅಭಿನಯಿಸಿದ್ದರು.. ಆ ಆ ಭಾಷೆಗೆ ಅಲ್ಲಿನ ಸ್ಥಳೀಯ ಕಲಾವಿದರನ್ನು ಹಾಕಿಕೊಂಡು dubbing ಅಲ್ಲದೆ ಕನ್ನಡದಿಂದ ಬೇರೆ ಭಾಷೆಗಳಿಗೂ ನೇರವಾಗಿ ಚಿತ್ರೀಕರಣ ಮಾಡಿದ ಮೊದಲ ಚಲನಚಿತ್ರ ‘ಶಾಂತಿ ಕ್ರಾಂತಿ’..
ಈ ಸಿನಿಮಾ ಮೂರ್ತಕ್ಕೆ ಮುಂಚೆ ಬೇರೆ ಭಾಷೆಯಿಂದ ಪತ್ರಕರ್ತರನ್ನು ಕರೆಸಿ, ‘ಪ್ರೇಮಲೋಕ’ ಹಾಗೂ ‘ರಣಧೀರ’ ಚಿತ್ರವನ್ನು ತೋರಿಸಿದ ಉದ್ದೇಶ.. ಪ್ರಶ್ನೆಗಳನ್ನು ಕೇಳೋಕೆ ಮುಂಚೆ ಅಲ್ಲಿನ ಪತ್ರಕರ್ತರು ತಮ್ಮ ಮಗನ ಬಗ್ಗೆ, ಆತ ಮಾಡಿದ ಸಿನಿಮಾಗಳ ಬಗ್ಗೆ, ಅವರ ಕೆಲಸಗಳ ಬಗ್ಗೆ, ಹಾಗೂ ಈಗ ಮಾಡಲು ಹೊರಟಿರುವ Pan India ಚಿತ್ರದ ಬಗ್ಗೆ ತಿಳಿದುಕೊಂಡು ಮಾತನಾಡಿದರೆ ಪ್ರಸ್ತುತ ಎನ್ನುವುದು ವೀರಾಸ್ವಾಮಿಯವರ ಉದ್ದೇಶ ಹಾಗೂ ಪರಿಕಲ್ಪನೆ..
Dr. Rajkumar ಅವರು ಮುಹೂರ್ತದ ಮುಖ್ಯ ಅತಿಥಿ.. ಶಂಕರ್ ನಾಗ್, Rebel Star Ambarish ಹಾಗೂ ಚಿತ್ರರಂಗದ ಎಲ್ಲಾ ಗಣ್ಯರು ಬಂದು ಭಾಗವಹಿಸಿ ವಿಜ್ರುಂಬಿಸಿದ ಮೂರ್ತ ಸಮಾರಂಭ ‘ಶಾಂತಿಕ್ರಾಂತಿ’ ಚಿತ್ರದ್ದು. ನೂರಾರು ಜನ technicians. ಸಾವಿರಾರು ಜನ ಮಕ್ಕಳು. ದೊಡ್ಡ ಕಲಾವಿದರ ದಂಡು. ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ದೃಶ್ಯಗಳನ್ನ, ಹಾಡುಗಳನ್ನ ಸೆರೆಹಿಡಿಯುವ ಜವಾಬ್ದಾರಿ ನಮ್ಮ ಕನಸುಗಾರ ಡಾ || ವಿ ರವಿಚಂದ್ರನ್ ರವರದ್ದು ಆಗಿತ್ತು.. ‘ ಶಾಂತಿ ಕ್ರಾಂತಿ’ ಅಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿದ ಸಿನಿಮಾ. ಈ ಚಿತ್ರದ script discussion ಹಾಗೂ song composing ಗಾಗಿ Singapore ಗೆ ಹೋಗಿ ಈ ಕೆಲಸಗಳನ್ನು ನಿರ್ವಹಿಸಿದ್ದರು ನಮ್ಮ ರವಿ ಸರ್ ಹಾಗೂ ಹಂಸಲೇಖ…
ಪ್ರಯತ್ನಗಳು ಪ್ರಯೋಗಗಳಿಗೆ ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಅವರ ಶಾಂತಿ ಕ್ರಾಂತಿ, ದ್ವಾರಕೀಶ್ ಅವರ ಆಫ್ರಿಕಾದಲ್ಲಿ ಶೀಲಾ, ಸಾಹಸಸಿಂಹ Dr. Vishnuvardhan ಅವರ ಪೋಲಿಸ್ ಮತ್ತು ದಾದ ಹಿಂದಿಯಲ್ಲಿ ಇನ್ಸ್ಪೆಕ್ಟರ್ ಧನುಷ್ ಎಂಬ ಹೆಸರಿನಲ್ಲಿ ತೆರೆಕಂಡಿತ್ತು.. ಉಪೇಂದ್ರ ಅವರ ನಿರ್ದೇಶನದಲ್ಲಿ ಶಿವಣ್ಣ ಅವರ ಅಭಿನಯದಲ್ಲಿ ಕನ್ನಡದಲ್ಲಿ ತಯಾರಾದ ‘ಓಂ’ ಚಿತ್ರವನ್ನು ಇಡೀ ಇಂಡಿಯಾನೇ ಕನ್ನಡ ಚಿತ್ರರಂಗದ ಕಡೆಗೆ Pan ಆಗುವ ಹಾಗೆ ಮಾಡಿತ್ತು.. ಇನ್ನೂ ಹಲವಾರು ಕನ್ನಡ ಚಿತ್ರಗಳು ಭಾರತೀಯ ಸಿನಿಮಾ ರಂಗದಲ್ಲಿ ಗುರುತಿಸಿ ಕೊಂಡಿರುವುದು ಉಂಟು..
ಇವೆಲ್ಲದಕ್ಕೂ ನವಿಲುಗರಿ ಇಟ್ಟಂತೆ KGF ಸಿನಿಮಾ ಮತ್ತೆ ಇಡೀ world cinema ,ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಕಡೆ ತಿರುಗಿ ನೋಡಿ ಮೆಚ್ಚುಗೆಯ ಮಾತನಾಡುವಂತೆ ಮಾಡಿದೆ.. ಈ ರೀತಿ ಪ್ರಯತ್ನಗಳನ್ನು ಮಾಡಿ ಕನ್ನಡ ಸಿನಿಮಾವನ್ನು ವಿಶ್ವಾದ್ಯಂತ ಬೆಳೆಸುತ್ತಿರುವ ಎಲ್ಲಾ ಮಹನೀಯರಿಗೆ ಕೋಟಿ ಕೋಟಿ ಧನ್ಯವಾದಗಳು..
Comments